ಮಡಿಕೇರಿ ಜ.10 NEWS DESK : ಕೊಡಗಿನಲ್ಲಿರುವ ಗೌಡರು ತಲೆತಲಾಂತರಗಳಿಂದ ಇಲ್ಲೇ ಹುಟ್ಟಿ ಬೆಳೆದವರಾಗಿದ್ದು, ಎಲ್ಲಾ ಜಾತಿ ಜನಾಂಗಗಳೊಂದಿಗೆ ಅನ್ಯೋನ್ಯತೆಯಿಂದ ಬದುಕು ಸಾಗಿಸುತ್ತಿದ್ದಾರೆ. ಆದರೆ ಸಂಘಟನೆಯೊಂದು ಕೊಡಗಿನ ಗೌಡರನ್ನು ಆಂಧ್ರದಿಂದ ಬಂದವರು ಎಂದು ನಿಂದನೆ ಮಾಡುವ ಮೂಲಕ ಸಮಾಜದಲ್ಲಿ ವಿಷಬೀಜ ಬಿತ್ತುವ ಕಾರ್ಯವನ್ನು ಮಾಡುತ್ತಿದೆ ಎಂದು ಚೇರಂಬಾಣೆ ಗೌಡ ಸಮಾಜದ ಅಧ್ಯಕ್ಷ ಕೊಡಪಾಲು ಗಣಪತಿ ಆರೋಪಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಾತಿ ಜಾತಿಗಳ ಮಧ್ಯೆ ವಿಷಬೀಜ ಬಿತ್ತುವ ಕಾರ್ಯ ಮುಂದುವರೆದರೆ ಮುಂದಿನ ದಿನಗಳಲ್ಲಿ ಕೊಡಗು ಕೊಡಗಾಗಿ ಉಳಿಯುವುದಿಲ್ಲ. ತಲೆತಲಾಂತರಗಳಿಂದ ಕೊಡಗಿನಲ್ಲೇ ಹುಟ್ಟಿ ಬೆಳೆದ ಗೌಡರು ಎಲ್ಲರೊಂದಿಗೆ ಸಾಮರಸ್ಯದಿಂದ ಜೀವನ ನಡೆಸುತ್ತಿದ್ದಾರೆ. ಕೊಡವರು ಹಾಗೂ ಗೌಡರು ಒಗ್ಗಟ್ಟಿನಿಂದ ಇದ್ದಾರೆ, ಆದರೆ ಸಂಘನೆಯೊಂದು ಒಡಕು ಮೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇತ್ತೀಚೆಗೆ ಚೇರಂಬಾಣೆಯಲ್ಲಿ ನಡೆದ ಪ್ರತಿಭಟನೆಯ ಸಂದರ್ಭ ವೀರ ಸೇನಾನಿಗಳಾದ ಫೀ.ಮಾ.ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರುಗಳನ್ನು ಒಂದು ಸಮುದಾಯಕ್ಕೆ ಸೀಮಿತ ಮಾಡಿ ಘೋಷಣೆ ಕೂಗಿದ್ದಾರೆ. ಇಡೀ…
ಲೇಖಕ: admin
ಮಡಿಕೇರಿ ಜ.10 NEWS DESK : ಕುಂದಚೇರಿ ಗ್ರಾಮ ಪಂಚಾಯಿತಿಗೆ ಒಳಪಡುವ ಕೋಪಟ್ಟಿ ದೇವಸ್ಥಾನ, ಕೋಪಟ್ಟಿ ಶಾಲೆ, ಚೆರಂಡೇಟಿ, ಚಿಟ್ಟಿಮಾನಿ ಪದಕಲ್ಲು, ಕೋಡಿ ಮೊಟ್ಟೆ, ತಾಪ್ರಿಕಾಡು, ಪೂವಲೆ ಮಾನಿ, ಸಿಂಗತ್ತೂರು ಸೇರಿದಂತೆ ಒಟ್ಟು 9 ಅಂಗನವಾಡಿ ಕೇಂದ್ರಗಳಿಗೆ ಕೊಡುಗೆ ನೀಡಲಾಯಿತು. ಮೇಲ್ವಿಚಾರಕಿಯವರ ಮಾರ್ಗದರ್ಶನದಂತೆ ಅಂಗನವಾಡಿ ಕಾರ್ಯಕರ್ತೆಯರಾದ ಸುಶಿ, ಯೋಗ್ಯತಾ, ಈಶ್ವರಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿ ಹಾಗೂ ಸದಸ್ಯರೊಂದಿಗೆ ಚೇರುಗಳ ಬೇಡಿಕೆಯನ್ನು ಸಲ್ಲಿಸಿದ್ದರು. ಅವರ ಕೋರಿಕೆಯಂತೆ ಚೆಟ್ಟಿಮಾನಿ ಅಂಗನವಾಡಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಚೇರ್ ಗಳನ್ನು ಕೊಡುಗೆಯಾಗಿ ನೀಡಲಾಯಿತು. ಈ ಸಂದರ್ಭ ಮಾತನಾಡಿದ ಗ್ರಾ.ಪಂ ಅಧ್ಯಕ್ಷ ದಿನೇಶ್ ಅಂಗನವಾಡಿ ಕೇಂದ್ರವನ್ನು ಮಾದರಿ ಅಂಗನವಾಡಿ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಸಂಪೂರ್ಣ ಸಹಕಾರವನ್ನು ನೀಡುವುದಾಗಿ ತಿಳಿಸಿದರು. ಸದಸ್ಯರಾದ ಹ್ಯಾರಿಸ್ ಮಾತನಾಡಿ ಕುಂದಾಚೇರಿ ಗ್ರಾ.ಪಂ ಗೆ ಒಳಪಟ್ಟ 9 ಅಂಗನವಾಡಿ ಕಾರ್ಯಕರ್ತೆಯರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮ ಪಂಚಾಯತಿಯಿಂದ ದೊರಕುವಂತ ಎಲ್ಲ ಸೌಲಭ್ಯಗಳನ್ನು ಅಂಗನವಾಡಿ ಕೇಂದ್ರಗಳಿಗೆ ನೀಡಲಾಗುವುದು ಎಂದು ತಿಳಿಸಿದರು. ಪ್ರಭಾರ ಸಹಾಯಕ ಶಿಶು…
ನಾಪೋಕ್ಲು ಜ.10 NEWS DESK : ಸಂಪಾಜೆಯ ಆದರ್ಶ ಫ್ರೆಂಡ್ಸ್ ಚಡಾವು ವತಿಯಿಂದ ಬಾಲಚಂದ್ರ ಕಳಗಿಯವರ ಸ್ಮರಣಾರ್ಥ 3ನೇ ವರ್ಷದ ಗ್ರಾಮಿಣ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಸಂಪಾಜೆಯಲ್ಲಿ ಸಂಭ್ರಮದಿಂದ ನಡೆಯಿತು. ಆದರ್ಶ ಫ್ರೆಂಡ್ಸ್ ನ ಅಧ್ಯಕ್ಷ ಸುನಿಲ್ ಪನೆಯಾಳ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಮಾದೇವಿ ಬಾಲಚಂದ್ರ ಕಳಗಿ, ಶ್ರೀಧರ ಪಡ್ಪು ಭಾಗವಹಿಸಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ನಂತರ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಿದರು. ಸಂಜೆ ನಡೆದ ಸಾಂಸ್ಕತಿಕ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಹಾಗೂ ಹೆಸರಾಂತ ಕಲಾವಿದ ಮಯೂರಿ ಎನ್.ಆರ್.ಪುರ ಚಿಕ್ಕಮಗಳೂರು ನಡೆಸಿಕೊಟ್ಟರು. ಭಾರತೀಯ ಭೂಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸಂಪಾಜೆಯ ಸೈನುದ್ದಿನ್ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸಾವಿತ್ರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಯಶೋಧರ ಸ್ವಾಗತಿಸಿದರು, ವಿಕ್ರಾಂತ್ ಹಾಗೂ ಪ್ರಸಾದ್ ಕಾಟುರು ಕಾರ್ಯಕ್ರಮ ನಿರೂಪಿಸಿದರು. ಭರತ್ ವಂದಿಸಿದರು. ವರದಿ : ದುಗ್ಗಳ ಸದಾನಂದ
ನಾಪೋಕ್ಲು ಜ.10 NEWS DESK : ನಾಪೋಕ್ಲು ಶೌರ್ಯ ವಿಪತ್ತು ನಿರ್ವಹಣಾ ಘಟಕ ವತಿಯಿಂದ ಅಂಗನವಾಡಿ ಕೇಂದ್ರದಲ್ಲಿ ಸ್ವಚ್ಛತಾ ಶ್ರಮದಾನ ಮಾಡಲಾಯಿತು. ಭಗವತಿ ದೇವಸ್ಥಾನ ಬಳಿ ಇರುವ ಅಂಗನವಾಡಿ ಕೇಂದ್ರದ ಆವರಣದಲ್ಲಿ ಮಕ್ಕಳಿಗೆ ಆಟವಾಡಲು ಅಡಚಣೆ ಆಗುತ್ತಿರುವ ಮಣ್ಣಿನ ದಿನ್ನೆಯನ್ನು ಶ್ರಮದಾನದ ಮೂಲಕ ತೆಗೆದು ಸಮತಟ್ಟು ಮಾಡಿ ಆವರಣವನ್ನು ಸ್ವಚ್ಛಗೊಳಿಸಿದರು. ಈ ಸಂದರ್ಭ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಶೌರ್ಯ ಸಂಯೋಜಕಿ ದಿವ್ಯ ಮಂದಪ್ಪ ಹಾಗೂ ಸದಸ್ಯರು, ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹಾಜರಿದ್ದರು. ವರದಿ : ದುಗ್ಗಳ ಸದಾನಂದ.
ವಿರಾಜಪೇಟೆ NEWS DESK ಜ.10 : ಕ್ಷುಲ್ಲಕ ಕಾರಣಕ್ಕೆ ಬಾವ ಮೈದುನರ ನಡುವೆ ನಡೆದ ಕಲಹ ಹತ್ಯೆಯಲ್ಲಿ ಕೊನೆಯಾದ ಘಟನೆ ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕಾಫಿ ತೋಟವೊಂದರ ಲೈನ್ ಮನೆಯಲ್ಲಿ ವಾಸವಿದ್ದ ಮಂಜು(22) ಎಂಬಾತನೇ ಹತ್ಯೆಯಾದ ವ್ಯಕ್ತಿಯಾಗಿದ್ದು, ಆರೋಪಿ ಅಭಿ(24) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕಾಫಿ ಕಾಯುವ ಕೆಲಸಕ್ಕೆ ರಾತ್ರಿಯ ವೇಳೆ ತೆರಳಿದ್ದ ಅಭಿ ಮತ್ತು ಮಂಜು ಅವರ ನಡುವೆ ಕಲಹ ನಡೆದಿದೆ. ಮೈದುನ ಮಂಜುವನ್ನು ಕೊಲೆ ಮಾಡಿರುವುದಾಗಿ ಆರೋಪಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ವಿರಾಜಪೇಟೆ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮಡಿಕೇರಿ ಜ.10 NEWS DESK : ಮೈಸೂರಿನ ಡಾ.ಗಂಗೂಬಾಯಿ ಹಾನಗಲ್ ಕಲೆ ಮತ್ತು ಸಾಹಿತ್ಯ ವಿಶ್ವವಿದ್ಯಾನಿಲಯದವರು ಹಾಗೂ ಮಂಗಳೂರಿನಲ್ಲಿ ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಅಕ್ಷರ ಸಾಧನೆ ಮಾಡಿದ್ದಾಳೆ. ಒಟ್ಟು 400 ಅಂಕಗಳಲ್ಲಿ 334 ಅಂಕಗಳನ್ನು ಪಡೆದು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾಳೆ. ವಿರಾಜಪೇಟೆಯ ಕಾವೇರಿ ಶಾಲೆಯ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಕ್ಷರ ವಿರಾಜಪೇಟೆಯ ಗೌರಿ ಕೆರೆ ನಿವಾಸಿ ಎಂ.ಪಿ.ಸಂತೋಷ್ ಕುಮಾರ್ ಮತ್ತು ಕೆ.ವಿ.ಮೇಘನ ದಂಪತಿಯ ಪುತ್ರಿ. ಮಗಳ ಅತ್ಯುತ್ತಮ ಸಾಧನೆಗೆ ಪೋಷಕರು ಹಾಗೂ ಕುಟುಂಬಸ್ಥರು ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾರೆ. ಅಕ್ಷರ ತಮ್ಮ 3ನೇ ವಯಸ್ಸಿನಿಂದ ವಿರಾಜಪೇಟೆಯ ಜಗನ್ಮೋಹನ ನಾಟ್ಯಾಲಯದಲ್ಲಿ ಭರತನಾಟ್ಯ ಗುರುಗಳಾದ ವಿದ್ವಾನ್ ರಾಜೇಶ್ ಆಚಾರ್ಯ ಅವರ ಬಳಿಯಲ್ಲಿ ಭರತನಾಟ್ಯ ಅಭ್ಯಾಸಮಾಡುತ್ತಿದ್ದಾಳೆ. ಮುಂದಿನ ಕಲಾ ಭವಿಷ್ಯಕ್ಕೆ ಶುಭಹಾರೈಸಿದ್ದಾರೆ.
ಮಡಿಕೇರಿ ಜ.10 NEWS DESK : ಕಾರ್ಮಿಕ ಇಲಾಖೆ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ಕಿಟ್ ವಿತರಿಸಲಾಯಿತು. ಕೂಡಿಗೆ ರಾಮೇಶ್ವರ ಕೂಡುಮಂಗಳೂರು ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಮಂತರ್ ಗೌಡ ಕಿಟ್ ವಿತರಿಸಿ ಮಾತನಾಡಿ, ರಾಜ್ಯ ಸರ್ಕಾರವು ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಅಲ್ಲದೇ ಇಲಾಖೆಯ ಮುಖೇನ ವಿವಿಧ ಹಂತಗಳಲ್ಲಿ ಕಾರ್ಮಿಕರ ಉಚಿತ ಪರಿಕರಗಳ ಸೌಲಭ್ಯ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ ಕಾರ್ಮಿಕರು ಅದರ ಸದುಪಯೋಗವನ್ನು ಮಾಡಿಕೊಳ್ಳುವಂತೆ ಸಲಹೆ ನೀಡಿದರು. ಈ ಸಂದರ್ಭ ಸೋಮವಾರಪೇಟೆ ತಾಲ್ಲೂಕು ಕಾರ್ಯನಿರ್ವಾಹಣಾಧಿಕಾರಿ ಪರಮೇಶ್, ಕುಶಾಲನಗರ ಕುಡ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ರಾಜ್ಯ ಕಾಂಗ್ರೆಸ್ ಸಮಿತಿ ಸದಸ್ಯ ಮಂಜುನಾಥ ಗುಂಡೂರಾವ್, ಜಿಲ್ಲಾ ಕಾರ್ಮಿಕ ಅಧಿಕಾರಿ ಟಿ.ಕಾವೇರಿ, ಮಡಿಕೇರಿ ಹಿರಿಯ ಕಾರ್ಮಿಕ ನಿರೀಕ್ಷಕ ಎಂ.ಎಂ.ಯತ್ನಟ್ಟಿ, ಸೋಮವಾರಪೇಟೆ ಹಿರಿಯ ಕಾರ್ಮಿಕ ನಿರೀಕ್ಷಕ ಶಶಿಧರ್, ವಿರಾಜಪೇಟೆ ವೃತ ನಿರೀಕ್ಷಕ ನಿಖಿಲ್…
ಮಡಿಕೇರಿ ಜ.10 NEWS DESK : ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಕೃಷಿ ಪತ್ತಿನ ಸಹಕಾರ ಸಂಘದ ಮುಂಭಾಗದಲ್ಲಿ ನೂತನವಾಗಿ ಒಳಚರಂಡಿ ವ್ಯವಸ್ಥೆಯ ಕಾಮಗಾರಿಯನ್ನು ಕೈಗೊಳ್ಳುವಂತೆ ಸಹಕಾರ ಸಂಘ ಮನವಿ ಮಾಡಿದೆ. ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಅವರಿಗೆ ಸಂಘದ ಅಧ್ಯಕ್ಷ ಕೆ.ಕೆ.ಹೇಮಂತ್ ಕುಮಾರ್ ಮತ್ತು ಸಂಘದ ಸದಸ್ಯರು ಮನವಿಯನ್ನು ಸಲ್ಲಿಸಿದರು. ಮನವಿಯನ್ನು ಸ್ವೀಕರಿಸಿ ಮಾತನಾಡಿದ ಶಾಸಕರು ಸ್ಧಳ ವೀಕ್ಷಣೆ ಮಾಡಿ ವಾಹನಗಳ ದಟ್ಟಣೆ ಇರುವ ಸ್ಧಳವಾಗಿರುವ ಕೂಡಿಗೆ ಸಮೀಪದ ಹಾರಂಗಿ ನದಿ ಸೇತುವೆಯ ಸಮೀಪದಿಂದ ಡೈರಿ ಸರ್ಕಲ್ ನವರೆಗೆ ವಾಹನಗಳ ನಿಲುಗಡೆಗೆ ಸುಸಜ್ಜಿತವಾದ ವ್ಯವಸ್ಥೆ ಯನ್ನು ಕಲ್ಪಿಸುವ ಭರವಸೆ ಜೊತೆಯಲ್ಲಿ ಅದಕ್ಕೆ ಸಂಬಂಧಿಸಿದ ಇಲಾಖೆಯ ಮೂಲಕ ಕ್ರಿಯಾ ಯೋಜನೆ ತಯಾರಿಸಿ ಕಾಮಗಾರಿಯನ್ನು ಕೈಗೊಳ್ಳುವ ಭರವಸೆಯನ್ನು ನೀಡಿದರು. ಈ ಸಂದರ್ಭ ರಾಜ್ಯ ಕಾಂಗ್ರೆಸ್ ಸಮಿತಿ ಸದಸ್ಯ ಮಂಜುನಾಥ ಗುಂಡೂರಾವ್, ಕುಶಾಲನಗರ ಕುಡ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ರಾಮೇಶ್ವರ ಕೂಡುಮಂಗಳೂರು ಸಹಕಾರ ಸಂಘದ ಅಧ್ಯಕ್ಷ ಕೆ.ಕೆ.ಹೇಮಂತ್ ಕುಮಾರ್, ಸಹಕಾರ ಸಂಘದ ಮಾಜಿ…
ವಿರಾಜಪೇಟೆ NEWS DESK ಜ.10 : ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯದ ವತಿಯಿಂದ ನಡೆದ ಕರ್ನಾಟಕ ಶಾಸ್ತ್ರೀಯ ಸಂಗೀತದ ಜೂನಿಯರ್ ವಿಭಾಗದ ಪರೀಕ್ಷೆಯಲ್ಲಿ ಸಮೃದ್ಧಿ ಎ.ವಿ ಶೇ.86 ಅಂಕಗಳನ್ನು ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಳಾಗಿ ಕೊಡಗು ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಸಿದ್ದಾಪುರದ ಪತ್ರಕರ್ತ ಎ.ಎನ್.ವಾಸು ಆಚಾರ್ಯ ಹಾಗೂ ವಿಶಾಲಾಕ್ಷಿ ದಂಪತಿ ಪುತ್ರಿಯಾಗಿರುವ ಇವರು ವಿರಾಜಪೇಟೆಯ ಸ್ವರಾರ್ಣವ ಸಂಗೀತ ಶಾಲೆಯ ಸಂಸ್ಥಾಪಕ ಗುರು ದಿಲಿಕುಮಾರ್ ಅವರಲ್ಲಿ ಸಂಗೀತ ಅಭ್ಯಾಸ ಮಾಡುತ್ತಿದ್ದಾರೆ. ಸಿದ್ದಾಪುರದ ಶ್ರೀ ಕೃಷ್ಣ ವಿದ್ಯಾ ಮಂದಿರ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದಾರೆ.
ಮಡಿಕೇರಿ NEWS DESK ಜ.9 : ಮಡಿಕೇರಿ ತಾಲ್ಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತದ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿಯ 15 ಸ್ಥಾನಗಳಿಗೆ ಬಿಜೆಪಿ ಬೆಂಬಲಿತ 15 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಾಲಗಾರರಲ್ಲದ ಕ್ಷೇತ್ರ ಸಾಮಾನ್ಯ ರವಿ ಕಾಳನ, ಮಡಿಕೇರಿ ಕ್ಷೇತ್ರ ಸಾಮಾನ್ಯ, ನಾಚಪ್ಪ ಮಾದೆಯಂಡ, ಹೊಸ್ಕೇರಿ ಕ್ಷೇತ್ರ ಸಾಮಾನ್ಯ ಪೂಣಚ್ಚ ಅಮ್ಮಾಟಂಡ, ಮೂರ್ನಾಡು ಕ್ಷೇತ್ರ ಸಾಮಾನ್ಯ ಪ್ರೀಣಾ ಮಾಡಯಂಡ, ಕಕ್ಕಬ್ಬೆ ಕ್ಷೇತ್ರ ಸಾಮಾನ್ಯ ರಮ್ಯ ಕೇಟೋಳಿರ, ನಾಪೋಕ್ಲು ಕ್ಷೇತ್ರ ಸಾಮಾನ್ಯ ಮುತ್ತಪ್ಪ ಅಪ್ಪಚಟ್ಟೋಳಂಡ, ಚೇರಂಬಾಣೆ ಕ್ಷೇತ್ರ ಸಾಮಾನ್ಯ, ಮಾದಯ್ಯ ನಾಪಂಡ, ಪೆರಾಜೆ ಕ್ಷೇತ್ರ ಸಾಮಾನ್ಯ ಭುವನೇಶ್ವರ ನಿಡ್ಯಮಲೆ, ಸಂಪಾಜೆ ಕ್ಷೇತ್ರ ಸಾಮಾನ್ಯ ಜಯಪ್ರಕಾಶ್, ಪರಿಶಿಷ್ಟ ಜಾತಿ ವಾಸಪ್ಪ ಹೆಚ್.ಆರ್, ಪರಿಶಿಷ್ಟ ಪಂಗಡ ಕರಿಯಪ್ಪ ನಾಯ್ಕ, ಹಿಂದುಳಿದ ಪ್ರವರ್ಗ-ಎ ಮೀಸಲು ಮಹೇಶ್ ಪಾಡಿಯಮ್ಮನ, ಹಿಂದುಳಿದ ಪ್ರವರ್ಗ-ಬಿ ಮೀಸಲು ಬೀನಾ ಬೊಳ್ಳಮ್ಮ ಅಲ್ಲಾರಂಡ, ಮಹಿಳಾ ಕ್ಷೇತ್ರ – 2 ಸುಶೀಲ ಕೂರನ ಹಾಗೂ ಹೇಮಲತ ಮಂಡೀರ…






