ಮಡಿಕೇರಿ ಜೂ.1 NEWS DESK : ಸರ್ಕಾರಿ ಶಾಲೆ ಶಿಕ್ಷಕರೊಬ್ಬರು ವಯೋನಿವೃತ್ತಿ ಬಳಿಕ ಒಂದು ವರ್ಷ ಕಾಲ ಸ್ವಇಚ್ಛೆಯಿಂದ ತನ್ನ ಸೇವೆಯನ್ನು ನೀಡುವ ಮಹತ್ವ ನಿರ್ಧಾರ ಕೈಗೊಳ್ಳುವ ಮೂಲಕ ಮಾದರಿ ನಡೆ ತೋರಿದ್ದಾರೆ. ಮಡಿಕೇರಿ ತಾಲೂಕಿನ ಕ್ಲೋಸ್‌ಬರ್ನ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿದ್ದ ಎಂ.ಟಿ. ಲಕ್ಷ್ಮೀ ಈ ಮಾದರಿ ನಿರ್ಧಾರ ತೆಗೆದುಕೊಂಡವರು. 32 ವರ್ಷ ಕಾಲ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ ಅವರು ಮೇ 30ಕ್ಕೆ ವಯೋನಿವೃತ್ತಿಯಾದರು. ಈ ಹಿನ್ನೆಲೆಯಲ್ಲಿ ಅವರಿಗೆ ಬೀಳ್ಕೊಡುಗೆ ಸಮಾರಂಭ ಶಾಲೆಯಲ್ಲಿ ನಡೆಯಿತು. ಈ ವೇಳೆ ಸಹಶಿಕ್ಷಕರು, ಎಸ್‌ಡಿಎಂಸಿ, ಹಳೆ ವಿದ್ಯಾರ್ಥಿಗಳು ಉಡುಗೊರೆ, ಫಲತಾಂಬೂಲ ನೀಡಿ ಗೌರವಿಸಿದರು. ಗೌರವ ಸ್ವೀಕರಿಸಿ ಮಾತನಾಡಿದ ಲಕ್ಷ್ಮೀ, 1994ರಲ್ಲಿ ಆರಂಭಿಸಿ ಶಿಕ್ಷಕ ವೃತ್ತಿ ವಿವಿಧ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಟ್ಟಿದೆ. ಈ ಅವಧಿಯಲ್ಲಿ ಸಹಶಿಕ್ಷಕರು, ವಿದ್ಯಾರ್ಥಿಗಳು, ಶಿಕ್ಷಕರು, ಗ್ರಾಮಸ್ಥರು ನನಗೆ ಸಹಕರಿಸಿದ್ದಾರೆ. ಮಕ್ಕಳೊಂದಿಗೆ ಬೆರೆತು ಪಠ್ಯ ಚಟುವಟಿಕೆಯನ್ನು ಕಲಿಸುವುದನ್ನು ಆರಂಭದಿಂದಲೇ ಮೈಗೂಡಿಸಿಕೊಂಡಿದ್ದೆ. ಇಂದಿನವರೆಗೂ ಅದನ್ನೇ ಮುಂದುವರೆಕೊಂಡು ಬಂದಿದ್ದೇನೆ ಎಂದರು. ಕ್ಲೋಸ್‌ಬರ್ನ್ ಶಾಲೆಯಲ್ಲಿ…
ಲೇಖಕ: admin
ಕುಶಾಲನಗರ ಜೂ.1 NEWS DESK : ನದಿ ಪರಿಸರ ಸಂರಕ್ಷಣೆ ಬಗ್ಗೆ ಗಮನಹರಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಕುಶಾಲನಗರ ತಾಲೂಕು ತಹಸಿಲ್ದಾರ್ ಕಿರಣ್ ಜಿ.ಗೌರಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಕುಶಾಲನಗರ ಕಾವೇರಿ ಮಹಾ ಆರತಿ ಬಳಗ ಮತ್ತು ನಮಾಮಿ ಕಾವೇರಿ ಆಶ್ರಯದಲ್ಲಿ ನಡೆದ 186 ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ನದಿ ಕೆರೆ ತಟಗಳಲ್ಲಿ ಯಾವುದೇ ಶಾಶ್ವತ ಕಟ್ಟಡಗಳ ನಿರ್ಮಾಣ ಸಂದರ್ಭ ಸರ್ಕಾರದ ಅಗತ್ಯ ನಿಯಮಗಳನ್ನು ಪಾಲಿಸುವ ಮೂಲಕ ನದಿ ತಟಗಳ ಅಭಿವೃದ್ಧಿಗೆ ಕೈಜೋಡಿಸಬೇಕು. ಕಳೆದ ಹಲವು ವರ್ಷಗಳಿಂದ ಕಾವೇರಿ ನದಿ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ಮೂಲಕ ಸ್ವಚ್ಛಕಾವೇರಿಯ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜನರಲ್ಲಿ ಜಾಗೃತಿ ಮೂಡಿಸಿರುವ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕರಾದ ವಿಠ್ಠಲ್ ಸಾಲಿಯಾನ್ ಮಾತನಾಡಿ, ಯೋಜನೆಯ ಸದಸ್ಯರು ಕಾರ್ಯಕರ್ತರು ಧಾರ್ಮಿಕ ಮತ್ತು ಶ್ರದ್ಧಾ ಕೇಂದ್ರಗಳ ಸ್ವಚ್ಛತಾ…
ಮಡಿಕೇರಿ ಜೂ.1 NEWS DESK : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ 11ನೇ ಕೊಡವ ಪುಸ್ತಕ ಪತ್ತಾಯ ಕಾರ್ಯಕ್ರಮವು ಬಲಂಬೇರಿಯಲ್ಲಿರುವ ಪಾಲಂದಿರ ಐನ್ ಮನೆಯಲ್ಲಿ ನೆರವೇರಿತು. ಕಾರ್ಯಕ್ರಮಕ್ಕೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರ ಪತ್ನಿ ಕಾಂಚನ್ ಪೊನ್ನಣ್ಣ ಅವರು ಭಾಗವಹಿಸಿ, ಶುಭಹಾರೈಸಿದರು. ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಮಹೇಶ್ ನಾಚಯ್ಯ, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಚೆಪ್ಪುಡೀರ ಅರುಣ್ ಮಾಚಯ್ಯ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ತಿತೀರ ಧರ್ಮಜ ಉತ್ತಪ್ಪ, ಪಾಲಂದಿರ ಕುಟುಂಬದ ಪಟ್ಟೆದಾರರಾದ ನಂಜಪ್ಪ, ಪಾಲಂದಿರ ಕುಟುಂಬಸ್ಥರು, ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಮಡಿಕೇರಿ ಜೂ.1 NEWS DESK : ಕಾಡಾನೆಗಳನ್ನು ಒಳಗೊಂಡಂತೆ ವನ್ಯಜೀವಿಗಳ ಆಹಾರಕ್ಕೆ ಪೂರಕವಾದ ಮರಗಳನ್ನು ಅರಣ್ಯ ಪ್ರದೇಶಗಳಲ್ಲಿ ಬೆಳೆಯಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅರಣ್ಯ ಇಲಾಖೆಯನ್ನು ಒಳಗೊಂಡಂತೆ ಸರ್ಕಾರವನ್ನು ಆಗ್ರಹಿಸುವ ನಿಟ್ಟಿನಲ್ಲಿ ಜೂ.5 ರಂದು ಹ್ಯೂಮನ್ ರೈಟ್ಸ್ ಇಂಟರ್ ನ್ಯಾಷನಲ್ ಫೆಡರೇಷನ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸುವ ಕಾರ್ಯಕ್ರಮ ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಹ್ಯೂಮನ್ ರೈಟ್ಸ್ ಇಂಟರ್‍ನ್ಯಾಷನಲ್ ಫೆಡರೇಷನ್ ರಾಜ್ಯಾಧ್ಯಕ್ಷ ಹರೀಶ್ ಜಿ.ಆಚಾರ್ಯ ಮಾತನಾಡಿ, ಅಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಡಳಿತ ಭವನದ ಮುಂಭಾಗ ಪಕ್ಷ ಭೇದಗಳಿಲ್ಲದೆ ಸಮಾವೇಶಗೊಂಡು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳು, ಅರಣ್ಯ ಸಚಿವರು, ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಿದ್ದೇವೆ. ಎಲ್ಲಾ ಸಂಘ ಸಂಸ್ಥೆಗಳು, ಸಾರ್ವಜನಿಕರು ಇದನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಕೊಡಗು ಜಿಲ್ಲೆಯನ್ನು ಒಳಗೊಂಡಂತೆ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ವಿಭಾಗಗಳಲ್ಲಿ ವನ್ಯ ಜೀವಿಗಳ ಉಪಟಳ ಹೆಚ್ಚಾಗುತ್ತಿದೆ. ಕಾಡಾನೆಗಳ ಹಾವಳಿಯಿಂದ ಜೀವಹಾನಿಯೊಂದಿಗೆ, ಫಸಲು ನಾಶ ಉಂಟಾಗಿ ಕೃಷಿಕ ಸಮೂಹ ಸಂಕಷ್ಟಕ್ಕೆ ಸಿಲುಕಿದೆ. ಹುಲಿ ದಾಳಿಯಿಂದ ಜೀವಹಾನಿಯ ಪ್ರಕರಣಗಳು ಸಾಕಷ್ಟು…
ಮಡಿಕೇರಿ NEWS DESK ಜೂ.1 : ರಾಜ್ಯ ಸರಕಾರದ ನೂತನ ಸಚಿವ ಸಂಪುಟ ರಚನೆಯ ಸಂದರ್ಭ ಯುವ ನಾಯಕ, ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಮಡಿಕೇರಿ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ವಿ.ಜಿ.ಮೋಹನ್ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಅಭಿವೃದ್ಧಿಪರ ಚಿಂತನೆಯ ಡಾ.ಮಂತರ್ ಗೌಡ ಅವರು ನಿರಂತರ ಅಭಿವೃದ್ಧಿ ಕಾರ್ಯಗಳ ಮೂಲಕ ಮತ್ತು ಜನಸ್ನೇಹಿ ಗುಣದಿಂದ ಕೊಡಗಿನಲ್ಲಿ ಮನೆ ಮಾತಾಗಿದ್ದಾರೆ. ಇವರಿಗೆ ಸಚಿವ ಸ್ಥಾನವನ್ನು ನೀಡಿದರೆ ಕರ್ನಾಟಕದ ರಾಜಕಾರಣಕ್ಕೆ ದೊಡ್ಡ ಕೊಡುಗೆಯನ್ನು ನೀಡಿದಂತ್ತಾಗುತ್ತದೆ. ಅಲ್ಲದೆ ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಡಾ.ಮಂತರ್ ಗೌಡ ಅವರು ಮಡಿಕೇರಿ ಕ್ಷೇತ್ರದ ಶಾಸಕರಾದ ನಂತರ ಜಾತ್ಯಾತೀತ ಮತ್ತು ಪಕ್ಷಾತೀತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿಯೊಬ್ಬರ ಸಮಸ್ಯೆಗಳಿಗೆ ಖುದ್ದು ಸ್ಪಂದಿಸುತ್ತಿರುವ ಶಾಸಕರ ಸೇವೆ ರಾಜ್ಯಕ್ಕೂ ವ್ಯಾಪಿಸಿದರೆ ಯುವಶಕ್ತಿಗೆ ಪ್ರೇರಣೆಯಾಗುತ್ತದೆ. ಆದ್ದರಿಂದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಡಿ.ಕೆ.ಶಿವಕುಮಾರ್ ಅವರು ಡಾ.ಮಂತರ್ ಗೌಡ ಅವರಿಗೆ ಸಚಿವ ಸ್ಥಾನವನ್ನು ನೀಡಿ…
ಮಡಿಕೇರಿ NEWS DESK ಜೂ.1 : ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಕೊಡಗು ಗೌಡ ಸಮಾಜ ಒತ್ತಾಯಿಸಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಡಿ.ಕೆ.ಶಿವಕುಮಾರ್ ಅವರಿಗೆ ಕೊಡಗು ಗೌಡ ಸಮಾಜದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಬರೆದಿರುವ ಪತ್ರದ ಸಾರಾಂಶ ಹೀಗಿದೆ >>> ಕೊಡಗಿನ ಜನತೆಯ ಆಕಾಂಕ್ಷೆ ಹಾಗೂ ವಿಶೇಷವಾಗಿ ಕೊಡಗಿನ ಒಕ್ಕಲಿಗ ಜನಾಂಗದ ನಿರೀಕ್ಷೆಯಂತೆ ಡಿ.ಕೆ.ಶಿವಕುಮಾರ್ ಅವರು ಕರ್ನಾಟಕ ರಾಜ್ಯದ 25ನೇ ಮುಖ್ಯಮುಖ್ಯಂತ್ರಿಗಳಾಗಿ ಅಧಿಕಾರ ಸ್ವೀಕರಿಸುವ ಸುಸಂದರ್ಭ ಕೊಡಗಿನ ಗೌಡರ ಪರವಾಗಿ ತಮಗೆ ಹೃತೂರ್ವಕ ಅಭಿನಂದನೆ ಸಲ್ಲಿಸುತ್ತಿದ್ದೇವೆ. 2023ನೇ ಇಸವಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ತಮಗಳ ನೇತೃತ್ವದಲ್ಲಿ ಹಾಗೂ ತಾವು ನೀಡಿದ ನೈತಿಕ ಬಲದಿಂದಾಗಿ ಕೊಡಗಿನ ಎರಡು ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರದಿಂದ ಇಬ್ಬರು ಕಾಂಗ್ರೆಸ್ ಪಕ್ಷದ ಯುವ ಅಭ್ಯರ್ಥಿಗಳು ಪ್ರಚಂಡ ವಿಜಯ ಸಾಧಿಸಿರುವುದು ಅಭ್ಯರ್ಥಿಗಳಿಗೆ ತಾವು ನೀಡಿದ ನೈತಿಕ ಸ್ಥೆರ್ಯ ಎಂಬುದು ಹೊಗಳಿಕೆಯ ಮಾತಲ್ಲ. ಶ್ರೀ ಮಂತರ್ ಗೌಡ,…
ಮಡಿಕೇರಿ NEWS DESK ಜೂ.1 : ರಾಜ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಸದಸ್ಯ ಎಂ.ಎ.ಕಲೀಲ್ ಬಾಷ ಒತ್ತಾಯಿಸಿದ್ದಾರೆ. ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಜೂ.3ರಂದು ಅಧಿಕಾರ ವಹಿಸಿಕೊಳ್ಳುತ್ತಿರುವ ಡಿ.ಕೆ.ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿರುವ ಅವರು, ಕೊಡಗಿನ ಶಾಸಕದ್ವಯರಿಗೆ ಸಚಿವ ಸ್ಥಾನ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಇಬ್ಬರು ಯುವ ಶಾಸಕರನ್ನು ಈ ಹಿಂದೆ ಡಿ.ಕೆ.ಶಿವಕುಮಾರ್ ಅವರು ಮುತ್ತು ರತ್ನಗಳೆಂದು ಕೊಂಡಾಡಿದ್ದರು. ಇಬ್ಬರು ಮುತ್ತು ರತ್ನಗಳನ್ನು ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಿದರೆ ರಾಜ್ಯದಲ್ಲಿ ದಕ್ಷ ಆಡಳಿತಕ್ಕೆ ಸಹಕಾರಿಯಾಗಲಿದೆ, ಅಲ್ಲದೆ ಕೊಡಗು ಸಮಗ್ರ ಅಭಿವೃದ್ಧಿಯನ್ನು ಕಾಣಲಿದೆ. ಉತ್ಸಾಹಿ ರಾಜಕಾರಣಿಗಳಾಗಿರುವ ಇಬ್ಬರು ಶಾಸಕರು ಅಭಿವೃದ್ಧಿ ಕಾರ್ಯಗಳಲ್ಲಿ ಇತರರಿಗೆ ಮಾದರಿಯಾಗಿದ್ದಾರೆ. ಜನಸ್ನೇಹಿ ಗುಣದಿಂದಲೇ ಜನಪ್ರಿಯತೆಯನ್ನು ಗಳಿಸಿರುವ ಶಾಸಕರುಗಳು ಸಚಿವ ಸ್ಥಾನವನ್ನು ನಿಭಾಯಿಸಲು ಸಮರ್ಥರಾಗಿದ್ದಾರೆ. ಆದ್ದರಿಂದ…
ಮಡಿಕೇರಿ NEWS DESK ಜೂ.1 : ಲೇಖಕ ಹೇಮಂತ್ ಪಾರೇರ ರಚಿಸಿರುವ ‘ಶಕುನದ ಹಕ್ಕಿ’ ಕಾದಂಬರಿ ನಗರದಲ್ಲಿ ಬಿಡುಗಡೆಗೊಂಡಿತು. ನಗರದ ಪತ್ರಿಕಾ ಭವನದಲ್ಲಿ ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಅವರು ಕಾದಂಬರಿಯನ್ನು ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು ಗ್ರಾಮೀಣ ಸೊಗಡನ್ನು ಪ್ರೀತಿಸುವ ಕಾದಂಬರಿಗಳು ಹೆಚ್ಚು ಹೆಚ್ಚು ಬರಬೇಕು ಎಂದರು. ಶಕುನದ ಹಕ್ಕಿ ಕಾದಂಬರಿ ಗ್ರಾಮೀಣ ಜನರ ಜೀವನ, ಜನರ ಭಾವನೆ, ಶಕುನದ ಹಕ್ಕಿಯ ಕುರಿತು ಗ್ರಾಮೀಣ ಜನರಲ್ಲಿ ಇಂದಿಗೂ ಇರುವ ಆತಂಕ, ಹೆದರಿಕೆ, ಆಗುಹೋಗುಗಳು, ರಂಜನೆಗಳನ್ನು ಕಾದಂಬರಿ ಕಟ್ಟಿಕೊಡುತ್ತದೆ. ಹೀಗಾಗಿ ಪುಸ್ತಕಕ್ಕೆ “ಶಕುನದ ಹಕ್ಕಿ” ಎಂದು ಹೆಸರಿಡಲಾಗಿದೆ. ಕಾದಂಬರಿಯಲ್ಲಿ ಜಾನಪದ ಸೊಗಡು, ಶಕುನದ ಹಕ್ಕಿಯ ಕೂಗು, ಆತಂಕ, ಗ್ರಾಮೀಣ ಯುವಕರ ಬದುಕು ಅಡಕವಾಗಿದೆ. ಉತ್ತಮ ಗುಣಮಟ್ಟವನ್ನು ಹೊಂದಿರುವ “ಶಕುನದ ಹಕ್ಕಿ” ಯನ್ನು ನಗರದ ನಿವಾಸಿಗಳು ಓದಿದಲ್ಲಿ ಹಳ್ಳಿಯ ಬದುಕನ್ನು ಪ್ರೀತಿಸುವ, ಅದನ್ನು ಎದುರಿಸುವ ಅನುಭವವಾಗುತ್ತದೆ. ಇಂತಹ ಕಾದಂಬರಿಗಳು ಮತ್ತಷ್ಟು ಮೂಡಿ ಬರಲಿ ಎಂದು ಅನಂತಶಯನ ಆಶಿಸಿದರು. ಹಿರಿಯ ಸಾಹಿತಿ…
ಮಡಿಕೇರಿ NEWS DESK ಜೂ.1 : ರಾಜ್ಯ ಸರಕಾರದ ನೂತನ ಮಂತ್ರಿಮoಡಲ ರಚನೆಯ ಸಂದರ್ಭ ವಿರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಅಖಿಲ ಕೆಂಬಟ್ಟಿ ಸಮಾಜ ಹಾಗೂ ಕೆಂಬಟ್ಟಿ ಪೊಮ್ಮಕಡ ಕೂಟ ಒತ್ತಾಯಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಸಮಾಜದ ಅಧ್ಯಕ್ಷ ಬಿಲ್ಲಿರಿ ಕುಟ್ಟ ಪ್ರಭು ಅಯ್ಯಪ್ಪ ಹಾಗೂ ಪದಾಧಿಕಾರಿಗಳು ಯಾವುದೇ ಸರಕಾರಗಳು ಅಧಿಕಾರಕ್ಕೆ ಬಂದರೂ ಕೊಡಗು ಸಚಿವ ಸ್ಥಾನದಿಂದ ವಂಚಿತವಾಗುತ್ತಿದೆ. ಪ್ರಸ್ತುತ ಬದಲಾದ ರಾಜಕೀಯ ಸನ್ನಿವೇಶದಲ್ಲಾದರು ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಮತ್ತು ಎಲ್ಲಾ ಜಾತಿ ಜನಾಂಗಗಳ ಪ್ರಗತಿಗಾಗಿ ಎ.ಎಸ್.ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಮನವಿ ಮಾಡಿದ್ದಾರೆ. ಯುವ ನೇತಾರ ಪೊನ್ನಣ್ಣ ಅವರು, ಕಳೆದ ಮೂರು ವರ್ಷಗಳಿಂದ ಜನಪರ ಕಾರ್ಯಗಳನ್ನು ಯಶಸ್ವಿಯಾಗಿ ಮಾಡಿದ್ದಾರೆ ಮತ್ತು ಬಡವರ ಪರ ಕಾಳಜಿ ಹೊಂದಿದ್ದಾರೆ. ತಮ್ಮ ದಕ್ಷ ಕಾರ್ಯ ವೈಖರಿಯಿಂದಲೇ ಸಜ್ಜನ ರಾಜಕಾರಣಿ ಎಂದು ಹೆಸರು ಗಳಿಸಿರುವ ಇವರು ಜನಾನುರಾಗಿಯಾಗಿದ್ದಾರೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿ ಆಡಳಿತ ವ್ಯವಸ್ಥೆಯಲ್ಲಿ ಹೆಚ್ಚು ಅನುಭವ…
ಮಡಿಕೇರಿ NEWS DESK ಜೂ.1 : ರಾಜ್ಯ ಸರಕಾರದ ನೂತನ ಮಂತ್ರಿಮoಡಲ ರಚನೆಯ ಸಂದರ್ಭ ವಿರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಅಖಿಲ ಕೆಂಬಟ್ಟಿ ಸಮಾಜ ಹಾಗೂ ಕೆಂಬಟ್ಟಿ ಪೊಮ್ಮಕಡ ಕೂಟ ಒತ್ತಾಯಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಸಮಾಜದ ಅಧ್ಯಕ್ಷ ಬಿಲ್ಲಿರಿ ಕುಟ್ಟ ಪ್ರಭು ಅಯ್ಯಪ್ಪ ಹಾಗೂ ಪದಾಧಿಕಾರಿಗಳು ಯಾವುದೇ ಸರಕಾರಗಳು ಅಧಿಕಾರಕ್ಕೆ ಬಂದರೂ ಕೊಡಗು ಸಚಿವ ಸ್ಥಾನದಿಂದ ವಂಚಿತವಾಗುತ್ತಿದೆ. ಪ್ರಸ್ತುತ ಬದಲಾದ ರಾಜಕೀಯ ಸನ್ನಿವೇಶದಲ್ಲಾದರು ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಮತ್ತು ಎಲ್ಲಾ ಜಾತಿ ಜನಾಂಗಗಳ ಪ್ರಗತಿಗಾಗಿ ಎ.ಎಸ್.ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಮನವಿ ಮಾಡಿದ್ದಾರೆ. ಯುವ ನೇತಾರ ಪೊನ್ನಣ್ಣ ಅವರು, ಕಳೆದ ಮೂರು ವರ್ಷಗಳಿಂದ ಜನಪರ ಕಾರ್ಯಗಳನ್ನು ಯಶಸ್ವಿಯಾಗಿ ಮಾಡಿದ್ದಾರೆ ಮತ್ತು ಬಡವರ ಪರ ಕಾಳಜಿ ಹೊಂದಿದ್ದಾರೆ. ತಮ್ಮ ದಕ್ಷ ಕಾರ್ಯ ವೈಖರಿಯಿಂದಲೇ ಸಜ್ಜನ ರಾಜಕಾರಣಿ ಎಂದು ಹೆಸರು ಗಳಿಸಿರುವ ಇವರು ಜನಾನುರಾಗಿಯಾಗಿದ್ದಾರೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿ ಆಡಳಿತ ವ್ಯವಸ್ಥೆಯಲ್ಲಿ ಹೆಚ್ಚು ಅನುಭವ…






