ಲೇಖಕ: admin

ಮಡಿಕೇರಿ ಫೆ.14 NEWS DESK : ಅಂದು ಇಡೀ ಭಾರತಕ್ಕೇ ಕತ್ತಲು ಕವಿದಿತ್ತು. ಬೇಸರ, ದುಃಖ ಭಾರತೀಯರ ಹೃದಯದಲ್ಲಿ ಮಡುಗಟ್ಟಿತ್ತು. ಹೌದು 2019ರ ಫೆಬ್ರವರಿ ತಿಂಗಳ 14 ರಂದು ಬೆಚ್ಚಿಬೀಳಿಸುವ ಸುದ್ದಿಯೊಂದು ಗಾಳಿಗಿಂತ ವೇಗವಾಗಿ ಹರಡಿತ್ತು. ಮಧ್ಯಾಹ್ನ ಎಲ್ಲರೂ ಕೆಲಸ ಕಾರ್ಯಗಳಲ್ಲಿ ತೊಡಗಿರುವ ವೇಳೆಯಲ್ಲಿ ಭಾರತೀಯ ಯೋಧರಿದ್ದ ಬಸ್ಸನ್ನು ಟಾರ್ಗೆಟ್ ಮಾಡಿ ಕುಳಿತಿದ್ದ ಪಾಪಿಸ್ತಾನಿ ಭಯೋತ್ಪಾದಕರು ಅವರ ಗುರಿಯನ್ನು ಯಶಸ್ವಿಯಾಗಿ ತಲುಪಿದ್ದರು. ಯಾವುದು ಸಂಭವಿಸಬಾರದಾಗಿತ್ತೋ ಅಂತಹ ಒಂದು ದುರ್ಘಟನೆ ಸಂಭವಿಸಿಯಾಗಿತ್ತು. ೪೦ ಮಂದಿ ದೇಶವನ್ನು ರಕ್ಷಿಸುವ ಹೊಣೆಹೊತ್ತವರು ಏನನ್ನೂ ಅರಿಯದೆ ವೀರಮರಣವನ್ನಪ್ಪಿದ್ದರು. ಇದೆಲ್ಲ ನಡೆದು ವರ್ಷಗಳು ಸಂದರೂ ಆ ಕಹಿನೆನಪು ಮನಸ್ಸಿನಿಂದ ಮರೆಯಾಗುವುದಿಲ್ಲ. ಸೇನೆ, ಸೇವೆ ಎಂದಾಗ ಪದೇ ಪದೇ ನೆನಪಾಗುತ್ತಲೇ ಇರುತ್ತದೆ. ತಾಯಿ ಭಾರತಿಯ ಮಡಿಲಲ್ಲಿ ಮಲಗಿರುವ ಆ ನಲವತ್ತು ಮಂದಿಗೆ ಅದು ಹೇಗೆ ಕೃತಜ್ಞತೆ ಸಲ್ಲಿಸಬೇಕು ಎಂದು ತಿಳಿಯುತ್ತಿಲ್ಲ. ಭಾರತದ ನೆಲದ ರಕ್ಷಣೆಗೆಂದು ತಮ್ಮ ಜೀವವನ್ನೇ ಮುಡಿಪಾಗಿಟ್ಟವರ ಚಿತ್ರಣ ಕಣ್ಣೆದುರು ಮಿಂಚಿ ಮರೆಯಾಗುತ್ತಲೇ ಇರುತ್ತದೆ. ಹುತಾತ್ಮರಾದ ಅಷ್ಟೂ ವೀರರಿಗೆ…

Read More

ಮಡಿಕೇರಿ ಫೆ.14 NEWS DESK : ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ, ಮಡಿಕೇರಿ ತಾಲೂಕು ಎಡಪಾಲದಲ್ಲಿ ನೂತನ ರಸ್ತೆ ಕಾಮಗಾರಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಇದೇ ಸಂದರ್ಭ ಈ ಭಾಗದಲ್ಲಿ ಶಾಸಕರ ಅನುದಾನದಲ್ಲಿ ಪೂರ್ಣಗೊಂಡಿದ್ದ ನೂತನ ರಸ್ತೆಯನ್ನು ಲೋಕಾರ್ಪಣೆ ಮಾಡಿದರು.  ಭೂಮಿ ಪೂಜೆ ಬಳಿಕ ಮಾತನಾಡಿದ ಶಾಸಕರು, ಎಡಪಾಲ ಭಾಗದ ಜನರು ತನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ತಕ್ಕಂತೆ ಕೆಲಸ ಕಾರ್ಯಗಳನ್ನು ಮಾಡಿಕೊಡುವುದಾಗಿ ಭರವಸೆ ನೀಡಿದರು. ಬಳಿಕ ಎಡಪಾಲ ಬಳಿ ಇರುವ ಸೇತುವೆಯನ್ನು ವೀಕ್ಷಣೆ ಮಾಡಿದರು.  ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ಇಸ್ಮಾಯಿಲ್, ವಲಯ ಕಾಂಗ್ರೆಸ್ ಅಧ್ಯಕ್ಷರು, ಕಾಂಗ್ರೆಸ್ ಮುಖಂಡರು, ಸ್ಥಳೀಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Read More

ಮಡಿಕೇರಿ ಫೆ.14 NEWS DESK : ಕನ್ನಡ ಸಾರಸ್ವತ ಲೋಕದಲ್ಲಿ ಸಾಹಿತ್ಯ ಕೃಷಿಯ ಮೂಲಕ ಶಾಶ್ವತ ಸ್ಥಾನ ಪಡೆದ, ಕೊಡಗಿನ ವಿಶಿಷ್ಟ ಸಂಸ್ಕೃತಿಯನ್ನು ತಮ್ಮ ಹುತ್ತರಿ ಹಾಡಿನ ಮೂಲಕ ಕಟ್ಟಿಕೊಟ್ಟ ಹಿರಿಯ ಚೇತನ ಪಂಜೆ ಮಂಗೇಶರಾಯರ 150ನೇ ವರ್ಷಾಚರಣೆ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದಲ್ಲಿ ಫೆ.20 ರಂದು ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್ ಅವರು ಮಾತನಾಡಿ, 1874ರ ಫೆ.22 ರಂದು ಜನಿಸಿದ ಪಂಜೆ ಮಗೇಶರಾಯರು ತಮ್ಮ 48ನೇ ವಯಸ್ಸಿನಲ್ಲಿ ಮಡಿಕೇರಿಯ ಅಂದಿನ ಸೆಂಟ್ರಲ್ ಹೈಸ್ಕೂಲ್‍ಗೆ ಪ್ರಥಮ ಭಾರತೀಯ ಕನ್ನಡ ಮುಖ್ಯೋಪಾಧ್ಯಾಯರಾಗಿ ನೇಮಕಗೊಂಡು ಸುಮಾರು 3 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರೆಂದು ತಿಳಿಸಿದರು. ಪಂಜೆ ಮಂಗೇಶರಾಯರು ‘ಕವಿಶಿಷ್ಯ’ ಎನ್ನುವ ಕಾವ್ಯನಾಮದಲ್ಲಿ ಕಥೆ, ಸಣ್ಣಕಥೆ, ಶಿಶು ಸಾಹಿತ್ಯ, ಇರಿಹಾಸವನ್ನು ಆಧರಿಸಿದ ಕಥೆಗಳು, ಕಾದಂಬರಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಇವರ 125ನೇ ವರ್ಷಾಚರಣೆಯನ್ನು ಜಿಲ್ಲಾ ಕಸಾಪದಿಂದ ಈ ಹಿಂದೆ ಅವರು ಮುಖ್ಯೋಪಾಧ್ಯಾಯರಾಗಿದ್ದ ಶಾಲೆಯಾದ ಇಂದಿನ ಸರ್ಕಾರಿ…

Read More

ಮಡಿಕೇರಿ ಫೆ.14 NEWS DESK : ಕೊಡಗು ಜಿಲ್ಲಾ ನಿವೃತ್ತ ಪೊಲೀಸರ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಮಹಾಸಭೆ ಫೆ.18ರಂದು ನಗರದ ಮೈತ್ರಿ ಪೊಲೀಸ್ ಭವನದಲ್ಲಿ ನಡೆಯಲಿದ್ದು, ಸಭೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ಎಂಬತ್ತು ವರ್ಷ ಮೀರಿದ ಹಿರಿಯರನ್ನು ಸನ್ಮಾನಿಸಲಾಗುವುದು ಎಂದು ಸಂಘದ ಅಧ್ಯಕ್ಷ ಎಂ.ಕೆ.ಉತ್ತಪ್ಪ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾಸಭೆಯನ್ನು ಅಂದು ಬೆಳಗ್ಗೆ 10.30 ಗಂಟೆಗೆ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಡಾ.ಮಂತರ್ ಗೌಡ ಅವರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುಜಾ ಕುಶಾಲಪ್ಪ, ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು. ಸಂಘದ ಗೌರವಾಧ್ಯಕ್ಷರಾದ ಎಂ.ಕೆ.ಅಪ್ಪಯ್ಯ ಅವರು ಮಾತನಾಡಿ, ಮಹಾಸಭೆಯಲ್ಲಿ ಸಂಘದಲ್ಲಿರುವ 80 ವರ್ಷ ಮೇಲ್ಪಟ್ಟ ಹಿರಿಯರನ್ನು ಸನ್ಮಾನಿಸಲಾಗುತ್ತದೆ. ಇದರೊಂದಿಗೆ ವೀರಪ್ಪನ್ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಕೊಡಗಿನ ಮಣವಟ್ಟೀರ ಪೊನ್ನಪ್ಪ ಅವರ ಜ್ಞಾಪಕಾರ್ಥ ಪೊಲೀಸ್ ಅಧಿಕಾರಿ ಶಂಕರಿ ಬಿದರಿ ಅವರು ಸಂಘಕ್ಕೆ ನೀಡಿರುವ 1 ಲಕ್ಷ ರೂ. ಮತ್ತು ಹಿರಿಯರಾದ ಪಿ.ಕೆ.ರಾವ್ ಅವರು ತಮ್ಮ ತಾಯಿಯ ಸ್ಮರಣಾರ್ಥ…

Read More

ಮಡಿಕೇರಿ ಫೆ.14 NEWS DESK : ಮೈಸೂರಿನ ಉದಯಗಿರಿಯಲ್ಲಿ ಉದ್ದೇಶ ಪೂರ್ವಕವಾಗಿ ಕೆಲವು ಕಿಡಿಗೇಡಿಗಳು ನಡೆಸಿದ ಗಲಭೆಯನ್ನು ಆರ್‍ಎಸ್‍ಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಮಾಡಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಅವರು ನೀಡಿರುವ ಹೇಳಿಕೆ ಖಂಡನೀಯವೆಂದು ಕೊಡಗು ಜಿಲ್ಲಾ ಬಿಜೆಪಿಯ ಪಧಾನ ಕಾರ್ಯದರ್ಶಿ ಮಹೇಶ್ ಜೈನಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸುಳ್ಳು ಆರೋಪಗಳನ್ನು ಮಾಡಿ ಸಮಾಜದ ಶಾಂತಿ ಕದಡುತ್ತಿರುವ ಎಂ.ಲಕ್ಷ್ಮಣ್ ಅವರನ್ನು ತಕ್ಷಣ ಬಂಧಿಸಿ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಹಾಗೂ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರುಗಳ ಕುರಿತು ಕಾರ್ಟೂನ್ ರೂಪದಲ್ಲಿ ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿರುವುದನ್ನು ವಿರೋಧಿಸುವ ನೆಪದಲ್ಲಿ ಕರ್ತವ್ಯ ನಿರತ ಪೊಲೀಸರ ಮೇಲೆ ದಾಳಿ ಮಾಡಲಾಗಿದೆ. ಅಲ್ಲದೆ ಪೂರ್ವನಿಯೋಜಿತರಾಗಿ ಠಾಣೆ ಮತ್ತು ಸಾರ್ವಜನಿಕರ ಮೇಲೂ ದಾಳಿ ಮಾಡಿದ್ದಾರೆ. ಈ ಗಲಭೆಕೋರರನ್ನು ರಕ್ಷಿಸುವ ಸಲುವಾಗಿ ಲಕ್ಷ್ಮಣ್ ಅವರು…

Read More

ನಾಪೋಕ್ಲು ಫೆ.14 NEWS DESK : ಹಳೆ ತಾಲ್ಲೂಕಿನ ಶ್ರೀ ಪೊನ್ನುಮುತ್ತಪ್ಪ ದೇವಾಲಯದಲ್ಲಿ ಫೆ.15 ರಂದು ಮಾಸಿಕ ವೆಳ್ಳಾಟ ನಡೆಯಲಿದೆ. ಕಾರ್ಯಕ್ರಮವನ್ನು ಪ್ರವೀಣ್ ಹಾಗೂ ಸಂಸಾರ ನಡೆಸಿಕೊಡಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ. ವರದಿ : ದುಗ್ಗಳ ಸದಾನಂದ. 

Read More

ಮಡಿಕೇರಿ ಫೆ.14 NEWS DESK : ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ನೆಲೆ ಕಳೆದುಕೊಂಡ ಜಾನುವಾರುಗಳ ರಕ್ಷಣೆಗಾಗಿ ಪ್ರಾರಂಭಿಸಿದ ಶ್ರೀಕೃಷ್ಣ ಗೋ ಶಾಲೆ ಆರು ವರ್ಷಗಳನ್ನು ಪೂರೈಸಿದ್ದು, ಇದೀಗ ಜಾಗ ಹಾಗೂ ಮೇವಿನ ಕೊರತೆಯನ್ನು ಎದುರಿಸುತ್ತಿದೆ. ದಾನಿಗಳು ಗೋವುಗಳಿಗೆ ಮೇವು ನೀಡುವ ಮೂಲಕ ಸಹಕರಿಸುವಂತೆ ಗೋಶಾಲೆ ಸ್ಥಾಪಕಾಧ್ಯಕ್ಷ ಹರೀಶ್ ಜಿ.ಆಚಾರ್ಯ ಮನವಿ ಮಾಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನಲ್ಲಿ 2018ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ನೆಲೆ ಕಳೆದುಕೊಂಡ ಜಾನುವಾರುಗಳ ರಕ್ಷಣೆಗಾಗಿ ಜಾಗವನ್ನು ಗುತ್ತಿಗೆಗೆ ಪಡೆದು ಶ್ರೀಕೃಷ್ಣ ಗೋಶಾಲೆಯನ್ನು ಆರಂಭಿಸಲಾಯಿತು. ದಾನಿಗಳ ಸಹಕಾರದಿಂದ ಗೋಶಾಲೆ ಮುನ್ನಡೆಯುತ್ತಿತ್ತಾದರು 2 ವರ್ಷಗಳ ಕೋವಿಡ್ ಪರಿಸ್ಥಿತಿಯಿಂದ ಅಭಿವೃದ್ಧಿ ಕುಂಟಿತಗೊಂಡಿತು ಎಂದರು. ಗೋವುಗಳ ಮೇವು, ಹಿಂಡಿ, ಔಷಧಿ, ಕಾರ್ಮಿಕರ ಸಂಬಳ, ಗೋಶಾಲೆ ನಡೆಸುವ ಜಾಗದ ಬಾಡಿಗೆ ಇತ್ಯಾದಿಗಳನ್ನು ಪೂರೈಸಲು ದಾನಿಗಳು ನೀಡುವ ದೇಣಿಗೆಯ ಕೊರತೆಯಿಂದಾಗಿ ಸಾಲ ಮಾಡಿ ಗೋಶಾಲೆ ನಡೆಸುವಂತಾಗಿದೆ. ಪ್ರತಿ ತಿಂಗಳು ಒಂದು ಲಕ್ಷದ ಇಪ್ಪತ್ತು ಸಾವಿರ ರೂ.ಗಳು ಖರ್ಚಾಗುತ್ತಿದೆ. ಆದ್ದರಿಂದ ದಾನಿಗಳು ತಿಂಗಳಿಗೆ ಕನಿಷ್ಟ…

Read More

ಸುಂಟಿಕೊಪ್ಪ ಫೆ.14 NEWS DESK : ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸಬೇಕೆಂದು ಸಾರಿಗೆ ಪ್ರಾಧಿಕಾರದ ಅಧಿಕಾರಿ ಶಿವಕುಮಾರ್ ಹೇಳಿದರು. ಸುಂಟಿಕೊಪ್ಪ ವಾಹನ ಚಾಲಕರ ನಿಲ್ದಾನದಲ್ಲಿ 36ನೇ ರಾಷ್ಟ್ರೀಯ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮವನ್ನು ಸಾರಿಗೆ ಪ್ರಾಧಿಕಾರದ ಅಧಿಕಾರಿ ಉದ್ಘಾಟಿಸಿ ವಾಹನ ಚಾಲಕರನ್ನು ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ವಾಹನ ಮಾಲಿಕರು ಹಾಗೂ ಚಾಲಕರು ಎಲ್ಲಾ ದಾಖಲಾತಿಯೊಂದಿಗೆ ಜಾಗೃತೆಯಿಂದ ವಾಹನ ಚಾಲನೆ ಮಾಡುವಂತೆ ಮಡಿಕೇರಿ ಸಾರಿಗೆ ಪ್ರಾಧಿಕಾರದ ಅಧಿಕಾರಿಗಳು ಸಾರ್ವಜನಿಕರಿಗೆ ಹಾಗೂ ಚಾಲಕರಿಗೆ ವಾಹನ ಚಾಲನಾ ಪರವನಾಗಿಯನ್ನು ಹೊಂದದೆ. ವಾಹನ ಚಾಲನೆ ಮಾಡುವುದು ಕಾನೂನು ರೀತಿಯಲ್ಲಿ ಅಪರಾಧವಾಗಿದೆ. ವಾಹನಕ್ಕೆ ಸಂಬಂಧಿಸಿದ ದಾಖಲಾತಿ ಪತ್ರಗಳನ್ನು ವಾಹನದಲ್ಲಿರಿಸಿಕೊಳ್ಳಬೇಕು. ಮೋಜಿಗಾಗಿ ವಾಹನ ಚಲಾಯಿಸಿ ಜೀವಕ್ಕೆ ಕುತ್ತು ತರದಂತೆ ಜಾಗೃತೆ ವಹಿಸಿ ಚಾಲನೆಯಲ್ಲಿ ಮೊಬೈಲ್ ಬಳಸದಿರಿ ಮುಂದೆ ಸಾಗುತ್ತಿರುವ ವಾಹನವನ್ನು ಹಿಂದಿಕ್ಕುವಾಗ ಜಾಗೃತೆ ವಹಿಸಬೇಕು. ಇಲ್ಲದಿದ್ದಲ್ಲಿ ಅಪಘಾತ ಸಂಭವಿಸಿ ಪ್ರಾಣ ಹಾನಿಯಾದರೆ ನಿಮ್ಮನ್ನು ನಂಬಿದ ಕುಟುಂಬದವರನ್ನು ನಡು ನೀರಿನಲ್ಲಿ ಕೈಬಿಟ್ಟು ಅವರ ಜೀವನವನ್ನು…

Read More

ಮಡಿಕೇರಿ ಫೆ.14 NEWS DESK :  ಹುಣ್ಣಿಮೆ ಅಂಗವಾಗಿ ಜೀವನದಿ ಕಾವೇರಿಗೆ ಏಕಕಾಲದಲ್ಲಿ ಜಿಲ್ಲೆಯ ನದಿ ಪಾತ್ರದ 15 ಕಡೆ ಮಹಾ ಆರತಿ ಕಾರ್ಯಕ್ರಮ ನಡೆಯಿತು. ನಮಾಮಿ ಕಾವೇರಿ ಬಳಗದ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಹಯೋಗದೊಂದಿಗೆ ಭಾಗಮಂಡಲ ಸಂಗಮ ದಿಂದ ಜಿಲ್ಲೆಯ ಗಡಿ ಭಾಗ ಶಿರಂಗಾಲ ತನಕ ನದಿ ತಟಗಳಲ್ಲಿ ಆರತಿ ಬೆಳಗಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಭಾಗಮಂಡಲ, ನಾಪೋಕ್ಲು, ಗುಹ್ಯ, ಕರಡಿಗೋಡು, ಬಲಮುರಿ, ಕುಶಾಲನಗರ, ಮಾದಾಪಟ್ಟಣ, ಕೂಡು ಮಂಗಳೂರು, ತೊರೆನೂರು, ಮುಳ್ಳುಸೋಗೆ, ಕೊಪ್ಪ ಸೇರಿದಂತೆ ವಿವಿಧ ಕಡೆಗಳಲ್ಲಿ ನದಿಗೆ ಆರತಿ ಬೆಳಗುವ ಮೂಲಕ ನದಿ ತಟದ ಜನರಿಗೆ ನದಿ ಸಂರಕ್ಷಣೆ ಮತ್ತು ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಯಿತು. ತೊರೆನೂರು ಗ್ರಾಮದಲ್ಲಿ ಇದೇ ಪ್ರಥಮ ಬಾರಿಗೆ ಕಾವೇರಿಗೆ ಆರತಿ ಬೆಳಗುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಎಲ್ಲ ಕಡೆಗಳಲ್ಲಿ ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು, ಪ್ರಮುಖರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು. ಕುಶಾಲನಗರದ ಕಾವೇರಿ ಆರತಿ ಕ್ಷೇತ್ರದಲ್ಲಿ ನಡೆದ 169ನೇ…

Read More

ಮಡಿಕೇರಿ ಫೆ.14 NEWS DESK : ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಸಹಕಾರದಲ್ಲಿ ಕ್ಲಬ್ ಮಹೀಂದ್ರ ವತಿಯಿಂದ ರಕ್ತದಾನ ಶಿಬಿರವು ಫೆಬ್ರವರಿ, 14 ರಂದು ಬೆಳಗ್ಗೆ 10 ಗಂಟೆಗೆ ನಗರದ ಹೊರವಲಯದಲ್ಲಿರುವ ಕ್ಲಬ್ ಮಹೀಂದ್ರದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Read More