ಲೇಖಕ: admin

https://youtu.be/fClFWQoeASo?si=NtLsMYhmcMFh6zIs ಮಡಿಕೇರಿ ಫೆ.7 NEWS DESK : ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಕಳೆದ ಆರು ದಿನಗಳಿಂದ ನಡೆದ ‘ಕೊಡವಾಮೆ ಬಾಳೋ’ ಬೃಹತ್ ಪಾದಯಾತ್ರೆ ಮಡಿಕೇರಿಯಲ್ಲಿ ಸಮಾರೋಪಗೊಂಡಿತು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಕೊಡವರು ಪಾದಯಾತ್ರೆಯ ಮೂಲಕ ತಮ್ಮ ಹಕ್ಕೊತ್ತಾಯಗಳನ್ನು ಮಂಡಿಸಿದರು. ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದ ಬಳಿ ಇರುವ ಕೊಡವ ಮಂದ್‍ನಲ್ಲಿ ಜಿಲ್ಲಾಧಿಕಾರಿ ವೆಂಕಟರಾಜ್ ಅವರಿಗೆ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಅವರು ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಅವರ ನೇತೃತ್ವದಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು. :: ಬೇಡಿಕೆಗಳು ::  ಸೂಕ್ಷ್ಮಾತಿ ಸೂಕ್ಷ್ಮ ಅಲ್ಪಸಂಖ್ಯಾತ ಕೊಡವ ಜನಾಂಗದ ಸಂವಿಧಾನಬದ್ಧ ಬೇಡಿಕೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಬೇಕು. ಕೊಡವ ಜನಾಂಗದ ಪರಂಪರೆ, ಧಾರ್ಮಿಕ ಆಚರಣೆಗಳು, ಸಾಮಾಜಿಕ ಭದ್ರತೆಗೆ ಪೂರಕವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು. ಕೊಡವರು ಹಾಗೂ ಜಮ್ಮಾ…

Read More

https://www.youtube.com/watch?v=tDf31OOg6xU&authuser=0 ಮಡಿಕೇರಿ ಫೆ.7 NEWS DESK : ಮಡಿಕೇರಿಯಲ್ಲಿ ‘ಕೊಡವಾಮೆ ಬಾಳೋ’ ಕೊಡವರ ಬೃಹತ್ ಪಾದಯಾತ್ರೆ

Read More

ಮಡಿಕೇರಿ ಫೆ.7 NEWS DESK : ನಗರಸಭೆ ವ್ಯಾಪ್ತಿಯಲ್ಲಿ 2 ಲೀ.ಗಿಂತಲೂ ಕಡಿಮೆ ಪ್ರಮಾಣದ ಪ್ಲಾಸ್ಟಿಕ್ ಕುಡಿಯುವ ನೀರಿನ ಬಾಟಲಿಗಳ ಬಳಕೆ ಹಾಗೂ ಮಾರಾಟವನ್ನು ಸಂಪೂರ್ಣ ನಿಷೇಧಿಸಿದ್ದು, ಸಾರ್ವಜನಿಕರು ಹಾಗೂ ಉದ್ದಿಮೆದಾರರು ಮಡಿಕೇರಿ ನಗರಸಭೆಯವರೊಂದಿಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತ ಹೆಚ್.ಆರ್.ರಮೇಶ್ ತಿಳಿಸಿದ್ದಾರೆ.

Read More

ನಾಪೋಕ್ಲು ಫೆ.7 NEWS DESK : ಬಡ ಕುಟುಂಬದ ಮನೆಯೊಂದಕ್ಕೆ ಸುಣ್ಣ ಬಣ್ಣ ಬಳಿಯುವ ಮೂಲಕ ನಾಪೋಕ್ಲು ಶೌರ್ಯ ವಿಪತ್ತು ತಂಡ ಮಾನವೀಯತೆ ಮೆರೆದಿದೆ. ಕೂರುಳಿಯ ಮನೆಯೊಂದರಲ್ಲಿ ವಾಸವಿರುವ ಪಾರ್ಶ್ವವಾಯು ಪೀಡಿತ ಗಂಡ. ಕಾಯಿಲೆಯಿಂದ ಬಳಲುತ್ತರುವ ಹೆಂಡತಿ. ಆಸರೆಗೆ ಯಾರೂ ಇಲ್ಲದ ದಯಾನೀಯ ಪರಿಸ್ಥಿತಿಯಲ್ಲಿರುವ ಕುಟುಂಬಕ್ಕೆ ಹತ್ತು ಹಲವು ಸೇವಾ ಕಾರ್ಯದಲ್ಲಿ ಮುಂಚೂಣಿಯಲ್ಲಿರುವ ನಾಪೋಕ್ಲು ಶೌರ್ಯ ವಿಪ್ಪತ್ತು ನಿರ್ವಹಣಾ ಘಟಕದ ಸದಸ್ಯರು ಬಣ್ಣ ಖರೀದಿಸಿ ಪೂರ್ತಿಮನೆಗೆ ಬಣ್ಣ ಬಳಿದು ಕುಟುಂಬಸ್ಥರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದ್ದಾರೆ. ಸೇವಾ ಕಾರ್ಯದಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ತಾಲ್ಲೂಕು ಮಾಸ್ಟರ್ ಬಾಳೆಯಡ ದಿವ್ಯ ಮಂದಪ್ಪ, ಪ್ರಮುಖರಾದ ಉಮಾಲಕ್ಷ್ಮಿ, ಸೀನ, ಮಾಧವನ್, ಶಂಕರ, ಶರವಣ, ರವಿ, ಚಂದ್ರಕಲಾ, ರಮ್ಯ, ಪೊನ್ನಮ್ಮ ಮೊದಲಾದವರು ಭಾಗವಹಿಸಿದ್ದು, ಸಾರ್ವಜನಿಕರ ಪ್ರಸಂಸೆಗೆ ಪಾತ್ರರಾದರು. ವರದಿ : ದುಗ್ಗಳ ಸದಾನಂದ.  

Read More

ನವದೆಹಲಿ ಫೆ.7 NEWS DESK : ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ಪರವಾನಗಿ ರಹಿತ ತಂಬಾಕು ಬೆಳೆಗಾರರಿಗೆ ಮಾರಾಟಕ್ಕೆ ಅವಕಾಶ ಮಾಡಿಕೊಡಲು ಹಾಗೂ ಅವರ ಮೇಲೆ ವಿಧಿಸಲಾಗುತ್ತಿದ್ದ ದಂಡವನ್ನು ಮನ್ನಾ ಮಾಡಬೇಕೆಂದು ಮನವಿ ಸಲ್ಲಿಸಿದ್ದೇನೆ ಎಂದು ಮೈಸೂರು-ಕೊಡಗು ಸಂಸದರಾದ ಯದುವೀರ್ ಒಡೆಯರ್ ತಿಳಿಸಿದ್ದಾರೆ. ನವದೆಹಲಿಯಲ್ಲಿ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿದ ನಂತರ ಸಂಸದರು ತಿಳಿಸಿದ್ದಾರೆ. ಇದಕ್ಕೆ ಸೂಕ್ತವಾಗಿ ಸ್ಪಂದನೆ ವ್ಯಕ್ತಪಡಿಸಿದ ವಾಣಿಜ್ಯ ಸಚಿವರಾದ ಪಿಯೂಷ್ ಗೋಯಲ್, ಕಾರ್ಡ್ ಹೊಂದಿರದ (ಪರವಾನಗಿ ರಹಿತ) ತಂಬಾಕು ಬೆಳೆಗಾರರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸುವ ಕುರಿತು ಭರವಸೆ ನೀಡಿದ್ದಾರೆ ಎಂದು ಸಂಸದರು ತಿಳಿಸಿದರು. ಪರವಾನಗಿ ತಂಬಾಕು ಬೆಳೆಗಾರರಿಗೆ ವಿಧಿಸುತ್ತಿದ್ದ ದಂಡವನ್ನು ಮನ್ನಾ ಮಾಡುವ ಸಂಬಂಧ ತಂಬಾಕು ಮಂಡಳಿಗೆ ಸೂಕ್ತ ನಿರ್ದೇಶನ ನೀಡಿವ ಭರವಸೆಯನ್ನೂ ನೀಡಿದ್ದಾರೆ ಎಂದು ಸಂಸದ ಯದುವೀರ್ ಸ್ಪಷ್ಟಪಡಿಸಿದ್ದಾರೆ. ಅತಿ ಶೀಘ್ರದಲ್ಲೇ ನಿರ್ಧಾರ ಹೊರಬೀಳುವ ನಿರೀಕ್ಷೆ ಇದೆ ಎಂದು ಸಂಸದರು…

Read More

ನಾಪೋಕ್ಲು ಫೆ.7 NEWS DESK : ಕೊಳಕೇರಿ ಗ್ರಾಮದ ಕಾಂಡಂಡ ಕುಟುಂಬಸ್ಥರ ನವೀಕರಣ ಐನ್‍ಮನೆ ಉದ್ಘಾಟನಾ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ನೂರಾರು ವರ್ಷಗಳ ಹಳೆಯ ಐನ್ ಮನೆಯನ್ನು ದಾನಿಗಳ ನೆರವಿನಿಂದ ಸುಮಾರು ಒಂದು ಕೋಟಿ ರೂಗಳಿಂದ ನವೀಕರಿಸಲಾಗಿದ್ದು ನೂತನವಾಗಿ ಕಂಗೊಳಿಸುತ್ತಿದೆ. ಕುಟುಂಬದ ಪಟ್ಟೇದಾರ ಕಾಂಡಂಡ ಎ.ಸುಬ್ಬಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಹಾಜರಿದ್ದ ಅತಿಥಿಗಳು ಮಾತನಾಡಿ, ನಶಿಸುತ್ತಿರುವ ಆಚಾರ, ವಿಚಾರ, ಸಂಸ್ಕೃತಿ-ಸಂಪ್ರದಾಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಕುಂಡ್ಯೋಳಂಡ ಎ.ಸುಬ್ಬಯ್ಯ, ಬೊಳಿಯಾಡಿರ ರಾಜ ಸೋಮಯ್ಯ, ಪುಚ್ಚಿಮಂಡ ಸಾಬು ಕುಟ್ಟಪ್ಪ, ಮಂಡೆಪಂಡ ಸುಂದರಿ ಕುಟ್ಟಪ್ಪ, ಬಿದ್ದಾಟಂಡ ಡಿಕ್ಕಿ ಸೋಮಯ್ಯ, ಬೊಲಿಯಾಡಿರ ಬೊಳ್ಳವ್ವ, ಕನ್ನಂಬಿರ ಚಂಗಪ್ಪ, ಬೊಟ್ಟೋಳಂಡ ಅಪ್ಪಣ್ಣ, ಕೇಟೋಳಿರ ಕುಟ್ಟಪ್ಪ, ಕಲಿಯಂಡ ಮಾದಪ್ಪ, ಅಪ್ಪಚ್ಚಿರ ಬೆಳ್ಯಪ್ಪ, ಕೊಂಬಾರನ ಚೋಮುಣಿ, ಕಾಂಡಂಡ ಜೋಯಪ್ಪ, ಕಾಂಡಂಡ ಚರ್ಮಣ, ಕಾಂಡಂಡ ಎಂ.ಬೋಪಣ್ಣ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಕುಟುಂಬದ ಕಾರ್ಯದರ್ಶಿ ಜಯ ಕರುಂಬಯ್ಯ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಪೊನ್ನಣ್ಣ ಮತ್ತು ದಾಮೋದರ…

Read More

ನವದೆಹಲಿ ಫೆ.7 NEWS DESK :  ಮೈಸೂರು ಸಮೀಪದ ಸಿದ್ಧಲಿಂಗಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೆ ಕೆಸರೆ ಗ್ರಾಮದಲ್ಲಿ ಅವೈಜ್ಞಾನಿಕ ಘನತ್ಯಾಜ್ಯ ಘಟಕ ನಿರ್ಮಾಣ ಹಾಗೂ ಈ ಪ್ರದೇಶದಲ್ಲಿ ಕೆಲವರು ತ್ಯಾಜ್ಯವನ್ನು ಸುಡುತ್ತಿರುವುದರಿಂದ ವರುಣಾ ನಾಲಾ ಪಿಲ್ಲರ್ ಗಳಿಗೆ ಭಾರಿ ಅನಾಹತವಾಗಲಿದೆ ಕೂಡಲೇ ಇದನ್ನು ತೆರವುಗೊಳಿಸಿ ಪರಿಸರವನ್ನು ಹಾಗೂ ಜನರನ್ನು ರಕ್ಷಿಸಬೇಕು ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಂಸದರು, ಜನರಿಗೆ ಹಾಗೂ ತ್ಯಾಜ್ಯವನ್ನು ಅವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿರುವುದರಿಂದ ಪರಿಸರಕ್ಕೆ ಆಗುತ್ತಿರುವ ತೊಂದರೆಗಳ ಬಗ್ಗೆ ಸಂಸತ್ತಿನ ಗಮನಕ್ಕೆ ತರಲಾಗುವುದು ಎಂದರು. ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಸಚಿವರ ಗಮನಕ್ಕೆ ಸಮಸ್ಯೆಯನ್ನು ಮನವರಿಕೆ ಮಾಡಿಕೊಡುತ್ತೇನೆ ಎಂದೂ ವಿವರಿಸಿದ್ದಾರೆ. ಈ ಪ್ರದೇಶದಲ್ಲಿ ಕೆಲವು ವ್ಯಕ್ತಿಗಳು ಶೆಡ್‌ ಗಳನ್ನು ಕಟ್ಟಿಕೊಂಡು ತ್ಯಾಜ್ಯವನ್ನು ಸುಡುತ್ತಿದ್ದಾರೆ. ವರುಣಾ ನಾಲೆಯ ಸಮೀಪವೇ ತ್ಯಾಜ್ಯ ವಿಲೇವಾರಿ ಮಾಡುತ್ತಿರುವುದರಿಂದ ಪಿಲ್ಲರ್‌ ಗಳಿಗೆ ಭಾರಿ ತೊಂದರೆ ಆಗುವ…

Read More

ನಾಪೋಕ್ಲು ಫೆ.7 NEWS DESK : ಅಖಿಲ ಕೊಡವ ಸಮಾಜ ನೇತೃತ್ವದಲ್ಲಿ ವಿವಿಧ ಕೊಡವ ಸಮಾಜ ಹಾಗೂ ಸಂಘ ಸಮಸ್ಯೆಗಳು ಸೇರಿದಂತೆ ಕೊಡವ ಭಾಷೆಕ ಸಮುದಾಯಗಳು ಕುಟ್ಟದಿಂದ ಮಡಿಕೇರಿಯ ವರೆಗೆ ಕೈಗೊಂಡ ಕೊಡವಾಮೆ ಬಾಳೋ ಪಾದಯಾತ್ರೆಯಲ್ಲಿ ಕಲಿಯಂಡ ಕುಟುಂಬಸ್ಥರು ಎಲ್ಲಾ ರೀತಿಯಲ್ಲಿ ಸಂಪೂರ್ಣ ಸಹಕಾರದೊಂದಿಗೆ ಭಾಗವಹಿಸುತ್ತಿದ್ದೇವೆ ಎಂದು ಕಲಿಯಂಡ ವಿಜಯ ತಿಳಿಸಿದ್ದಾರೆ. ಕೊಳಕೇರಿ ಗ್ರಾಮದ ಕಲಿಯಂಡ ಐನ್ ಮನೆಯಲ್ಲಿ ಕುಟುಂಬ ಅಭಿವೃದ್ಧಿ ಸಂಘದ ಅಧ್ಯಕ್ಷ ಕಲಿಯಂಡ ವಿಜಯ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಮಾತನಾಡಿದ ಅವರು, ಮಡಿಕೇರಿಯಲ್ಲಿ ಜರುಗುವ ಸಮಾವೇಶದಲ್ಲಿಯೂ ಕುಟುಂಬ ಸದಸ್ಯರೆಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಲು ಸಹಕರಿಸುವ ನಿಟ್ಟಿನಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿಜಯ ಹಾಗೂ ಕುಟುಂಬದ ಪ್ರಮುಖ ಪ್ರಕಾಶ್ ತಿಳಿಸಿದರು. ನಾಪೋಕ್ಲು ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ ಪ್ರತಿಕ್ರಿಯಿಸಿ ಪಾದಯಾತ್ರೆಯ ಪ್ರಯುಕ್ತ ನಮ್ಮ ಶಾಲೆಗೆ ಒಂದು ದಿನದ ರಜೆಯನ್ನು ಘೋಷಿಸಲಾಗಿದೆ ಎಂದರು. ಈ ಸಂದರ್ಭ ಅಭಿವೃದ್ಧಿ ಸಂಘದ ಪದಾಧಿಕಾರಿಗಳು…

Read More

ಮಡಿಕೇರಿ ಫೆ.7 NEWS DESK : ಮಡಿಕೇರಿ ತಾಲ್ಲೂಕು ಸವಿತಾ ಸಮಾಜದ ವತಿಯಿಂದ ಸವಿತಾ ಮಹರ್ಷಿ ಜಯಂತಿ ಹಿನ್ನಲೆಯಲ್ಲಿ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾಟದಲ್ಲಿ ಅಪ್ಪಂಗಳ ರಾಕರ್ಸ್ ತಂಡ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು. ಮಡಿಕೇರಿ ತಾಲೂಕಿನ ಸಮಾಜಬಾಂಧವರಿಗೆ ಆಯೋಜಿಸಿದ್ದ ಸೂಪರ್ ನೈನ್ ಆಟಗಾರರ ಪಂದ್ಯಾಟದಲ್ಲಿ 4 ತಂಡಗಳು ಪಾಲ್ಗೊಂಡಿತ್ತು. ಲೀಗ್ ಮಾದರಿಯಲ್ಲಿ ನಡೆದ ಪಂದ್ಯಾಟದ ಫೈನಲ್ ಪಂದ್ಯದಲ್ಲಿ ಟಾಸ್ ಸೋತ ಎಂಸಿಬಿ(ಮಡಿಕೇರಿ ಕಜ್ಹೀನ್ ಬದರ್ಸ್) ತಂಡ ನಿಗದಿತ 4 ಓವರ್‍ನಲ್ಲಿ 2 ವಿಕೆಟ್ ಕಳೆದುಕೊಂಡು 58 ರನ್ ಕಲೆಹಾಕಿತು. ಗುರಿಬೆನ್ನಟ್ಟಿದ ಅಪ್ಪಂಗಳ ರಾಕರ್ಸ್ ತಂಡ 3.2. ಓವರ್‍ನಲ್ಲಿ 2 ವಿಕೆಟ್ ಕಳೆದುಕೊಂಡು ಚಾಂಪಿಯನ್ ಪಟ್ಟ ಅಲಂಕರಿಸಿತು. ಎಂಸಿಬಿ ತಂಡ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಂಡಿತು. ಇದಕ್ಕೂ ಮುನ್ನ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಟಾಸ್ ಸೋತ ಎಂಎಂಎಸ್(ಮಡಿಕೇರಿ ಸವಿತಾ ಸಮಾಜ) ತಂಡ ನಿಗದಿತ 4 ಓವರ್‍ನಲ್ಲಿ 6 ವಿಕೆಟ್ ನಷ್ಟಕ್ಕೆ 37ರನ್ ಕಲೆ ಹಾಕಿತು. ಅಲ್ಪ ಮೊತ್ತದ…

Read More

ಮಡಿಕೇರಿ NEWS DESK ಫೆ.6 : ಕೊಡವರ ಹಾಗೂ ಕೊಡವ ಭಾಷಿಕರ ಹಕ್ಕುಗಳ ಪ್ರತಿಪಾದನೆಯ ಮೂಲಕ ರಾಜ್ಯ ಸರ್ಕಾರದ ಗಮನ ಸೆಳೆೆಯುವ ಸಲುವಾಗಿ ನಡೆಯುತ್ತಿರುವ ಕೊಡವರ ‘ಕೊಡವಾಮೆ ಬಾಳೋ’ ಪಾದಯಾತ್ರೆ 5ನೇ ದಿನವನ್ನು ಯಶಸ್ವಿಯಾಗಿ ಪೂರೈಸಿ ಜಿಲ್ಲಾ ಕೇಂದ್ರ ಮಡಿಕೇರಿ ಸಮೀಪದ ಕಗ್ಗೋಡ್ಲು-ಮೇಕೇರಿಗೆ ಆಗಮಿಸಿದೆ. ಬೇತ್ರಿ ಗ್ರಾಮದಿಂದ ಗುರುವಾರ ಬೆಳಗ್ಗೆ ಆರಂಭಗೊAಡ 5ನೇ ದಿನದ ಪಾದಯಾತ್ರೆ ಮೂರ್ನಾಡು ಪಟ್ಟಣವನ್ನು ತಲುಪಿದ ಸಂದರ್ಭ, ಮಡಿಕೇರಿ ತಾಲ್ಲೂಕು ವ್ಯಾಪ್ತಿಯ ಸಹಸ್ರಾರು ಕೊಡವ ಸಮುದಾಯ ಬಾಂಧವರು ಮುಖ್ಯ ಪಾದಯಾತ್ರೆಗೆ ಸೇರ್ಪಡೆಗೊಂಡರು. ಸಾಂಪ್ರದಾಯಿಕ ಕೊಡವ ಉಡುಪಿನಲ್ಲಿದ್ದ ಕೊಡವ ಕೊಡವತಿಯರು ಮೆರವಣಿಗೆಯ ಉದ್ದಕ್ಕೂ ಗಮನ ಸೆಳೆಯುತ್ತಿದ್ದು, ಉರಿಬಿಸಿಲ ಬೇಗೆಯ ನಡುವೆಯೂ ಪಾದಯಾತ್ರೆ ಮೂರ್ನಾಡಿನಿಂದ ಹಾಕತ್ತೂರು ಗ್ರಾಮವನ್ನು ಹಾದು ಕಗ್ಗೊಡ್ಲು-ಮೇಕೇರಿ ಗ್ರಾಮಕ್ಕೆ ಸಂಜೆ ತಲುಪಿತು. ಸುಮಾರು 13 ಕಿ.ಮೀ ಪಾದಯಾತ್ರೆ ಇಂದು ನಡೆಯಿತು. ಶುಕ್ರವಾರ ಬೆಳಗ್ಗೆ 10 ಗಂಟೆಗೆ ಮತ್ತೆ ಆರಂಭಗೊಳ್ಳುವ ಪಾದಯಾತ್ರೆ ಮಡಿಕೇರಿಗೆ ಆಗಮಿಸಲಿದೆ. ಪಾದಯಾತ್ರೆ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತ ತಲುಪುವ ಹಂತದಲ್ಲಿ, ಕ್ರಮವಾಗಿ ಗಾಳಿಬೀಡು, ತಾಳತ್ತಮನೆ,…

Read More