ಕುಶಾಲನಗರ ಡಿ.28 NEWS DESK : ಕಾವೇರಿ ನದಿ ಸ್ವಚ್ಛತೆ ಬಗ್ಗೆ ಜನರಿಗೆ ಅರಿವು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಯುವ ಬ್ರಿಗೇಡ್ ಕಾರ್ಯಕರ್ತರ ‘ಕಾವೇರಿ ನಮನ’ ಬೈಕ್ ರ‍್ಯಾಲಿ ತಂಡ ಇಂದು ಜಿಲ್ಲೆಗೆ ಆಗಮಿಸಿತು. ಯುವ ಬ್ರಿಗೇಡ್ ಮಾರ್ಗದರ್ಶಕರಾದ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಶ್ರೀರಂಗಪಟ್ಟಣದಿಂದ ಚಾಲನೆಗೊಂಡ ಸುಮಾರು 100ಕ್ಕೂ ಅಧಿಕ ಸ್ವಯಂಸೇವಕರು 50ಕ್ಕೂ ಅಧಿಕ ಬೈಕ್ ಗಳಲ್ಲಿ ರಾಮನಾಥಪುರ ಮೂಲಕ ಕುಶಾಲನಗರಕ್ಕೆ ಸಂಜೆ ಆಗಮಿಸಿದರು. ಈ ಸಂದರ್ಭದಲ್ಲಿ ಕುಶಾಲನಗರ ಗಡಿಭಾಗದಲ್ಲಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಪ್ರಮುಖರು ಸೇರಿದಂತೆ ಸ್ಥಳೀಯ ಸಂಘ ಸಂಸ್ಥೆಗಳ ಪ್ರಮುಖರು, ಕಾರ್ಯಕರ್ತರು ಬರಮಾಡಿಕೊಂಡರು. ಕುಶಾಲನಗರ ಕೊಪ್ಪ ಬಳಿ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿದ ನಂತರ ಯುವ ಬ್ರಿಗೇಡ್ ಮಾರ್ಗದರ್ಶಕರು ಹಾಗೂ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಕುಶಾಲನಗರ ವಿವೇಕಾನಂದ ಕಾಲೇಜಿಗೆ ತೆರಳಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ನಂತರ ತಂಡ ಮಡಿಕೇರಿ ಮೂಲಕ ಭಾಗಮಂಡಲಕ್ಕೆ ತೆರಳಿತು. ಭಾಗಮಂಡಲದಲ್ಲಿ ಸಂಜೆ ಸಂಗಮದಲ್ಲಿ ಆರತಿ…
ಲೇಖಕ: admin
12 ರಾಶಿಗಳ ರಾಶಿಗಳ 2025 ರ ವರ್ಷ ಭವಿಷ್ಯ (ಡಾ.ಮಹಾಬಲೇಶ್ವರ ಭಟ್, ಮೂರ್ನಾಡು 8105634429) ಮೇಷ ರಾಶಿ :: ಈ ರಾಶಿಯವರಿಗೆ ಮಿಶ್ರಫಲ ಕೊಡಲಿದೆ. ಉದ್ಯೋಗದಲ್ಲಿ ಕಿರಿಕಿರಿ, ಮಾನಸಿಕ ಒತ್ತಡ, ಶನಿ ಪ್ರಭಾವ ಇರಲಿದೆ. ಸಾಡೆಸಾತ್ ಶನಿ ಆರಂಭವಾಗುವುದು, ಗುರು ಬಲವು ಮೇ ತಿಂಗಳವರೆಗೆ ಇರುವುದರಿಂದ ಯಾವುದೇ ಕೆಲಸ ಕಾರ್ಯಗಳನ್ನು ಮತ್ತು ಹಣಕಾಸಿನ ವ್ಯವಹಾರವನ್ನು ಮಾಡುವುದಾದರೆ ಮೇ ತಿಂಗಳ ಒಳಗೆ ಮಾಡಿಕೊಳ್ಳಬೇಕು. ಅನಾರೋಗ್ಯ, ಕೌಟುಂಬಿಕ ಕಲಹ ಆಗಲಿದೆ. :: ಪರಿಹಾರ :: ಶಿವ ದೇವರ ಆರಾಧನೆಯನ್ನು ಮಾಡಿ. ಶುಭ ಸಂಖ್ಯೆ :; 1, 2, 3, 9 :: ಶುಭ ಬಣ್ಣ :: ಕೆಂಪು, ಹಳದಿ, ಕೇಸರಿ ವೃಷಭ ರಾಶಿ :: ಈ ರಾಶಿಯವರಿಗೆ ಈ ವರ್ಷ ಉತ್ತಮ ಯೋಗವಿದ್ದು, ಅವಿವಾಹಿತರಿಗೆ ವಿವಾಹ ಯೋಗ, ಮನೆ ಕಟ್ಟುವವರಿಗೆ ಮನೆ ಸಂಪೂರ್ಣವಾಗಿ ಕಟ್ಟುವ ಯೋಗ, ಹಣ ಯೋಗ, 11ನೇ ಸ್ಥಾನದಲ್ಲಿ ಶನಿ ಇರುವುದರಿಂದ ಸ್ಥಾನಮಾನ ಪ್ರಾಪ್ತಿ, ಸನ್ಮಾನ, ಶತ್ರುನಾಶ, ಕೋರ್ಟು ಕಚೇರಿ ಕೆಲಸದಲ್ಲಿ…
ಮಡಿಕೇರಿ ಡಿ.28 NEWS DESK : ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು ಹಾರಿಸಿದ ಪರಿಣಾಮ ಆತ ಮೃತಪಟ್ಟಿರುವ ಘಟನೆ ವಿರಾಜಪೇಟೆಯ ಚೆಂಬೆಬೆಳ್ಳೂರು ಗ್ರಾಮದಲ್ಲಿ ನಡೆದಿದೆ. ತೋಟದ ಲೈನ್ ಮನೆಯಲ್ಲಿ ವಾಸವಿದ್ದ ಪಣಿಎರವರ ಪೊನ್ನು (21) ಎಂಬುವವರೇ ಮೃತ ಕಾರ್ಮಿಕ. ಗುಂಡು ಹೊಡೆದ ಆರೋಪದಡಿ ವಿರಾಜಪೇಟೆಯ ಬ್ಯಾಂಕ್ ವೊಂದರ ಭದ್ರತಾ ಸಿಬ್ಬಂದಿ ಪೊರ್ಕಂಡ ಚಿಣ್ಣಪ್ಪ ಎಂಬಾತನನ್ನು ಬಂಧಿಸಲಾಗಿದೆ. ವಿರಾಜಪೇಟೆ ಗ್ರಾಮಾಂತರ ಠಾಣಾ ಪೊಲಿಸರು ಆರೋಪಿಯ ಬಳಿಯಿಂದ ಕೃತ್ಯಕ್ಕೆ ಬಳಸಿದ್ದ ಕೋವಿಯನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಮಿಕ ದಂಪತಿ ಪಣಿಎರವರ ಪೊನ್ನು ಹಾಗೂ ಗೀತಾ ಕೆಲವು ತಿಂಗಳ ಹಿಂದೆ ಚೆಂಬೆಬೆಳ್ಳೂರು ಗ್ರಾಮದ ತೋಟದ ಮಾಲೀಕರೊಬ್ಬರ ಲೈನ್ ಮನೆಗೆ ಬಂದು ನೆಲೆಸಿದ್ದರು. ಡಿ.27 ರಂದು ಸಂಜೆ ಕಾರ್ಮಿಕ ದಂಪತಿ ಪಕ್ಕದಲ್ಲೇ ಇದ್ದ ಆರೋಪಿ ಚಿಣ್ಣಪ್ಪ ಅವರ ತೋಟದ ಅಂಚಿನಲ್ಲಿದ್ದ ಹಲಸಿನ ಮರದ ಬಳಿಗೆ ತೆರಳಿದ್ದರು. ಈ ಸಂದರ್ಭ ಪೊನ್ನು ಹಲಸಿನ ಮಿಡಿ ಕೊಯ್ಯಲು ಮರವೇರಿದ್ದರು. ಇದೇ ಸಂದರ್ಭ ಸ್ಥಳಕ್ಕೆ ಬಂದ ಚಿಣ್ಣಪ್ಪ, ಹಲಸಿನ ಮರವೇರಿದ ಪೊನ್ನವನ್ನು ನಿಂದಿಸಿ…
ಸಿದ್ದಾಪುರ ಡಿ.28 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜನಮಂಗಳ ಕಾರ್ಯಕ್ರಮದ ಅಡಿಯಲ್ಲಿ ಫಲಾನುಭವಿಗೆ ಉಚಿತವಾಗಿ ವೀಲ್ ಚೇರ್, ವಾಟರ್ ಬೆಡ್ ಹಾಗೂ ವಾತ್ಸಲ್ಯ ಕಿಟ್’ ಗಳನ್ನು ಚೆನ್ನಂಗಿ ಕಾರ್ಯಕ್ಷೇತ್ರದಲ್ಲಿ ವಿತರಣೆ ಮಾಡಲಾಯಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಲಯ ಮೇಲ್ವಿಚಾರಕ ರಾಕೇಶ್ ಮಾತನಾಡಿ, ಗ್ರಾಮದ ಕಮಲಮ್ಮ ಎಂಬುವವರು ಕಳೆದ ನಾಲ್ಕೈದು ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವೀಲ್ ಚೇರ್ ಉಚಿತವಾಗಿ ನೀಡಲಾಗಿದೆ ಹಾಗೂ ವಾತ್ಸಲ್ಯ ಕಿಟ್ ನ್ನು ಸದಸ್ಯರಾದ ರಾಜು, ವಾಟರ್ ಬೆಡ್ ನ್ನು ಗಣಪತಿ ಅವರಿಗೆ ವಿತರಿಸಲಾಗಿದೆ ಎಂದು ತಿಳಿಸಿದರು. ಒಕ್ಕೂಟದ ಅಧ್ಯಕ್ಷ ಜೈಮಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆಯ ನಿಕಟಪೂರ್ವ ವ್ಯಕ್ತಿ ಹಾಗೂ ಚನ್ನಂಗಿ ಕಾರ್ಯಕ್ಷೇತ್ರದ ಮಾಜಿ ಸೇವಾ ಪ್ರತಿನಿಧಿ ಯತೀಶ್ ಹಾಜರಿದ್ದರು.
ಕುಶಾಲನಗರ ಡಿ.28 NEWS DESK : ಅರಣ್ಯವಾಸಿಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಸಿಗಬೇಕಾದ ಸವಲತ್ತುಗಳನ್ನು ದೊರಕಿಸಲು ಕಳೆದ ಅನೇಕ ದಶಕಗಳ ಕಾಲ ಹೋರಾಟ ನಡೆಸಿ ಇದೀಗ ಅನಾರೋಗ್ಯಕ್ಕೆ ತುತ್ತಾಗಿರುವ ಮಾವಿನಹಳ್ಳ ಗಿರಿಜನ ಹಾಡಿಯ ಜೆ.ಪಿ.ರಾಜು ಹಾಗೂ ಅವರ ಪತ್ನಿ ಪಾರ್ವತಿ ಅವರನ್ನು ಹಾಡಿಯ ಅರಣ್ಯ ಸಮಿತಿಯ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭ ಮಾತನಾಡಿದ ಜಿ.ಪಂ ಮಾಜಿ ಸದಸ್ಯ ಹಾಗೂ ಗಿರಿಜನ ಮುಖಂಡ ಆರ್.ಕೆ.ಚಂದ್ರು, ಧ್ವನಿ ಇಲ್ಲದ ಗಿರಿಜನ ವಾಸಿಗಳಿಗಾಗಿ ಹಗಲು ಇರುಳೆನ್ನದೇ ಹೋರಾಟ ನಡೆಸಿ ಅನೇಕ ಸೌಲಭ್ಯಗಳನ್ನು ಒದಗಿಸಿಕೊಟ್ಟ ಜೆ.ಪಿ.ರಾಜು ಅವರನ್ನು ಮಹಾತ್ಮ ಗಾಂಧಿಗೆ ಹೋಲಿಸಿದರಲ್ಲದೇ, ಕನಿಷ್ಟ ಗುಡಿಸಲು ಹಾಗೂ ಕುಡಿಯಲು ನೀರು ಕೂಡ ಇಲ್ಲದ ಪರಿಸ್ಥಿತಿಯಲ್ಲಿ ನಮ್ಮ ಅರಣ್ಯವಾಸಿಗಳು ಇದ್ದಂತಹ ಸಂದರ್ಭದಲ್ಲಿ ಮನೆ ಮಠ ತೊರೆದು ಗಿರಿಜನರ ಹಕ್ಕುಗಳಿಗಾಗಿ, ಗಿರಿಜನ ಮಕ್ಕಳ ಶಿಕ್ಷಣಕ್ಕಾಗಿ ಅವಿರತ ದುಡಿದಿರುವುದನ್ನು ನಾವು ಯಾರೂ ಕೂಡ ಮರೆಯುವಂತಿಲ್ಲ. ನಾಗರಹೊಳೆ ಅರಣ್ಯದಂಚಿನಲ್ಲಿ ತಾಜ್ ಗ್ರೂಫ್ ಅವರು ಹೋಟೆಲ್ ನಿರ್ಮಿಸಲು ಮುಂದಾದಗ ಜೆ.ಒಇ.ರಾಜು ಅವರ ಹೋರಾಟದಿಂದಾಗಿಯೇ ಅದು ಸ್ಥಗಿತಗೊಂಡಿತು.…
ಮಡಿಕೇರಿ ಡಿ.28 NEWS DESK : ಸಾಮಾಜಿಕ ಜಾಲತಾಣದಲ್ಲಿ ಯೇಸುಕ್ರಿಸ್ತರನ್ನು ಅವಹೇಳನ ಮಾಡಿ ಕ್ರೈಸ್ತ ಸಮುದಾಯದ ಭಾವನೆಗೆ ದಕ್ಕೆ ತಂದಿರುವ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದೆ. ಕ್ರೈಸ್ತರು ಶ್ರದ್ಧಾಭಕ್ತಿಯಿಂದ ಆರಾಧಿಸುತ್ತಿರುವ ಯೇಸುಕ್ರಿಸ್ತರು ಹಾಗೂ ಕ್ರಿಸ್‍ಮಸ್ ಹಬ್ಬದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡಿರುವ ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸಬೇಕು. ಕಿಡಿಗೇಡಿಯೊಬ್ಬ ಕ್ರಿಸ್‍ಮಸ್ ಹಬ್ಬದ ಕುರಿತು ಡಿ.25ರಂದು ಸಾಮಾಜಿಕ ಜಾಲತಾಣದಲ್ಲಿ ಅಗೌರವದ ಪೋಸ್ಟ್ ಮಾಡಿರುವುದಲ್ಲದೆ ಯೇಸುಕ್ರಿಸ್ತರನ್ನು ಕೀಳಾಗಿ ಕಂಡಿದ್ದಾನೆ. ಈತನ ಹೇಳಿಕೆಗೆ ಬೆಂಬಲವಾಗಿ ಮತ್ತೊಬ್ಬ ಕಿಡಿಗೇಡಿ ಅವಹೇಳನಾಕಾರಿ ಪೋಸ್ಟ್ ಮಾಡಿದ್ದಾನೆ. ಇದು ಸಮಾಜದಲ್ಲಿ ಅಶಾಂತಿ ಮೂಡಿಸುವ ಪ್ರಯತ್ನವಾಗಿದ್ದು, ಪೊಲೀಸರು ತಪ್ಪಿತಸ್ಥರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಇನ್ನು ಮುಂದೆ ಈ ರೀತಿಯ ಪ್ರಕರಣಗಳು ನಡೆಯದಂತೆ ಕಠಿಣ ಕಾನೂನು ಜಾರಿಗೊಳಿಸಬೇಕೆಂದು ಪ್ರಮುಖರು ಒತ್ತಾಯಿಸಿದರು. ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಪಿ.ಎ.ಹನೀಫ್ ಮಾತನಾಡಿ ಯೇಸುವನ್ನು…
ಕಣಿವೆ ಡಿ.28 NEWS DESK : ಕುಶಾಲನಗರ ತಾಲ್ಲೂಕಿನ ಮಾವಿನಹಳ್ಳ ಗಿರಿಜನ ಹಾಡಿಯ ಅರಣ್ಯ ಹಕ್ಕು ಸಮಿತಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಗ್ರಾಮ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷರಾಗಿ ಜೆ.ಎಂ.ನಾಗೇಶ್, ಉಪಾಧ್ಯಕ್ಷರಾಗಿ ಚಂದ್ರಪ್ಪ, ಕಾರ್ಯದರ್ಶಿ ಪಾಪಣ್ಣ ಆಯ್ಕೆ ಮಾಡಲಾಗಿದ್ದು, ನಿರ್ದೇಶಕರುಗಳಾಗಿ ಮುತ್ತಮ್ಮ, ಗೀತಾ, ನಾಗಮ್ಮ, ಗೋಪಾಲ, ಜೆ.ಸಿ.ಸತೀಶ, ಜೆ.ಕೆ.ಲೋಕೇಶ, ಜೆ.ಎಂ.ಸೋಮೇಶ, ಜೆ.ಹೆಚ್.ರಾಜು, ಜೆ.ಕೆ.ಚಂದ್ರ, ಲಿಂಗ ನೇಮಕಗೊಂಡಿದ್ದಾರೆ. ಹಾಡಿಯ ಪ್ರವೇಶ ದ್ವಾರದಲ್ಲಿ ಅಳವಡಿಸಿದ ಸಮಿತಿಯ ನಾಮಫಲಕವನ್ನು ಉದ್ಘಾಟಿಸಿ ಮಾತನಾಡಿದ ಗಿರಜನ ಹೋರಾಟಗಾರ ಮಾವಿನಹಳ್ಳ ಕಾಳಿಂಗ, ದಶಕಗಳಿಂದಲೂ ಗಿರಿಜನರು ತಮ್ಮ ಹಕ್ಕುಗಳಿಗಾಗಿ ನಡೆಸುತ್ತಿರುವ ಹೋರಾಟಕ್ಕೆ ಆಳುವ ಸರ್ಕಾರಗಳು ನಯಾ ಪೈಸೆಯ ಕಿಮ್ಮತ್ತು ಕೊಡುತ್ತಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಗಿರಿಜನ ನಿವಾಸಿಗಳನ್ನು ಸಂಘಟಿಸಿ ಉಗ್ರವಾದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಮತ್ತೋರ್ವ ಮುಖಂಡ, ಜಿಪಂ ಮಾಜಿ ಸದಸ್ಯ ಆರ್.ಕೆ.ಚಂದ್ರು ಮಾತನಾಡಿ, ಗಿರಿಜನ ವಾಸಿಗಳು ತಮಗೆ ಅಗತ್ಯವಿರುವ ಸೌಲಭ್ಯಗಳನ್ನು ಪಡೆದುಕೊಳ್ಳಲೆಂದೇ ಗ್ರಾಮ ಅರಣ್ಯ ಹಕ್ಕು ಸಮಿತಿಗಳನ್ನು ಎಲ್ಲೆಡೆ ರಚಿಸಲಾಗುತ್ತಿದೆ. ಸಮಿತಿಯ ಮೂಲಕ ಸಭೆ ನಡೆಸಿ…
ಮಡಿಕೇರಿ ಡಿ.28 NEWS DESK : ಕಟ್ಟೆಮಾಡು ಮೃತ್ಯುಂಜಯ ದೇವಾಲಯದಲ್ಲಿ ನಡೆದ ಘಟನೆ ನೋವನ್ನುಂಟು ಮಾಡಿದೆ. ಇಂತಹದಕ್ಕೆ ಅವಕಾಶ ಮಾಡುವುದು ಬೇಡ, ನಾವೆಲ್ಲರೂ ಒಂದೇ, ಎಲ್ಲರೂ ದೇವರಲ್ಲಿ ವಿಶ್ವಾಸ, ನಂಬಿಕೆ ಇರುವವರು. ಪ್ರಾರ್ಥನೆ ಮಾಡಲು ಹೋದಾಗ ಭಕ್ತಿ ಪೂರ್ವಕವಾಗಿ ಹೋಗಿರುತ್ತೇವೆ. ಅಂತಹ ಸಂದರ್ಭ ಸಂಘರ್ಷಕ್ಕೆ ಅವಕಾಶ ಮಾಡುವುದು ಸರಿಯಲ್ಲ. ಎಲ್ಲರೂ ಶಾಂತಿಯನ್ನು ಕಾಪಾಡೋಣ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಮನವಿ ಮಾಡಿದ್ದಾರೆ. ಭಕ್ತಾಧಿಗಳು ದೇವಾಲಯಕ್ಕೆ ಹೋದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಅಪಚಾರವಾಗುವ ಉಡುಪನ್ನು ಧರಿಸಬಾರದು, ಇದನ್ನು ಧಾರ್ಮಿಕವಾಗಿ ಒಪ್ಪಲು ಸಾಧ್ಯವಿಲ್ಲ. ಆದರೆ ಐತಿಹಾಸಿಕವಾಗಿ ಕೊಡವ ಜನಾಂಗದವರು, ಕೊಡವ ಭಾಷೆಯನ್ನು ಮಾತನಾಡುವ ಜನಾಂಗದವರು, ಕೊಡವ ಸಂಪ್ರದಾಯವನ್ನು ನಡೆಸಿಕೊಂಡು ಬರುತ್ತಿರುವ ವಿವಿಧ ಜನಾಂಗದವರು ಸಾಂಪ್ರದಾಯಿಕವಾಗಿ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ತಮ್ಮ ಸಾಂಪ್ರದಾಯಿಕ ಉಡುಪನ್ನು ಧರಿಸಿ ಭಕ್ತಿಯನ್ನು ಅರ್ಪಣೆ ಮಾಡುವುದು, ಪ್ರಾರ್ಥನೆ ಸಲ್ಲಿಸುವುದು ಹೊಸದಲ್ಲ. ಇದು ಐತಿಹಾಸಿಕವಾಗಿ ನಡೆದುಕೊಂಡು ಬಂದ ಸಂಪ್ರದಾಯ ಮತ್ತು ಪಾಲನೆಯಾಗಿದೆ. ಕಟ್ಟೆಮಾಡು ದೇವಾಲಯದಲ್ಲಿ ಬೈಲಾಗಳನ್ನು ಅಳವಡಿಸಿ ಅದನ್ನು…
ಮಡಿಕೇರಿ NEWS DESK ಡಿ.28 : ಕಟ್ಟೆಮಾಡು ಮೃತ್ಯುಂಜಯ ದೇವಾಲಯದ ಹಬ್ಬಾಚರಣೆಯ ಸಂದರ್ಭ ಕುಪ್ಯ-ಚೇಲೆತೊಟ್ಟು ದೇವಸ್ಥಾನಕ್ಕೆ ತೆರಳಿದ್ದ ಕೊಡವರನ್ನು ಕುಪ್ಯ-ಚೇಲೆತೊಟ್ಟುಕೊಂಡು ದೇವಸ್ಥಾನಕ್ಕೆ ಪ್ರವೇಶಿಸುವಂತಿಲ್ಲ, ಬರುವುದಾದರೆ ಕುಪ್ಯ-ಚೇಲೆ ಬಿಚ್ಚಿಟ್ಟು ಪಂಚೆ-ಶಲ್ಯವನ್ನು ತೊಟ್ಟು ಬರಬಹುದೆಂದು ತಾಕೀತು ಮಾಡಿರುವುದಲ್ಲದೆ ಹಲ್ಲೆ ನಡೆಸಿ ಹೊರಗಟ್ಟಲು ಯತ್ನಿಸಿದ ಘಟನೆಯನ್ನು ತೀವ್ರವಾಗಿ ಖಂಡಿಸುವುದಾಗಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ತಿಳಿಸಿದ್ದಾರೆ. ಬಹುಸಂಸ್ಕೃತಿಯ ನಮ್ಮ ಭಾರತ ದೇಶದಲ್ಲಿ ಕೊಡವರ ಸುಸಂಸ್ಕೃತಿ ಹಾಗೂ ಸಂಸ್ಕಾರಕ್ಕೆ ಈ ರೀತಿಯ ಮನಸ್ಥಿತಿಯ ವ್ಯಕ್ತಿಗಳು ಕಳಂಕ ತರುತ್ತಿದ್ದಾರೆ. ದೇಶದೆಲ್ಲೆಡೆ ಹಾಗೂ ಪ್ರಪಂಚದಾದ್ಯಂತ ಗಮನ ಸೆಳೆದಿರುವ ಕೊಡವ ಸೀರೆ, ಕುಪ್ಯ-ಚೇಲೆ, ಪೀಚೆಕತ್ತಿಯನ್ನು ದೇವಸ್ಥಾನಕ್ಕೆ ಧರಿಸಿಕೊಂಡು ಬರಕೂಡದೆಂಬ ಫತ್ವಾ ಹೊರಡಿಸಿದ ವ್ಯಕ್ತಿಗಳು ಸಮಾಜದಲ್ಲಿ ಶಾಂತಿ ಕಾಪಾಡಲು ಸಾಧ್ಯವಿಲ್ಲ. ಈ ರೀತಿಯ ವ್ಯಕ್ತಿಗಳು ಯಾವುದೇ ರಾಜಕೀಯ ಪಕ್ಷದಲ್ಲಾಗಲಿ ಅಥವಾ ಸಂಘ-ಸಂಸ್ಥೆಗಳಲ್ಲಾಗಲಿ ನಾಯಕರಾಗಿರಲು ಸಮರ್ಥರಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂತಹ ವ್ಯಕ್ತಿಗಳು ತಮ್ಮ ಹುದ್ದೆಗೆ ಸ್ವತಃ ರಾಜೀನಾಮೆ ನೀಡುವುದು ಲೇಸು. ಯಾವುದೇ ವರ್ಗ,…
ಮಡಿಕೇರಿ ಡಿ.28 NEWS DESK : ಮರಗೋಡಿನ ಕಟ್ಟೆಮಾಡು ಶ್ರೀಮಹಾ ಮೃತ್ಯುಂಜಯ ದೇವಾಲಯದಲ್ಲಿ ನಡೆಯುತ್ತಿರುವ ವಾರ್ಷಿಕ ಜಾತ್ರಾ ಮಹೋತ್ಸವದ ಸಂದರ್ಭ ಕೊಡವ ಸಾಂಪ್ರದಾಯಿಕ ಕುಪ್ಯಚೇಲೆಯನ್ನು ಧರಿಸುವ ಕೊಡವರ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಪ್ರಯತ್ನ ನಡೆದಿದೆ ಎಂದು ಅರೆಕಾಡು ಹೊಸ್ಕೇರಿಯ ಕೊಡವ ವೆಲ್ ಫೇರ್ ಐಂಡ್ ರಿಕ್ರಿಯೇಷನ್ ಅಸೋಸಿಯೇಷನ್ ಆರೋಪಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಅಸೋಸಿಯೇಷನ್ ನ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ಅವರು ಪ್ರಕರಣವನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದ್ದಾರೆ. ತಮ್ಮ ತಮ್ಮ ಸಂಪ್ರದಾಯಕ್ಕೆ ಅನುಗುಣವಾಗಿ ತಮಗೆ ಒಪ್ಪುವ ಉಡುಪನ್ನು ತೊಡುವ ಮತ್ತು ಆಹಾರವನ್ನು ಸೇವಿಸುವ ಸ್ವಾತಂತ್ರ್ಯವನ್ನು ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಪ್ರತಿಯೊಬ್ಬರಿಗೂ ನೀಡಿದೆ. ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ದೇವಾಲಯ ಪ್ರವೇಶಿಸಬಾರದು ಎನ್ನುವ ಸರ್ವಾಧಿಕಾರದ ಧೋರಣೆಯನ್ನು ಸಹಿಸಲು ಸಾಧ್ಯವಿಲ್ಲ. ಅತ್ಯಂತ ವಿಶಿಷ್ಟವಾದ ಸಂಸ್ಕೃತಿಯನ್ನು ಹೊಂದಿರುವ ಸೂಕ್ಷ್ಮ ಜನಾಂಗದ ಕೊಡವರು ದೇವಾಲಯಗಳಿಗೆ ಕುಪ್ಯಚೇಲೆಯನ್ನು ಧರಿಸಿ ಪ್ರವೇಶಿಸುವ ಸಂಪ್ರದಾಯವನ್ನು ಬಹಳ ಹಿಂದಿನಿಂದಲೂ ರೂಢಿಸಿಕೊಂಡು ಬಂದಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇದನ್ನು ತಡೆಯುವ ಪ್ರಯತ್ನವನ್ನು ಕೆಲವರು ಮಾಡುತ್ತಿದ್ದು,…






