ಮಡಿಕೇರಿ ಫೆ.3 NEWS DESK : ಕುಶಾಲನಗರ ತಾಲ್ಲೂಕು ವ್ಯಾಪ್ತಿಯ ಜಲಜೀವನ್ ಮಿಷನ್ ಕುಡಿಯುವ ನೀರಿನ ಸರಬರಾಜು ಯೋಜನೆಯ ಕಾಮಗಾರಿಗಳನ್ನು ಪೈಪ್ ಲೈನ್ ಅಳವಡಿಕೆ, ಟ್ಯಾಂಕ್ ನಿರ್ಮಾಣದ ಕಾಮಗಾರಿಗೆ ಕೊಳವೆ ಬಾವಿಯಿಂದ ನೀರು ಎತ್ತಲು ವಿದ್ಯುತ್ ಸೌಲಭ್ಯಗಳ ಜೋಡಣೆ ಸೇರಿದಂತೆ ಇತರೆ ಕಾಮಗಾರಿಗಳನ್ನು ಸಧ್ಯದಲ್ಲಿ ಪೂರ್ಣಗೊಳಿಸಲಾಗುವುದು ಎಂದು ತಾಲ್ಲೂಕು ಗ್ರಾಮಾಂತರ ಕುಡಿಯುವ ನೀರು ಸರಬರಾಜು ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ವೀರೇಂದ್ರ ಕುಮಾರ್ ತಿಳಿಸಿದ್ದಾರೆ. ಕುಶಾಲನಗರ ತಾಲ್ಲೂಕು ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಸಣ್ಣ ಪ್ರಮಾಣದ ಬಾಕಿ ಉಳಿದ ಕಾಮಗಾರಿಯನ್ನು ವೀಕ್ಷಣೆ ಮಾಡಿ ಮಾತನಾಡಿದ ಅವರು ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಗುತ್ತಿಗೆದಾರನಿಗೆ ಸೂಚನೆ ನೀಡಿದರು. ಗ್ರಾಮಾಂತರ ಪ್ರದೇಶದ ಜಲಜೀವನ್ ಕುಡಿಯುವ ನೀರಿನ ಸರಬರಾಜು ಮಾಡುವ ಯೋಜನೆಯು ಇದೀಗ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಚುರುಕುಗೊಂಡಿದೆ. ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಮುಖೇನ ಕಳೆದ ಮೂರು ವರ್ಷಗಳಿಂದ ಗ್ರಾಮಾಂತರ ಪ್ರದೇಶಗಳಿಗೆ ಕುಡಿಯುವ ನೀರನ್ನು ಒದಗಿಸುವ ಮಹತ್ವಾಕಾಂಕ್ಷೆಯ ಯೋಜನೆಯು ಇದ್ದಾಗಿದ್ದು, ಇದರ ಅನ್ವಯ…
ಲೇಖಕ: admin
ಮಡಿಕೇರಿ ಫೆ.3 NEWS DESK : ಕೊಡಗು ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ 14 ವರ್ಷ 7 ತಿಂಗಳು ಸೇವೆ ಸಲ್ಲಿಸಿ ಪ್ರಸ್ತುತ ಪೊನ್ನಂಪೇಟೆ ನ್ಯಾಯಾಲಯದಿಂದ ನಿವೃತ್ತರಾದ ಬೈಲೀಪ್ ಕೆ.ಎಂ.ಲವಕುಮಾರ್ (ಮಾಜಿ ಸೈನಿಕ) ಅವರನ್ನು ಬೀಳ್ಕೊಡುವ ಸಮಾರಂಭ ನಡೆಯಿತು. ಪೊನ್ನಂಪೇಟೆ ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಪ್ರದೀಪ್ ಪೋತೆದಾರ್, ಸಿವಿಲ್ ಹಿರಿಯ ನ್ಯಾಯಾಧೀಶ ಮಂಜುನಾಥ್, ವಿರಾಜಪೇಟೆ ಮುಖ್ಯ ಆಡಳಿತಾಧಿಕಾರಿ ಗೋವಿಂದ ರಾಜು, ನಾಝರ್, ಪ್ರೀತಮ್ ಮತ್ತಿತರ ಪ್ರಮುಖರು ಲವಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸುವುದರೊಂದಿಗೆ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು. ಸಂಧ್ಯಾ ಹಾಗೂ ನೇತ್ರಾವತಿ ಪ್ರಾರ್ಥಿಸಿ, ಕವಿತಾ ನಿರೂಪಿಸಿದರು.
ಮಡಿಕೇರಿ ಫೆ.3 NEWS DESK : ಖೇಲೋ ಇಂಡಿಯಾ 2024-25 ಮಹಿಳಾ ಫುಟ್ಬಾಲ್ ಪಂದ್ಯಾವಳಿಗೆ ಯುನೈಟೆಡ್ ಎಫ್‌ಸಿ ಕೊಡಗು ತಂಡವು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಸಹಯೋಗದೊಂದಿಗೆ ಭಾಗವಹಿಸುತ್ತಿದ್ದು, ಫುಟ್ಬಾಲ್ ಪಂದ್ಯಾವಳಿಗೆ ತಂಡದ ಆಯ್ಕೆ ಪ್ರಕ್ರಿಯೆ ಫೆ.5ರಂದು ಅಮ್ಮತ್ತಿ ಪ್ರೌಢಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಕೊಡಗು ಯುನೈಟೆಡ್ ಎಫ್.ಸಿ ತಂಡದ ಮುಖ್ಯಸ್ಥ ಹೆಚ್.ಹೆಚ್.ಹರೀಶ್ ತಿಳಿಸಿದ್ದಾರೆ. 1-1-2010 ಹಾಗೂ 31-12-2011ರೊಳಗೆ ಜನಿಸಿರುವ ಆಟಗಾರ್ತಿಯರು ಮಾತ್ರ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶವಿದ್ದು, ಭಾಗವಹಿಸುವ ಆಟಗಾರ್ತಿಯರು ತಮ್ಮ ಒರ್ಜಿನಲ್ ಆಧಾರ್ ಕಾರ್ಡ್ ಮತ್ತು ಬರ್ತ್ ಸರ್ಟಿಫಿಕೇಟ್ ಕಡ್ಡಾಯವಾಗಿ ಹಾಜರುಪಡಿಸಬೇಕು. ಹೆಚ್ಚಿನ ಮಾಹಿತಿಗಾಗಿ 8951820251 ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
ಮಡಿಕೇರಿ ಫೆ.3 NEWS DESK : ಕೇರಳ ರಾಜ್ಯದ ಕಾಸರಗೋಡು ಕನ್ನಡ ಭವನದ ಕೊಡಗು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ತಿಳಿಸಿದ್ದಾರೆ. ಉಪಾಧ್ಯಕ್ಷರಾಗಿ ತೆನ್ನೀರ ಟೀನಾ ಚಂಗಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಚಂದನ್ ನಂದರಬೆಟ್ಟು, ಖಜಾಂಚಿಯಾಗಿ ವಿನೋದ್ ಕುಡ್ತೇಕರ್ ನೇಮಕಗೊಂಡಿದ್ದಾರೆ. ನಿರ್ದೇಶಕರುಗಳಾಗಿ ಅರುಣ್ ಕಡಗದಾಳು, ರುಬೀನಾ ಸೋಮವಾರಪೇಟೆ, ರಿಶಾ ಸೋಮವಾರಪೇಟೆ, ಹರ್ಷಿತಾ ಶೆಟ್ಟಿ ಗಾಳಿಬೀಡು, ಕೆ.ಎ.ಸಂಕೇತ್ ಗಾಳಿಬೀಡು, ಮಾಗಲು ಲೋಹಿತ್, ರಂಜಿತ್ ಜಯರಾಂ, ಲೋಕೇಶ್ ಕಾಟಕೇರಿ, ಎಸ್.ಆರ್.ವತ್ಸಲಾ, ಪೇರಿಯಂಡ ಜಯಂತಿ ಉತ್ತಪ್ಪ, ಬಿ.ಎನ್.ಚಿತ್ರಾ ಸುಜನ್, ಅಬ್ದುಲ್ಲಾ ಎಂ.ಎಂ.ವಿಶ್ವ ಕುಂಬೂರು, ಕೆ.ಎಂ.ವಿನೋದ್ ಆಯ್ಕೆಯಾಗಿದ್ದಾರೆಂದು ಬೊಳ್ಳಜಿರ ಬಿ.ಅಯ್ಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶನಿವಾರಸಂತೆ ಫೆ.3 NEWS DESK : ಗುಡುಗಳಲೆಯ ಜಾತ್ರಾ ಸಮಾರೋಪದಲ್ಲಿ ಕೊಡಗು ಜಿಲ್ಲಾ ವೀರಶೈವ ಮಹಾಸಭಾದ ಮಹಿಳಾ ಘಟಕದ ವತಿಯಿಂದ ನಡೆಸಿಕೊಟ್ಟ ಶಿವತಾಂಡವ ನೃತ್ಯ ರೂಪಕ ನೋಡುಗರ ಗಮನ ಸೆಳೆಯಿತು. ಕೊಡ್ಲಿಪೇಟೆಯ ಕಿರಿಕೊಡ್ಲಿಮಠ ಹಾಗೂ ಅಂಕನಹಳ್ಳಿ ಮನೆಹಳ್ಳಿ ಮಠದ ಶ್ರೀಗಳು ಸಾನಿಧ್ಯ ವಹಿಸಿದ್ದರು. ವೀರಶೈವ ಮಹಾಸಭಾದ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ದೀಪಿಕಾ ಕರುಣ, ಪ್ರಧಾನ ಕಾರ್ಯದರ್ಶಿ ಲೇಖನಾ ಧರ್ಮೇಂದ್ರ, ಜಿಲ್ಲಾ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನಂದೀಶ್, ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಪಿ.ಮಹದೇವಪ್ಪ, ಶಿಕ್ಷಕರಾದ ಶಿವಲಿಂಗ, ಬಸವರಾಜು, ವಿದ್ಯಾ ಸೇರಿದಂತೆ ಇತರರು ಇದ್ದರು.
ಪುತ್ತೂರು ಫೆ.3 NEWS DESK : ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೂಲವಿಜ್ಞಾನ ಮತ್ತು ಮಾನವಿಕ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ಅಧ್ಯಾಪಕ ಮಾರ್ಗದರ್ಶಕರಿಗೆ ಉತ್ತಮ ಬೋಧನಾ ಮತ್ತು ಕಲಿಕಾ ಅಭ್ಯಾಸಗಳು ಎನ್ನುವ ವಿಷಯದ ಬಗ್ಗೆ 3 ದಿನಗಳ ಅಧ್ಯಾಪಕರ ಕೌಶಲಾಭಿವೃದ್ಧಿ ಕಾರ್ಯಾಗಾರ ನಡೆಯಲಿದೆ. ಬೋಧಕರಲ್ಲಿ ನವೀನ ಶಿಕ್ಷಣ ಕೌಶಲ್ಯಗಳನ್ನು ಹೆಚ್ಚಿಸುವುದು, ಉತ್ತಮ ಬೋಧನಾ ಪದ್ದತಿಗಳನ್ನು ಅಳವಡಿಸುವ ಮೂಲಕ ಫಲಿತಾಂಶ ಅಧಾರಿತ ಶಿಕ್ಷಣದ ಪರಿಷ್ಕರಣೆ, ಪರಿಣಾಮಕಾರೀ ಮಾರ್ಗದರ್ಶನ ಕೌಶಲಗಳನ್ನು ಅಳವಡಿಸುವುದು, ಸಂವಾದಾತ್ಮಕ ಬೋಧನೆಗಾಗಿ ಡಿಜಿಟಲ್ ಉಪಕರಣಗಳು ಮತ್ತು ತಂತ್ರಜ್ಞಾನದ ಬಳಕೆ ಮತ್ತು ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗಾಗಿ ಉತ್ತಮ ಅಭ್ಯಾಸಗಳನ್ನು ಉತ್ತೇಜಿಸುವುದು ಇದೇ ಮುಂತಾದ ವಿಷಯಗಳ ಬಗ್ಗೆ ಪದವಿಪೂರ್ವ, ಪದವಿ, ಇಂಜಿನಿಯರಿಂಗ್, ಬಿ.ಎಡ್ ಉಪನ್ಯಾಸಕರಿಗೆ ಮತ್ತು ಪ್ರೌಢ ಶಾಲಾ ಶಿಕ್ಷಕರಿಗೆ ಮಾಹಿತಿಯನ್ನು ನೀಡುವುದಕ್ಕಾಗಿ ಇದನ್ನು ಆಯೋಜಿಸಲಾಗಿದೆ. ಫೆ.5 ರಿಂದ 7ರ ವರೆಗೆ ಕಾಲೇಜಿನ ಶ್ರೀರಾಮ ಸಭಾ ಭವನದಲ್ಲಿ ಈ ಕಾರ್ಯಕ್ರಮವು ನಡೆಯಲಿದ್ದು, ರಾಜ್ಯಾದ್ಯಂತ ವಿವಿಧ ಕಾಲೇಜುಗಳ ಪ್ರಾಧ್ಯಾಪಕರು ಮತ್ತು ಪ್ರೌಢ…
ನಾಪೋಕ್ಲು ಫೆ.3 NEWS DESK : ಮೂರ್ನಾಡಿನ ಆಪ್ತಮಿತ್ರ ಬಳಗದ ಸೇವಾರ್ಥವಾಗಿ ಫೆ.8 ರಂದು ಮೂರ್ನಾಡಿನಲ್ಲಿ “ಸಾಕೇತ ಸಾಮ್ರಾಜ್ಞೆ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಮೂರ್ನಾಡಿನ ಪಾಂಡಾಣೆ ನಾಡ್ ಮಂದ್ ಶಾಲಾ ಮೈದಾನದಲ್ಲಿ ಅಂದು ಸಂಜೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಹನುಮಗಿರಿಯ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ವತಿಯಿಂದ ಪ್ರದರ್ಶನ ನಡೆಯಲಿದೆ. ಎರಡನೇ ವರ್ಷದ ಕಾರ್ಯಕ್ರಮ ಇದಾಗಿದ್ದು ಊಟೋಪಚಾರ ವ್ಯವಸ್ಥೆ ಇರುತ್ತದೆ. ಹಿಮ್ಮೇಳದಲ್ಲಿ ಭಾಗವತರಾಗಿ ರವಿಚಂದ್ರ ಕನ್ನಡಿಕಟ್ಟೆ, ಕಲ್ಲಡ್ಕ ಚಿನ್ಮಯ ಭಟ್, ಚಂಡೆ ಮತ್ತು ಮದ್ದಳೆ ಕಲಾವಿದರಾಗಿ ದೇಲಂತಮಜಲು ಸುಬ್ರಮಣ್ಯ ಭಟ್, ಚೈತನ್ಯ ಕೃಷ್ಣ ಪದ್ಯಾಣ, ಶ್ರೀಧರ ವಟ್ಲ, ಕೌಶಲ್ ರಾವ್ ಪುತ್ತಿಗೆ ಪಾಲ್ಗೊಳ್ಳಲಿದ್ದಾರೆ. ಹಾಸ್ಯ ಕಲಾವಿದರಾಗಿ ಸೀತಾರಾಮ ಕುಮಾರ್ ಕಟೀಲ್, ಮೋಹನ್ ಮುಚ್ಚುರ್, ಸ್ತ್ರೀ ವೇಷದಲ್ಲಿ ಸಂತೋಷ್ ಕುಮಾರ್ ಹಿಲಿಯಾಣ, ರಕ್ಷಿತ್ ಶೆಟ್ಟಿ ಪಡ್ರೆ, ಸತೀಶ್ ನೀರ್ಕರೆ, ಮಹೇಶ್ ಎಡನೀರು ಭಾಗವಹಿಸಲಿದ್ದಾರೆ. ಮುಮ್ಮೇಳದಲ್ಲಿ ವಾಸುದೇವ ರಂಗ ಭಟ್ ಮಧೂರು, ಸದಾಶಿವ ಕುಲಾಲ್ ವೇಣೂರು,ಪ್ರಸಾದ್ ಸವಣೂರು, ಪೆರ್ಮುದೆ ಜಯಪ್ರಕಾಶ್…
ನಾಪೋಕ್ಲು ಫೆ.3 NEWS DESK : ವಿದ್ಯಾರ್ಥಿಗಳು ನಿರಂತರ ಅಧ್ಯಯನ ಮತ್ತು ಗುರಿಯ ಕಡೆಗೆ ಗಮನ ನೀಡಬೇಕೆಂದು ಕೀಪಾಡಂಡ ಮೊಣ್ಣಪ್ಪ ಹೇಳಿದರು. ಚೇರಂಬಾಣೆ ಅರುಣ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ 10ನೇ ತರಗತಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿನಿ ಮುಫೀದಳಿಗೆ ಕೀಪಾಡಂಡ ಬಸಪ್ಪ ಸ್ಮರಣಾರ್ಥ ಸ್ಥಾಪಿಸಿದ ರೂ.7000 ಮೊತ್ತವನ್ನು ವಿತರಿಸಿ ಮಾತನಾಡಿದರು. ದತ್ತಿನಿಧಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಿ.ಎಸ್.ರಾಮಕೃಷ್ಣ, ವಿದ್ಯಾರ್ಥಿಗಳ ಕಲಿಕೆಗೆ ಇದೊಂದು ಪ್ರೇರಣದಾಯಕವಾದ ಅಂಶವಾಗಿದ್ದು, ವಿದ್ಯಾರ್ಥಿಗಳು ಈ ಹಣವನ್ನು ತಮ್ಮ ಮುಂದಿನ ಕಲಿಕೆಗೆ ಬಳಸಿಕೊಳ್ಳುವುದರ ಮೂಲಕ ಉನ್ನತವ್ಯಾಸಂಗವನ್ನು ಮಾಡುವಂತಾಗಲಿ ಎಂದರು. ಶಿಕ್ಷಕರಾದ ಸಿ.ಆರ್.ಲೋಕೇಶ್ ಸ್ವಾಗತಿಸಿದರು. ಎಸ್.ಪಿ.ಪರಮೇಶ್ ವಂದಿಸಿದರು. ವರದಿ : ದುಗ್ಗಳ ಸದಾನಂದ
ನಾಪೋಕ್ಲು ಫೆ.3 NEWS DESK : ಚೇರಂಬಾಣೆ ಕೋಪಟ್ಟಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕಳೆದ 13 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಬಿ.ಎನ್.ಜಯಂತಿ ಅವರನ್ನು ಶಾಲೆಯ ವತಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು. ಶಾಲಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಕರು ಹಾಗೂ ಆಡಳಿತ ಮಂಡಳಿ ಪದಾಧಿಕಾರಿಗಳು ಸನ್ಮಾನಿಸಿ, ಗೌರವಿಸಿದರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರು ಮತ್ತು ಸದಸ್ಯರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮೋಹನ್ ಪೆರಾಜೆ, ಸದಸ್ಯರಾದ ಮೀನಾಕ್ಷಿ, ಶಾಂತಿ, ನಂದ ಕುಮಾರ್ ಹಾಗೂ ನಿವತ್ತ ಶಿಕ್ಷಕಿಯವರಾದ ಡಿ.ಕೆ.ಶಾಂತ, ದಾಯನ ಸರೋಜ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ನಿಶಾ ಸೇರಿದಂತೆ ಮಕ್ಕಳ ಪೋಷಕರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು. ಶಿಕ್ಷಕಿ ರೇಖಾ ಸ್ವಾಗತಿಸಿ, ನಿವೃತ್ತ ಶಿಕ್ಷಕಿಯ ಪರಿಚಯವನ್ನು ಮಾಡಿದರು. ವಿದ್ಯಾರ್ಥಿನಿ ಎನ್.ಪಿ.ಇಂಚರಾ ವಂದಿಸಿದರು. ವರದಿ : ದುಗ್ಗಳ ಸದಾನಂದ.
ಸುಂಟಿಕೊಪ್ಪ ಜ.3 NEWS DESK : ಗ್ರಾಮೀಣ ಮುಖ್ಯ ರಸ್ತೆಗಳು ಸೇರಿದಂತೆ ಎಲ್ಲಾ ರೀತಿಯ ಸಂಪರ್ಕ ರಸ್ತೆಯನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಹೇಳಿದರು. ಕೆದಕಲ್ ಗ್ರಾ.ಪಂ ವ್ಯಾಪ್ತಿಯ ಹೊರೂರು ಗ್ರಾಮದ ಕೆದಕಲ್-ಹೊರೂರು-ಚೆಟ್ಟಳ್ಳಿ ಸಂಪರ್ಕ ರಸ್ತೆಯನ್ನು ರೂ.45 ಲಕ್ಷ ವೆಚ್ಚದಲ್ಲಿ ಹಂತದ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೆದಕಲ್ ಗ್ರಾಮ ಪಂಚಾಯಿತಿಯು ದೊಡ್ಡ ವ್ಯಾಪ್ತಿಯನ್ನು ಹೊಂದಿದ್ದು, ಜನ ಸಂಖ್ಯೆ ಕಡಿಮೆ ಇದೆ. ಈಗಾಗಲೇ ಹಲವು ಇಲಾಖಾ ಅನುದಾನಗಳ ಅಡಿಯಲ್ಲಿ ಒಟ್ಟು ರೂ ತೊಂಬತ್ತು ಲಕ್ಷದಷ್ಟು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕೆಲವು ಕಾಮಗಾರಿಗಳು ಮುಗಿದಿದ್ದು, ಕೆಲವು ಕಾಮಗಾರಿಗಳನ್ನು ಮುಂದುವರಿದ ಕಾಮಗಾರಿಯೆಂದು ಪರಿಗಣಿಸಬೇಕಾಗಿದೆ. ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸುವ ಸಂದರ್ಭ ತೋಟದ ಮಾಲೀಕರು ರಸ್ತೆಯ 2 ಬದಿಯ ಮರಗಳನ್ನು ತೋಟದ ಬೇಲಿಗಳನ್ನು ತೆರವುಗೊಳಿಸಿಕೊಡುವುದರೊಂದಿಗೆ ಅಭಿವೃದ್ಧಿಗೆ ತಮ್ಮ ಸಹಕಾರ ನೀಡುವುದರಿಂದ ಕಾಮಗಾರಿಗಳು ಹೆಚ್ಚು ಕಾಲ ಉಪಯೋಗಕ್ಕೆ ಬರುತ್ತದೆ ಎಂದರು. ಕೆದಕಲ್ ಗ್ರಾಮ ಪಂಚಾಯಿತಿಯ ಕೆಲವು ಹಳ್ಳಿಗಳಲ್ಲಿ…






