ಬೆಂಗಳೂರು ಡಿ.25 NEWS DESK : ನಂದಿನಿ ವತಿಯಿಂದ ಪ್ರಥಮಬಾರಿಗೆ ಗ್ರಾಹಕರಿಗೆ ಒದಗಿಸಲು ತಯಾರಿಸಿರುವ ನಂದಿನಿ ವೇ ಪ್ರೋಟಿನ್ ಆಧಾರಿತ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿದರು. ಸಚಿವರಾದ ವೆಂಕಟೇಶ್, ಕೃಷ್ಣ ಭೈರೇಗೌಡ, ದಿನೇಶ್ ಗುಂಡೂರಾವ್, ಕೆ.ಎಂ.ಎಫ್. ಅಧ್ಯಕ್ಷ ಭಿಮಾನಯಕ್, ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಲೇಖಕ: admin
ಮಡಿಕೇರಿ ಡಿ.25 NEWS DESK : ವಿರಾಜಪೇಟೆ ತಾಲ್ಲೂಕಿನ ತಾಲ್ಲೂಕು ಪಂಚಾಯತ್ ತ್ರೈಮಾಸಿಕ ಕೆಡಿಪಿ ಸಭೆಯು ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರ ಅಧ್ಯಕ್ಷತೆಯಲ್ಲಿ ಡಿಸೆಂಬರ್ 26 ರಂದು ಬೆಳಗ್ಗೆ 10.30 ಗಂಟೆಗೆ ಪೊನ್ನಂಪೇಟೆ ತಾಲ್ಲೂಕು ಪಂಚಾಯತ್ ಸಾಮಥ್ರ್ಯ ಸೌಧದ ಸಭಾಂಗಣದಲ್ಲಿ ನಡೆಯಲಿದೆ ಎಂದು ತಾ.ಪಂ.ಇಒ ಕೊಣಿಯಂಡ ಸಿ.ಅಪ್ಪಣ್ಣ ತಿಳಿಸಿದ್ದಾರೆ.
ಮಡಿಕೇರಿ ಡಿ.25 NEWS DESK : ಇತಿಹಾಸ ಪ್ರಸಿದ್ಧ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ನೂತನ ಪ್ರವೇಶ ದ್ವಾರವನ್ನುಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಅನಾದಿಕಾಲದಿಂದಲೂ ಪ್ರಸಿದ್ಧವಾದ ಈ ದೇವಸ್ಥಾನಕ್ಕೆ ನೂತನ ಕಾಯಕಲ್ಪ ನೀಡಿರುವುದು ಅತ್ಯಂತ ಖುಷಿಯನ್ನು ನೀಡಿದೆ ಎಂದು ಬಣ್ಣಿಸಿದರು. ಶ್ರೀ ಪಾಡಿ ಇಗ್ಗುತ್ತಪ್ಪ ದೇವರ ಆಶೀರ್ವಾದ ನಾಡಿನ ಸಮಸ್ತ ಜನರ ಮೇಲೆ ಇರಲಿ ಎಂದು ಹಾರೈಸಿದರು. ಈ ಸಂದರ್ಭ ವಿಧಾನ ಪರಿಷತ್ತು ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ, ಪ್ರಮುಖರಾದ ತೀತಿರ ರೋಶನ್ ಅಪ್ಪಚ್ಚು ಹಾಗೂ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರು, ಗ್ರಾಮಸ್ಥರು ಹಾಜರಿದ್ದರು.
ಸುಂಟಿಕೊಪ್ಪ ಡಿ.25 NEWS DESK : ಸುಂಟಿಕೊಪ್ಪ ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ ನಡೆದ ಜಿಲ್ಲಾ ಮಟ್ಟದ ಗೀತಾ ಗಾಯನ ಸ್ಪರ್ಧೆಯಲ್ಲಿ ಕಬ್ಸ್ ತಂಡ ಪ್ರಥಮ ಸ್ಥಾನಗಳಿಸುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮೈಸೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ ಕಬ್ಸ್ ತಂಡವು ಅತ್ಯುತ್ತಮ ತಂಡವೆಂದು ಪ್ರಶಂಸನಾ ಪತ್ರವನ್ನು ಪಡೆದುಕೊಂಡರು. ಶಾಲೆಯ ಮುಖ್ಯೋಪಾದ್ಯಾಯನಿ ಜೋವಿಟಾ ವಾಸ್ ಕಬ್ಸ್ ತಂಡ ಹಾಗೂ ತರಬೇತುದಾರರಾದ ಯಿವಾಬೆನ್ಸಿಸ್ ಅವರು ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಸುಂಟಿಕೊಪ್ಪ NEWS DESK ಡಿ.25 : ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಯ 2024-25ನೇ ಸಾಲಿನ ಗ್ರಾಮಸಭೆಗೆ ಪ್ರಮುಖ ಇಲಾಖೆಗಳ ಅಧಿಕಾರಿಗಳು ಗೈರು ಹಾಜರಾದ ಕಾರಣ ತೀವ್ರ ಅಸಮಾಧಾನಗೊಂಡ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿ ಸಭೆಯಿಂದ ಹೊರ ನಡೆದರು. ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂದೋಡಿ ಜಗನ್ನಾಥ ಅವರ ಅಧ್ಯಕ್ಷತೆಯಲ್ಲಿ ಕಾನ್‌ಬೈಲು ಸರಕಾರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯ ಗ್ರಾಮಸ್ಥರು ಉಪಸ್ಥಿತರಿದ್ದು ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲು ತಯಾರಿ ಮಾಡಿಕೊಂಡಿದ್ದರು. ಪ್ರಮುಖ ಇಲಾಖೆಗಳಾದ ಕಂದಾಯ, ನೀರಾವರಿ, ಆಹಾರ, ಅರಣ್ಯ ಆದಿಕಾರಿಗಳು ಗೈರು ಹಾಜರಾಗಿದ್ದ ಕಾರಣ ಗ್ರಾಮಸ್ಥರು ಸಭೆ ಮುಂದೂಡಬೇಕೆAದು ಆಗ್ರಹಿಸಿದರು. ಅಧ್ಯಕ್ಷ ಮಂದೋಡಿ ಜಗನ್ನಾಥ ಮಾತನಾಡಿ ಇಂದಿನ ಸಭೆಯಲ್ಲಿ ಗ್ರಾಮಸ್ಥರು ನೀಡುವ ಅಹವಾಲನ್ನು ಆಯಾ ಇಲಾಖೆಯ ಅಧಿಕಾರಿಗಳಿಗೆ ಕಳುಹಿಸಿ ಅದನ್ನು ಅನುಷ್ಠಾನಗೊಳಿಸುವ ಪ್ರಯತ್ನ ಮಾಡೋಣ ಎಂದರು. ಈ ಸಂದರ್ಭ ಮಾತನಾಡಿದ ಗ್ರಾಮಸ್ಥರಾದ ರಾಮಯ್ಯ, ಅಂಬೆಕಲ್ ಚಂದ್ರು, ಶಾಂತಪ್ಪ ಮತ್ತಿತರರು ಪಡಿತರ, ಕುಡಿಯುವ ನೀರು, ರಸ್ತೆ ಮತ್ತು…
ಮಡಿಕೇರಿ ಡಿ.25 NEWS DESK : ಮಡಿಕೇರಿ ತಾಲ್ಲೂಕಿನ ಕಟ್ಟೆಮಾಡು ಗ್ರಾಮದ ಶ್ರೀ ಮಹಾಮೃತ್ಯುಂಜಯ ಮಹದೇಶ್ವರ ಕ್ಷೇತ್ರದ ಜಾತ್ರೋತ್ಸವವು ಆರಂಭಗೊಂಡಿದ್ದು, ಮೊದಲದಿನ ದೇವರಿಗೆ ಹೊರೆಕಾಣಿಕೆ ಸಮರ್ಪಿಸಲಾಯಿತು. ಮುಂಜಾನೆ ಗಣಪತಿ ಹೋಮ, ಹೊರೆಕಾಣಿಕೆ ಸಮರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ಜರುಗಿತು. ಮಧ್ಯಾಹ್ನ ಮಹಾಪೂಜೆ, ತೀರ್ಥಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನೆರವೇರಿತು. ಸಂಜೆ ಧ್ವಜಾರೋಹಣದ ಬಳಿಕ ಮಹಾಪೂಜೆ, ತೀರ್ಥಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಡಿ.24 ರಂದು ನೈರ್ಮಾಲ್ಯ ಬಲಿ, ಮಧ್ಯಾಹ್ನ ಧ್ವಜಸ್ತಂಭ ಪೂಜೆ, ಮಹಾಪೂಜೆ, ತೀರ್ಥಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಸಂಜೆ ಶ್ರೀಭೂತಬಲಿ (ತೂಚಂಬಲಿ), ಧ್ವಜಸ್ತಂಭ ಪೂಜೆ ನೆರವೇರಿತು. ರಾತ್ರಿ ಮಹಾಪೂಜೆ, ತೀರ್ಥಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.
ಬೆಂಗಳೂರು ಡಿ.25 NEWS DESK : ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಡಿಕೇರಿಯ ಹಿರಿಯ ಸಾಹಿತಿ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಅವರ ‘ನಿಜದ ಸೂಜಿಮೊನೆ’ ಕೃತಿಯನ್ನು ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಿದರು.
ಸುಂಟಿಕೊಪ್ಪ ಡಿ.25 NEWS DESK : ಸುಂಟಿಕೊಪ್ಪ ಗೌಡ ಸಂಘದ 2024-25ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಕುಂಜಿಲನ ಎಸ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿಯಾಗಿ ಯಂಕನ ಕೌಶಿಕ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಬಿಳಿಯಾರ ಜವಾಹರ್(ಮಂಜು), ಸಹ ಕಾರ್ಯದರ್ಶಿಯಾಗಿ ಮಾಗಲು ವಸಂತ, ಖಜಾಂಚಿಯಾಗಿ ಪಟ್ಟೆಮನೆ ಉದಯಕುಮಾರ್, ಗೌರವಧ್ಯಕ್ಷರಾ ಯಂಕನ ಉಲ್ಲಾಸ್ ನೇಮಕಗೊಂಡಿದ್ದು, ನಿರ್ದೇಶಕರುಗಳಾಗಿ ಶಾಂತನ ಲೋಕೇಶ್, ಕಡ್ಯದ ಅರುಣ್‍ಕುಮಾರ್, ಮಳ್ಳನ ಸತೀಶ್, ಬೈಚನ ಮೋಹನ್ ಕುಮಾರ್, ಮೊಟ್ರಮಾಡ ಸೋಮಯ್ಯ, ಓಡಿಯಪ್ಪನ ಸುದೀಶ್, ಪಡ್ಡಬೈಲ್ ರುಕ್ಕಮ್ಮಯ್ಯ, ಯಂಕನ ಕೃಪಾ ಶೇಖರ್, ಕಡ್ಲೇರ ರತಿ ರಘುಕುಮಾರ್, ಹಾರ್‍ಬೈಲ್ ಭೂಮಿಕ ನಿತಿನ್, ಕಾಯರ್‍ಮಾರ್ ದೇವಿಪ್ರಸಾದ್, ಅಂಬೇಕಲ್ ಚಂದ್ರಶೇಖರ್, ಮಟ್ಟನ ಕರುಣಾಕರ್ (ಹಾದ್ರೆಹೆರೂರು) ಇವರುಗಳನ್ನು ನೇಮಕಮಾಡಲಾಯಿತು.
ವಿರಾಜಪೇಟೆ ಡಿ.25 NEWS DESK : ವಿರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಟ್ರಸ್ಟ್ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ನಡೆದ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ವಿರಾಜಪೇಟೆಯ ಎಂ.ಎಸ್.ಸಾನ್ವಿಗೆ ಕರುನಾಡ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭ ಶಶಿಧರ್ ಕೋಟೆ, ಡಾ.ಕೆಂಚನೂರು ಶಂಕರ್, ಡಾ.ಶ್ರೀಧರ್, ಕಾಂತಿ ಶೆಟ್ಟಿ, ತೋತಾಪುರಿ ಸೋಮಶೇಖರ ಗುರೂಜಿ, ಮಲ್ಲಿಕಾ ಕೇಶವ್, ವೆಂಕಟರಾಜು, ವಿರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಟ್ರಸ್ಟ್‍ನ ಪ್ರೇಮಂಜಲಿ ಇದ್ದರು. ವಿರಾಜಪೇಟೆಯ ತ್ರಿವೇಣಿ ಶಾಲೆಯಲ್ಲಿ 6ನೇ ತರಗತಿಯಲ್ಲಿ ಓದುತ್ತಿರುವ ಎಂ.ಎಸ್.ಸಾನ್ವಿ ಬಿಟ್ಟಂಗಾಲ ಗ್ರಾಮದ ಸೌಮ್ಯ ಅವರ ಪುತ್ರಿ.
ನಾಪೋಕ್ಲು ಡಿ.25 NEWS DESK : ಹಲವು ವರ್ಷಗಳಿಂದ ಡಾಂಬರೀಕರಣ ಕಾಣದೆ ದುಸ್ಥಿತಿಯಲ್ಲಿದ್ದ ಕೊಕೇರಿ – ಕೊಳಕೇರಿ ಸಂಪರ್ಕ ರಸ್ತೆಯ ಕಾಮಗಾರಿ ಆರಂಭಗೊಂಡಿದೆ. ಚಾಲನೆ ದೊರೆತಿದೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರ ಅನುದಾನದಲ್ಲಿ ಬಿಡುಗಡೆಯಾದ ರೂ.50 ಲಕ್ಷ ಕಾಮಗಾರಿಗೆ ಶಾಸಕರು ಭೂಮಿ ನೆರವೇರಿಸಿದ್ದರು. ಆದರೆ ಕಾಮಗಾರಿ ಪ್ರಾರಂಭಗೊಳ್ಳದ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿಪಡಿಸಿದ ಹಿನ್ನೆಲೆ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಇಸ್ಮಾಯಿಲ್ ಕಾಮಗಾರಿಗೆ ಚಾಲನೆ ನೀಡಿದರು. ಈ ಸಂದರ್ಭ ಕಾಂಗ್ರೆಸ್ ಮುಖಂಡ ಎ.ಕೆ.ಹ್ಯಾರಿಸ್, ಗ್ರಾ.ಪಂ ಸದಸ್ಯ ಕೆ.ವೈ.ಅಶ್ರಫ್, ಇಬ್ರಾಹಿಂ ಹಳೇ ತಾಲ್ಲೂಕು, ಗ್ರಾಮಸ್ತರಾದ ಮೊಯ್ದಿ, ಮೈಮೂದ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ವರದಿ : ದುಗ್ಗಳ ಸದಾನಂದ.






