ಮಡಿಕೇರಿ ಡಿ.9 NEWS DESK : ದಕ್ಷಿಣ ಕನ್ನಡದ ಮಂಗಳೂರು ಶ್ರೀನಿವಾಸ್ ವಿಶ್ವವಿದ್ಯಾನಿಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಮಡಿಕೇರಿಯ ಡಾ.ನಮ್ರೀನ್ ಆಸಿಫ್ ವಿ.ಎ ಅವರು “ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಾಥಮಿಕ ಕೃಷಿ ಕ್ರೆಡಿಟ್ ಸೊಸೈಟಿಯ ಪ್ರಭಾವದ ಕುರಿತು ಅಧ್ಯಯನ” ಎಂಬ ವಿಷಯದಲ್ಲಿ ಪಿಎಚ್‍ಡಿ ಪೂರ್ಣಗೊಳಿಸಿದ್ದಾರೆ. ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮ್ಮ ವಿಶ್ವವಿದ್ಯಾನಿಲಯದ ಡಾ.ಗಣೇಶ್ ಎಸ್.ಆರ್, ಮಂಗಳೂರು ಶ್ರೀನಿವಾಸ್ ವಿಶ್ವವಿದ್ಯಾನಿಲಯದ ಸಂಶೋಧನಾ ನಿರ್ದೇಶಕ ಹಾಗೂ ಸಹ ಪ್ರಾಧ್ಯಾಪಕ ಡಾ.ಪ್ರವೀಣ್ ಹಾಗೂ ಸಂಶೋಧನಾ ಸಂಯೋಜಕರಾದ ಡಾ.ಶೈಲಶ್ರೀ ವಿ.ಟಿ ಅವರ ಮಾರ್ಗದರ್ಶನದಲ್ಲಿ ಪಿಎಚ್‍ಡಿ ಯನ್ನು ಪೂರ್ಣಗೊಳಿಸಿದರು. ಡಾ.ನಮ್ರೀನ್ ಆಸಿಫ್ ಅವರು ಮಡಿಕೇರಿಯ ಕೊಹಿನೂರು ರಸ್ತೆ ನಿವಾಸಿ ವಿ.ಎಸ್.ಮೊಹಮ್ಮದ್ ಆಸಿಫ್ ಹಾಗೂ ವಿ.ಎಸ್.ನಸೀಮಾ ದಂಪತಿಯ ಪುತ್ರಿ.
ಲೇಖಕ: admin
ಮಡಿಕೇರಿ, ಡಿ.9 NEWS DESK : ವಿದ್ಯಾರ್ಥಿಗಳು ಶಿಸ್ತಿನೊಂದಿಗೆ ಮುನ್ನಡೆದರೆ ಸಾಧನೆ ಸಾಧ್ಯವಾಗುತ್ತದೆ ಎಂದು ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಸಲಹೆ ನೀಡಿದರು. ಮಂಗಳೂರು ಮತ್ತು ಕೊಡಗು ವಿಶ್ವವಿದ್ಯಾಲಯ ಅಧೀನದ ಫೀ.ಮಾ. ಕೆ.ಎಂ.ಕಾರ್ಯಪ್ಪ ಕಾಲೇಜಿನ 2024-25ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘವನ್ನು ಕಾಲೇಜು ಸಭಾಂಗಣದಲ್ಲಿ ಉದ್ಘಾಟಿಸಿ, ಅವರು ಮಾತನಾಡಿದರು. ಭವ್ಯ ಇತಿಹಾಸವನ್ನು ಫೀ.ಮಾ. ಕಾರ್ಯಪ್ಪ ಕಾಲೇಜು ಹೊಂದಿದ್ದು, ವಿದ್ಯಾಸಂಸ್ಥೆಗೆ ಅಗೌರವ ತರುವ ಯಾವುದೇ ಕೆಲಸ ವಿದ್ಯಾರ್ಥಿಗಳು ಮಾಡಬಾರದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ.ಬಿ.ರಾಘವ ವಿದ್ಯಾರ್ಥಿ ಸಂಘದ ನಾಯಕರು ತಮ್ಮ ಜವಾಬ್ದಾರಿ ಅರಿತು ಮುನ್ನಡೆಯಬೇಕು. ರಾಷ್ಟ್ರದ ಅಭಿವೃದ್ಧಿಯಲ್ಲಿ ಯುವಪಡೆಯ ಪಾತ್ರ ಮಹತ್ತರವಾಗಿದೆ ಎಂದು ಹೇಳಿದರು. ಸಂಘದ ಸಲಹೆಗಾರ ಬಿ.ಹೆಚ್.ತಳವಾರ ಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಪ್ರೊ.ತಿಪ್ಪೇಸ್ವಾಮಿ, ಮಹಿಳಾ ಕ್ಷೇಮಾಭಿವೃದ್ಧಿ ಘಟಕ ಸಂಚಾಲಕಿ ಡಾ.ನಯನ ಕಾಶ್ಯಪ್, ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಚಂದನ್ ನಂದರುಬೆಟ್ಟು, ಪ್ರಮುಖರಾದ ಡಾ.ಮಹದೇವಯ್ಯ, ಡಾ.ಶೃಂಗಾರ್,…
ಕುಶಾಲನಗರ ಡಿ.9 NEWS DESK : ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಆಗ ಮಾತ್ರ ಆತ್ಮವಿಶ್ವಾಸ ವೃದ್ಧಿಸಲು ಸಾಧ್ಯ ಎಂದು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ, ಸಾಹಿತಿ ಮಿಲನಾ ಭರತ್ ಅಭಿಪ್ರಾಯಪಟ್ಟರು. ಕುಶಾಲನಗರ ಕನ್ನಡ ಸಾಹಿತ್ಯ ಪರಿಷತ್ತು, ಕೊಡಗು ಜಿಲ್ಲಾ ಘಟಕದ ವತಿಯಿಂದ ಕುಶಾಲನಗರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ನಡೆದ ದಿ. ಸೀತಾಭಾಯಿ ಮತ್ತು ರಾಮಚಂದ್ರ ಕಾಮತ್ ದತ್ತಿ ನಿಧಿ ಕಾರ್ಯಕ್ರಮದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣದ ಅವಶ್ಯಕತೆ ಕುರಿತು ಉಪನ್ಯಾಸ ನೀಡಿದರು. ಶಿಕ್ಷಣದ ಜೊತೆಗೆ ಶಿಸ್ತು, ಸಂಯಮ, ಸಮಯ ಪಾಲನೆಯನ್ನು ಮೈಗೂಡಿಸಿಕೊಂಡಾಗ ಮಾತ್ರ ನಾವು ಕಲಿತ ವಿದ್ಯೆಗೆ ಬೆಲೆ ಸಿಗುತ್ತೆ ಎಂದರು. ಈಗಿನ ಕಾಲಮಾನದಲ್ಲಿ ಪ್ರತಿಯೊಬ್ಬರಿಗೂ ಶಿಕ್ಷಣದ ಅವಶ್ಯಕತೆಯಿದೆ. ಕಲಿತ ಜ್ಞಾನವನ್ನು ಸರಿಯಾದ ಮಾರ್ಗದಲ್ಲಿ ಸದ್ಬಳಕೆ ಮಾಡಿಕೊಂಡರೆ ಮಾತ್ರ ಗೌರವ ದೊರೆಯುತ್ತದೆ. ಹೆಣ್ಣು ಮಕ್ಕಳು ಕೇವಲ ಮನೆ, ಗಂಡ ಮಕ್ಕಳು ಎನ್ನದೇ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಬೇಕು ಎಂದು ಕರೆ ನೀಡಿದರು. ಶ್ರೇಷ್ಠ ಗುರಿ ಇಟ್ಟುಕೊಳ್ಳಿ,…
ಮಡಿಕೇರಿ ಡಿ.9 NEWS DESK : ಮೈಷುಗರ್ ಫ್ರೌಡಶಾಲೆಯ ಅಮೃತಮಹೋತ್ಸವದ ಪ್ರಯುಕ್ತ ಮಂಡ್ಯದಲ್ಲಿ ನಡೆದ ರಾಜ್ಯಮಟ್ಟದ ಅಂಡರ್ 17 ಕಾಲ್ಚೆಂಡು ಪಂದ್ಯಾವಳಿಯಲ್ಲಿ ನಕ್ಷತ್ರ ಎಫ್.ಸಿ ಕೊಡಗು ತಂಡವು ದ್ವಿತೀಯ ಸ್ಥಾನ ಪಡೆದಿದೆ. ಜಿದ್ದಾಜಿದ್ದಿನಿಂದ ಕೂಡಿದ್ದ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಬೆಂಗಳೂರು ತಂಡದ ವಿರುದ್ಧ ನಿಗದಿತ ಸಮಯದಲ್ಲಿ 1-1 ಗೋಲುಗಳಿಂದ ಸಮಬಲ ಸಾಧಿಸಿತು. ಅಂತಿಮವಾಗಿ ಪೆನಾಲ್ಟಿ ಶೂಟೌಟ್ ನಲ್ಲಿ ಕೊಡಗು ತಂಡವು 4-3 ಗೋಲುಗಳ ಅಂತರದಿಂದ ಸೆಮಿಫೈನಲ್ ಪಂದ್ಯ ಗೆದ್ದಿತ್ತು. ಫೈನಲ್ ಪಂದ್ಯದಲ್ಲಿ ನಕ್ಷತ್ರ ಎಫ್.ಸಿ ಕೊಡಗು ತಂಡದ ವಿರುದ್ಧ ಡಿಯುಎಫ್ಎ ಹಾವೇರಿ ತಂಡವು ಗೆಲುವು ಸಾಧಿಸಿತು. ಲೀಗ್ ಮಾದರಿಯಲ್ಲಿ ನಡೆದ ಪಂದ್ಯಾವಳಿಯಲ್ಲಿ ನಕ್ಷತ್ರ ಎಫ್.ಸಿ ಕೊಡಗು ತಂಡವು ಪೀಪಲ್ ಟ್ರೀ ಬಳ್ಳಾರಿ ತಂಡದ ವಿರುದ್ಧ 5-1 ಗೋಲುಗಳ ಅಂತರದಿಂದ ಗೆಲುವು ಸಾಧಿಸಿತು. ದ್ವಿತೀಯ ಪಂದ್ಯದಲ್ಲಿ ಟಿಸಿಎಫ್ಎ ಹುಬ್ಬಳ್ಳಿ ತಂಡದ ವಿರುದ್ಧ 2-2 ಗೋಲುಗಳ ಸಮಬಲ ಸಾಧಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದು ಸೆಮಿಫೈನಲ್ ಪ್ರವೇಶಿಸಿತು.ನಕ್ಷತ್ರ ಎಫ್.ಸಿ ಕೊಡಗು ತಂಡದ ಮುಖ್ಯ ತರಬೇತುದಾರರಾಗಿ…
ಸುಂಟಿಕೊಪ್ಪ NEWS DESK : ಸಂತ ಅಂತೋಣಿ ಶಾಲೆಯ ನಿವೃತ್ತ ಶಿಕ್ಷಕಿ ಹಾಗೂ ಸಂತ ಕ್ಲಾರ ಕಾನ್ವೆಂಟಿನ ಕನ್ಯಾ ಭಗಿನಿ ಎಸ್.ಆರ್.ಸ್ಟೆಲಾ ಎಸ್.ಸಿ.ಪೆರ್ನಾಂಡಿಸ್ ಸಿಸ್ಟರ್ (ಮೆರ್ಲಿನ್-89) ನಿಧನರಾಗಿದ್ದಾರೆ. ಮೃತರ ಅಂತ್ಯಕ್ರಿಯೆಯು ಡಿ.10 ರಂದು ಮೈಸೂರಿನಲ್ಲಿ ನಡೆಯಲಿದೆ.
ಸುಂಟಿಕೊಪ್ಪ ಡಿ.9 NEWS DESK : ಸಂತ ಅಂತೋಣಿ ದೇವಾಲಯದಲ್ಲಿ ಅಮಲೋದ್ಭವ ಮಾತೆಯ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಸಂತ ಅಂತೋಣಿ ದೇವಾಲಯದ ಧರ್ಮ ಗುರುಗಳಾದ ವಂ. ಫಾಧರ್ ವಿಜಯಕಮಾರ್ ಮಂಜಿಕೆರೆಯ ಗದ್ದೆಯಲ್ಲಿ ವಿಶೇಷ ಪ್ರಾರ್ಥನೆ, ಭತ್ತದ ಫೈರನ್ನು ಕೊಯ್ದು ಮೆರವಣಿಗೆಯ ಮೂಲಕ ತರಲಾಯಿತು. ಈ ಸಂದರ್ಭ ಸಂತ ಕ್ಲಾರ ಕನ್ಯಾಸ್ತ್ರಿ ಮಠದ ಕನ್ಯಾಸ್ತ್ರಿಯರು ಹಾಗೂ ಕ್ರೈಸ್ತ ಬಾಂಧವರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು. ನಂತರ ಧರ್ಮಗರುಗಳು ವಿಜಯಕುಮಾರ್ ಹಾಗೂ ಮಡಿಕೇರಿ ವಲಯ ಶ್ರೇಷ್ಠ ಗುರು ಹಾಗೂ ಮಡಿಕೇರಿ ಸಂತ ಮೈಕಲರ ದೇವಾಲಯದ ಧರ್ಮಗುರುಗಳಾದ ದೀಪಕ್ ಅಡಂಬರ ದಿವ್ಯ ಬಲಿಪೂಜೆ ಹಾಗೂ ವಿಶೇಷ ಪ್ರಾರ್ಥನೆಯನ್ನು ನೆರವೇರಿಸಿದರು. ನೂರಾರು ಸಂಖ್ಯೆಯಲ್ಲಿ ನೆರದಿದ್ದ ಕ್ರೈಸ್ತ ಬಾಂಧವರಿಗೆ ಭತ್ತದ ತೆನೆಗಳನ್ನು ವಿತರಿಸಿದರು.
ಬೆಂಗಳೂರು ಡಿ.9 NEWS DESK : “ಮಹಾತ್ಮ ಗಾಂಧಿ ಅವರ ನೇತೃತ್ವದಲ್ಲಿ ನಡೆದ “ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ” ಕಾರ್ಯಕ್ರಮದ “ಗಾಂಧಿ ಭಾರತ” ಲೋಗೋವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನಾವರಣಗೊಳಿಸಿದರು. ಬಳಿಕ ಅನುಭವ ಮಂಟಪದ ತೈಲ ಕಲಾಕೃತಿಯನ್ನು ಲೋಕಾರ್ಪಣೆಗೊಳಿಸಿ, ಸಭಾಧ್ಯಕ್ಷರ ಕೊಠಡಿಯಲ್ಲಿ ಅನುಭವ ಮಂಟಪ ತೈಲ ಕಲಾಕೃತಿಯ ಕಲಾವಿದರನ್ನು ಸನ್ಮಾನಿಸಿದರು.
ಮಡಿಕೇರಿ ಡಿ.9 NEWS DESK : ಕರ್ನಾಟಕ ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಜೇನುತುಪ್ಪವನ್ನು ಜನಪ್ರಿಯಗೊಳಿಸಲು ಹಾಗೂ ಉತ್ಪಾದನೆಯನ್ನು ಹೆಚ್ಚಿಸಿ ಸುಧಾರಿತ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಿ ಬ್ರಾಂಡಿಂಗ್ ಮೂಲಕ ಜಾಗತಿಕ ಮಟ್ಟಕ್ಕೇರಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯದ ತೋಟಗಾರಿಕೆ ಇಲಾಖೆ ವತಿಯಿಂದ ಕರ್ನಾಟಕಲ್ಲಿ ಉತ್ಪಾದನೆಯಾಗುತ್ತಿರುವ ಜೇನುತುಪ್ಪವನ್ನು “ಝೇಂಕಾರ” ಬ್ರಾಂಡ್ ಹೆಸರು, ಟ್ಯಾಗ್‍ಲೈನ್ ಮತ್ತು ಲೋಗೋಗಳಡಿಯಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ “ಝೇಂಕಾರ” ಬ್ರಾಂಡ್ ಹೆಸರು, ಟ್ಯಾಗ್‍ಲೈನ್ ಮತ್ತು ಲೋಗೋಗಳು ಕಾನೂನಾತ್ಮಕವಾಗಿ ನೋಂದಣಿಯಾಗಿದೆ. ಕೊಡಗು ಜಿಲ್ಲೆಯಲ್ಲಿರುವ ಜೇನು ಕೃಷಿಕರು, ಜೇನುತುಪ್ಪ ಉತ್ಪಾದಕರು, ಜೇನು ಕೃಷಿ ಸಹಕಾರ ಸಂಘಗಳು ಪ್ರಸ್ತುತ “ಝೇಂಕಾರ” ಬ್ರಾಂಡ್ ಹೆಸರನ್ನು ಉಪಯೋಗಿಸಿಕೊಂಡು ಜೇನುತುಪ್ಪ ಹಾಗೂ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶವಿದೆ. ಇಲಾಖೆಯ ಮಾಲೀಕತ್ವದ ಜೇನುತುಪ್ಪದ ಬ್ರಾಂಡ್ ಹೆಸರಾದ ಝೇಂಕಾರ ಬ್ರಾಂಡ್‍ನಲ್ಲಿ ಜೇನುತುಪ್ಪವನ್ನು ಮಾರಾಟ ಮಾಡಲು ಇಚ್ಚಿಸುವ ಜೇನು ತುಪ್ಪದ ಉತ್ಪಾದಕರು/ ಸಂಗ್ರಹಕರು ನಿಗಧಿಪಡಿಸಿದ ರೂ.2500 ಗಳ ನೋಂದಣಿ ಶುಲ್ಕವನ್ನು ಪಾವತಿಸಿ, ಪಾವತಿಸಿದ ಚಲನ್ ಅನ್ನು ಸಂಬಂಧಪಟ್ಟ ಜಿಲ್ಲಾ ತೋಟಗಾರಿಕೆ ಉಪ ನಿರ್ದೇಶಕರು ರವರಿಗೆ…
ಮಡಿಕೇರಿ ಡಿ.9 NEWS DESK : ಅಲ್ಪಸಂಖ್ಯಾತರ ನಿರ್ದೇಶನಾಲಯ, ಬೆಂಗಳೂರು ವತಿಯಿಂದ 2024-25 ನೇ ಸಾಲಿನಲ್ಲಿ ಬಿಎಡ್ ಹಾಗೂ ಡಿಎಡ್ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಪಾರ್ಸಿ, ಜೈನ್, ಬೌದ್ಧ ಸಮುದಾಯದ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹಧನ ನೀಡಲು ಸೇವಾಸಿಂಧು ಪೋರ್ಟಲ್‍ನ ಆನ್‍ಲೈನ್‍ನಲ್ಲಿ https://sevasindhu.karnataka.gov.in ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್, 25 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ಮೌಲಾನಾ ಆಜಾದ್ ಭವನ, ಎಫ್‍ಎಂಸಿ ಕಾಲೇಜು ಹತ್ತಿರ, ಮಡಿಕೇರಿ ಹಾಗೂ ದೂ.ಸಂ. 08272-225528 ಮತ್ತು ಮಾಹಿತಿ ಕೇಂದ್ರ, ಮಡಿಕೇರಿ 08272-220214 ನ್ನು ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಆರ್.ಕೃಷ್ಣಮೂರ್ತಿ ತಿಳಿಸಿದ್ದಾರೆ.
ಮಡಿಕೇರಿ ಡಿ.9 NEWS DESK : 2024ನೇ ವರ್ಷದಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟವಾದ ಪುಸ್ತಕಗಳನ್ನು ರಾಜ್ಯ ಕೇಂದ್ರ ಗ್ರಂಥಾಲಯ ಕಬ್ಬನ್ ಉದ್ಯಾನವನ ಬೆಂಗಳೂರು ಇಲ್ಲಿ ಪುಸ್ತಕಗಳ ನೋಂದಣಿ ಅದಿನಿಯಮದಡಿ ಸಲ್ಲಿಸಲಾಗುವ ಪ್ರತಿ ಗ್ರಂಥದ ಮೂರು ಪ್ರತಿಗಳಲ್ಲಿ ಒಂದು ಪ್ರತಿಯನ್ನು ನಿಯಮಾನುಸಾರ ಆಯುಕ್ತರ ಕಚೇರಿಗೆ ಪಡೆದು ಈ ಪುಸ್ತಕವನ್ನು ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಆಯ್ಕೆಗಾಗಿ ಪರಿಗಣಿಸಲಾಗುವುದು. ಪ್ರಥಮ ಮುದ್ರಣಗೊಂಡ ವರ್ಷದಿಂದ ಕನಿಷ್ಠ 10 ವರ್ಷಗಳ ಅವಧಿಯ ನಂತರ ಮರು ಮುದ್ರಣಗೊಳ್ಳುವ/ ಪರಿಷ್ಕೃತ ಮುದ್ರಣಗೊಳ್ಳುವ ಉತ್ತಮ ಪುಸ್ತಕಗಳನ್ನು ಓದುಗರ ಬೇಡಿಕೆಗೆ ಅನುಗುಣವಾಗಿ ಆಯಾ ಪ್ರಾಧಿಕಾರಗಳ ಅಧಿಕಾರಿಗಳ/ ಪ್ರಾಧಿಕಾರದ ವಿವೇಚನಾ ಕೋಟಾದಡಿ ಸರ್ಕಾರವು ನಿಗದಿಪಡಿಸಿದ ಅಳತೆಗಳಿಗೆ ಅನುಗುಣವಾಗಿ ಬೆಲೆ ನಿಗದಿಪಡಿಸಿಕೊಂಡು ನೇರವಾಗಿ ಖರೀದಿಸಲು ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿ ಸಭೆಯಲ್ಲಿ ನಿರ್ಣಯಿಸಿರುತ್ತಾರೆ. 2024ರಲ್ಲಿ ಕರ್ನಾಟಕದಲ್ಲಿ ಪ್ರಥಮ ಮುದ್ರಣಗೊಂಡು ಪ್ರಕಟಗೊಳ್ಳುವ ಯಾವುದೇ ಭಾಷೆಯ ಪುಸ್ತಕಗಳನ್ನು ರಾಜ್ಯ ಕೇಂದ್ರ ಗ್ರಂಥಾಲಯದಲ್ಲಿ ದಿನಾಂಕ 01-01-2025 ರ ಸಂಜೆ 5.30ರ ಒಳಗಾಗಿ ನೋಂದಣಿ ಮಾಡಿಸತಕ್ಕದ್ದು, ಈ ಪುಸ್ತಕಗಳನ್ನು…






