ಲೇಖಕ: admin

ಮಡಿಕೇರಿ ಜ.31 NEWS DESK :  ಸುಂಟಿಕೊಪ್ಪ ಮಹಾತ್ಮ ಗಾಂಧಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಮಹಾತ್ಮ ಗಾಂಧೀಯವರ ಪುಣ್ಯ ಸ್ಮರಣೆ ಮತ್ತು ಹುತಾತ್ಮ ದಿನವನ್ನು ಆಚರಿಸಲಾಯಿತು. ಗಾಂಧೀಜಿಯವರು ಕೊಡಗಿಗೆ ಭೇಟಿ ನೀಡಿದ ಮನೆ ಸ್ವರ್ಣಾಲಯದ ಮುಂಭಾಗದಲ್ಲಿ  ಮೆಮೋರಿಯಲ್ ಟ್ರಸ್ಟ್ ನ ಟ್ರಸ್ಟಿಗಳು  ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.  ನಂತರ ಮಾತನಾಡಿದ ಕಾರ್ಯದರ್ಶಿ ಡೆನಿಸ್ ಡಿಸೋಜಾ ಮಹಾತ್ಮ ಗಾಂಧೀಯವರು ದೇಶಕ್ಕೆ ನೀಡಿದ ಕೊಡುಗೆ ಅಪಾರ, ಅವರ ಶಾಂತಿ ಮಾರ್ಗದ ಹೋರಾಟ ಇಂದಿನ ಯುವ ಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಗಾಂಧೀಜಿಯವರ ವಿಚಾರಧಾರೆಗಳ ಬಗ್ಗೆ ಅಧ್ಯಯನ ನಡೆಸಬೇಕು. ಪ್ರತಿಯೊಬ್ಬ ಯುವ ಪೀಳಿಗೆಯು ಅವರ ವಿಚಾರಧಾರೆಯ ಪುಸ್ತಕಗಳನ್ನು ಅಧ್ಯಯನಮಾಡಬೇಕೆಂದು ಸಲಹೆ ನೀಡಿದರು. ಈ ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಸಂಚಾಲಕ ಎಂ.ಇ ಮೊಹಿದ್ದೀನ್, ಖಜಾಂಚಿ ರಮೇಶ್ ಪಿಳ್ಳೆ, ಟ್ರಸ್ಟಿಯಾದ ಕರ್ನಲ್ ಕುಮಾರ್ ಉಪಸ್ಥಿತರಿದ್ದರು.

Read More

ಕುಶಾಲನಗರ ಜ.31 NEWS DESK : ಬೆಂಗಳೂರು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ವತಿಯಿಂದ ಕೊಡಮಾಡುವ 2024 -25 ನೇ ಸಾಲಿನ ಸ್ವಾಮಿ ವಿವೇಕಾನಂದ ರಾಜ್ಯ ಸದ್ಭಾವನಾ ರಾಜ್ಯ ಮಟ್ಟದ ಪ್ರಶಸ್ತಿಗೆ ಕೊಡಗು ಜಿಲ್ಲೆಯ ಕುಶಾಲನಗರದ ಕೆ.ಎಸ್.ಮೂರ್ತಿ ಆಯ್ಕೆಯಾಗಿದ್ದಾರೆ. ಫೆ.5 ರಂದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕೆ.ಎಸ್.ಮೂರ್ತಿ ಅವರ ಕ್ರಿಯಾ ಶೀಲ ಸಾಹಿತ್ಯಪರ ಚಟುವಟಿಕೆಗಳನ್ನು ಮನಗಂಡು ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಸಂಸ್ಥೆಯ ಮುಖ್ಯಸ್ಥರಾದ ಡಾ.ಎಸ್.ಬಾಲಾಜಿ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಮಡಿಕೇರಿ ಜ.31 NEWS DESK : ಬೆಂಗಳೂರಿನಲ್ಲಿ ನಡೆದ ಎಂ.ಇ.ಜಿ ( ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ )ಗೆ ಕೊಡಗಿನ ತ್ರಿವೇಣಿ ವಿದ್ಯಾಸಂಸ್ಥೆಯ 10ನೇ ತರಗತಿ ವಿದ್ಯಾರ್ಥಿ ಸಿ.ಎಂ.ಚಿಣ್ಣಪ್ಪ ಆಯ್ಕೆಯಾಗಿದ್ದಾನೆ. ಚೋಳಂಡ ಮಾದಪ್ಪ ಹಾಗೂ ಶಾಲಿನಿ ದಂಪತಿಯ ಪುತ್ರನಾಗಿರುವ ಚಿಣ್ಣಪ್ಪಗೆ ಕೂತಂಡ ಸಚಿನ್  ತರಬೇತಿ  ನೀಡಿದ್ದಾರೆ.

Read More

ನಾಪೋಕ್ಲು ಜ.31 NEWS DESK : ಉತ್ತರಖಂಡದ ಹರಿದ್ವಾರದಲ್ಲಿ ಫೆ.2 ರಿಂದ 13 ರವರೆಗೆ ನಡೆಯಲಿರುವ ರಾಷ್ಟ್ರೀಯ ಗೇಮ್ಸ್ ಹಾಕಿ ಪಂದ್ಯಾವಳಿಯಲ್ಲಿ ತೀರ್ಪುಗಾರರಾಗಿ (ಅಂಪೈರ್) ಕೊಡಗಿನ ಹರ್ಷಿತ್ ಅಯ್ಯಪ್ಪ ನೇಮಕಗೊಂಡಿದ್ದಾರೆ. ಪ್ರಸ್ತುತ ಹಾಕಿ ಇಂಡಿಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಹರ್ಷಿತ್ ಅಯ್ಯಪ್ಪ, ಮಡಿಕೇರಿ ತಾಲ್ಲೂಕಿನ ಬಲ್ಲಮಾವಟಿ ಗ್ರಾಮದ ಅಪ್ಪಚೆಟ್ಟೋಳಂಡ ಬೋಪಯ್ಯ ಹಾಗೂ ಭೋಜಮ್ಮ ದಂಪತಿಯ ಪುತ್ರ. ವರದಿ : ದುಗ್ಗಳ ಸದಾನಂದ. 

Read More

ಮಡಿಕೇರಿ ಜ.31 NEWS DESK : ಕೊಡಗಿನ ಪವಿತ್ರ ಕ್ಷೇತ್ರ ಭಾಗಮಂಡಲದಲ್ಲಿ ಲೋಕಾರ್ಪಣೆಗೊಳ್ಳುತ್ತಿರುವ ಭಾಗಮಂಡಲ ತಲಕಾವೇರಿ ರಸ್ತೆ ಸಂಪರ್ಕಿಸುವ ಮೇಲ್ಸೇತುವೆಗೆ  ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಹೆಸರನ್ನು ಇಟ್ಟು ಅವರ ಪುತ್ಥಳಿಯನ್ನು ಸ್ಥಾಪಿಸಬೇಕೆಂದು ಗೌಡ ಸಂಘಟನೆಗಳು ಒತ್ತಾಯಿಸಿದೆ.   ಭಾಗಮಂಡಲದ ಗ್ರಾಮ ಪಂಚಾಯತಿಯ ಪಿಡಿಒ ನಂದ ಅವರಿಗೆ ಮನವಿ ಸಲ್ಲಿಸಿದ ಭಾಗಮಂಡಲ ಗೌಡ ಸಮಾಜ, ಕಾರುಗುಂದ ಗೌಡ ಸಮಾಜ, ಕೊಡಗು ಗೌಡ ವಿದ್ಯಾಸಂಘ, ಭಾಗಮಂಡಲ ನಾಡು ಗೌಡ ಯುವ ಒಕ್ಕೂಟದ ಪ್ರಮುಖರು, ಕೆದಂಬಾಡಿ ರಾಮಯ್ಯ ಗೌಡರ ಚಾಣಾಕ್ಷ ನಡೆಗಳು ಇಡೀ ರೈತ ಹೋರಾಟವನ್ನು ನಿಯಂತ್ರಿಸಿ ಯಶಸ್ಸು ಕಂಡಿದ್ದು ಅವಿಸ್ಮರಣೀಯ. ತಮ್ಮ ಸರ್ವಸ್ವವನ್ನು ಸ್ವಾತಂತ್ರ್ಯ ಹೋರಾಟಕ್ಕೆ ಧಾರೆಯೆರೆದ ರಾಮಯ್ಯ ಗೌಡರ ಶ್ರೇಷ್ಠ ನಾಯಕತ್ವ ಮಂಗಳೂರಿನ ಬಾವುಟಗುಡ್ಡೆಯಲ್ಲಿ ಬ್ರಿಟೀಷರ ಧ್ವಜವನ್ನು ಕೆಳಗಿಳಿಸಿ ಕ್ರಾಂತಿ ಧ್ವಜವನ್ನು ಏರಿಸಿ 13 ದಿನಗಳ ಕಾಲ ರಾಜ್ಯಭಾರ ಮಾಡಿ ಸ್ವಾತಂತ್ರ್ಯವನ್ನು ಗಳಿಸಿತು. ಇಂತಹ ಸ್ವಾತಂತ್ರ್ಯ ವೀರರನ್ನು ಗುರುತಿಸುವ, ಅವರ ಸಾಧನೆಗಳನ್ನು ಶಾಶ್ವತವಾಗಿಸುವ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ಮೇಲ್ಸೇತುವೆಗೆ ಕೆದಂಬಾಡಿ ರಾಮಯ್ಯ…

Read More

ಮಡಿಕೇರಿ NEWS DESK ಜ.31 : ಹಿಂದೂ ಜಾಗರಣಾ ವೇದಿಕೆ ವತಿಯಿಂದ  ಯುವ ಸಮಾವೇಶದ ಪ್ರಯುಕ್ತ ಹಿಂದೂ ಯುವ ಸಮೂಹದ ಜಾಗೃತಿಗಾಗಿ ಮಡಿಕೇರಿಯ ಪ್ರಮುಖ ಬೀದಿಗಳಲ್ಲಿ  ಜಾಗೃತಿ ಬೈಕ್ ಜಾಥಾ ನಡೆಯಿತು.

Read More

ಮಡಿಕೇರಿ ಜ.31 NEWS DESK : ಪೆರಾಜೆ ಶ್ರೀ ಶಾಸ್ತಾವು ದೇವಾಲಯದ ಪ್ರತಿಷ್ಠಾ ವಾರ್ಷಿಕೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ದೇವಾಲಯದಲ್ಲಿ ನಿರ್ಮಿಸಲಾದ ನೂತನ ರಾಜಗೋಪುರವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು. ನಂತರ ದೇವರಿಗೆ ಪ್ರಾರ್ಥನೆ ಸಲ್ಲಿಸಿ, ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ ತಿಹಾಸ ಪ್ರಸಿದ್ಧ ಶ್ರೀ ಶಾಸ್ತಾವು ದೇವರ ಆಶೀರ್ವಾದ ನಾಡಿನ ಎಲ್ಲರ ಮೇಲೆ ಇರಲಿ ಎಂದು ಹಾರೈಸಿದರು. ಜೀವನದಲ್ಲಿ ಯಶಸ್ಸು ಕಾಣಲು ನಮ್ಮ ಪ್ರಯತ್ನದೊಂದಿಗೆ ದೇವರ ಆಶೀರ್ವಾದ ಬೇಕೇಬೇಕು. ಸದ್ಭಾವನೆಯಿಂದ ಸಮಾಜದಲ್ಲಿ ಎಲ್ಲರೂ ಒಂದೇ, ಎಲ್ಲರೂ ಸಹಬಾಳ್ವೆಯಿಂದ ಬಾಳಬೇಕು ಎಂಬ ಭಾವನೆಯಿಂದ ಕೆಲಸ ಮಾಡಿದರೆ ದೇವರು ಖಂಡಿತ ಆಶೀರ್ವಾದ ಮಾಡುತ್ತಾನೆ ಎಂದು ಹೇಳಿದರು. ಈ ಸಂದರ್ಭ ಪೆರಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಜೈರಾಮ್ ಪೆರುಮುಂಡ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ಇಸ್ಮಾಯಿಲ್, ದೇವಸ್ಥಾನದ ಆಡಳಿತ ಮಂಡಳಿ ಮುಖಂಡರು, ಪದಾಧಿಕಾರಿಗಳು,ಗ್ರಾಮಸ್ಥರು ಉಪಸ್ಥಿತರಿದ್ದರು.

Read More

ವಿರಾಜಪೇಟೆ ಜ.31 NEWS DESK : ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮುಂಖಡರ ಸಭೆ ವಿರಾಜಪೇಟೆ ನಗರದ ಪುರಭವನದಲ್ಲಿ ನಡೆಯಿತು. ವಿರಾಜಪೇಟೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸ್ಥಾನ 2010ರಿಂದಲೂ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ನೀಡಿಲ್ಲ. ಆದುದರಿಂದ ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಕೆ.ಸತೀಶ್ ಮಾತನಾಡಿ ಕಾಂಗ್ರೆಸ್‍ನ ವೋಟ್ ಬ್ಯಾಂಕಿನಲ್ಲಿ ಪ್ರಮುಖ ಪಾತ್ರವಿರುವ ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಅಧ್ಯಕ್ಷ ಸ್ಥಾನ ಕೇಳುತ್ತಿದ್ದೇನೆ. ನಮ್ಮಲ್ಲಿ ಯಾರಾದರೊಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂದರು. ಪುರಸಭೆ ಸದಸ್ಯ ರಾಜೇಶ್ ಪದ್ಮನಾಭ ಮಾತನಾಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನಿಭಾಯಿಸಲು ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ನಾಯಕರುಗಳು ಸಮರ್ಥರಿದ್ದೇವೆ. 2010ರಿಂದಲೂ ಸಿಗದೆ ಇರುವ ಅವಕಾಶವನ್ನು ಈ ಬಾರಿ ಈ ಎರಡು ಸಮುದಾಯಗಳಲ್ಲಿ ಯಾರಿಗಾದರೂ ನೀಡಿ ಸಾಮಾಜಿಕ ನ್ಯಾಯ ಒದಗಿಸಿ ಎಂದರು.…

Read More

ಸುಂಟಿಕೊಪ್ಪ ಜ.31 NEWS DESK : ದೇಹದಲ್ಲಿ ಉಂಟಾಗುವ ಕೆಲವು ಭಾದೆಗಳನ್ನು ಫೂಟ್ ಪಲ್ಸ್ ಥೆರಪಿಯಿಂದ ಯಾವುದೇ ಚಿಕಿತ್ಸೆಗಳನ್ನು ಪಡೆದುಕೊಳ್ಳದೆಯೇ ಮುಕ್ತಿ ಹೊಂದಬಹುದಾಗಿದೆ ಎಂದು ಕಂಪಾನಿಯೋ ಕಂಪನಿ ಸಂಸ್ಥೆ ಮುಖ್ಯಸ್ಥ ರತ್ನಾಕರ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು. ಸುಂಟಿಕೊಪ್ಪ ಲಯನ್ಸ್ ಕ್ಲಬ್ ಹಾಗೂ ಕಂಪಾನಿಯೋ ಕಂಪನಿ ಸಹಯೋಗದಲ್ಲಿ ಮಾದಾಪುರ ರಸ್ತೆಯ ಮಂಜುನಾಥಯ್ಯ ಮಿನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಲಾಗಿರುವ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರದಲ್ಲಿ ಮಾಹಿತಿ ಕಾರ್ಯಾಗಾರ ನೀಡಿದರು. ಫೂಟ್ ಪಲ್ಸ್ ಥೆರಪಿಯಿಂದ ಆಗುವ ಪ್ರಯೋಜನದ ಬಗ್ಗೆ ಮಾಹಿತಿ ನೀಡಿ ಉತ್ತಮ ಆರೋಗ್ಯದಿಂದ ಜೀವನ ನಡೆಸುವಂತೆ ಕರೆ ನೀಡಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಶಶಾಂಕ್ ಶ್ರೀನಿವಾಸ್ ಕಾರ್ಯಾಗಾರವನ್ನು ಉದ್ಘಾಟಿಸಿದರು. ಈ ಸಂದರ್ಭ ಲಯನ್ಸ್ ಕ್ಲಬ್ ಕಾರ್ಯದರ್ಶಿ ಗ್ಲೇನ್ ಮೆನೇಜಸ್, ಕೋಶಾಧಿಕಾರಿ ಪ್ರೀತಮ್ ಪ್ರಭಾಕರ್, ಹಿರಿಯ ಸದಸ್ಯರಾದ ಶ್ರೀನಿವಾಸ್ ಎಸ್.ಜಿ.ಪೆಮ್ಮಯ್ಯ, ಯಶೋಧರ್ ಪೂಜಾರಿ, ಕೆ.ಪಿ.ಜಗನಾಥ್, ಪಿ.ಜಿ.ಪೆಮ್ಮಯ್ಯ ಸಿ.ಟಿ.ಪೊನ್ನಪ್ಪ, ಹಾಜರಿದ್ದರು.

Read More

ಸುಂಟಿಕೊಪ್ಪ ಜ.31 NEWS DESK : ಶಿಕ್ಷಣವನ್ನು ಉತ್ತೇಜಿಸುವ ದಿಸೆಯಲ್ಲಿ ಜಿಲ್ಲೆಯ ವಿವಿಧ ಶಾಲೆಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮಕ್ಕಳ ಶಿಕ್ಷಣಕ್ಕೆ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಡೆಸ್ಕ್ ಬೆಂಚ್ ವಿತರಿಸುತ್ತಿರುವುದು ಮಹತ್ಕಾರ್ಯವೆಂದು ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಜಗದೀಶ್ ಹೇಳಿದರು. ಮಾದಾಪುರ ಶ್ರೀಮತಿ ಡಿ.ಚೆನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಬೆಂಚ್ ಡೆಸ್ಕ್ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕವಾಗಿ ಸಮುದಾಯಕ್ಕೆ ಪ್ರೇರಣೆಯಾಗುವಂತಹ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದರು. ಶಿಕ್ಷಣಕ್ಕೆ ಒತ್ತು ಕೊಡುವ ನಿಟ್ಟಿನಲ್ಲಿ ಸರಕಾರಿ, ಅನುದಾನಿತ ಶಾಲೆ ಹಾಗೂ ಖಾಸಗಿ ಶಾಲೆಗಳಿಗೆ ಅವರ ಬೇಡಿಕೆ ಅನುಸಾರ ಬೆಂಚ್ ಡೆಸ್ಕ್‍ಗಳನ್ನು ವಿತರಿಸುವ ಮೂಲಕ ಶಿಕ್ಷಣಕ್ಕೆ ಆದ್ಯತೆ ನೀಡಿರುವುದು ಹರ್ಷದಾಯಕ ವಿಚಾರವಾಗಿದೆ ಎಂದು ಹೇಳಿದರು. ಮಡಿಕೇರಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಸುಮಾರು 19 ಶಾಲೆಗಳು ಬೇಡಿಕೆ ಸಲ್ಲಿಸಿದಷ್ಟು 159 ಬೆಂಚ್ ಡೆಸ್ಕ್ ವಿತರಣೆ ಮಾಡಲಾಗಿದೆ ಎಂದು ಯೋಜನಾಧಿಕಾರಿ ಪುರುಷೋತ್ತಮ್ ಮಾಹಿತಿ ನೀಡಿದರು.…

Read More