ಮಡಿಕೇರಿ ಜ.10 : ಕೊಡಗು ಜಿಲ್ಲಾ ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್(ನಿಮಾ)ನ ಸರ್ವ ಸದಸ್ಯರ ಸಭೆಯಲ್ಲಿ ಅಧ್ಯಕ್ಷರಾಗಿ ಡಾ. ಎ.ಆರ್.ರಾಜಾರಾಮ್, ಕಾರ್ಯದರ್ಶಿಯಾಗಿ ಡಾ.ಶ್ಯಾಮ ಪ್ರಸಾದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರದಲ್ಲಿ ನಡೆದ ಈ ಆಯ್ಕೆ ನಡೆದಿದ್ದು, ಕೋಶಾಧಿಕಾರಿಯಾಗಿ ಡಾ. ಪದ್ಮನಾಭ, ನೂತನ ಕಾರ್ಯಕಾರಿ ಮಂಡಳಿಯ ಪೋಷಕರಾಗಿ ಡಾ. ಸಿ. ಆರ್. ಉದಯಕುಮಾರ್ ಮತ್ತು ಡಾ. ಬಿ.ವಿ. ಶೆಣೈ, ಉಪಾಧ್ಯಕ್ಷರಾಗಿ ಡಾ.ಉದಯ ಕುಮಾರ್, ಡಾ.ಅರುಣಾ ಭಟ್ ಮತ್ತು ಡಾ.ವಿವೇಕ್ ರಾವ್, ಜತೆ ಕಾರ್ಯದರ್ಶಿಗಳಾಗಿ ಡಾ.ಮುರಳಿ ಮತ್ತು ಡಾ.ಸುದೇಶ್ ಹೆಗ್ಡೆ ಆಯ್ಕೆಯಾಗಿದ್ದಾರೆ.
ತಾಲ್ಲೂಕು ಪ್ರತಿನಿಧಿಗಳಾಗಿ ಡಾ.ರೋಷನ್ (ವಿರಾಜಪೇಟೆ), ಡಾ. ಪುರುಷೋತ್ತಮ್ (ಮಡಿಕೇರಿ), ಡಾ.ಮಹೇಶ್ (ಸೋಮವಾರಪೇಟೆ), ಡಾ.ರಾಜಾರಾಮ್ ಶೆಟ್ಟಿ (ಕುಶಾಲನಗರ) ಮತ್ತು ಡಾ.ಸುಬ್ರಹ್ಮಣ್ಯ ರಾವ್ (ಪೊನ್ನಂಪೇಟೆ), ಮಹಿಳಾ ಪ್ರತಿನಿಧಿಯಾಗಿ ಡಾ.ಶೈಲಜಾ ರಾಜೇಂದ್ರ ಆಯ್ಕೆಯಾದರು.
ರಾಜ್ಯ ಕಾರ್ಯಕಾರಿ ಮಂಡಳಿಗೆ ಜಿಲ್ಲಾ ಪ್ರತಿನಿಧಿಗಳನ್ನಾಗಿ ಡಾ.ಪಿ.ಎನ್.ಕುಲಕರ್ಣಿ ಮತ್ತು ಡಾ.ಎನ್.ಕೆ.ರಾಜೇಂದ್ರ ಅವರನ್ನು ಆಯ್ಕೆಮಾಡಲಾಯಿತು.
ಸಂಘಟನೆಯ ವಿವಿಧ ಯೋಜನೆಗಳ ಸಂಚಾಲಕರನ್ನು ನೇಮಕ ಮಾಡಲಾಗಿದ್ದು, ಆರೋಗ್ಯ ತಪಾಸಣಾ ಕಾರ್ಯಕ್ರಮಗಳಿಗೆ ಡಾ.ಸಂತೋಷ್ ಮತ್ತು ಡಾ.ಧನ್ಯಾ, ರಕ್ತದಾನ ಶಿಬಿರಗಳಿಗೆ ಡಾ.ಸಾವಿತ್ರಿ ಮತ್ತು ಡಾ.ಜ್ಯೋತಿ, ವನಸ್ಪತಿ ಉದ್ಯಾನ ಯೋಜನೆಗೆ ಡಾ.ಶ್ವೇತಾ ಮತ್ತು ಡಾ.ಮಮತಾ, ಕಾರ್ಯಕ್ರಮ ರೂಪುರೇಷೆಗಳಿಗೆ ಡಾ.ಸೌಮ್ಯ ಗಣರಾಜ್, ಡಾ.ಹೀನಾ ಕೌಸರ್, ಡಾ. ಅದಿತಿ ಭಟ್ ಮತ್ತು ಡಾ ನಿಧಿ, ನಿರಂತರ ವೈದ್ಯ ಶಿಕ್ಷಣಕ್ಕೆ ಡಾ.ಲಕ್ಷ್ಮೀಶ್ ಮತ್ತು ಡಾ ಈಶ್ವರಿ, ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಡಾ.ಉದಯ ಶಂಕರ್ ಅವರನ್ನು ನಿಯುಕ್ತಿಗೊಳಿಸಲಾಯಿತು.
ಪುತ್ತೂರಿನ ಸುಶ್ರುತ ಆಸ್ಪತ್ರೆಯ ಸರ್ಜನ್ ಡಾ. ರವಿಶಂಕರ್ ಪೆರ್ವಾಜೆಯವರು ನಿರಂತರ ವೈದ್ಯ ಶಿಕ್ಷಣದ ಅಂಗವಾಗಿ ಮೂಲ ವ್ಯಾಧಿ, ಫಿಸ್ಟುಲ ಮೊದಲಾದ ರೋಗಗಳ ಚಿಕಿತ್ಸಾ ವಿಧಾನಗಳನ್ನು ವಿವರಿಸಿ, ರೋಗ ಪತ್ತೆಗೆ ಸೂಕ್ತ ಆಧುನಿಕ ಸಲಕರಣೆಗಳನ್ನು ಉಪಯೋಗಿಸುವಂತೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಝಂಡು ಸಂಸ್ಥೆಯ ಡಾ.ಸದಾನಂದ ಪತ್ರಿ ತಮ್ಮ ಕಂಪೆನಿಯ ಹೊಸ ಉತ್ಪನ್ನಗಳನ್ನು ಪರಿಚಯಿಸಿದರು. ಡಾ.ಸೌಮ್ಯ ಗಣರಾಜ್ ಮತ್ತು ಡಾ.ಅದಿತಿ ಭಟ್ ಕಾರ್ಯಕ್ರಮ ನಿರೂಪಿಸಿದರು. ಡಾ. ಶೈಲಜಾ ರಾಜೇಂದ್ರ ಸ್ವಾಗತಿಸಿ, ಡಾ.ಮುರಳಿ ವಂದಿಸಿದರು.
Breaking News
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*
- *ಡಿ.1 ರಂದು ಗಾಳಿಬೀಡುವಿನಲ್ಲಿ ಬಾಣೆ ಹಬ್ಬ*
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*