ಮಡಿಕೇರಿ ಜ.11 : ಚೆಟ್ಟಳ್ಳಿಯ ಬಟ್ಟೀರ ಕುಟುಂಬಸ್ಥರ ವತಿಯಿಂದ ಪ್ರಥಮ ವರ್ಷದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಜ.29ರಂದು ನಡೆಯಲಿದೆ ಎಂದು ಕುಟುಂಬದ ಹಿರಿಯರಾದ ಬಟ್ಟೀರ.ಎಸ್.ಕಾಳಪ್ಪ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚೆಟ್ಟಳ್ಳಿಯ ಪ್ರೌಢಶಾಲಾ ಮೈದಾನದಲ್ಲಿ ಬೆಳಗ್ಗೆ 9.30 ಗಂಟೆಗೆ ಕೋವಿ ಪೂಜೆಯೊಂದಿಗೆ ಸ್ಪರ್ಧೆಗೆ ಚಾಲನೆ ದೊರೆಯಲಿದೆ ಎಂದರು.
.22 ರೈಫಲ್(50 ಮೀ), 12 ಬೋರ್(30 ಮೀ) ಹಾಗೂ ಏರ್ ರೈಫಲ್(15 ಮೀ) ವಿಭಾಗದಲ್ಲಿ ಮುಕ್ತ ಸ್ಪರ್ಧೆ ನಡೆಯಲಿದ್ದು, ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರತಿಯೊಬ್ಬರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿಜೇತರಿಗೆ ಆಕರ್ಷಕ ಟ್ರೋಫಿ ಮತ್ತು ನಗದು ನೀಡಿ ಗೌರವಿಸಲಾಗುವುದು. .22 ರೈಫಲ್, 12 ಬೋರ್ ಸ್ಪರ್ಧೆಯ ನೋಂದಣಿಗೆ ತಲಾ 200 ರೂ., ಹಾಗೂ ಏರ್ ರೈಫಲ್ 100 ರೂ ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ 9480438001, 6361743747 ಸಂಖ್ಯೆಯನ್ನು ಸಂಪರ್ಕಿಬಹುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಟ್ಟೀರ ಕುಟುಂಬಸ್ಥರಾದ ಕರಣ್ ಮುತ್ತಣ್ಣ, ಬೋಜಣ್ಣ, ಸಿ.ವೇಣುಗೋಪಾಲ್, ಗೀರಾ ಕುಶಾಲಪ್ಪ, ಪದ್ಮ ಕಾಳಪ್ಪ ಉಪಸ್ಥಿತರಿದ್ದರು.