ಕುಶಾಲನಗರ ಜ.16 : ಕುಶಾಲನಗರ ತಾಲೂಕು ಮುಸ್ಲಿಂ ಒಕ್ಕೂಟದ ಕಚೇರಿಯನ್ನು ಸ್ಥಳೀಯ ಹಿಲಾಲ್ ಮಸೀದಿ ಧರ್ಮಗುರು ಸೂಫಿದಾರಿಮಿ ಉದ್ಘಾಟಿಸಿದರು.
ಕುಶಾಲನಗರದ ದಂಡಿನಪೇಟೆಯಲ್ಲಿ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಸಮುದಾಯದ ಹಿತಕ್ಕಾಗಿ ಒಕ್ಕೂಟ ಕಾರ್ಯನಿರ್ವಹಿಸಲಿ ಎಂದು ಆಶಿಸಿದರು.
ತಾಲ್ಲೂಕು ಮುಸ್ಲಿಂ ಒಕ್ಕೂಟದ ಅಧ್ಯಕ್ಷಅಬ್ದುಲ್ ಕರೀಂ ಮಾತನಾಡಿ, ತಾಲ್ಲೂಕು ಮುಸ್ಲಿಂ ಒಕ್ಕೂಟ ಸ್ಥಾಪನೆಯಾಗಿ ಆರು ವರ್ಷಗಳು ಕಳೆದಿದೆ. ಒಕ್ಕೂಟವು ಸಮುದಾಯದಲ್ಲಿ ಅನ್ಯಾಯಕ್ಕೊಳಗದವರ, ದೌರ್ಜನ್ಯಕ್ಕೊಳಗಾದವರ ಪರ ನಿಂತು ಹೋರಾಟ ನಡೆಸುತ್ತಾ ಬಂದಿದೆ. ಮುಂದೆಯೂ ಸಮುದಾಯ ಪರವಾಗಿ ಕಾರ್ಯನಿರ್ವಹಿಸಲಿದೆ ಎಂದರು.
ಈ ಸಂದರ್ಭ ಜಾಮಿಯಾ ಮಸೀದಿ ಅಧ್ಯಕ್ಷರಾದ ಮುಜೀಬುರ್ ರಹಮಾನ್, ಹಿಲಾಲ್ ಮಸೀದಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್, ಅಬ್ದುಲ್ ರಹಮಾನ್, ರಶೀದ್ ಅಹ್ಮದ್, ತಾಲ್ಲೂಕು ಮುಸ್ಲಿಂ ಒಕ್ಕೂಟದ ಪ್ರಮುಖರು ಇದ್ದರು.
















