ಮಡಿಕೇರಿ ಫೆ.1 : ನಾಪೋಕ್ಲು ಮೂಲದ ಕಲ್ಲೇಂಗಡ ಬಬಿನ್ ಬೋಪಣ್ಣ ಅವರು ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರಾಗಿ ಬಡ್ತಿ ಹೊಂದಿದ್ದಾರೆ.
ವಿಜಯಪುರದಲ್ಲಿ ಮೀನುಗಾರಿಕಾ ಇಲಾಖೆಯ ಉಪನಿರ್ದೇಕರಾಗಿದ್ದ ಇವರು ಇದೀಗ ಜಂಟಿ ನಿರ್ದೇಶಕರಾಗಿ ಬಡ್ತಿ ಹೊಂದಿ ಕಾರಾವಾರಕ್ಕೆ ವರ್ಗಾವಣೆಗೊಂಡಿದ್ದಾರೆ. ಅಲ್ಲದೆ ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ನಿಯಮಿತ ಕಾರಾವಾರದ ವ್ಯವಸ್ಥಾಪಕ ನಿರ್ದೇಶಕರ ಹೆಚ್ಚುವರಿ ಜವಾಬ್ದಾರಿಯನ್ನು ಕೂಡ ನೀಡಲಾಗಿದೆ.
ಬಬಿನ್ ಬೋಪಣ್ಣ ಅವರು ನಾಪೋಕ್ಲು ಮೂಲದ ಪ್ರಸ್ತುತ ಮಡಿಕೇರಿ ನಿವಾಸಿಗಳಾಗಿರುವ ದಿ.ಕಲ್ಲೇಂಗಡ ಬೋಪಣ್ಣ (ಬೋಪ್ಣಿ) ಹಾಗೂ ಉಳ್ಳಿಯಡ ಕಾಮವ್ವ ದಂಪತಿ ಪುತ್ರ. ಜಂಟಿ ನಿರ್ದೇಶಕರಾಗಿ ಬಡ್ತಿ ಹೊಂದಿರುವ ಬಗ್ಗೆ ಕಲ್ಲೇಂಗಡ ಮತ್ತು ಉಳ್ಳಿಯಡ ಕುಟುಂಬ ವರ್ಗ ಹಾಗೂ ನಾಪೋಕ್ಲು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.










