ಮಡಿಕೇರಿ ಫೆ.20 : ರಾಷ್ಟ್ರೀಯ ಆಯುಷ್ ಅಭಿಯಾನದ ಯೋಜನೆಯಡಿ ಕೊಡಗು ಜಿಲ್ಲಾ ಆಯುಷ್ ಇಲಾಖೆಯಲ್ಲಿ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಆಯುಷ್ ಬಿಎಎಂಎಸ್/ಬಿಎಚ್‍ಎಂಎಸ್, ಬಿಯುಎಂಎಸ್, ಬಿಎನ್‍ವೈಎಸ್ ಪೋಸ್ಟ್ ಗ್ರ್ಯಾಜುಯೇಟ್ ಡಿಪ್ಲೋಮಾ ಇನ್ ಹಾಸ್ಪಿಟಲ್ ಎಂಡ್ ಹೆಲ್ತ್ ಕೇರ್ ಮ್ಯಾನೇಜ್‍ಮೆಂಟ್(2 ವರ್ಷ)ನಿಂದ ಎಐಸಿಟಿಇ. ಸಾ.ಅಂ. 45 ವರ್ಷದೊಳಗಿರಬೇಕು.
ತಮ್ಮ ಸಂಪೂರ್ಣ ವಿವರಗಳುಳ್ಳ ಅರ್ಜಿಗಳನ್ನು ನಿಗಧಿಪಡಿಸಿದ ಕನಿಷ್ಠ ವಿದ್ಯಾರ್ಹತೆ, ವಯೋಮಿತಿ ಹಾಗೂ ಇತರೆ ಎಲ್ಲಾ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಲು ಫೆಬ್ರವರಿ, 24 ಕೊನೆಯ ದಿನವಾಗಿದೆ. ಹಾಗೂ ನೇರ ಸಂದರ್ಶನಕ್ಕೆ ದಿನಾಂಕವನ್ನು ನಂತರ ತಿಳಿಸಲಾಗುವುದು.
ಅರ್ಜಿಯನ್ನು ಜಿಲ್ಲಾ ಆಯುಷ್ ಅಧಿಕಾರಿಗಳು, ಜಿಲ್ಲಾ ಆಯುಷ್ ಕಚೇರಿ, ಮಹದೇವಪೇಟೆ, ಮಡಿಕೇರಿ-571201, ಕೊಡಗು ಜಿಲ್ಲೆ ಇಲ್ಲಿಗೆ ಸಲ್ಲಿಸಬೇಕು ಎಂದು ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಆಯುಷ್ ಅಧಿಕಾರಿ ಅವರು ತಿಳಿಸಿದ್ದಾರೆ.