ನಂದಿ ಬೆಟ್ಟಗಳು ಬೆಂಗಳೂರಿನಿಂದ ಕೇವಲ 60 ಕಿ.ಮೀ ಅಂತರದಲ್ಲಿದ್ದು, ಸಮುದ್ರ ಮಟ್ಟದಿಂದ ಸುಮಾರು 4851 ಅಡಿ ಎತ್ತರದಲ್ಲಿದೆ. ಈ ಬೆಟ್ಟವು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿದೆ ಮತ್ತು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹತ್ತಿರದಲ್ಲಿರುವುದರಿಂದ ಸುಲಭವಾಗಿ ಪ್ರಯಾಣ ಮಾಡಬಹುದಾಗಿದ್ದು, ಹೆಸರಾಂತ ಪ್ರವಾಸಿ ಆಕರ್ಷಣೆಯಾಗಿದೆ.
ನಂದಿ ಬೆಟ್ಟಗಳು ಆಸಕ್ತಿದಾಯಕವಾದ ಇತಿಹಾಸವನ್ನು ಹೊಂದಿದೆ. ಇದರ ಹಿಂದಿನ ರಹಸ್ಯವು ಅದರ ಮೂಲವನ್ನು ಸುತ್ತುವರೆದಿದೆ. ಬೆಟ್ಟಗಳು ಮಲಗಿರುವ ನಂದಿಯ ಆಕಾರವನ್ನು ಹೊಂದಿರುವುದರಿಂದ ಈ ಹೆಸರು ಬಂದಿದೆ ಎಂದು ಕೆಲವರು ಹೇಳುತ್ತಾರೆ. ಚೋಳರ ಕಾಲದಲ್ಲಿ ಆನಂದ ಗಿರಿ ಎಂಬ ಹೆಸರಿನಲ್ಲಿ ಬೆಟ್ಟಗಳು ಅಸ್ತಿತ್ವದಲ್ಲಿದ್ದವು ಎಂದೂ ಹೇಳಲಾಗುತ್ತದೆ. ಚೋಳರ ಕಾಲದ ವಿಶಿಷ್ಟವಾದ ದೇವಾಲಯದ ವಾಸ್ತುಶಿಲ್ಪವು ಈ ಬೆಟ್ಟಗಳಲ್ಲಿ ಅಸ್ತಿತ್ವದಲ್ಲಿದೆ ಮತ್ತು ಬೆಟ್ಟಗಳು ಭಾರತದ ಆರಂಭಿಕ ಸ್ವಾತಂತ್ರ್ಯ ಹೋರಾಟದ ಭಾಗವಾಗಿದೆ, ಏಕೆಂದರೆ ಟಿಪ್ಪು ಸುಲ್ತಾನ್ ಇಲ್ಲಿ ನಂದಿದುರ್ಗ ಎಂಬ ಕೋಟೆಯನ್ನು ನಿರ್ಮಿಸಿದನು, ಇದನ್ನು ಅಜೇಯ ಕೋಟೆ ಎಂದು ಪರಿಗಣಿಸಲಾಗಿದೆ. ನಂತರ ಇದು 1791 ರಲ್ಲಿ ಬ್ರಿಟಿಷರ ವಶವಾಯಿತು.
ನಂದಿ ಬೆಟ್ಟಕ್ಕೆ ಭೇಟಿ ನೀಡುವುದು ಒಂದು ಅವಿಸ್ಮರಣೀಯವಾದ ಅನುಭವವಾಗಿದೆ. ಇಲ್ಲಿರುವ ಟಿಪ್ಪು ಡ್ರಾಪ್ ನಲ್ಲಿ ಚಕ್ರವರ್ತಿ ಯು ಶಿಕ್ಷೆಗೊಳಗಾದ ಕೈದಿಗಳನ್ನು ಮರಣದಂಡನೆಗೆ ಒಳಪಡಿಸಿದನು ಎನ್ನಲಾಗುತ್ತದೆ ಅಲ್ಲದೆ ಇದು ಅವನ ರಹಸ್ಯ ತಪ್ಪಿಸಿಕೊಳ್ಳುವ ಮಾರ್ಗ ಮತ್ತು ಈ ಬೆಟ್ಟಗಳಲ್ಲಿ ನೆಲೆಗೊಂಡಿರುವ ಅವನ ಬೇಸಿಗೆ ಅರಮನೆಯು ಗತ ಕಾಲದ ಇತಿಹಾಸದ ಕಡೆಗೆ ನಮ್ಮನ್ನು ಕರೆದೊಯ್ಯುತ್ತದೆ . ಗವಿ ವೀರಭದ್ರ ಸ್ವಾಮಿ ದೇವಸ್ಥಾನ ಸೇರಿದಂತೆ ಹಲವಾರು ಸುಂದರ ದೇವಾಲಯಗಳನ್ನೂ ಇಲ್ಲಿ ಕಾಣಬಹುದಾಗಿದೆ.