ನಾಪೋಕ್ಲು ಏ.17 : ನಾಪೋಕ್ಲು ಸಮೀಪದ ನೆಲಜಿ ಶ್ರೀ ಭಗವತಿ(ಪೋವದಿಯಮ್ಮೆ) ದೇವಾಲಯದ ವಾರ್ಷಿಕ ಉತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ಎತ್ತು ಪೋರಾಟ, ಆಂಗೋಲ ಪೊಂಗೋಲ ಸೇವೆ, ವಿವಿಧ ಪೂಜಾ ಕೈಂಕರ್ಯ ಮತ್ತು ದೇವರ ನೃತ್ಯ ಬಲಿ ನಡೆಯಿತು. ಶ್ರೀ ದೇವಿಯ ಸನ್ನಿಧಿಯಲ್ಲಿ ಪೀಲಿ ಆಟ್, ದೇವಿಯ ನೃತ್ಯ ಬಲಿ ಹಾಗೂ ವಿವಿಧ ಸೇವೆಗಳು ನಡೆದವು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ನೆಲಜಿ ಶ್ರೀ ಭಗವತಿ ದೇವಾಲಯದ ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿಯ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು. (ವರದಿ : ದುಗ್ಗಳ ಸದಾನಂದ)










