ವಿರಾಜಪೇಟೆ ಮೇ 22 : ವಿಜ್ಞಾನ ತಂತ್ರಜ್ಞಾನ ವಾಣಿಜ್ಯ ಮತ್ತು ನಿರ್ವಹಣೆಗಳು ಒಂದೇ ದಾರದಲ್ಲಿ ಪೋಣಿಸಿರುವ ಮಣಿಗಳಂತೆ. ಹೊಸ ದೃಷ್ಟಿಕೊನದೊಂದಿಗೆ ಹೊಸ ಅವಿಷ್ಕಾರಗಳು ಹುಟ್ಟುಹಾಕುವ ಅನಿವಾರ್ಯತೆ ಯುವ ಸಮಾಜಕ್ಕೆ ಬೇಕಾಗಿದೆ ಎಂದು ಜ್ಞಾನ ಕಾವೇರಿ ಕೊಡಗು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಅಶೋಕ್ ಸಂಗಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ವಿರಾಜಪೇಟೆ ಸಂತ ಅನ್ನಮ್ಮ ಪದವಿ ಕಾಲೇಜಿನ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವತಿಯಿಂದ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ “ವಿಜ್ಞಾನ ತಂತ್ರಜ್ಞಾನ ವಾಣಿಜ್ಯ ಮತ್ತು ನಿರ್ವಹಣೆಯಲ್ಲಿ ಪ್ರಸ್ತುತ ಜಾಗತಿಕ ಮಟ್ಟದ ಹೊಸ ದೃಷ್ಟಿಕೊನ” ಎಂಬ ವಿಷಯದ ಬಗ್ಗೆ ಒಂದು ದಿನದ ಅಂತರ್ ರಾಷ್ಟ್ರೀಯ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದೇಶ ಮತ್ತು ವಿಶ್ವವು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಬಹಳಷ್ಟು ಸಾಧನೆಗೈದಿದೆ. ದಿನದಿಂದ ದಿನಕ್ಕೆ ಹೊಸ ಹೊಸ ಅವಿಷ್ಕಾರಗಳು ಉಗಮವಾಗುತ್ತಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ನೂತನವಾದ ಅವಿಷ್ಕಾರಗಳು ಉದಯವಾದರು. ಪರಿಸರಕ್ಕೆ ಮಾರಕವಾಗುವ ವಿಷಯಗಳು ವಸ್ತುಗಳಿಗೆ ಪೂರಕವಾಗಿ ಸಮಾಜವು ನಿಲ್ಲಬಾರದು. ತಂತ್ರಜ್ಞಾನ ಬಳಕೆಯು ಮಾನವ ನಿರ್ಮಿತವಾಗಿದೆ. ತಂತ್ರಜ್ಞಾನದಿಂದ ಪರಿಸರದಿಂದ ಲಭಿಸುವ ವಸ್ತುಗಳನ್ನು ಪುನರ್ ನಿರ್ಮಾಣ ಮಾಡಲು ಅಸಾಧ್ಯವಾಗಿದೆ. ಕೃತಕ ಬುದ್ದಿಮತೆಯ ತಂತ್ರಜ್ಞಾನ ಎಲ್ಲಡೆ ಪಸರಿಸಿದೆ, ಮಾನವನ ತೀಕ್ಷಣವಾದ ಬುದ್ದಿಮತೆಯ ಶಕ್ತಿಯಿಂದ ಉದಯವಾದ ಕೃತಕ ವಸ್ತುಗಳು ಜಾಗತಿಕ ವಸ್ತುವಾಗಿ ಪರಿಣಮಿಸಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕೃತಕ ಬುದ್ಧಿಮತೆಯಿಂದ ಸೃಷ್ಟಿಗೊಂಡ ವಸ್ತುಗಳು ಜೀವವಿಲ್ಲಾವಾದರು ಮಾನವ ವರ್ತಿಸುವಂತೆ ರೂಪುಗೊಳಿಸುತ್ತಾರೆ ತಂತ್ರಜ್ಞರು. ಆದರೆ ಯಾವುದೇ ವಸ್ತುಗಳು ಶಾಶ್ವತವಾಗಿರುವುದಿಲ್ಲಾ. ವಿಜ್ಞಾನದ ಒಂದು ಭಾಗವೇ ತಂತ್ರಜ್ಞಾನವಾಗಿದೆ, ವಿಜ್ಞಾನ ತಂತ್ರಜ್ಞಾನದಿಂದ ಉತ್ಪಾದನೆವಾಗುವ ವಸ್ತುಗಳಿಗೆ ಮಾರುಕಟ್ಟೆ ಒದಗಿಸಬೇಕು ಮತ್ತು ನಿರ್ವಹಣೆ ಮಾಡುವ ಗುರಿ ಬಹುಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಯುವ ಸಮೂದಾಯವು ಹೊಸ ಚಿಂತನೆಯೊಂದಿಗೆ ಸಮಾಜಮಖಿ ಪರಿಸರ ಸ್ನೇಹಿ ವಸ್ತುಗಳನ್ನು ಅವಿಷ್ಕಾರ ಮಾಡುವಲ್ಲಿ ಮುಂದಾಗಬೇಕು ಎಂದು ಕರೆ ನೀಡಿದರು.
ಕಾಲೇಜಿನಲ್ಲಿ ಆಯೋಜಿಸಿದ ಕಾರ್ಯಕ್ರಮ ಸಹಕಾರವಾಗಲು ವಿಧ್ಯಾರ್ಥಿಗಳು ಪಡೆದ ಜ್ಞಾನವನ್ನು ಸದ್ಬಳಕೆಯಾಗುವ ಗುರಿ ಹೊಂದಬೇಕು ಎಂದು ಹೇಳಿದರು.
ಮೈಸೂರಿನ ಸಂತ ಫಿಲೋಮಿನಾ ಪದವಿ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಡಾ. ರುತ್ ಶಾಂತ ಕುಮಾರಿ ಮಾತನಾಡಿ, ಜಗತ್ತು ಇಂದು ಹೊಸ ತ್ರಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಅವಿಷ್ಕಾರಗಳನ್ನು ಹುಟ್ಟುಹಾಕುತ್ತಿವೆ. ಈ ನಿಟ್ಟಿನಲ್ಲಿ ಪ್ರಕೃತಿಯಲ್ಲಿ ಕಂಡುಬರುವ ಪ್ರಾಣಿ ಸಂಕುಲಗಳ ಚಲನವಲನಗಳ ಮೇಲೆ ಅಧ್ಯಯನ ನಡೆಸಿ ಪ್ರಕೃತಿಗೆ ಪೂರಕವಾಗಿ ವಾಹನಗಳು ಮತ್ತು ಇತರ ವಸ್ತುಗಳನ್ನು ಸಿದ್ದಗೊಳಿಸಲಾಗುತ್ತಿದೆ. ಇದು ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆದ ಬದಲಾವಣೆಗಳಾಗಿವೆ. ಕೃತಕ ಬುದ್ದಿಮತೆಯಿಂದ ತಯಾರಾಗುವ ವಸ್ತುಗಳ ಬಗ್ಗೆ ಯುವ ಸಮೂಹದಲ್ಲಿ ಆಸಕ್ತಿ ಮೂಡಿದೆ. ವಿವಿಧ ಕ್ಷೇತ್ರಗಳಲ್ಲಿರುವ ಸಮಸ್ಯೆಗಳ ಬಗ್ಗೆ ಅಧ್ಯಯನಕ್ಕೆ ಮುಂದಾಗಬೇಕು ಅಲ್ಲದೆ ಪರಿಹಾರ ಕಂಡುಕೊಳ್ಳಲು ಯುವ ಜನತೆಗೆ ಸಾಧ್ಯವಾಗಬೇಕು ಎಂದು ಹೇಳಿದರು.
ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಜಗತ್ ತಿಮ್ಮಯ್ಯ ರಾಜ್ಯ ಮತ್ತು ದೇಶ ವಿದೇಶದ ವಿದ್ಯಾರ್ಥಿಗಳು ಕಳುಹಿಸಿರುವ ವಿವಿಧ ವಿಭಾಗಗಳಲ್ಲಿನ ಪ್ರಬಂಧ ಪೀಠಿಕಾ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿ, ಜಗತ್ತು ಎದುರು ನೋಡುವಂತೆ ಪ್ರಸ್ತುತ ಸಮಾಜಕ್ಕೆ ಬೇಕಾಗಿರುವ ರೀತಿಯಲ್ಲಿ ವಸ್ತು ತಯಾರಿಕೆಗೆ ಯುವ ಸಮೂಹ ಮುಂದಾಗಬೇಕು. ಆಯೋಜಿತ ಕಾರ್ಯಕ್ರಮವು ಪ್ರತಿಯೊಂದು ಕಾಲೇಜುವಿನಲ್ಲಿ ಆಯೋಜನೆಯಾಗಬೇಕು. ವಿದ್ಯಾರ್ಥಿಗಳು ಆಸಕ್ತಿಯಿಂದ ಕಲಿತು ಮುಂದಿನ ಪೀಳಿಗೆಗೆ ಧಾರೆ ಎರೆಯಬೇಕೆಂದು ಸಲಹೆ ನೀಡಿದರು.
ಸಂತ ಅನ್ನಮ್ಮ ಪದವಿ ಕಾಲೇಜು ಮತ್ತು ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ.ಫಾ. ಐಸಾಕ್ ರತ್ನಾಕರ್ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿ, ವಿಜ್ಞಾನ, ತಂತ್ರಜ್ಞಾನ ವಾಣಿಜ್ಯ ಮತ್ತು ನಿರ್ವಹಣೆಗೆ ಸಂಭಂದಿಸಿದಂತೆ ಅಂತರ್ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮ ಕಾಲೇಜಿನಲ್ಲಿ ಆಯೋಜಿಸಿರುವುದು ಸಂತೋಷದಾಯಕ ಬೆಳವಣಿಗೆಯಾಗಿದೆ. ಕಾರ್ಯಕ್ರಮದ ಪ್ರತಿಯೊಂದು ಹಂತದಲ್ಲೂ ವಿದ್ಯಾರ್ಥಿಗಳು ಭಾಗವಹಿಸಬೇಕು ಅಲ್ಲದೆ ವಿಷಯ ಮಂಡನೆಯ ವಿಷಯಗಳನ್ನು ಅರಿತು ಇತರರಿಗೆ ಅರಿವಿಕೆ ನೀಡುವ ಪ್ರಯತ್ನವಾಗಬೇಕು ಎಂದು ಹೇಳಿದರು.
ಸಂತ ಅನ್ನಮ್ಮ ಪದವಿ ಕಾಲೇಜು ಪ್ರಾಂಶುಪಾಲರಾದ ತೃಪ್ತಿ ಬೋಪಣ್ಣ ಪ್ರಾಸ್ತಾವಿಕ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಜ್ಞಾನ ಕಾವೇರಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಅಶೋಕ್ ಎಸ್. ಅಲೂರು ಅವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು, ವಿವಿಧ ಸ್ಥಳಗಳ ವಿವಿಧ ಕಾಲೇಜು ವಿದ್ಯಾರ್ಥಿಗಳ ಪ್ರಬಂಧ ಪಿಠೀಕಾ ಪುಸ್ತಕವನ್ನು ಸರ್ವ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು.
ವೇದಿಕೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಉಪನ್ಯಾಸ ನೀಡಲು ಆಗಮಿಸಿದ ಡಾ. ಜಿ.ಅಜೇಯ್ ಕುಮಾರ್, ಎಸ್.ಡಿ.ಎಂ.ಐ.ಎಂ.ಡಿ ಮೈಸೂರು ಕಾಲೇಜಿನ ಪ್ರಾದ್ಯಪಕ ಡಾ. ಮೌಸಮಿ ಸೆನ್ ಗುಪ್ತಾ, ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಪಕ ಡಾ. ಜೆ.ಜಿ. ಮಂಜುನಾಥ್, ವಾಣಿಜ್ಯ ವಿಭಾಗದ ಹೆಚ್.ಓ.ಡಿ ಕೆ.ಪಿ.ದೃಶ್ಯ , ಕಾರ್ಯಕ್ರಮ ಸಂಚಾಲಕರಾದ ಬಿ.ಡಿ.ಹೇಮಾ ಹಾಜರಿದ್ದರು.
ಕಾಲೇಜಿನ ವಿಧ್ಯಾರ್ಥಿಗಳಿಂದ ಪ್ರಾರ್ಥನೆ ನಡೆಯಿತು. ಸಂತ ಅನ್ನಮ್ಮ ಕಾಲೇಜನ ರಸಾಯನಶಾಸ್ತ್ರ ವಿಭಾಗದ ಸಹ ಪ್ರಾಧ್ಯಪಕರಾದ ಸಿ.ಎಲ್.ನಿಶಾ ಸ್ವಾಗತಿಸಿದರು, ವಾಣಿಜ್ಯ ವಿಭಾಗದ ಉಪನ್ಯಾಸಕಿ ಪೂಜಾ ಕಾರ್ಯಕ್ರಮ ನಿರೂಪಣೆ ಮಾಡಿದರು. ವಾಣಿಜ್ಯ ವಿಭಾಗದ ಸಹ ಪ್ರಾಧ್ಯಪಕರಾದ ಶಿಲ್ಪ ಸರ್ವರನ್ನು ವಂದಿಸಿದರು.
ಜಿಲ್ಲೆ, ರಾಜ್ಯ ಮತ್ತು ದೇಶದ ವಿವಿಧ ಸ್ಥಳಗಳ ಪದವಿ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ, ಸಂತ ಅನ್ನಮ್ಮ ಪದವಿ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು, ವಿವಿಧ ಕಾಲೇಜಿನ ಉಪನ್ಯಾಸಕರು, ಪದವಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ