ವಿರಾಜಪೇಟೆ ಮೇ 30 : ಬೆಂಗಳೂರಿನ ಕ್ಯಾಪಿಟಲ್ ಹೋಟೆಲ್‍ನಲ್ಲಿ ನಡೆದ ಕಾಳಿಕಾ ರಾಮಕೃಷ್ಣ ಆಶ್ರಮದ ವಾರ್ಷಿಕೋತ್ಸವದಲ್ಲಿ ವಿರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ವೈಭವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಹರ್ಷಿ ಆನಂದ್ ಗುರೂಜಿ, ಡಿ.ಆರ್ ಬಡಿಗೇರ ಹಾಗೂ ಹಲವಾರು ಗಣ್ಯ ವ್ಯಕ್ತಿಗಳು ಭಾಗವಹಿಸಿದರು.









