ಮಡಿಕೇರಿ ಮೇ 30 : ಸೋಮವಾರಪೇಟೆ ತಾಲೂಕು ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷರಾಗಿ ಸಿ.ಕೆ.ರೋಹಿತ್ ಆಯ್ಕೆಯಾಗಿದ್ದಾರೆ.
ನಾಗರಹೊಳೆ ಸಮೀಪದ ರೆಸಾರ್ಟ್‍ನಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ನೂತನ ಸಾಲಿಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಉಪಾಧ್ಯಕ್ಷರಾಗಿ ಹೆಚ್.ಎಸ್.ಯೋಗೇಶ್, ಕಾರ್ಯದರ್ಶಿಯಾಗಿ ಎಸ್.ಎಲ್.ಅಭಿನಂದನ್, ಖಜಾಂಚಿಯಾಗಿ ಡಿ.ಪಿ.ಪ್ರೀತಮ್ ಆಯ್ಕೆಯಾದರು.
ಸಭೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಎ.ಎಸ್.ಮಲ್ಲೇಶ್, ಶ್ರೀಹರಿ ಫರ್ನಾಂಡೀಸ್ ಸೇರಿದಂತೆ ಇತರರು ಇದ್ದರು.









