ಮಡಿಕೇರಿ ಮೇ 30 : ಇತಿಹಾಸ ಪ್ರಸಿದ್ಧ ಕುಂಜಿಲ ಕಕ್ಕಬ್ಬೆ ಸಮೀಪದ ವಯಕೋಲಿನಲ್ಲಿ (ಕೇರಳದ ಪುಳಿಙೋಂ ದರ್ಗಾ ಶರೀಫಿನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಔಲಿಯಾಕಳ ಹೆಸರಿನಲ್ಲಿ) ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಉರೂಸ್ ಕಾರ್ಯಕ್ರಮವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರದ್ಧಾಭಕ್ತಿಯಿಂದ ನಡೆಯಿತು.
ಉರೂಸ್ ಕಾರ್ಯಕ್ರಮದ ಭಾಗವಾಗಿ ವಯಕೋಲ್ ಮಸ್ಜಿದುಲ್ ರಹ್ಮಾನ್ ಅಂಗಳದಲ್ಲಿ ಸಾರ್ವಜನಿಕ ಸೌಹಾರ್ದ ಸಮಾವೇಶ ನಡೆಯಿತು
ಸಾಮೂಹಿಕ ಝಿಯಾರತ್, ಮೌಲಿದ್ ಪಾರಾಯಣ, ಧಾರ್ಮಿಕ ಮತ ಪ್ರಭಾಷಣ, ಹಾಗೂ ಅನ್ನದಾನ ಮುಂತಾದ ಕಾರ್ಯಕ್ರಮ ಜರುಗಿತು.
ಈ ಸಂದರ್ಭ ಕುಂಜಿಲ ಪೈನರಿ ಮುಸ್ಲಿಂ ಜಮಾಅತ್ತಿನ ಅಧ್ಯಕ್ಷ ಶೌಕತ್ ಮಕ್ಕಿ, ಖತೀಬರಾದ ನಿಝಾರ್ ಅಹ್ಸನಿ ಉಸ್ತಾದ್, ಮುಖ್ಯ ಅತಿಥಿಗಳಾಗಿ ಜಬ್ಬಾರ್ ಸಖಾಫಿ ಕೇರಳ, ವಯಕೋಲ್ ಆಡಳಿತ ಮಂಡಳಿ ಅಧ್ಯಕ್ಷ ಹಂಸ, ಇಮಾಮ್ ರಫೀಕ್ ಸಖಾಫಿ, ಕಲಿಯಂಡ ಸಂಪನ್ ಅಯ್ಯಪ್ಪ, ಸಂತು ಸುಬ್ರಮಣಿ, ಅಬ್ದುಲ್ಲಾ ಸಹದಿ, ಕುಡಿಯರ ಮುತ್ತು, ಫಖ್ರುಮಾಸ್ಟರ್, ಖಲೀಲ್, ಅಬು, ನಿಸಾರ್ ವಯಕೋಲ್ ಆಡಳಿತ ಮಂಡಳಿ ಸದಸ್ಯರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.
ಕಾರ್ಯಕ್ರಮದ ಕೂನೆಯಲ್ಲಿ ಅನ್ನದಾನ ವಿತರಿಸಲಾಯಿತು.