ವಿರಾಜಪೇಟೆ ಜೂ.24 : ಬಿಳುಗುಂದ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ ಚುನಾವಣೆಯನ್ನು ವಿಶೇಷವಾಗಿ ನಡೆಸಿದರು.
ವಿದ್ಯಾರ್ಥಿಗಳಿಗೆ ಚುನಾವಣೆಯ ಪೂರ್ವಭಾವಿ ಸಿದ್ಧತೆಯ ಬಗ್ಗೆ ಶಿಕ್ಷಕಿ ಲೀಲಾವತಿ ಮಾಹಿತಿ ನೀಡಿದರು.
ಮತಪತ್ರದಲ್ಲಿ ಅಭ್ಯರ್ಥಿಗಳಿಗೆ ಚಿಹ್ನೆಗಳನ್ನು ನೀಡಲಾಗಿತ್ತು.
ಆಧಾರ್ ಕಾರ್ಡ್ ಇದ್ದವರಿಗೆ ಮತ ಚಲಾಯಿಸಲು ಅಧಿಕಾರ, ಮತ ಪತ್ರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಗುರುತಿಸುವುದು, ಮತದಾನ ಮಾಡಿದ ಮೇಲೆ ಬೆರಳಿಗೆ ಶಾಯಿ ಹಾಕುವುದು ಹೀಗೆ ಮತದಾನ ಪ್ರಕ್ರಿಯೆಯನ್ನು ಶಿಕ್ಷಕರು ನೆರವೇರಿಸಿದರು.
ಇದೇ ಸಂದರ್ಭ ವಿದ್ಯಾರ್ಥಿಗಳಿಗೆ ಮತದಾನ ನಮ್ಮ ಹಕ್ಕು ಎಂಬ ವಿಷಯದ ಬಗ್ಗೆ ಅರಿವು ಮೂಡಿಸಲಾಯಿತು.
ಅಧ್ಯಕ್ಷಾಧಿಕಾರಿಯಾಗಿ ಮುಖ್ಯ ಶಿಕ್ಷಕಿ ಅರುಣ ಆನ್ಸಿ ಡಿಸೋಜ ಕಾರ್ಯ ನಿರ್ವಹಿಸಿದರು.
ಈ ಸಂದರ್ಭ ಶಾಲಾ ಶಿಕ್ಷಕರಾದ ಲೀಲಾವತಿ, ಲಿನ್ನಿ, ಪವಿತ್ರ ಚುನಾವಣಾ ಕಾರ್ಯವನ್ನು ನಡೆಸಿಕೊಟ್ಟರು. ಹಾಗೂ ಕಿರಣ್ ಕುಮಾರ್, ಅಲ್ಲಾಬಕ್ಸ್ ಬಡೇಘರ್, ಜಿ. ಸಾವಿತ್ರಿ ಹಾಜರಿದ್ದು, ಮತ ಎಣಿಕೆ ನಡೆಸಿದರು.










