ನಾಪೋಕ್ಲು ಜೂ.30 : ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವುದರೊಂದಿಗೆ ಮೌಲ್ಯಾಧಾರಿತವಾದ ಜೀವನ ನಡೆಸಲು ನೆರವಾಗಬೇಕು ಎಂದು ನಿವೃತ್ತ ಪ್ರಾಂಶುಪಾಲರಾದ ಡಾ. ಸುಲೋಚನಾ ನಾರಾಯಣ ಹೇಳಿದರು.
ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರು ವಿದ್ಯಾರ್ಥಿಗಳಿಗೆ ಕಲಿಕಾ ಮಟ್ಟವನ್ನು ಹಂತಹಂತವಾಗಿ ಬೆಳೆಸುತ್ತಾ ಹೋಗಬೇಕು. ವಿದ್ಯಾರ್ಥಿ ಸಂಘದ ನಾಯಕರು ಎಲ್ಲರನ್ನೂ ಪ್ರತಿನಿಧಿಸುವಂತಿರಬೇಕು. ವಿದ್ಯಾರ್ಥಿ ಜೀವನದಲ್ಲಿ ದೊರೆಯುವ ಅವಕಾಶವನ್ನು ಬಳಸಿಕೊಂಡು ಜೀವನದಲ್ಲಿ ಮುಂದೆ ಸಾಗಬೇಕು ಎಂದ ಸುಲೋಚನಾ, ವ್ಯಕ್ತಿ ಗೌರವ ಬಹಳ ಪ್ರಮುಖವಾದದ್ದು. ಸಮಾಜದಲ್ಲಿ ಉತ್ತಮ ಸ್ಥಾನಮಾನವನ್ನು ಹೊಂದಬೇಕಾದರೆ ವ್ಯಕ್ತಿ ಗೌರವವನ್ನು ಕಾಪಾಡಿಕೊಳ್ಳುವುದು ಅಗತ್ಯ. ಜೀವನದಲ್ಲಿ ಸಿಗುವ ಅವಕಾಶಗಳನ್ನು ಬಳಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಸಂಸ್ಥೆಯ ಪ್ರಾಂಶುಪಾಲರಾದ ಶಾರದಾ ಅಪ್ಪಣ್ಣ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಕರ್ತವ್ಯ ಪರರಾಗಿ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಡಾ.ಬೊಪ್ಪಂಡ ಜಾಲಿ ಬೋಪಯ್ಯ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ಕಲಿಯಂಡ ಹ್ಯಾರಿ ಮಂದಣ್ಣ, ನಿರ್ದೇಶಕರಾದ ಬಿದ್ದಾಟಂಡ ಮುದ್ದಯ್ಯ, ಪ್ರೊ.ಕಲ್ಯಾಟಂಡ ಪೂಣಚ್ಚ, ಬೊಪ್ಪಂಡ ಕುಶಾಲಪ್ಪ, ಅಪ್ಪಾರಂಡ ಅಪ್ಪಯ್ಯ, ಕೊಂಬಂಡ ಗಣೇಶ್, ಬೊಳ್ಳಚೆಟ್ಟೀರ ಸುರೇಶ್, ಅಪ್ಪಚೆಟ್ಟೋಳಂಡ ನವೀನ್ ಅಪ್ಪಯ್ಯ ಉಪಸ್ಥಿತರಿದ್ದರು.
ಶಿಕ್ಷಕಿ ಮುತ್ತುರಾಣಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಶಿಕ್ಷಕಿ ಎಂ.ಎಂ.ಕವಿತಾ ಸ್ವಾಗತಿಸಿದರು. ಶಿಕ್ಷಕಿ ಚಂದ್ರಕಲಾ ಮಹೇಶ್ ನಿರೂಪಿಸಿದರು. ಸ್ಮಿತಾ ಟಿ.ಜೆ ಅತಿಥಿಯನ್ನು ಪರಿಚಯಿಸಿ. ಬೋಳ್ಳಂಡ ಪಾರ್ವತಿ ವ0ದಿಸಿದರು.
ವಿದ್ಯಾರ್ಥಿ ಸಂಘದ ನೂತನ ಪ್ರತಿನಿಧಿಗಳು : ಶಾಲಾ ನಾಯಕಿಯಾಗಿ ಹರ್ಷಿತ ಕುಶಾಲಪ್ಪ, ಶಾಲಾ ಉಪನಾಯಕನಾಗಿ ಜೀವನ್ ಸಾತ್ವಿಕ್, ವಿದ್ಯಾರ್ಥಿ ಕಾರ್ಯದರ್ಶಿಯಾಗಿ ನಿರನ್ ನಂಜಪ್ಪ, ಶಾಲಾ ಸಾಂಸ್ಖೃತಿಕ ನಾಯಕಿಯಾಗಿ ಆಫ್ರಿನ, ಸಾಂಸ್ಕೃತಿಕ ಉಪನಾಯಕಿಯಾಗಿ ವರ್ಷ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರಿನ್ ಶಾನಾ, ಶಾಲಾ ಕ್ರೀಡಾ ನಾಯಕನಾಗಿ ಧ್ಯಾನ್ ಪೊನ್ನಪ್ಪ, ಕ್ರೀಡಾ ಉಪನಾಯಕನಾಗಿ ಶಿಮೋನ್, ಕ್ರೀಡಾ ಕಾರ್ಯದರ್ಶಿಯಾಗಿ ಕಿರೀಟ್ ಸೋಮಯ್ಯ, ಶಾಲಾ ಸ್ವಚ್ಛತಾ ನಾಯಕರಾಗಿ ಲಿಖಿತ್, ಸ್ವಚ್ಛತಾ ಉಪನಾಯಕಿಯಾಗಿ ಭೋಜಮ್ಮ ಸ್ವಚ್ಛತಾ ಕಾರ್ಯದರ್ಶಿಯಾಗಿ ದೇವಯ್ಯ ಆಯ್ಕೆಯಾದರು.
ಕನ್ನಡ ಸಂಘದ ನಾಯಕಿಯಾಗಿ ಪಿ.ಎಸ್.ದಾಕ್ಷಾಯಿಣಿ, ಇಂಗ್ಲಿಷ್ ಸಂಘದ ನಾಯಕಿಯಾಗಿ ಮಾನ್ಯ ತಂಗಮ್ಮ, ಹಿಂದಿ ಸಂಘದ ನಾಯಕನಾಗಿ ಹರ್ಷ ಕಾರ್ಯಪ್ಪ, ಗಣಿತ ಸಂಘದ ನಾಯಕನಾಗಿ ನಮೃತ್ ಗೌಡ ವಿಜ್ಞಾನ ಸಂಘದ ನಾಯಕನಾಗಿ ನಿಶಾಂತ್ ತಮ್ಮಯ್ಯ, ಸಮಾಜ ವಿಜ್ಞಾನ ಸಂಘದ ನಾಯಕನಾಗಿ ಯಶವಂತ್ ಕುಶಾಲಪ್ಪ, ಕ್ರೀಡಾ ಸಂಘದ ನಾಯಕನಾಗಿ ಅಯಿಮನ್ ಆಲಿ ಆರೋಗ್ಯ ಕ್ಲಬ್ ನಾಯಕಿಯಾಗಿ ಕಾವೇರಮ್ಮ ಆಯ್ಕೆಯಾದರು.
ವರದಿ : ದುಗ್ಗಳ ಸದಾನಂದ