ಮಡಿಕೇರಿ ಜು.2 : ಕೊಡವ ಕುಟುಂಬ ತಂಡಗಳ ನಡುವೆ ನಡೆಯಲಿರುವ 24ನೇ ವರ್ಷದ ಹಾಕಿ ಪಂದ್ಯಾವಳಿ ‘ಕುಂಡ್ಯೋಳಂಡ ಹಾಕಿ ನಮ್ಮೆ-2024’ರ ಕೈಪಿಡಿ ಬಿಡುಗಡೆ ಮಾಡಲಾಯಿತು. ವೆಸ್ಟ್ ಕೊಳಕೇರಿಯಲ್ಲಿರುವ ಕುಂಡ್ಯೋಳಂಡ ಐನ್ ಮನೆ ಆವರಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣಕೈಪಿಡಿಅನಾವರಣ ಮಾಡಿದರು.
ಬಳಿಕ ಮಾತನಾಡಿದ ಪಾಂಡಂಡ ಬೋಪಣ್ಣ, ಪಂದ್ಯಾವಳಿ ಆಯೋಜನೆ ಕೇವಲ ಒಂದು ಕುಟುಂಬದ ಜವಾಬ್ದಾರಿಯಲ್ಲ. ಎಲ್ಲರೂ ಕೈಜೋಡಿಸಿದಾಗ ಮಾತ್ರ ಯಶಸ್ವಿಯಾಗಿ ನಡೆಸಲು ಸಾಧ್ಯ. ಕೊಡವ ಹಾಕಿ ಅಕಾಡೆಮಿ ವತಿಯಿಂದ ಎಲ್ಲಾ ರೀತಿಯ ನೆರವನ್ನು ಕುಂಡ್ಯೋಳಂಡ ಕುಟುಂಬಕ್ಕೆ ನೀಡಲಾಗುವುದುಎಂದು ಭರವಸೆ ನೀಡಿದರು.
ಪಂದ್ಯಾವಳಿಗೆ ಒಂದು ವರ್ಷ ಮುಂಚಿತವಾಗಿಯೇ ಬೇಕಾದಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಆರ್ಥಿಕ ಕ್ರೋಢೀಕರಣ ವಿಚಾರದಲ್ಲಿಯೂ ಕುಟುಂಬದ ಪ್ರತಿಯೊಬ್ಬರು ಮುತುವರ್ಜಿ ವಹಿಸಬೇಕು. ಕೈಪಿಡಿಯನ್ನು ಅಚ್ಚುಕಟ್ಟಾಗಿ, ಆಕರ್ಷಕ ರೀತಿಯಲ್ಲಿ ಸಿದ್ಧಪಡಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಾಕಿ ಹಬ್ಬ ಸಮಿತಿ ಅಧ್ಯಕ್ಷ ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಮಾತನಾಡಿ, ನಮ್ಮದು ಸಣ್ಣ ಕುಟುಂಬ. ಜನಸಂಖ್ಯೆಯಲ್ಲಿಯೂ ಕಡಿಮೆ ಪ್ರಮಾಣದಲ್ಲಿದ್ದೇವೆ. ಪಂದ್ಯಾವಳಿ ಆಯೋಜನೆಯ ದೊಡ್ಡ ಜವಾಬ್ದಾರಿ ನಮ್ಮ ಮೇಲಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಚ್ಚುಕಟ್ಟಾಗಿ ಆಯೋಜನೆ ಮಾಡುತ್ತೇವೆ. ಎಲ್ಲರೂ ಹಾಕಿ ಹಬ್ಬದ ಯಶಸ್ಸಿಗೆ ಸಹಕರಿಸಬೇಕೆಂದರು.
ಹಾಕಿ ಹಬ್ಬ ಸಂಚಾಲಕ ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ ಮಾತನಾಡಿ, ನಮ್ಮದು 105 ಮಂದಿ ಸದಸ್ಯರಿರುವ ಪುಟ್ಟ ಕುಟುಂಬ. ಹಾಕಿ ನಮ್ಮೆಯಂಥ ದೊಡ್ಡ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಲು ಅಕಾಡೆಮಿಯವರ ಸಹಕಾರ ಅತ್ಯಗತ್ಯ. ಅಕಾಡೆಮಿಯ ಪ್ರತಿಯೊಬ್ಬರು ನಮ್ಮೊಂದಿಗಿದ್ದು ಜವಾಬ್ದಾರಿ ವಹಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಪಂದ್ಯಾವಳಿ ಆಯೋಜನೆಗೆ ಸರ್ಕಾರದ ನೆರವಿನ ಅಗತ್ಯವಿದೆ. ಈ ಸಂಬಂಧ ಕೊಡಗಿನ ಜನಪ್ರತಿನಿಧಿಗಳ ಸಹಕಾರ ಪಡೆದು ಸರ್ಕಾರದ ಗಮನಸೆಳೆಯಲಾಗುವುದು. ಕುಂಡ್ಯೋಳಂಡ ಹಾಕಿ ಹಬ್ಬದಲ್ಲಿ ವಾಕೋವರ್ ಇಲ್ಲದೆ ಪಂದ್ಯಾವಳಿ ನಡೆಸಬೇಕೆಂಬುದು ನಮ್ಮ ಕನಸು. 400ಕ್ಕೂ ಹೆಚ್ಚು ತಂಡಗಳ ನೋಂದಣಿ ಮಾಡಿಸಿ, ಎಲ್ಲರೂ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವಂತೆ ಮಾಡಲು ಯೋಜನೆ ಹಾಕಿಕೊಂಡಿದ್ದೇವೆ. ವಿಭಿನ್ನವಾಗಿ, ವರ್ಣರಂಜಿತವಾಗಿ ಆಯೋಜನೆಗೊಳ್ಳುವ ಮೂಲಕ ಎಲ್ಲರ ಪಾಲ್ಗೊಳ್ಳುವಿಕೆಯ ಹಬ್ಬವಾಗಬೇಕೆಂಬ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದೇವೆಂದು ಅನಿಸಿಕೆ ಹಂಚಿಕೊಂಡರು.
ಪಂದ್ಯಾವಳಿ ಆಯೋಜನೆ ಸಂಬಂಧ ಅಧಿಕೃತ ಹಕ್ಕೋಲೆ(ಅನುಮತಿ ಪತ್ರ)ಯನ್ನುಕೊಡವ ಹಾಕಿ ಅಕಾಡೆಮಿ ಪದಾಧಿಕಾರಿಗಳು ಕುಂಡ್ಯೋಳಂಡ ಹಾಕಿ ನಮ್ಮೆ ಸಮಿತಿಗೆ ಹಸ್ತಾಂತರಿಸಿದರು. ಹಾಕಿ ನಮ್ಮೆನಡೆಸುವ ಜವಾಬ್ದಾರಿ ನೀಡಿದ್ದಕ್ಕಾಗಿ ಕುಂಡ್ಯೋಳಂಡ ಕುಟುಂಬದ ಐನ್‌ಮನೆಯ ಫೋಟೋವನ್ನು ಸ್ಮರಣಿಕೆಯಾಗಿ ಹಾಕಿ ಅಕಾಡೆಮಿಗೆ ಇದೇ ಸಂದರ್ಭ ಕುಟುಂಬಸ್ಥರು ನೀಡಿದರು.
ಕೈಪಿಡಿಯಲ್ಲಿಏನಿದೆ..?
12 ಪುಟಗಳ ಕೈಪಿಡಿಯನ್ನು ವಿನ್ಯಾಸಗಾರ ಕುಂಡ್ಯೋಳಂಡ ರೋಶನ್‌ಕಾರ್ಯಪ್ಪ ತಯಾರಿಸಿದ್ದಾರೆ. ಕೊಡವರ ಸಾಂಪ್ರದಾಯಿಕ ಕುಪ್ಯಚ್ಯಾಲೆಯ ಬಣ್ಣವನ್ನು ಹೋಲುವಂತೆ ಕೈಪಿಡಿ ವಿನ್ಯಾಸಗೊಳಿಸಲಾಗಿದೆ. ಒಳಪಟುಗಳಲ್ಲಿ ಸಮುದಾಯದ ಒಗ್ಗಟ್ಟನ್ನು ಬಿಂಬಿಸುವಂತೆ ವೃತ್ತಾಕಾರದಲ್ಲಿ ಚಿತ್ರಗಳ ಜೋಡಣೆ ಮಾಡಲಾಗಿದೆ. ಹಾಕಿ ಆಟದ ಇತಿಹಾಸ ಕೊಡವರ ಹಿನ್ನೆಲೆ, ಆಚರಣೆಗಳು, ಹಾಕಿ ಮತ್ತುಕೊಡವರ ನಡುವಿನ ಸಂಬಂಧ, ಕೊಡಗಿನ ಒಲಿಂಪಿಯನ್‌ಗಳ ಮಾಹಿತಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರ ಚಿತ್ರಗಳು, ಕಾಫಿ, ಇಗ್ಗುತ್ತಪ್ಪ ದೇವಾಲಯ, ಊರಿನಲ್ಲಿ ಆರಾಧಿಸುವ ದೇವರುಗಳ ವಿವರಣೆ, ಕುಟುಂಬದ ಐನ್‌ಮನೆ ವಿವರ, ಕಾರೋಣ, ಅಜ್ಜಪ್ಪನ ಕುರಿತಾದ ಮಾಹಿತಿ, ಕುಂಡ್ಯೋಳಂಡ ಕುಟುಂಬದ ಪರಿಚಯವನ್ನು ಸಂಕ್ಷಿಪ್ತವಾಗಿ ಮಾಡಲಾಗಿದೆ.
ಕುಟುಂಬದ ಹಿರಿಯರಾದ ಕುಂಡ್ಯೋಳಂಡ ಮುತ್ತಪ್ಪಅಧ್ಯಕ್ಷತೆ ವಹಿಸಿದ್ದರು. ಹಾಕಿ ಅಕಾಡೆಮಿಕಾರ್ಯಾಧ್ಯಕ್ಷ ಮೇಕೇರಿರರವಿ ಪೆಮ್ಮಯ್ಯ, ಉಪಾಧ್ಯಕ್ಷರಾದ ಬಡಕಡ ದೀನಾ ಪೂವಯ್ಯ, ಮಾದಂಡ ಎಸ್. ಪೂವಯ್ಯ, ಕುಕ್ಕೇರ ಜಯಚಿಣ್ಣಪ್ಪ, ಗೌರವ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್, ಜಂಟಿ ಕಾರ್ಯದರ್ಶಿ ಚೈಯ್ಯಂಡ ಸತ್ಯಗಣಪತಿ, ಅಕಾಡೆಮಿ ನಿರ್ದೇಶಕರಾದ ಚೇನಂಡ ಸುರೇಶ್ ನಾಣಯ್ಯ, ಕುಲ್ಲೇಟಿರ ಅರುಣ್ ಬೇಬ ಮುಂತಾದವರು ಈ ಸಂದರ್ಭ ಇದ್ದರು.
ಕುಂಡ್ಯೋಳಂಡ ಹೇಮ ಪ್ರಾರ್ಥಿಸಿದರು. ಕುಂಡ್ಯೋಳಂಡ ಹಾಕಿ ನಮ್ಮೆ ಸಮಿತಿ ಅಧ್ಯಕ್ಷ ರಮೇಶ್ ಮುದ್ದಯ್ಯ ಸ್ವಾಗತಿಸಿದರು. ಕುಂಡ್ಯೊಳಂಡ ವಿಶು ಪೂವಯ್ಯ ನಿರೂಪಿಸಿದರು. ಕುಂಡ್ಯೋಳಂಡ ಸುರೇಶ್ ಉತ್ತಪ್ಪ ವಂದಿಸಿದರು. (ಚಿತ್ರ, ವರದಿ : ದುಗ್ಗಳ ಸದಾನಂದ)
Breaking News
- *ಕುಶಾಲನಗರ ಕಳವು ಪ್ರಕರಣ : ಇಬ್ಬರು ಆರೋಪಿಗಳ ಬಂಧನ*
- *ನ.17 ರಂದು ಎಲ್ಕೆಜಿಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗಾಗಿ ಮಡಿಕೇರಿಯಲ್ಲಿ ಚಿತ್ರಕಲಾ ಸ್ಪರ್ಧೆ*
- *ಮಿನಿ ಒಲಿಂಪಿಕ್ ಕ್ರೀಡಾಕೂಟಕ್ಕೆ ಕೊಡಗು ಮರ್ಕರ ಟೆಕ್ವಾಂಡೋ ಕ್ಲಬ್ನ ವಿದ್ಯಾರ್ಥಿಗಳು ಆಯ್ಕೆ*
- *ಅರೆಕಾಡಿನಲ್ಲಿ ಗಮನ ಸೆಳೆದ ‘ನಾಡೊರ್ಮೆ’ ಕಾರ್ಯಕ್ರಮ : ಕೊಡವ ಸಂಸ್ಕೃತಿ-ಸಾಹಿತ್ಯ ಬೆಳವಣಿಗೆಗೆ ಮತ್ತಷ್ಟು ಶ್ರಮಿಸಿ : ಶಾಸಕ ಡಾ.ಮಂತರ್ ಗೌಡ*
- *ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ಯುವ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ : ವಿದ್ಯಾರ್ಥಿಗಳು ಮೌಲ್ಯಯುತ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಿ : ಎಸ್ಪಿ ಕೆ.ರಾಮರಾಜನ್*
- *”ಜೇಡ್ಲ ಗೋಕುಲ ತಿಲಕ” ಪ್ರಶಸ್ತಿಗೆ ಅರ್ಜಿ ಆಹ್ವಾನ*
- *ಕುಶಾಲನಗರ- ಶ್ರೀರಂಗಪಟ್ಟಣ ರಸ್ತೆ ಕಾಮಗಾರಿ ಶೀಘ್ರ ಪೂರ್ಣ : ಸಂಸದ ಯದುವೀರ್ ಭರವಸೆ*
- *ಹಾಕತ್ತೂರು, ಮೇಕೇರಿಯಲ್ಲಿ ಕಾರ್ಯಕರ್ತರ ಸಭೆ ನಡೆಸಿದ ಸಂಸದ ಯದುವೀರ್*
- *ನ.26 ರಂದು ಸಿಎನ್ಸಿಯಿಂದ ಕೊಡವ ನ್ಯಾಷನಲ್ ಡೇ ಮತ್ತು ಸಂವಿಧಾನ ದಿನಾಚರಣೆ*
- *ನಾಪೋಕ್ಲು : ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ*