ಮಡಿಕೇರಿ ಜು.4 : ಬಾಳೆಲೆ ವಿಜಯಲಕ್ಷ್ಮಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಕಲ್ಲಹಳ್ಳ ವಲಯ ಅರಣ್ಯ ಇಲಾಖೆಯಿಂದ ವಿಜಯಲಕ್ಷ್ಮಿ ಪ್ರೌಢಶಾಲೆಯ ಪರಿಸರ ಸಂಘದ ಸಹಕಾರದೊಂದಿಗೆ ವಿದ್ಯಾಸಂಸ್ಥೆಯ ಆವರಣದಲ್ಲಿ ಮೂವತ್ತಕ್ಕೂ ಹೆಚ್ಚು ವಿವಿಧ ಸಸಿಗಳನ್ನು ನೆಡಲಾಯಿತು.
ವಿದ್ಯ ಸಂಸ್ಥೆಯ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಮಾತನಾಡಿ, ಸಸಿಗಳನ್ನು ನೆಡುವ ಜೊತೆ ಜೊತೆಗೆ ವಿದ್ಯಾರ್ಥಿಗಳು ಪರಿಸರದ ಸಂರಕ್ಷಣೆಗೆ ವಿಶೇಷ ಕಾಳಜಿ ವಹಿಸಿ ನೆಟ್ಟ ಗಿಡದ ಪಾಲನೆ ಪೋ ಷಣೆಯನ್ನು ಪ್ರತಿ ಮಾಡಬೇಕೆಂದು ಕರೆ ನೀಡಿದರು.
ಸಂಸ್ಥೆಯ ಕಾರ್ಯದರ್ಶಿ ಚಿಮ್ಮಣಮಾಡ ಕೃಷ್ಣಗಣಪತಿ ಮಾತನಾಡಿ, ಅರಣ್ಯ ಪ್ರದೇಶದಲ್ಲಿ ತೇಗದ ತೊಪುಗಳನ್ನು ಬೆಳೆಸುವ ಬದಲಾಗಿ ವಿವಿಧ ಪ್ರಬೇಧಗಳ ಮರಗಳನ್ನು ಬೆಳೆಸಿದರೆ ಪ್ರಾಣಿ ಪಕ್ಷಗಳಿಗೆ ಪೂರಕ ವಾತಾವರಣ ಸೃಷ್ಟಿ ಮಾಡಬಹುದೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಿದ್ಯ ಸಂಸ್ಥೆಯ ಸಹ ಕಾರ್ಯದರ್ಶಿ ಪೊಡಮಾಡ ಮೋಹನ್, ಪ್ರಾಂಶುಪಾಲ ಪ್ರಭು, ಅರಣ್ಯ ಇಲಾಖೆ ಉಪವಲಯ ಅರಣ್ಯ ಅಧಿಕಾರಿಗಳಾದ ಯೋಗೇಶ್, ಬಸಪ್ಪ, ವೀರಶ್ ಪಾಟೀಲ್, ಪ್ರೌಢಶಾಲಾ ವಿಭಾಗ ಪರಿಸರ ಸಂಘದ ಸಂಚಾಲಕ ರಾಘವೇಂದ್ರ, ಶಿಕ್ಷಕರಾದ ಸುಬ್ಬಯ್ಯ. ತಿಮ್ಮರಾಜು, ಪಡಿಞರಂಡ ಪ್ರಭುಕುಮಾರ್, ಕಿಸಾನ್ ಮುಂತಾದವರು ಹಾಜರಿದ್ದರು.









