ನಾಪೋಕ್ಲು ಜು.7 : ಬೆಟ್ಟಗೇರಿ ಶ್ರೀ ಭಗವತಿ ದೇವಾಲಯದ ಜೀರ್ಣೋದ್ಧಾರ ಕಾರ್ಯ ಶ್ರದ್ಧಾಭಕ್ತಿಯಿಂದ ಜರುಗಿತು.
ಮುಂಜಾನೆಯಿಂದ ಶ್ರೀ ಮಹಾಗಣಪತಿ ಹೋಮ, ನೂತನ ತೆರೆದ ಬಾವಿಯ ಗಂಗಾ ಪೂಜೆ, ತುಳಸಿ ಪೂಜೆ, ಶ್ರೀ ಭಗವತಿ ದುರ್ಗಾದೇವಿಗೆ ಕಳಶಾಭಿಷೇಕ ಸೇರಿದಂತೆ ವಿವಿಧ ಪ್ರತಿಷ್ಠಾಪನೆ ಪೂಜಾ ಕೈಂಕರ್ಯಗಳು ಜರುಗಿದವು.
ಪುರಾತನ ಇತಿಹಾಸವಿರುವ ಶ್ರೀ ಭಗವತಿ ದೇವಸ್ಥಾನಕ್ಕೆ ರಸ್ತೆ ಸಂಪರ್ಕ ಕುಡಿಯುವ ನೀರಿನ ವ್ಯವಸ್ಥೆ ವಿದ್ಯುತ್ ವ್ಯವಸ್ಥೆ, ದೇವಸ್ಥಾನದ ಜೀರ್ಣೋದ್ಧಾರ ದೇವರ ಪುನರ್ ಪ್ರತಿಷ್ಠಾಪನೆ, ದೇವಾಲಯದ ಒಳಾಂಗಣದಲ್ಲಿ ದೇವರ ಅಭಿಷೇಕಕ್ಕೆ ನೂತನ ತೆರೆದ ಬಾವಿ ನಿರ್ಮಿಸಲಾಗಿದೆ.
ಶ್ರೀ ಪೌಡಂಡ ಡಾಲಿ ಭೀಮಯ್ಯ ಅವರ ಅಧ್ಯಕ್ಷತೆಯ ದೇವಸ್ಥಾನದ ಆಡಳಿತ ಮಂಡಳಿಯ ಶ್ರಮ ಹಾಗೂ ದಾನಿಗಳ ಸಹಾಯದಿಂದ ದುರ್ಗಮ ಹಾದಿಯಲ್ಲಿ ಶಿಥಿಲಾವಸ್ಥೆಯಲ್ಲಿದ್ದ ದೇವಸ್ಥಾನವನ್ನು ವೈಭವೀಕರಿಸಿ ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಅನುಕೂಲವಾಗುವಂತೆ ವ್ಯವಸ್ಥೆ ಕಲ್ಪಿಸುವಲ್ಲಿ ಆಡಳಿತ ಮಂಡಳಿ ಯಶಸ್ವಿಯಾಗಿದೆ.
ದೇವಸ್ಥಾನದ ಪ್ರಧಾನ ಅರ್ಚಕ ರಾಜಶೇಖರ್ ನೇತೃತ್ವದಲ್ಲಿ ತಂತ್ರಿಗಳಾದ ರಾಧಾಕೃಷ್ಣ ಭಟ್ ಚೊಕ್ಕಾಡಿ ಜೋಗಿಯಡ್ಕ ಸುಳ್ಯ ಸಕಲ ಪೂಜಾ ವಿಧಿ ವಿಧಾನಗಳು ನಡೆದವು.
ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿ ಪದಾಧಿಕಾರಿಗಳು ಸದಸ್ಯರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು.
ವರದಿ : ದುಗ್ಗಳ ಸದಾನಂದ.