ಮಡಿಕೇರಿ ಜು.8 : ಹೈಟೆಕ್ ಹಣೆಪಟ್ಟಿಯ ಮಡಿಕೇರಿ ಮಾರುಕಟ್ಟೆ ಕಾರ್ಯಾರಂಭ ಮಾಡಿ ಕೆಲವು ವರ್ಷಗಳೇ ಕಳೆದಿದೆ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಲಾದ ಈ ಬೃಹತ್ ಕಟ್ಟಡದಲ್ಲಿ ಕನಿಷ್ಠ ಮೂಲಭೂತ ಸೌಲಭ್ಯಗಳಿಲ್ಲದೆ ವರ್ತಕರು ಹಾಗೂ ಗ್ರಾಹಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಜಾ ತರಕಾರಿ ಮತ್ತು ನಿತ್ಯ ಬಳಕೆಯ ವಸ್ತುಗಳಿಗಾಗಿ ಮಡಿಕೇರಿ ತಾಲ್ಲೂಕಿನ ಹೆಚ್ಚಿನ ಗ್ರಾಹಕರು ಶುಕ್ರವಾರದ ಸಂತೆಯನ್ನೇ ಅವಲಂಬಿಸಿದ್ದಾರೆ. ಪಾಳುಬಿದ್ದಿದ್ದ ಮಾರುಕಟ್ಟೆಯನ್ನು ಕೆಡವಿ ಕೋಟಿ ಕೋಟಿ ಖರ್ಚು ಮಾಡಿ ಹೈಟೆಕ್ ಮಾರುಕಟ್ಟೆಯನ್ನು ನಿರ್ಮಿಸಲಾಗಿದೆ. ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಯಿಂದಲೂ ವ್ಯಾಪಾರಿಗಳು ಇಲ್ಲಿಗೆ ಆಗಮಿಸುತ್ತಾರೆ. ಇವರಲ್ಲಿ ಮಹಿಳಾ ವ್ಯಾಪಾರಿಗಳೇ ಹೆಚ್ಚು ಎನ್ನುವುದು ಇಲ್ಲಿ ಗಮನಾರ್ಹ.
ಮಡಿಕೇರಿ ನಗರದಲ್ಲಿರುವ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವವರು ನೆಲ ಬಾಡಿಗೆ ಎಂದು ರೂ.250 ನ್ನು ಪಾವತಿಸಬೇಕಾಗುತ್ತದೆೆ. ಸಂತೆ ನಡೆಯುವ ಹಿಂದಿನ ರಾತ್ರಿಯೇ ಬರುವ ವ್ಯಾಪಾರಸ್ಥರು ತಮ್ಮ ನಿತ್ಯ ಕರ್ಮಗಳಿಗಾಗಿ ಮಾರುಕಟ್ಟೆಯ ಸಮೀಪವಿರುವ ನಗರಸಭೆಯ ಸಾರ್ವಜನಿಕ ಶೌಚಾಲಯವನ್ನೇ ಅವಲಂಬಿಸಿದ್ದಾರೆ. ಇಲ್ಲಿನ ಪರಿಸ್ಥಿತಿಯನ್ನು ಗಮನಿಸಿದರೆ ಇದು ನಗರಸಭೆಯ ಆಡಳಿತ ಮಂಡಳಿಗೇ ಪ್ರೀತಿ ಎನ್ನುವಂತ್ತಿದೆ. ಸ್ವಚ್ಛ ಭಾರತ್ ಅಭಿಯಾನ ಕೇವಲ ಪ್ರಚಾರಕಷ್ಟೇ ಸೀಮಿತವೇ ಎನ್ನುವ ಪ್ರಶ್ನೆ ಕಾಡುತ್ತದೆ.
ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಗಬ್ಬೆದ್ದು ನಾರುತ್ತಿರುವ ನಿರ್ವಹಣೆ ಇಲ್ಲದ ಶೌಚಾಲಯ, ಶುಚಿತ್ವಕ್ಕೆ ಆದ್ಯತೆ ನೀಡದ ಮಾರುಕಟ್ಟೆ ಆವರಣ, ಇದೆಲ್ಲವೂ ನಗರಸಭೆಯ ಕಾರ್ಯವೈಖರಿಗೆ ಕನ್ನಡಿ ಹಿಡಿದಂತ್ತಿದೆ. ತರಕಾರಿ, ದಿನಸಿ, ಸೊಪ್ಪು, ಮಾಂಸ, ಮೀನು ಮುಂತಾದವುಗಳನ್ನು ನೆಮ್ಮದಿಯಿಂದ ಮಾರಾಟ ಮಾಡಲಾಗದ ದುಸ್ಥಿತಿ ಇಲ್ಲಿದೆ. ಬೀಡಾಡಿ ಜಾನುವಾರುಗಳು ಮತ್ತು ಬೀದಿ ನಾಯಿಗಳು ಸಂತೆ ದಿನ ಮಾರುಕಟ್ಟೆಯೊಳಗೆ ನುಗ್ಗಿ ಅಡಚಣೆ ಉಂಟು ಮಾಡುತ್ತವೆ.
ಕೊಡಗು ಜಿಲ್ಲೆಯಾದ್ಯಂತ ಮಾರುಕಟ್ಟೆಯ ದಿನಗಳಲ್ಲಿ ವ್ಯಾಪಾರ ಮಾಡುವ ಮಹಿಳೆಯೊಬ್ಬರು “ನಾವು ಕಂಡಿರುವ ಎಲ್ಲಾ ಮಾರುಕಟ್ಟೆಗಳಿಗಿಂತ ಮಡಿಕೇರಿ ನಗರದ ಮಾರುಕಟ್ಟೆ ಅತ್ಯಂತ ಅವ್ಯವಸ್ಥೆಯಿಂದ ಕೂಡಿದೆ. ಮೂಲಭೂತ ಸೌಲಭ್ಯಗಳಿಲ್ಲದ ಇಂತಹ ಮಾರುಕಟ್ಟೆಯನ್ನು ಎಲ್ಲೂ ನೋಡಿಲ್ಲ” ಎಂದು ಬೇಸರ ವ್ಯಕ್ತಪಡಿಸುತ್ತಾರೆ.
ನಗರಸಭೆಯ ಅಧಿಕಾರಿಗಳು ವಾರಕ್ಕೆ ಒಂದು ಬಾರಿಯಾದರೂ ಮಾರುಕಟ್ಟೆಗೆ ಭೇಟಿ ನೀಡಿ ಮೂಲಭೂತ ಸೌಲಭ್ಯಗಳ ಬಗ್ಗೆ ಗಮನ ಹರಿಸಬೇಕು. ಸುಂಕ ಪಾವತಿಸುವುದರಿಂದ ವ್ಯಾಪಾರಿಗಳ ಬೇಕು, ಬೇಡಗಳ ಬಗ್ಗೆ ಆಸಕ್ತಿ ತೋರಬೇಕು. ಮಾರುಕಟ್ಟೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು, ಕನಿಷ್ಠ ಶುದ್ಧ ಕುಡಿಯುವ ನೀರು ಮತ್ತು ಶುಚಿತ್ವದಿಂದ ಕೂಡಿದ ಶೌಚಾಲಯದ ವ್ಯವಸ್ಥೆಯನ್ನಾದರು ಮಾಡಬೇಕು ಎಂದು ವ್ಯಾಪಾರಿಗಳು ಒತ್ತಾಯಿಸಿದ್ದಾರೆ.
ಹೈಟೆಕ್ ಮಾರುಕಟ್ಟೆ ಎಂಬ ಹಣೆಪಟ್ಟಿ ಇದ್ದರೆ ಸಾಲದು, ವ್ಯಾಪಾರಿಗಳ ಹಾಗೂ ಗ್ರಾಹಕರ ಹಿತಾಸಕ್ತಿಯನ್ನು ಕೂಡ ಕಾಪಾಡಬೇಕು. ಮುಖ್ಯವಾಗಿ ಈ ಬಗ್ಗೆ ನಗರಸಭೆಗೆ ಕಾಳಜಿ ಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
(ಬರಹ : ಜಯಂತಿ ರೈ, ಮಡಿಕೇರಿ)