ಮಡಿಕೇರಿ ಜು.26 : ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಸರಹದ್ದಿನಲ್ಲಿ ನಿಷೇಧಿತ ಮಾದಕ ವಸ್ತು ಮಾರಟ ಮಾಡುತ್ತಿದ್ದ ಎಂಟು ಮಂದಿಯನ್ನು ಕೊಡಗು ಜಿಲ್ಲಾ ಪೊಲೀಸರು ಬಂಧಿಸಿ, 1 ಕೆ.ಜಿ 243 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಅರೇಕಾಡು ನಿವಾಸಿ ರಶೀದ್ (23), ಒಂಟಿಯಾಂಗಡಿ ನಿವಾಸಿ ಹೆಚ್.ಆರ್ ಸುದೀಶ್ (23), ಮೈಸೂರಿನ ಕೆಸಿಪಿ ಕಾಲೋನಿ ನಿವಾಸಿ ಇಮ್ರಾನ್ ಖಾನ್ (35), ಮುರ್ತಾಮುಡಿಯ ಎಂ.ಪ್ರಕಾಶ್ (24), ಚೇರಂಬಾಂಣೆಯ ಹೆಚ್.ಎಂ.ಶಾಂತಕುಮಾರ್ (27), ಕಡಗದಾಳುವಿನ ಎಸ್.ಎಂ.ಸಜೀರ್ (37), ಎಂ.ಇ.ನಿಯಾಜ್ (35), ಮೈಸೂರಿನ ಶಾಂತಿನಗರ ನಿವಾಸಿ ಇಮ್ರಾನ್ ಖಾನ್ (46) ಎಂಬುವವರೇ ಬಂಧಿತ ಆರೋಪಿಗಳು.
ಕದನೂರು ನಾಪೋಕ್ಲು ರಸ್ತೆ ಜಂಕ್ಷನ್ ಬಳಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಟ ಮಾಡುತ್ತಿರುವ ಖಚಿತ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಿ ಆರೋಪಿಗಳಿಂದ 1 ಕೆ.ಜಿ 243 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.
ವಿರಾಜಪೇಟೆ ವೃತ್ತ ಸಿಪಿಐ ಬಿ.ಎಸ್.ಶಿವರುದ್ರಪ್ಪ, ಮತ್ತು ಪಿಎಸ್‌ಐ ಮಂಜುನಾಥ.ಸಿ.ಸಿ, ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಳ್ಳಲಾಗಿತ್ತು.
ಪ್ರಕರಣದಲ್ಲಿ ಕಾರ್ಯನಿರ್ವಹಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯಕ್ಷಮತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಶ್ಲಾಘಿಸಿದ್ದಾರೆ.