ಮಡಿಕೇರಿ ಆ.22 : ಅಮೇರಿಕನ್ ಕೌನ್ಸಿಲ್ ಆಫ್ ಟ್ರೈನಿಂಗ್ ಅಂಡ್ ಡೆವಲಪ್‌ಮೆಂಟ್ (ACTD,USA) ಸಹಯೋಗದೊಂದಿಗೆ ಮೈಸೂರಿನ ಎಎಂಸಿಎಡಿ ಸಂಸ್ಥೆಯಲ್ಲಿ ನಡೆದ ಪದವಿ ಪ್ರಮಾಣ ಘಟಿಕೋತ್ಸವದಲ್ಲಿ ಸುಂಟಿಕೊಪ್ಪ ದ ಸ್ವಸ್ಥ ಶಾಲೆಯಲ್ಲಿ ಸಿಬಿಆರ್ ಸಂಯೋಜಕ ಹಾಗೂ ಸಮಾಜ ಕಾರ್ಯಕರ್ತ ಎಸ್.ಮುರುಗೇಶ್ ಅವರಿಗೆ “ಜೀವನ ಕೌಶಲ್ಯದ ಉತ್ತಮ ತರಬೇತುದಾರ” ಎಂಬ ಪದವಿ ಪ್ರದಾನ ಮಾಡಲಾಯಿತು.
ಮೈಸೂರಿನ AMCAD ಸೆಂಟರ್ ಆಫ್ ಎಕ್ಸಲೆನ್ಸ್‌ನ ಅಂತರರಾಷ್ಟ್ರೀಯ ಪ್ರಮಾಣೀಕೃತ “ಲೈಫ್‌ಸ್ಕಿಲ್ ಟ್ರೈನರ್” ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಕ್ಕಾಗಿ ಮುರುಗೇಶ್ ಅವರನ್ನು ಗೌರವಿಸಿ ಪದವಿಯನ್ನು ನೀಡಲಾಯಿತು.
ಈ ಸಂದರ್ಭ ಬೆಂಗಳೂರಿನ ಕೃಷಿ ವಿಶ್ವ ವಿದ್ಯಾನಿಲಯದ ಉಪ ಕುಲಪತಿ ಸುರೇಶ್, ಜೆಸಿಐ ನ ಅಂತರರಾಷ್ಟ್ರೀಯ ತರಬೇತುದಾರ ಟಿ.ವಿ.ಎನ್ ಮೂರ್ತಿ, ಪರಿವರ್ತನ ಶಾಲೆಯ ಡೀನ್, ಜೆಸಿಐ ನ ಅಂತರರಾಷ್ಟ್ರೀಯ ತರಬೇತುದಾರ, ರವಿ ಪುರಸ್ಕಾರ್ ಪ್ರಶಸ್ತಿ ಪುರಸ್ಕೃತ ಚೇತನ್ ರಾಮ್, AMCAD ಸಂಸ್ಥೆಯ ಮುಖ್ಯಸ್ಥರಾದ ಶಾರದ ಚೇತನ್ ರಾಮ್ , ಹೆಸರಾಂತ ವಾಗ್ಮಿ ಗುಂಡೂರಾವ್, ನಿವೃತ್ತ ಸೈನಿಕ ಲೆಫ್ಟಿನೆಂಟ್ ರಂಜನ್ ರಾಮ್, ಯೋಗ ಪಟು ಮತ್ತು ಆಧ್ಯಾತ್ಮಿಕ ತರಬೇತುದಾರ ಕುಮಾರ್ ಅನಿಸ್, ತರಬೇತುದಾರರಾದ ಸಂದೀಪ್, ಶ್ರೀಹರಿ ಸೇರಿದಂತೆ ಕರ್ನಾಟಕದ 34 ಜಿಲ್ಲೆಯ ನೂರಾರು ತರಬೇತುದಾರರು ಹಾಜರಿದ್ದರು.