ಮಡಿಕೇರಿ ಸೆ.3 : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್, ಕುಶಾಲನಗರ ವಲಯ ಹಾಗೂ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಹಾಗೂ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ವಲಯ ಮಟ್ಟದ ಕೌಟುಂಬಿಕ ಸೌಹಾರ್ದತೆ ಮತ್ತು ಗ್ರಾಮ ಸುಭಿಕ್ಷೆ ಕಾರ್ಯಕ್ರಮ ಕುಶಾಲನಗರದ ಎ.ಪಿ.ಸಿ.ಎಮ್.ಎಸ್ ಹಾಲ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಿ, ಸಹಕಾರ ಕ್ಷೇತ್ರಗಳಲ್ಲಿ ಸ್ವ-ಸಹಾಯ ಸಂಘಗಳು ಸಾರ್ವಜನಿಕರಿಗೆ ಯಾವ ರೀತಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಹಕರಿಸುತ್ತಿದೆ ಎಂಬ ವಿಚಾರವಾಗಿ ಪ್ರಸ್ತಾಪಿಸಿದರು.
ಸಂಘಗಳು ಸದಸ್ಯರ ಹಾಗೂ ಗ್ರಾಮಭಿವೃದ್ಧಿಯಲ್ಲಿ ಉತ್ತಮವಾಗಿ ಕಾರ್ಯಾಚರಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ ನಲ್ಲಿ ಕಾಯ್ದಿರಿಸಲಾಗಿದ್ದ ಆರೋಗ್ಯ ವಿಮೆ, ಸಂಘದಿಂದ ವ್ಯವಹಾರಗಳ ಮೇಲಿನ ಸಾಲ, ಸಂಘದ ಸದಸ್ಯರ ಮಕ್ಕಳ ವಿದ್ಯಾರ್ಥಿ ವೇತನ ಮತ್ತು ಸಂಘದ ಸದಸ್ಯರ ಜಾಮೀನುದಾರರ ಅಥವಾ ಸದಸ್ಯರ ಅಕಾಲಿಕ ಮರಣ ಉಂಟಾದ ಸಂದರ್ಭ ನೀಡುವ ಸಾಲ ಮನ್ನ ಮೊದಲಾದ ಅನುದಾನಗಳ ಪ್ರಮಾಣಪತ್ರಗಳನ್ನು ಶಾಸಕರು ಟ್ರಸ್ಟ್ ನ ಅಧೀನದಲ್ಲಿ ಬರುವ ವಿವಿಧ ಸಂಘಗಳ ಸದಸ್ಯರಿಗೆ ವಿತರಿಸಿದರು.
ಈ ಸಂದರ್ಭ ವೇದಿಕೆಯಲ್ಲಿ ವರಮಹಾಲಕ್ಷ್ಮಿ ಪೂಜಾ ಸಮಿತಿಯ ವಲಯಧ್ಯಕ್ಷರಾದ ರಾಧ, ಕೆ.ಪಿ.ಸಿ.ಸಿ ಸದಸ್ಯರಾದ ಮಂಜುನಾಥ್ ಗುಂಡೂರಾವ್, ಪ್ರೆಸ್ ಕ್ಲಬ್ ನ ಪ್ರಮುಖರಾದ ವಿ.ಎನ್. ಚಂದ್ರಮೋಹನ್, ಪ್ರಮುಖರಾದ ಪುಂಡರಿಕಾಕ್ಷ ಹಾಗೂ ಪದಾಧಿಕಾರಿಗಳು ಮತ್ತು ಸಂಘದ ಸದಸ್ಯರುಗಳು, ಹಿತೈಷಿಗಳು ಹಾಜರಿದ್ದರು.