Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ರಾಜ್ಯ ಬಜೆಟ್ ಕೊಡಗಿನ ಅಭಿವೃದ್ಧಿಗೆ ಪೂರಕವಾಗಿರಲಿ : ಬಿಜೆಪಿ ಒತ್ತಾಯ*
  • *ಬೈಲುಕುಪ್ಪೆಯಲ್ಲಿ ವಿಶ್ವದ ಅತಿ ದೊಡ್ಡ ಚಿತ್ರ ಪರದೆ ಅನಾವರಣ*
  • *ಸಾಧಿಸಲು ಹಳ್ಳಿ ನಗರ ಮುಖ್ಯವಲ್ಲ, ಬದಲಿಗೆ ಸಾಧಿಸಲು ವಾತವರಣ ಸೃಷ್ಟಿ ಮಾಡುವುದು ಮುಖ್ಯವಾಗಬೇಕು: ಪೂಜಾ ಸಜೇಶ್: ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಭಿರಕ್ಕೆ ಚಾಲನೆ: ಸೇವಾರ್ಥ ಮನೋಭಾವದಿಂದ ರಾಷ್ಟೃ ನಿರ್ಮಾಣ ಮಾಡುವತ್ತ ಗಮನ ಹರಿಸುವಂತಾಗಬೇಕು:ಗಣ್ಯರ ಅಭಿಮತ*
  • *ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ಗಮನಹರಿಸಿ: ಡಾ.ಮಂತರ್ ಗೌಡ*
  • *ಶಕ್ತಿ ಗೋಪಾಲಕೃಷ್ಣ ರಸ್ತೆ ನಾಮಫಲಕ ಉದ್ಘಾಟನೆ*
  • *ವೃತ್ತಿಪರ ಕೋರ್ಸ್‌ಗಳ ಶುಲ್ಕ ಪಾವತಿಗೆ ಕೆಇಎ ಕಾಲಾವಕಾಶ ವಿಸ್ತರಣೆ: 9 ಸಾವಿರ ಅಭ್ಯರ್ಥಿಗಳಿಗೆ ಕೊನೆಯ ಚಾನ್ಸ್*
  • *’ಟಾಕ್ಸಿಕ್’ ರಿಲೀಸ್ ಡೇಟ್ ಚೇಂಜ್: ‘ಟಾಕ್ಸಿಕ್’ ಎದುರು ನಿಲ್ಲುತ್ತಾ ವರುಣ್ ಧವನ್ ಸಿನಿಮಾ? ಚಿತ್ರತಂಡದ ಮುಂದಿನ ನಡೆ ಏನು?*
  • *ತಿರುಪತಿ ದರ್ಶನಕ್ಕೆ ತೆರಳುತ್ತಿದ್ದ ಬೆಂಗಳೂರಿನ ಒಂದೇ ಕುಟುಂಬದ ಐವರು ಸಾವು: ಚಿತ್ತೂರು ಬಳಿ ಲಾರಿಗೆ ಕಾರು ಡಿಕ್ಕಿ!*
  • *ಯುರೋಕಿಡ್ಸ್ ಮಡಿಕೇರಿ ಪಬ್ಲಿಕ್ ಶಾಲೆಯಲ್ಲಿ ‘ಟ್ಯಾಲೆಂಟ್ ಡಿಸ್ಪ್ಲೇ ಮತ್ತು ಗ್ರಾಜುಯೇಷನ್ ಡೇ’ *
  • *ಹಾಡಿಗೆ ಪೊಲೀಸ್ ಅಧಿಕಾರಿಗಳ ಭೇಟಿ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಮಲೇರಿಯಾ, ಡೆಂಗ್ಯೂ, ಚಿಕೂನ್‍ಗುನ್ಯಾ ರೋಗಗಳ ಬಗ್ಗೆ ಮುಂಜಾಗೃತಾ ಕ್ರಮಗಳು*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಮಲೇರಿಯಾ, ಡೆಂಗ್ಯೂ, ಚಿಕೂನ್‍ಗುನ್ಯಾ ರೋಗಗಳ ಬಗ್ಗೆ ಮುಂಜಾಗೃತಾ ಕ್ರಮಗಳು*

ಸೆಪ್ಟೆಂಬರ್ 20, 20232 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಸೆ.20 : ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಕೊಡಗು ಜಿಲ್ಲೆಯಾದ್ಯಂತ ಮಲೇರಿಯಾ, ಡೆಂಗ್ಯೂ, ಚಿಕೂನ್‍ಗುನ್ಯಾ, ಮೆದುಳುಜ್ವರ ಹಾಗೂ ಆನೆಕಾಲು ರೋಗಗಳ ಮುಂಜಾಗ್ರತಾ ಹಾಗೂ ನಿಯಂತ್ರಣ ಕ್ರಮ ಕೈಗೊಳ್ಳಲಾಗುತ್ತಿದೆ.
ಈಡಿಸ್ ಸೊಳ್ಳೆಗಳು ಹರಡುವ ಡೆಂಗ್ಯೂ ಹಾಗೂ ಚಿಕೂನ್‍ಗುನ್ಯಾ ರೋಗವು ವೈರಾಣು ಸೋಂಕಾಗಿದ್ದು, ಇದಕ್ಕೆ ಯಾವುದೇ ನಿರ್ಧಿಷ್ಠ ಚಿಕಿತ್ಸೆ ಹಾಗೂ ಲಸಿಕೆ ಇರುವುದಿಲ್ಲ. ಆದರೆ ರೋಗ ಲಕ್ಷಣಕ್ಕೆ ಅನುಗುಣವಾಗಿ ಚಿಕಿತ್ಸೆಯನ್ನು ನೀಡಲಾಗುತ್ತದೆ ಹಾಗೂ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದ ಪಕ್ಷದಲ್ಲಿ ಡೆಂಗ್ಯೂ ಜ್ವರವು ಡೆಂಗ್ಯೂ ರಕ್ತಸ್ರಾವ ಜ್ವರ ಹಾಗೂ ಡೆಂಗ್ಯೂ ಆಘಾತ ಜ್ವರಕ್ಕೆ ತಿರುಗಿ ಮಾರಣಾಂತಿಕವಾಗಿ ಸಾವು ಸಂಭವಿಸಬಹುದು. ಆದ್ದರಿಂದ ಡೆಂಗ್ಯೂ ಹಾಗೂ ಚಿಕೂನ್‍ಗುನ್ಯಾ ನಿಯಂತ್ರಣದಲ್ಲಿ ರೋಗ ಹರಡುವ ಈಡಿಸ್ ಸೊಳ್ಳೆಗಳ ನಿಯಂತ್ರಣವೇ ಅತೀ ಮುಖ್ಯ ವಿಧಾನವಾಗಿದ್ದು, ಈ ಸೊಳ್ಳೆಗಳು ಮನೆಗಳಲ್ಲಿನ ನೀರಿನ ಶೇಖರಣೆಗಳಲ್ಲಿ ಹಾಗೂ ಮನೆಗಳ ಸುತ್ತಮುತ್ತಲಿನ ಪರಿಸರದಲ್ಲಿ ಮಳೆನೀರು ಸಂಗ್ರಹವಾಗುವ ತ್ಯಾಜ್ಯ ವಸ್ತುಗಳಲ್ಲಿ ಉತ್ಪತ್ತಿಯಾಗುವುದರಿಂದ ಇವುಗಳ ನಿಯಂತ್ರಣಕ್ಕೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ.
ಪ್ರಸ್ತುತ ಮುಂಗಾರು ಸಮಯವಾಗಿದ್ದರೂ ಸಹ ಜಿಲ್ಲೆಯಲ್ಲಿ ಬಿಟ್ಟು ಬಿಟ್ಟು ಬರುತ್ತಿರುವ ಮಳೆಯಿಂದ ಮನೆಯ ಹೊರಾಂಗಣದಲ್ಲಿರುವ ಘನತ್ಯಾಜ್ಯ ವಸ್ತುಗಳಲ್ಲಿ ಸಂಗ್ರಹವಾಗುವ ಮಳೆ ನೀರಿನಲ್ಲಿ, ಅಲ್ಲದೇ ನೀರಿನ ಅಸಮರ್ಪಕ ಪೂರೈಕೆಯ ಪರಿಣಾಮ ಮನೆಗಳಲ್ಲಿ ಅಧಿಕವಾಗಿರುವ ನೀರಿನ ಸಂಗ್ರಾಹಕಗಳಲ್ಲಿ ಈಡಿಸ್ ಜಾತಿಯ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಇದಕ್ಕೆ ಪೂರಕವಾಗಿ ತಾಪಮಾನದ ಏರಿಳಿತ, ಡೆಂಗ್ಯೂ ಹರಡುವ ಸೊಳ್ಳೆಗಳ ಜೀವಿತ ಅವಧಿಗೆ ಅನುಕೂಲಕರವಾಗಿದ್ದು, ಡೆಂಗ್ಯೂ ಜ್ವರ ಪ್ರಕರಣಕ್ಕೆ ಕಾರಣವಾಗುತ್ತದೆ. ಮುಂಜಾಗ್ರತಾ ಕ್ರಮವಾಗಿ, ಮನೆಯಲ್ಲಿನ ಎಲ್ಲಾ ನೀರಿನ ಸಂಗ್ರಾಹಕಗಳು ಮತ್ತು ಮೇಲ್ಚಾವಣಿಯಲ್ಲಿರುವ ತೊಟ್ಟಿಯ ನೀರನ್ನು ಕನಿಷ್ಠ ವಾರಕ್ಕೊಮ್ಮೆ ಖಾಲಿಮಾಡಿ ಉಜ್ಜಿ ತೊಳೆದು ಒಣಗಿಸಿ ನೀರನ್ನು ಮತ್ತೆ ತುಂಬಿಸಿ ಭದ್ರವಾಗಿ ಮುಚ್ಚಳಿಕೆಯಿಂದ ಮುಚ್ಚಬೇಕು. ಮನೆಯ ಸುತ್ತಮುತ್ತಲಿನ ಪರಿಸರದಲ್ಲಿನ ಒಡೆದ ಬಾಟಲಿ, ಟಿನ್ನು, ಟೈರು, £ಮತ್ತಿತರ ಘನತ್ಯಾಜ್ಯ ವಸ್ತುಗಳಲ್ಲಿ ಮಳೆನೀರು ಸಂಗ್ರಹವಾಗದಂತೆ ಎಚ್ಚರ ವಹಿಸುವುದು. ಯಾವಾಗಲು ಮೈತುಂಬಾ ಬಟ್ಟೆ

ಧರಿಸಬೇಕು. ಹಗಲು ಹೊತ್ತಿನಲ್ಲಿ ನಿದ್ರಿಸುವ/ವಿಶ್ರಾಂತಿ ಪಡೆಯುವ ಗರ್ಭಿಣಿಯರು ಮಕ್ಕಳು ಮತ್ತು ವೃದ್ದರು ತಪ್ಪದೇ ಸೊಳ್ಳೆ ಪರದೆ ಉಪಯೋಗಿಸಬೇಕು. ಮನೆಯ ಕಿಟಕಿ ಬಾಗಿಲುಗಳಿಗೆ ಸೊಳ್ಳೆ ನಿರೋಧಕ ಜಾಲರಿಗಳನ್ನು ಅಳವಡಿಸಬೇಕು.
ಡೆಂಗ್ಯೂ ಜ್ವರವು ಸೋಂಕಿತ ಈಡಿಸ್ ಸೊಳ್ಳೆ ಕಚ್ಚುವುದರಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಈಡಿಸ್ ಸೊಳ್ಳೆಗಳು ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಕಚ್ಚುತ್ತವೆ. ಸೊಳ್ಳೆ ಕಚ್ಚಿದ 5 ರಿಂದ 7 ದಿನಗಳಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದ್ದಕ್ಕಿದ್ದಂತೆ ವಿಪರೀತ ಜ್ವರ, ಕಣ್ಣಿನ ಗುಡ್ಡೆಗಳ ಹಿಂಭಾಗದಲ್ಲಿ ನೋವು, ತೀವ್ರ ತಲೆನೋವು, ಮೈ-ಕೈ ಮತ್ತು ಕೀಲುನೋವು, ವಾಕರಿಕೆ/ವಾಂತಿ, ಇವುಗಳ ಜೊತೆಗೆ ತೀವ್ರ ಹೊಟ್ಟೆನೋವು, ಬಾಯಿ, ಮೂಗು ಮತ್ತು ವಸಡುಗಳಲ್ಲಿ ರಕ್ತಸ್ರಾವದ ಗುರುತುಗಳು, ಚರ್ಮದ ಮೇಲೆ ಅಲ್ಲಲ್ಲಿ ಕೆಂಪಾದ ಗಂಧೆಗಳು, ರಕ್ತಸ್ರಾವದ ಗುರುತುಗಳು, ಕಪ್ಪು ಬಣ್ಣದ ಮಲ ವಿಸರ್ಜನೆ, ವಿಪರೀತ ಬಾಯಾರಿಕೆ, ತಣ್ಣನೆಯ ಬಿಳುಚಿದ ಚರ್ಮ, ಜ್ಞಾನತಪ್ಪುವುದು, ರಕ್ತದೊತ್ತಡದ ಕುಸಿತ, ನಾಡಿಬಡಿತ ಕುಸಿತ ಇವುಗಳು ಡೆಂಗ್ಯೂ ರಕ್ತಸ್ರಾವ ಜ್ವರ ಮತ್ತು ಡೆಂಗ್ಯೂ ಆಘಾತ ಜ್ವರದ ಲಕ್ಷಣಗಳು. ಇವುಗಳು ಕಂಡುಬಂದ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ತೆರಳಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಡೆಂಗ್ಯೂ ಜ್ವರದ ಲಕ್ಷಣಗಳು ಕಂಡುಬಂದಲ್ಲಿ ಸ್ವಯಂ ವೈದ್ಯ ಪದ್ಧತಿ ಪಾಲಿಸದೇ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು ಹಾಗೂ ಬ್ರೂಫನ್ ಅಥವಾ ಇತರೆ ನೋವು ನಿವಾರಕಗಳನ್ನು ಸೇವಿಸಬಾರದು. ಇದರಿಂದ ರಕ್ತಸ್ರಾವವಾಗುವ ಸಾಧ್ಯತೆಯಿದೆ. ಯಾವುದೇ ಜ್ವರವಿರಲಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ರಕ್ತಪರೀಕ್ಷೆ ಹಾಗೂ ಚಿಕಿತ್ಸೆ ಮಾಡಲಾಗುವುದು. “ಡೆಂಗ್ಯೂ ಜ್ವರ/ ಚಿಕೂನ್‍ಗುನ್ಯಾ ಬಗ್ಗೆ ಭಯಬೇಡ, ಆದರೆ ಎಚ್ಚರವಿರಲಿ” ಸಾರ್ವಜನಿಕರು ಇದರ ಮಾಹಿತಿಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ತಿಳಿಸಿದ್ದಾರೆ.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ರಾಜ್ಯ ಬಜೆಟ್ ಕೊಡಗಿನ ಅಭಿವೃದ್ಧಿಗೆ ಪೂರಕವಾಗಿರಲಿ : ಬಿಜೆಪಿ ಒತ್ತಾಯ*

ಮಾರ್ಚ್ 5, 2026

*ಬೈಲುಕುಪ್ಪೆಯಲ್ಲಿ ವಿಶ್ವದ ಅತಿ ದೊಡ್ಡ ಚಿತ್ರ ಪರದೆ ಅನಾವರಣ*

ಮಾರ್ಚ್ 4, 2026

*ಸಾಧಿಸಲು ಹಳ್ಳಿ ನಗರ ಮುಖ್ಯವಲ್ಲ, ಬದಲಿಗೆ ಸಾಧಿಸಲು ವಾತವರಣ ಸೃಷ್ಟಿ ಮಾಡುವುದು ಮುಖ್ಯವಾಗಬೇಕು: ಪೂಜಾ ಸಜೇಶ್: ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಭಿರಕ್ಕೆ ಚಾಲನೆ: ಸೇವಾರ್ಥ ಮನೋಭಾವದಿಂದ ರಾಷ್ಟೃ ನಿರ್ಮಾಣ ಮಾಡುವತ್ತ ಗಮನ ಹರಿಸುವಂತಾಗಬೇಕು:ಗಣ್ಯರ ಅಭಿಮತ*

ಮಾರ್ಚ್ 4, 2026

*ಬೈಲುಕುಪ್ಪೆಯಲ್ಲಿ ವಿಶ್ವದ ಅತಿ ದೊಡ್ಡ ಚಿತ್ರ ಪರದೆ ಅನಾವರಣ*

ಮಾರ್ಚ್ 4, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಕುಶಾಲನಗರ ಟಿಬೆಟಿಯನ್ ನೂತನ ವರ್ಷದ ಆಚರಣೆ ಅಂಗವಾಗಿ ಸಮೀಪದ ಬೈಲುಕೊಪ್ಪೆ ನಿರಾಶ್ರಿತ ಶಿಬಿರದ ಗೋಲ್ಡನ್ ಟೆಂಪಲ್ ಆವರಣದಲ್ಲಿ ವಿಶ್ವದ ಅತಿ…

*ಸಾಧಿಸಲು ಹಳ್ಳಿ ನಗರ ಮುಖ್ಯವಲ್ಲ, ಬದಲಿಗೆ ಸಾಧಿಸಲು ವಾತವರಣ ಸೃಷ್ಟಿ ಮಾಡುವುದು ಮುಖ್ಯವಾಗಬೇಕು: ಪೂಜಾ ಸಜೇಶ್: ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಭಿರಕ್ಕೆ ಚಾಲನೆ: ಸೇವಾರ್ಥ ಮನೋಭಾವದಿಂದ ರಾಷ್ಟೃ ನಿರ್ಮಾಣ ಮಾಡುವತ್ತ ಗಮನ ಹರಿಸುವಂತಾಗಬೇಕು:ಗಣ್ಯರ ಅಭಿಮತ*

ಮಾರ್ಚ್ 4, 2026

*ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ಗಮನಹರಿಸಿ: ಡಾ.ಮಂತರ್ ಗೌಡ*

ಮಾರ್ಚ್ 4, 2026

*ಶಕ್ತಿ ಗೋಪಾಲಕೃಷ್ಣ ರಸ್ತೆ ನಾಮಫಲಕ ಉದ್ಘಾಟನೆ*

ಮಾರ್ಚ್ 4, 2026

*ವೃತ್ತಿಪರ ಕೋರ್ಸ್‌ಗಳ ಶುಲ್ಕ ಪಾವತಿಗೆ ಕೆಇಎ ಕಾಲಾವಕಾಶ ವಿಸ್ತರಣೆ: 9 ಸಾವಿರ ಅಭ್ಯರ್ಥಿಗಳಿಗೆ ಕೊನೆಯ ಚಾನ್ಸ್*

ಮಾರ್ಚ್ 4, 2026

*’ಟಾಕ್ಸಿಕ್’ ರಿಲೀಸ್ ಡೇಟ್ ಚೇಂಜ್: ‘ಟಾಕ್ಸಿಕ್’ ಎದುರು ನಿಲ್ಲುತ್ತಾ ವರುಣ್ ಧವನ್ ಸಿನಿಮಾ? ಚಿತ್ರತಂಡದ ಮುಂದಿನ ನಡೆ ಏನು?*

ಮಾರ್ಚ್ 4, 2026

*ತಿರುಪತಿ ದರ್ಶನಕ್ಕೆ ತೆರಳುತ್ತಿದ್ದ ಬೆಂಗಳೂರಿನ ಒಂದೇ ಕುಟುಂಬದ ಐವರು ಸಾವು: ಚಿತ್ತೂರು ಬಳಿ ಲಾರಿಗೆ ಕಾರು ಡಿಕ್ಕಿ!*

ಮಾರ್ಚ್ 4, 2026

*ಯುರೋಕಿಡ್ಸ್ ಮಡಿಕೇರಿ ಪಬ್ಲಿಕ್ ಶಾಲೆಯಲ್ಲಿ ‘ಟ್ಯಾಲೆಂಟ್ ಡಿಸ್ಪ್ಲೇ ಮತ್ತು ಗ್ರಾಜುಯೇಷನ್ ಡೇ’ *

ಮಾರ್ಚ್ 4, 2026

*ಹಾಡಿಗೆ ಪೊಲೀಸ್ ಅಧಿಕಾರಿಗಳ ಭೇಟಿ*

ಮಾರ್ಚ್ 4, 2026

*ತೊರೆನೂರು ವಿರಕ್ತ ಮಠದಲ್ಲಿ ಮಾಸಿಕ ಹುಣ್ಣಿಮೆ ಚಿಂತನಾಗೋಷ್ಠಿ*

ಮಾರ್ಚ್ 4, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.