ಮಡಿಕೇರಿ ಸೆ.23 : ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ರ್ಯಾಗಿಂಗ್ ತಡೆಗಟ್ಟುವ ಬಗ್ಗೆ ವೈದ್ಯಕೀಯ ವಿದ್ಯಾರ್ಥಿಗಳಿಗೆ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೋಲಿಸ್ ವರಿಷ್ಟಾದಿಕಾರಿ ಕೆ.ರಾಮರಾಜನ್ ರ್ಯಾಗಿಂಗ್ ಕೃತ್ಯೆಯ ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ವೈದ್ಯಕೀಯ ಕಾಲೇಜಿಗೆ ಇತರೆ ಜಿಲ್ಲೆ ಅಲ್ಲದೆ ವಿವಿಧ ರಾಜ್ಯಗಳಿಂದ ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ದಾಖಲಾಗಿರುತ್ತಾರೆ. ಈ ಸಂದರ್ಭದಲ್ಲಿ ಕಾಲೇಜು ಕ್ಯಾಂಪಸ್ ಮತ್ತು ವಿದ್ಯಾರ್ಥಿ ನಿಲಯಗಳಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ರ್ಯಾಗಿಂಗ್ ಮಾಡದಂತೆ ಹಾಗೂ ರ್ಯಾಗಿಂಗ್ ಆಗುವಂತಹ ಸನ್ನಿವೇಶಗಳನ್ನು ಸೃಷ್ಟಿ ಮಾಡದಂತೆ ಸಲಹೆ ನೀಡಿದ ಅವರು, ರ್ಯಾಗಿಂಗ್ ಒಂದು ಅಪರಾಧವಾಗಿದ್ದು, ಅದಕ್ಕೆ ನೀಡಲಾಗುವ ಶಿಕ್ಷೆಯ ಪ್ರಮಾಣ, ದಂಡದ ಮಾಹಿತಿಯನ್ನು ವಿವರಿಸಿದರು.
ರ್ಯಾಗಿಂಗ್ ನಿಂದಾಗಿ ವಿದ್ಯಾರ್ಥಿಯ ಮೇಲಾಗುವ ಮಾನಸಿಕ ಮತ್ತು ದೈಹಿಕ ಪರಿಣಾಮಗಳು, ಆತಂಕ , ಖಿನ್ನತೆ ಮತ್ತು ಕೆಲವು ಸಂಧರ್ಭಗಳಲ್ಲಿ ಆತ್ಮಹತ್ಯೆಗೆ ಕಾರಣವಾಗಬಹುದು, ಕೆಲವು ಒತ್ತಡ ಮತ್ತು ಆಘಾತವು ಸುಮಾರು ವರ್ಷಗಳವರೆಗೂ ಕಾಡಬಹುದು. ರ್ಯಾಗಿಂಗ್ ನಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿಯಾಗುತ್ತದೆ ವಿದ್ಯಾರ್ಥಿಯ ಅಧ್ಯಯನದ ಮೇಲೆ ಕೇಂದ್ರಿಕರಿಸಲು ಸಾಧ್ಯವಾಗುವುದಿಲ್ಲ ಇದರಿಂದ ಶೈಕ್ಷಣಿಕವಾಗಿ ವಿದ್ಯಾರ್ಥಿಯು ಕಳಪೆ ಸಾಧನೆಗೆ ಕಾರಣವಾಗುತ್ತದೆ ಮತ್ತು ವಿದ್ಯಾರ್ಥಿಯ ಭವಿಷ್ಯದ ಆಕಾಂಕ್ಷೆಗಳ ಮೇಲೆ ಪರಿಣಾಮಗಳನ್ನು ಉಂಟು ಮಾಡುವುದರ ಜೊತೆಗೆ ಕಾಲೇಜಿನ ಹೆಸರಿಗೂ ಕೂಡ ದಕ್ಕೆ ತರಲಿದ್ದು, ಯಾವುದೇ ವಿದ್ಯಾರ್ಥಿಯು ಕೂಡ ರ್ಯಾಗಿಂಗ್ ಮಾಡಬರಾದೆಂದು ಕರೆ ನೀಡಿದರು.
ರ್ಯಾಗಿಂಗ್ ಕಲಿಕೆ ಮತ್ತು ವೈಯುಕ್ತಿಕ ಬೆಳವಣಿಗೆಗಿಂತ ಭಯ, ಬೆದರಿಕೆ ಮತ್ತು ಬೆದರಿಸುವಿಕೆಯ ವಾತಾವರಣವನ್ನು ಬೆಳೆಸುತ್ತದೆ. ನೂತನವಾಗಿ ಆಗಮಿಸುವ ಕಿರಿಯ ವೈದ್ಯ ವಿದ್ಯಾರ್ಥಿಗಳಿಗೆ ಸ್ವಾಗತಿಸುವ ಕಾರ್ಯಕ್ರಮ ಸಂಘಟಿಸಿ ಕಾಲೇಜಿನ ವಾತವಾರಣದಲ್ಲಿ ಹಿರಿಯರು ಮತ್ತು ಕಿರಿಯರು ಒಟ್ಟಾಗಿ ಬೆರೆಯುವಂತ ವಾತವಾರಣ ನಿರ್ಮಾಣ ಮಾಡಬೇಕೆಂದು ತಿಳಿಸಿದರು.
ಸಂಸ್ಥೆಯ ಆಂತರಿಕ ರ್ಯಾಗಿಂಗ್ ವಿರೋಧಿ ತಂಡ ರಚಿಸಿರುವ ಬಗ್ಗೆ ಮತ್ತು ಸಿಸಿ ಕ್ಯಾಮರಾ ಅಳವಡಿಸಿರುವ ಬಗ್ಗೆ ಸಂಸ್ಥೆಯ ನಿರ್ದೆಶಕರು ಹಾಗೂ ಡೀನ್ ಮಾಹಿತಿಯನ್ನು ಪಡೆದುಕೊಂಡರು. ರ್ಯಾಗಿಂಗ್ ಸಂಭವಿಸಿದಲ್ಲಿ ಕಾಲೇಜು ವತಿಯಿಂದ ತೆಗೆದುಕೊಳ್ಳಬೇಕಾದ ಶಿಸ್ತು ಕ್ರಮ ಮತ್ತು ಪೋಲಿಸ್ ಇಲಾಖೆಯಿಂದ ಕೈಗೊಳ್ಳುವ ಕ್ರಮದ ಬಗ್ಗೆ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರು ಹಾಗೂ ಡೀನ್ ಡಾ. ಕೆ.ಬಿ.ಕಾರ್ಯಪ್ಪ, ಭಾರತೀಯ ವೈದ್ಯಕೀಯ ಮಂಡಳಿಯ ರ್ಯಾಗಿಂಗ್ ವಿರೋಧಿ ನೀತಿಯ ಬಗ್ಗೆ ವಿವರಿಸಿದರು.
ನ್ಯಾಯ ವೈದ್ಯ ಶಾಸ್ತ ವೀಭಾಗದ ಮುಖ್ಯಸ್ಥ ಹಾಗೂ ಸಂಸ್ಥೆಯ ರ್ಯಾಗಿಂಗ್ ವಿರೋಧಿ ಸಮಿತಿಯ ಸಮನ್ವಯಾಧಿಕಾರಿ ಡಾ. ಉಮೇಶ್ಬಾಬು ರ್ಯಾಗಿಂಗ್ ಬಗ್ಗೆ ಮಾಹಿತಿ ನೀಡಿದರು.
ಪ್ರಾಂಶುಪಾಲ ಡಾ. ವಿಶಾಲ್ ಕುಮಾರ್ ಗಣ್ಯರ ಉಪಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ರ್ಯಾಗಿಂಗ್ ಚಟುವಟಿಕೆಗಳಲ್ಲಿ ತೊಡಗುವುದಿಲ್ಲವೆಂದು ಪ್ರಮಾಣವನ್ನು ಬೋಧಿಸಿಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ರ್ಯಾಗಿಂಗ್ ಕೃತ್ಯ ಮತ್ತು ಅದರ ಪರಿಣಾಮಗಳ ಬಗ್ಗೆ ಕಿರು ನಾಟಕವನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಸ್ವಾಮಿ , ಅಕಾಡೆಮಿಕ್ ರಿಜಿಸ್ಟ್ರಾರ್ ಡಾ. ರವಿಕಿರಣ ಕಿಸಾನ್, ನರ್ಸಿಂಗ್ ಪ್ರಾಂಶುಪಾಲರಾದ ಮಂಜುಳ, ಸೇರಿದಂತೆ ಬೋಧಕ ವರ್ಗದವರು ಮತ್ತು ಎಂಬಿಬಿಎಸ್ , ನರ್ಸಿಂಗ್ ವಿದ್ಯಾರ್ಥಿಗಳು ಹಾಜರಿದ್ದರು.