ನಾಪೋಕ್ಲು ಸೆ.27 : ನಾಪೋಕ್ಲು ನಾಡು ಕೊಡವ ಸೌಹಾರ್ದ ಪತ್ತಿನ ಸಹಕಾರಿ ಸಂಘದಲ್ಲಿ 733 ಸದಸ್ಯರಿದ್ದು, ಪ್ರಸಕ್ತ ವರ್ಷ ಸಂಘವು ರೂ.3,95,131 ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಅಪ್ಪಾರಂಡ ಸುಧೀರ್ ಅಯ್ಯಪ್ಪ ಹೇಳಿದರು.
ನಾಪೋಕ್ಲು ಕೊಡವ ಸಮಾಜದ ಅಪ್ಪಚ್ಚ ಕವಿ ಸಭಾಂಗಣದಲ್ಲಿ 2022-23ನೇ ಸಾಲಿನ ಸಹಕಾರಿಯ 5ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿ, ಸಂಘವು ಉತ್ತಮ ರೀತಿಯಲ್ಲಿ ಸಾಗುತ್ತಿದ್ದು, ಸಂಘದ ಏಳಿಗೆಗಾಗಿ ಸದಸ್ಯರು ಸಹಕರಿಸಬೇಕೆಂದರು. ಸಭೆಯಲ್ಲಿ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಚರ್ಚಿಸಿ ಒಮ್ಮತದ ನಿರ್ಧಾರಕ್ಕೆ ಬರಲಾಯಿತು.
ಈ ಸಂದರ್ಭ ಸಂಘದ ಉಪಾಧ್ಯಕ್ಷ ಮಂಡೀರ.ಎ. ರಾಜಪ್ಪ ಚoಗಪ್ಪ, ನಿರ್ದೇಶಕರಾದ ಮಾಳೆಯಂಡ ಎ.ಅಯ್ಯಪ್ಪ, ಬೊಳ್ಯಯಂಡ.ಪಿ.ಹರೀಶ್ ಕಾರ್ಯಪ್ಪ, ಮುಕ್ಕಾಟೀರ.ಎಮ್.ವಿನಯ, ಕನ್ನಂಬೀರ.ಸಿ.ತಿಮ್ಮಯ್ಯ, ಕುಂಡ್ಯೋಳ0ಡ.ಸಿ.ಪೂವಯ್ಯ, ಕಾಟುಮಣಿಯಂಡ ಎಮ್.ಉಮೇಶ್, ಚೋಕಿರ.ಎಸ್.ಚಿಣ್ಣಪ್ಪ, ಚೇನಂಡ.ಈ.ಗಿರೀಶ್ ಪೂಣಚ್ಚ , ಮೂವೇರ.ರೇಖಾ ಪ್ರಕಾಶ್, ಬಿದ್ದಂಡ ಉಷಾ ಪೂವಯ್ಯ, ಕೋಟೇರ ನೈಲಾ ಚಂಗಪ್ಪ, ಕುಲ್ಲೇಟ್ಟಿರ.ಜಿ.ಅಜಿತ್ ನಾಣಯ್ಯ, ಬಿದ್ದಾಟಂಡ.ಎ.ರಮೇಶ್ ಚಂಗಪ್ಪ ಹಾಗೂ ಮುಖ್ಯಕಾರ್ಯನಿರ್ವಹಕರಾದ ಎಸ್.ಪಿ.ದೇವಯ್ಯ, ಸಿಬ್ಬಂದಿ ಕೆ.ಜಿ.ಸರಸ್ವತಿ ಸಂಘದ ಸದಸ್ಯರು ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.