ಮಡಿಕೇರಿ ಅ.11 : ಶ್ರೀಮಂಗಲ ವಿದ್ಯಾಸಂಸ್ಥೆಯ 2023-24ನೇ ಸಾಲಿನ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಬೋಡಂಗಡ ಎಂ ಅಯ್ಯಪ್ಪ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಚಟ್ಟಂಗಡ ರವಿ ಸುಬ್ಬಯ್ಯ, ಕಾರ್ಯದರ್ಶಿಯಾಗಿ ಕಾಳಿಮಾಡ ಪದ್ಮ ಬೆಳ್ಳಿಯಪ್ಪ, ಖಜಾಂಚಿಯಾಗಿ ಎಸ್.ಎಂ.ವಿನಯ್ ನೇಮಗೊಂಡಿದ್ದಾರೆ.
ನಿರ್ದೇಶಕರುಗಳಾಗಿ ಅಜ್ಜಮಾಡ ಸಾವಿತ್ರಿ, ಚೆಟ್ಟಂಗಡ ಕಂಬ ಕಾರ್ಯಪ್ಪ, ಅಣ್ಣಾಳಮಾಡ ನರೇಂದ್ರ, ಅಯ್ಯಮಾಡ ಉದಯ, ಚಿಮ್ಮಂಗಡ ಗಣಪತಿ, ತಡಿಯಂಗಡ ಎಂ ಜಯರಾಜ್ ಮತ್ತು ಬಾಚಂಗಡ ಕಾರ್ಯಪ್ಪ ಆಯ್ಕೆಯಾಗಿದ್ದಾರೆ.









