ಮಡಿಕೇರಿ ಅ.11 : ಯುವ ದಸರಾ ನೃತ್ಯ ಸ್ಪರ್ಧೆಗೆ ತಂಡಗಳನ್ನು ಆಯ್ಕೆ ಮಾಡಲು, ಆಯ್ಕೆ ಪ್ರಕ್ರಿಯೆಯನ್ನು ಅ.14 ರಂದು ನಗರದ ಹೋಟೆಲ್ ರಾಜ್ ದರ್ಶನ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಆಯ್ಕೆಯಾದ ತಂಡಗಳ ನಡುವೆ ಅ.21 ರಂದು ನಗರದ ಗಾಂಧಿ ಮೈದಾನದ ಭವ್ಯ ವೇದಿಕೆಯಲ್ಲಿ ಸ್ಪರ್ಧೆ ನಡೆಯಲಿದೆ.
ಸ್ಪರ್ಧೆಯ ನೀತಿ ನಿಯಮಗಳನ್ನು ಎಲ್ಲಾ ತಂಡಗಳು ಕಡ್ಡಾಯವಾಗಿ ಪಾಲಿಸಬೇಕು. ಶಾಸ್ತ್ರೀಯ ನೃತ್ಯ ಪ್ರಕಾರವನ್ನು ಹೊರತುಪಡಿಸಿ ಇತರೆ ಯಾವುದೇ ಪ್ರಕಾರವನ್ನು ಆಯ್ದುಕೊಳ್ಳಬಹುದು. ಸ್ಪರ್ಧೆಗೆ ವಯೋಮಿತಿಯ ನಿರ್ಬಂಧವಿಲ್ಲ. ತಂಡವು ಕನಿಷ್ಠ 12 ಮಂದಿ ಗರಿಷ್ಠ 35 ಮಂದಿ ಕಲಾವಿದರು ಇರತಕ್ಕದ್ದು. ನೃತ್ಯಗಳು ಪರಿಕಲ್ಪನೆ ಹಾಗೂ ಸಾಮಾಜಿಕ ಸಂದೇಶವನ್ನು ಒಳಗೊಂಡಿರಬೇಕು. ಹಾಡಿನ ಭಾಷೆ ಹಾಗೂ ಉಡುಗೆ ತೊಡುಗೆಗಳು ಸಭ್ಯವಾಗಿರಬೇಕು. ಯಾರ ನಂಬಿಕೆಗಳಿಗೂ ನೋವನ್ನುಂಟು ಮಾಡಬಾರದು. ಕಾಲಾವಧಿ 10+2 ನಿಮಿಷಗಳು. ಬೆಂಕಿ, ಬಣ್ಣ, ನೀರು ಸೇರಿದಂತೆ ವೇದಿಕೆಗೆ ಹಾನಿ ಉಂಟುಮಾಡುವ ಯಾವುದೇ ಪರಿಕರಗಳನ್ನು ಬಳಸುವಂತಿಲ್ಲ. ತೀರ್ಪುಗಾರರ ತೀರ್ಮಾನವನ್ನು ಎಲ್ಲರೂ ಗೌರವಿಸಬೇಕು.
ಹೆಚ್ಚಿನ ಮಾಹಿತಿಗೆ ಕವನ್ ಕೋತ್ತೋಳಿ 9741292825, ಯುವ ದಸರಾ ಸಂಚಾಲಕರಾದ ಸೋಮ 9060643707 ನ್ನು ಸಂಪರ್ಕಿಸಲು ಕೋರಿದೆ.







