Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಯುಪಿಎಸ್‌ಸಿ ಪರೀಕ್ಷೆಯಲ್ಲಿ ವಿರಾಜಪೇಟೆಯ ಕೆ.ಎಲ್.ಸೂರಜ್ ಗೆ 525ನೇ ರ‍್ಯಾಂಕ್*
  • *ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ : ಶಾಸಕ ಪೊನ್ನಣ್ಣರಿಗೆ ಸನ್ಮಾನ*
  • *ಐಟಿ ಹಬ್ ಆಗಲಿದೆಯೇ ಸಾಂಸ್ಕೃತಿಕ ನಗರಿ?: ಮೈಸೂರು ಇನ್ಮುಂದೆ ರಾಜ್ಯದ ಎರಡನೇ ಐಟಿ ಸಿಟಿ; ಮಂಗಳೂರಿಗೂ ಸಿಕ್ತು ಐಟಿ ಪಾರ್ಕ್ ಭಾಗ್ಯ!*
  • *ಬೆಂಗಳೂರು-ಕಲಬುರಗಿ ಸೇರಿ ಹಲವು ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ; ಮಾರ್ಚ್ 15ರಿಂದ ಹೊಸ ವೇಳಾಪಟ್ಟಿ ಜಾರಿ!*
  • *ಕಾವೇರಿ ಶಾಲೆಯಲ್ಲಿ ಅಚ್ಚುಕಟ್ಟಾಗಿ ನೆರವೇರಿದ ಬೀಳ್ಕೊಡುಗೆ ಹಾಗೂ ಪದವಿ ಪ್ರಧಾನ ಕಾರ್ಯಕ್ರಮ*
  • *ಮೊಣ್ಣಂಡ ಕೆ.ಚೆಂಗಪ್ಪ ಹಾಗೂ ಚೆರಿಯಮನೆ ಕೃಷ್ಣಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮ*
  • *ಬಸವೇಶ್ವರ ಸನ್ನಿಧಿಯಲ್ಲಿ ಮಳೆ ಪೂಜೆ*
  • *ಸವ೯ ಜನರ ಪಾಲಿನ ಕಲ್ಯಾಣದ ಬಜೆಟ್ : ಶಾಸಕ ಡಾ.ಮಂಥರ್ ಗೌಡ ಶ್ಲಾಘನೆ*  
  • *ಕೊಡಗು ಜಿಲ್ಲೆಯನ್ನು ಕಡೆಗಣಿಸಿದ ಬಜೆಟ್ : ತೇಲಪಂಡ ಶಿವಕುಮಾರ್ ಟೀಕೆ*
  • *ಕೊಡಗಿನ ಜನರ ನಿರೀಕ್ಷೆ ಹುಸಿಯಾಗಿದೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕೊಡವ ಮಕ್ಕಡ ಕೂಟದಿಂದ ದಾಖಲೆಯ 75ನೇ ಪುಸ್ತಕ “ಆ ಪನ್ನೆರಂಡ್ ತಿಂಗ” ಬಿಡುಗಡೆ : ಪುಸ್ತಕಗಳನ್ನು ಓದಿ ಪದ್ಧತಿ, ಸಂಸ್ಕೃತಿ ಉಳಿಸಿ : ಪದ್ಮಶ್ರೀ ರಾಣಿ ಮಾಚಯ್ಯ ಕರೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕೊಡವ ಮಕ್ಕಡ ಕೂಟದಿಂದ ದಾಖಲೆಯ 75ನೇ ಪುಸ್ತಕ “ಆ ಪನ್ನೆರಂಡ್ ತಿಂಗ” ಬಿಡುಗಡೆ : ಪುಸ್ತಕಗಳನ್ನು ಓದಿ ಪದ್ಧತಿ, ಸಂಸ್ಕೃತಿ ಉಳಿಸಿ : ಪದ್ಮಶ್ರೀ ರಾಣಿ ಮಾಚಯ್ಯ ಕರೆ*

ಅಕ್ಟೋಬರ್ 13, 20233 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಅ.13 : ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳುವ ಮೂಲಕ ಪರಂಪರೆ, ಪದ್ಧತಿ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಯುವ ಸಮೂಹ ಮಾಡಬೇಕೆಂದು ಕಲಾವಿದೆ ಪದ್ಮಶ್ರೀ ರಾಣಿ ಮಾಚಯ್ಯ ಕರೆ ನೀಡಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಬರಹಗಾರ ಕೊಟ್ಟುಕತ್ತಿರ ಜಾಲಿ ಸೋಮಣ್ಣ ಅವರು ಬರೆದಿರುವ ಕೊಡವ ಮಕ್ಕಡ ಕೂಟದಿಂದ ಹೊರ ತಂದಿರುವ ದಾಖಲೆಯ 75ನೇ ಪುಸ್ತಕ “ಆ ಪನ್ನೆರಂಡ್ ತಿಂಗ” ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಮ್ಮ ಪರಂಪರೆ, ಪದ್ಧತಿ ಮತ್ತು ಸಂಸ್ಕೃತಿಯನ್ನು ಅನುಸರಿಸಲು ಯುವ ಜನರು ಅಸಡ್ಡೆ ತೋರುತ್ತಿದ್ದಾರೆ. ಹಬ್ಬಗಳ ಆಚರಣೆಯಲ್ಲಿ ಪಾಲ್ಗೊಳ್ಳಲು ಕೂಡ ಹಿಂದೇಟು ಹಾಕುತ್ತಿದ್ದಾರೆ. ಜ್ಞಾನವನ್ನು ಹೆಚ್ಚಿಸುವ ಶಕ್ತಿ ಹೊಂದಿರುವ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುತ್ತಿಲ್ಲ. ಯುವ ಸಮೂಹದ ನಿರ್ಲಕ್ಷ್ಯ ಮನೋಭಾವದಿಂದ ಇಂದು ಪರಂಪರೆ, ಪದ್ಧತಿ ಮತ್ತು ಸಂಸ್ಕೃತಿ ನಾಶವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಕ್ಕಳ ತಪ್ಪುಗಳನ್ನು ತಿದ್ದಬೇಕಾದ ತಂದೆ ತಾಯಿಯರು ಕೂಡ ಪದ್ಧತಿ, ಪರಂಪರೆ ಬಗ್ಗೆ ತಿಳಿ ಹೇಳದೆ ಮಕ್ಕಳು ಹೇಳಿದಂತೆ ಕೇಳುತ್ತಿದ್ದಾರೆ. ಈಗಿನ ಮಕ್ಕಳು ಬುದ್ಧಿ ಮಾತು ಕೇಳುವ ಪರಿಸ್ಥಿತಿಯಲ್ಲಿ ಇಲ್ಲ, ಪುಸ್ತಕಗಳನ್ನು ಓದುವುದಿಲ್ಲ. ಇತ್ತೀಚೆಗೆ ಬಾಳೋಪಾಟ್ ಕಾರ್ಯಕ್ರಮವೊಂದರ ಸಂದರ್ಭ ಕಾಲೇಜು ವಿದ್ಯಾರ್ಥಿಯೊಬ್ಬನಿಗೆ ಕುಪ್ಪೆಚಾಲೆ ತೊಡುವಂತೆ ಕೇಳಿಕೊಂಡಾಗ ತಾನು ತೊಡುವುದಿಲ್ಲವೆಂದು ಅಸಡ್ಡೆ ತೋರಿದ್ದಾನೆ. ಯುವ ಪೀಳಿಗೆ ಈ ರೀತಿಯಾಗಿ ಬೆಳೆಯುತ್ತಿದ್ದು, ಇದರಿಂದ ಸಂಸ್ಕೃತಿ ನಾಶವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪುಸ್ತಕಗಳನ್ನು ರಚಿಸುವುದು ಅತ್ಯಂತ ಒಳ್ಳೆಯ ಅಭ್ಯಾಸ, ನನಗೆ ಓದುವ ಹವ್ಯಾಸವಿದೆ, ಆದರೆ ಬರೆಯುತ್ತಿಲ್ಲ. ಇನ್ನು ಮುಂದೆ ಬರೆಯುವ ಪ್ರಯತ್ನ ಮಾಡುವುದಾಗಿ ರಾಣಿ ಮಾಚಯ್ಯ ಹೇಳಿದರು.
ಕೊಡವ ಪುಸ್ತಕ “ಆ ಪನ್ನೆರಂಡ್ ತಿಂಗ” ವನ್ನು ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ಸಾಹಿತಿ ಬಾಚರಣಿಯಂಡ ಪಿ.ಅಪ್ಪಣ್ಣ ಅವರು, ಪುಸ್ತಕಗಳ ಗಾತ್ರಗಿಂತ ಅದರೊಳಗಿರುವ ವಿಚಾರದ ಮೌಲ್ಯಗಳು ದೊಡ್ಡದಾಗಿರಬೇಕು ಮತ್ತು ಮಹತ್ವದ್ದಾಗಿರಬೇಕು ಎಂದರು.
ಇಂದು ಜನ ಪುಸ್ತಕಗಳನ್ನು ಓದುತ್ತಿಲ್ಲ, ಮೊದಲ ಪುಟ, ಕೊನೆಯ ಪುಟ, ದಪ್ಪಾಕ್ಷರಗಳು ಹಾಗೂ ಅದರಲ್ಲಿರುವ ಚಿತ್ರಗಳನ್ನು ನೋಡಿ ಕಪಾಟಿನಲ್ಲಿಟ್ಟು ಬಿಡುತ್ತಾರೆ. ಆದರೆ ಇಂದು ಬಿಡುಗಡೆಯಾಗಿರುವ “ಆ ಪನ್ನೆರಂಡ್ ತಿಂಗ” ಪುಸ್ತಕ ಕಪಾಟಿನಲ್ಲಿಡುವ ಪುಸ್ತಕವಲ್ಲ, ಕೊಡಗಿನ ಮೂಲನಿವಾಸಿಗಳ ಪ್ರತಿಯೊಬ್ಬರ ಮನೆಯ ಮೇಜಿನ ಮೇಲಿರಬೇಕಾದ ಮಾರ್ಗದರ್ಶಕ ಪುಸ್ತಕವಾಗಿದೆ. ಕೊಡಗಿನ ಎಲ್ಲಾ ಹಬ್ಬಗಳು, ಪದ್ಧತಿ, ಪರಂಪರೆ, ಹುಟ್ಟಿನಿಂದ ಹಿಡಿದು ಸಾವಿನ ವರೆಗೆ ಇರುವ ಆಚಾರ, ವಿಚಾರಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಈ ಪುಸ್ತಕ ಮನೆಯಲ್ಲಿದ್ದರೆ ಯಾವುದೇ ಸಂದರ್ಭದಲ್ಲಿ ಪದ್ಧತಿಯ ಕುರಿತು ಮತ್ತೊಬ್ಬರಿಂದ ತಿಳಿದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಕೊಡವ ಸಂಸ್ಕೃತಿಯನ್ನು ಆಳವಾಗಿ ಅಧ್ಯಯನ ಮಾಡಿ ಪುಸ್ತಕದ ರೂಪದಲ್ಲಿ ಹೊರ ತರುವಲ್ಲಿ ಮಾಜಿ ಯೋಧರೂ ಆಗಿರುವ ಲೇಖಕ ಕೊಟ್ಟುಕತ್ತಿರ ಜಾಲಿ ಸೋಮಣ್ಣ ಅವರು ಯಶಸ್ವಿಯಾಗಿದ್ದಾರೆ ಎಂದು ಬಾಚರಣಿಯಂಡ ಪಿ.ಅಪ್ಪಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು.
ಬೊಳ್ಳಿಜಿರ ಅಯ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ಕೊಡವ ಮಕ್ಕಡ ಕೂಟ 75 ಪುಸ್ತಕಗಳನ್ನು ಹೊರ ತಂದಿದೆ. ಈ ಸಂಖ್ಯೆ ನೂರಕ್ಕೆ ಏರುವ ಮೂಲಕ ಹೊಸ ದಾಖಲೆ ನಿರ್ಮಾಣವಾಗಲಿ ಎಂದು ಅವರು ಶುಭ ಹಾರೈಸಿದರು.
ಮತ್ತೊಬ್ಬ ಹಿರಿಯ ಸಾಹಿತಿ ನಾಗೇಶ್ ಕಾಲೂರು ಅವರು ಮಾತನಾಡಿ ಮೌಲ್ಯಯುತ ಪುಸ್ತಕಗಳನ್ನು ಓದುಗರು ಹುಡುಕಿ ಓದುತ್ತಾರೆ. “ಪಟ್ಟೋಲೆ ಪಳಮೆ” ಪುಸ್ತಕ ಇದಕ್ಕೊಂದು ಉತ್ತಮ ಉದಾಹರಣೆಯಾಗಿದೆ. ಉತ್ತಮ ಪುಸ್ತಕಗಳಿಗೆ ಭವಿಷ್ಯವಿದೆ ಎಂದರು.
“ಆ ಪನ್ನೆರಂಡ್ ತಿಂಗ” ಪುಸ್ತಕದ ಬರಹಗಾರ ಕೊಟ್ಟುಕತ್ತಿರ ಜಾಲಿ ಸೋಮಣ್ಣ ಅವರು ಮಾತನಾಡಿ ಇದು ನನ್ನ 5ನೇ ಪುಸ್ತಕವಾಗಿದ್ದು, ಪದ್ಧತಿ, ಪರಂಪರೆಗಳನ್ನು ಅಧ್ಯಯನ ಮಾಡಿ ಬರೆದಿದ್ದೇನೆ. ಪುಸ್ತಕ ಪ್ರತಿಯೊಬ್ಬರ ಕೈಸೇರುವ ಮೂಲಕ ನಮ್ಮ ಕೇರಿ, ಊರು, ನಾಡಿನ ಪರಂಪರೆಯ ಪರಿಚಯವಾಗಬೇಕು ಎಂದು ತಿಳಿಸಿದರು.
ಬರಹಗಾರರಿಗೆ ಪ್ರೋತ್ಸಾಹ ನೀಡುತ್ತಿರುವ ಕೊಡವ ಮಕ್ಕಡ ಕೂಟದ ಶ್ರಮವನ್ನು ಶ್ಲಾಘಿಸಿದರು.
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಮಾತನಾಡಿ ಸಾಮಾಜಿಕ ಕಳಕಳಿ, ಕೊಡಗಿನ ಅಭ್ಯುದಯದ ಕಾಳಜಿ, ಸಂಸ್ಕೃತಿ, ಸಾಹಿತ್ಯ ಬೆಳೆವಣಿಗೆಯ ಮೇಲಿನ ಆಸಕ್ತಿಯಿಂದ ಸಂಘಟನೆ ನಿರಂತರ ಕಾರ್ಯನಿರ್ವಹಣೆಯಲ್ಲಿ ತೊಡಗಿದೆ. ನನ್ನ ಅಧ್ಯಕ್ಷತೆಯಲ್ಲಿ ಈವರೆಗೆ ಕೊಡವ, ಕನ್ನಡ, ಇಂಗ್ಲೀಷ್, ಹಿಂದಿ ಸೇರಿದಂತೆ ಒಟ್ಟು 74 ಕೃತಿಗಳನ್ನು ಬಿಡುಗಡೆ ಮಾಡಲಾಗಿದೆ. ಇದೀಗ 75ನೇ ಪುಸ್ತಕವಾಗಿ 75 ವರ್ಷದ ಬರಹಗಾರ ಜಾಲಿ ಸೋಮಣ್ಣ ಅವರು ರಚಿಸಿರುವ “ಆ ಪನ್ನೆರಂಡ್ ತಿಂಗ” ಬಿಡುಗಡೆಗೊಂಡಿದೆ ಎಂದರು.
ಕೊಡವ ಮಕ್ಕಡ ಕೂಟ ಪ್ರಕಟಿಸಿರುವ 74 ಪುಸ್ತಕಗಳಲ್ಲಿ ಐದು ಪುಸ್ತಕಗಳಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕಿದ್ದು, ಚಿಗುರೆಲೆಗಳು ಪುಸ್ತಕಕ್ಕೆ ರಾಜ್ಯ ಪ್ರಶಸ್ತಿ, ಅಗ್ನಿಯಾತ್ರೆ ಪುಸ್ತಕಕ್ಕೆ “ಗೌರಮ್ಮ ದತ್ತಿ ನಿಧಿ ಪ್ರಶಸ್ತಿ ಲಭಿಸಿದೆ. ನಾಲ್ಕು ಪುಸ್ತಕಗಳು ಕೊಡವ ಸಿನಿಮಾವಾಗಿದೆ. ವೀರಯೋಧ ಸ್ಕ್ವಾ.ಲೀ ಅಜ್ಜಮಾಡ ದೇವಯ್ಯ ಅವರ ಜೀವನಾಧಾರಿತ ಬಾಲಿವುಡ್ ಸಿನಿಮಾ ಚಿತ್ರೀಕರಣದ ಹಂತದಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.
::: ಜಾಲಿ ಸೋಮಣ್ಣ ಪರಿಚಯ :::
ಜಾಲಿ ಸೋಮಣ್ಣ ಬೆಂಗ್‍ನಾಡ್ ಕೋಪಟ್ಟಿಯ ಕೊಟ್ಟುಕತ್ತಿರ ಒಕ್ಕದ ಪೊನ್ನಪ್ಪ-ಅಕ್ಕವ್ವ ದಂಪತಿಯ ಆರನೇ ಪುತ್ರ. ಚೆಟ್ಟಿಮಾನಿ, ಚೇರಂಬಾಣೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ನಂತರ ಮಡಿಕೇರಿಯಲ್ಲಿ ಕಲಾ ವಿಭಾಗದಲ್ಲಿ ಪದವಿ ಪಡೆದು, ಇಂಡಿಯನ್ ನೇವಿಯಲ್ಲಿ ಹತ್ತು ವರ್ಷ ಸೇವೆ ಸಲ್ಲಿಸಿದ್ದಾರೆ. ನಂತರ ಪಾಕ್‍ನಲ್ಲಿ ತಮ್ಮ ಇಬ್ಬರು ಸಹೋದರರೊಂದಿಗೆ ಸೇವೆ ಸಲ್ಲಿಸಿರುವುದು ವಿಶೇಷ. ಒಂದು ವರ್ಷ ಮಾಲ್ಮಾ ವಿದೇಶ ಸೇವೆ ಸಲ್ಲಿಸಿದ್ದಾರೆ. ಮೈಸೂರಿನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ 31 ವರ್ಷಗಳ ಕಾಲ ಸೇವೆ ಸಲ್ಲಿಸಿ, ಪ್ರಧಾನ ವ್ಯವಸ್ಥಾಪಕರಾಗಿ ನಿವೃತ್ತಿ ಹೊಂದಿದ್ದಾರೆ.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಯುಪಿಎಸ್‌ಸಿ ಪರೀಕ್ಷೆಯಲ್ಲಿ ವಿರಾಜಪೇಟೆಯ ಕೆ.ಎಲ್.ಸೂರಜ್ ಗೆ 525ನೇ ರ‍್ಯಾಂಕ್*

ಮಾರ್ಚ್ 7, 2026

*ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ : ಶಾಸಕ ಪೊನ್ನಣ್ಣರಿಗೆ ಸನ್ಮಾನ*

ಮಾರ್ಚ್ 7, 2026

*ಐಟಿ ಹಬ್ ಆಗಲಿದೆಯೇ ಸಾಂಸ್ಕೃತಿಕ ನಗರಿ?: ಮೈಸೂರು ಇನ್ಮುಂದೆ ರಾಜ್ಯದ ಎರಡನೇ ಐಟಿ ಸಿಟಿ; ಮಂಗಳೂರಿಗೂ ಸಿಕ್ತು ಐಟಿ ಪಾರ್ಕ್ ಭಾಗ್ಯ!*

ಮಾರ್ಚ್ 7, 2026

*ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ : ಶಾಸಕ ಪೊನ್ನಣ್ಣರಿಗೆ ಸನ್ಮಾನ*

ಮಾರ್ಚ್ 7, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಗೋಣಿಕೊಪ್ಪ, NEWS DESK ಮಾ.7 : ಈ ಸಾಲಿನ ಬಜೆಟ್ ಅಧಿವೇಶನದ ಮೊದಲ ದಿನವೇ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾನ್ಯ…

*ಐಟಿ ಹಬ್ ಆಗಲಿದೆಯೇ ಸಾಂಸ್ಕೃತಿಕ ನಗರಿ?: ಮೈಸೂರು ಇನ್ಮುಂದೆ ರಾಜ್ಯದ ಎರಡನೇ ಐಟಿ ಸಿಟಿ; ಮಂಗಳೂರಿಗೂ ಸಿಕ್ತು ಐಟಿ ಪಾರ್ಕ್ ಭಾಗ್ಯ!*

ಮಾರ್ಚ್ 7, 2026

*ಬೆಂಗಳೂರು-ಕಲಬುರಗಿ ಸೇರಿ ಹಲವು ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ; ಮಾರ್ಚ್ 15ರಿಂದ ಹೊಸ ವೇಳಾಪಟ್ಟಿ ಜಾರಿ!*

ಮಾರ್ಚ್ 7, 2026

*ಕಾವೇರಿ ಶಾಲೆಯಲ್ಲಿ ಅಚ್ಚುಕಟ್ಟಾಗಿ ನೆರವೇರಿದ ಬೀಳ್ಕೊಡುಗೆ ಹಾಗೂ ಪದವಿ ಪ್ರಧಾನ ಕಾರ್ಯಕ್ರಮ*

ಮಾರ್ಚ್ 6, 2026

*ಮೊಣ್ಣಂಡ ಕೆ.ಚೆಂಗಪ್ಪ ಹಾಗೂ ಚೆರಿಯಮನೆ ಕೃಷ್ಣಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮ*

ಮಾರ್ಚ್ 6, 2026

*ಬಸವೇಶ್ವರ ಸನ್ನಿಧಿಯಲ್ಲಿ ಮಳೆ ಪೂಜೆ*

ಮಾರ್ಚ್ 6, 2026

*ಸವ೯ ಜನರ ಪಾಲಿನ ಕಲ್ಯಾಣದ ಬಜೆಟ್ : ಶಾಸಕ ಡಾ.ಮಂಥರ್ ಗೌಡ ಶ್ಲಾಘನೆ*  

ಮಾರ್ಚ್ 6, 2026

*ಕೊಡಗಿನ ಜನರ ನಿರೀಕ್ಷೆ ಹುಸಿಯಾಗಿದೆ*

ಮಾರ್ಚ್ 6, 2026

*ಸಾಲದ ಶೂಲಕ್ಕೆ ತಳ್ಳಿದ ಬಜೆಟ್ : ವಿರಾಜಪೇಟೆ ಕ್ಷೇತ್ರದ ನಿರೀಕ್ಷೆಗಳು ಹುಸಿಯಾಗಿದೆ : ಬಿಜೆಪಿ ಟೀಕೆ*

ಮಾರ್ಚ್ 6, 2026

*ಅಸ್ಸಾಂನಲ್ಲಿ ಸುಖೋಯ್-30 ಯುದ್ಧ ವಿಮಾನ ಪತನ: ಇಬ್ಬರು ಪೈಲಟ್‌ಗಳು ಹುತಾತ್ಮ*

ಮಾರ್ಚ್ 6, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.