ಮಡಿಕೇರಿ ಅ.16 : ಕಾವೇರಿ ತುಲಾ ಸಂಕ್ರಮಣದ ಹಿನ್ನೆಲೆ ಕೊಡಗು ಏಕೀಕರಣ ರಂಗದ ವತಿಯಿಂದ ತಲಕಾವೇರಿಯಲ್ಲಿ ಒಂದು ತಿಂಗಳ ಕಾಲ ನಡೆಯುವ ಅನ್ನದಾನ ಕಾರ್ಯಕ್ರಮಕ್ಕೆ ಕೊಡಗು ರಕ್ಷಣಾ ವೇದಿಕೆಯ ಹಾರಂಗಿ ಹುದುಗೂರು ಘಟಕ ದಿನಸಿ ಸಾಮಾಗ್ರಿಗಳ ನೆರವು ನೀಡಿದೆ.
ತಲಕಾವೇರಿಗೆ ತೆರಳಿದ ವೇದಿಕೆಯ ಪ್ರಮುಖರು ಹಾರಂಗಿ ಹುದುಗೂರು ಗ್ರಾಮಸ್ಥರಿಂದ ಸಂಗ್ರಹಿಸಿದ ಅಕ್ಕಿ, ತೆಂಗಿನಕಾಯಿ, ತರಕಾರಿ ಮತ್ತಿತರ ಸಾಮಾಗ್ರಿಗಳನ್ನು ಸಮರ್ಪಿಸಿದರು. ಘಟಕದ ಅಧ್ಯಕ್ಷ ಬೊಳ್ತಂಡ ಸಜನ್ ಕಿಶೋರ್, ಸದಸ್ಯರಾದ ಭರತ್ ಬಿ.ಆರ್, ದಿನೇಶ್ ತಡ್ಡಿಕೊಪ್ಪ, ದಿನು ಕೋಳಿಬೈಲು, ಬಿಪಿನ್ ತಿಮ್ಮಯ್ಯ ಮಚಂಡ, ನವೀನ್ ನಡುಮನೆ, ಹೇಮಂತ್, ಪವಿಹೇಮಂತ್ ನಿಡ್ಯಮಲೆ, ಹಾರ್ದಿತ್ ಉಳ್ಳಿಯೆಡ್ಕ ಮತ್ತಿತರರು ಈ ಸಂದರ್ಭ ಹಾಜರಿದ್ದರು.









