ಮಡಿಕೇರಿ ಅ.17 : ಮಡಿಕೇರಿ ದಸರಾ ಸಾಂಸ್ಕೃತಿಕ ಕಾಯ೯ಕ್ರಮಗಳ ಎರಡನೇ ದಿನವಾದ ಇಂದು (ಅ.17) ವೈವಿಧ್ಯಮಯ ಕಾಯ೯ಕ್ರಮಗಳು ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ನಡೆಯಲಿದೆ.
ಮಡಿಕೇರಿಯ ನಾಟ್ಯ ನಿಕೇತನ ಸಂಗೀತ ನೖತ್ಯಶಾಲಾ ತಂಡದಿಂದ ನೃತ್ಯ ವೈವಿಧ್ಯ, ಕುಶಾಲನಗರದ ಕುಂದನ ನಾಟ್ಯಾಲಯ ತಂಡದಿಂದ , ಶ್ರೀ ಮಂಜುನಾಥ ಮಹಿಮೆ ನೃತ್ಯ ರೂಪಕ, ವಿರಾಜಪೇಟೆಯ ಜಗನ್ಮೋಹನ ನಾಟ್ಯಾಲಯ ತಂಡದಿಂದ ಭಾರತೀಯ ಶಾಸ್ತ್ರೀಯ ನೃತ್ಯ, ಕುಶಾಲನಗರದ ಟೀಮ್ ಅ್ಯಟಿಟ್ಯೂಡ್ ತಂಡದಿಂದ ನೃತ್ಯ ವೈವಿಧ್ಯ , ಕುಶಾಲನಗರದ ಮಂಜುಭಾಗ೯ವಿ ಮತ್ತು ತಂಡದಿಂದ ನೃತ್ಯ ಹಾಗೂ ಮಡಿಕೇರಿಯ ಮುತ್ತಿನ ಹಾರ ತಂಡದಿಂದ ಸಂಗೀತ ರಸಮಂಜರಿ ಕಾಯ೯ಕ್ರಮ ಸೇರಿದಂತೆ ವೈವಿಧ್ಯಮಯ ಕಾಯ೯ಕ್ರಮಗಳು ಆಯೋಜಿತವಾಗಿದೆ.
ಅಂತೆಯೇ ಗಾಂಧಿ ಮೈದಾನದ ಕಲಾಸಂಭ್ರಮ ಸಭಾಂಗಣದಲ್ಲಿ ಮೈಸೂರಿನ ಖ್ಯಾತ ಮರಳು ಕಲಾವಿದೆ ಎನ್.ಎಂ.ಗೌರಿ ರೂಪಿಸಿರುವ ಕಾಂತಾರ ಶೈಲಿಯ ವನದೇವ ಮರಳುಕಲಾಕೖತಿಯನ್ನೂ ವೀಕ್ಷಿಸಬಹುದಾಗಿದೆ. ಫೋಟೋ ಪಾಯಿಂಟ್ ನಲ್ಲಿ ಮಡಿಕೇರಿ ದಸರಾದ ಸಂಭ್ರಮವನ್ನು ತೆಗೆದುಕೊಳ್ಳಬಹುದಾಗಿದೆ ಎಂದು ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ತಿಳಿಸಿದ್ದಾರೆ.






