ಮಡಿಕೇರಿ ಅ.31 : ಕುಂಜಿಲ ಪೈನರಿ ಮುಸ್ಲಿಂ ಜಮಾಅತ್ತಿನ ಅಧೀನ ಸಂಘವಾದ ಕುಂಜಿಲದ ಖುತುಬುಲ್ ಆರಿಫೀನ್ ರಾತೀಬ್ ಸಂಘದ ಸಂಯುಕ್ತ ಆಶ್ರಯದಲ್ಲಿ 108ನೇ ವಾರ್ಷಿಕ ರಾತೀಬ್ ಮಜ್ಲಿಸ್ ಹಾಗೂ ದುವಾ ಮಜ್ಲಿಸ್ ನ.3 ರಂದು ನಡೆಯಲಿದೆ.
ಅಂದು ಮಗ್ರಿಬ್ ನಮಾಝಿನ ಬಳಿಕ ಮುಹಿಯದ್ದೀನ್ ರಾತೀಭ್ ಹಾಗೂ ಇಶಾ ನಮಾಜ್ ಬಳಿಕ ಭ್ರಹತ್ ಕುತ್ತಾರಾತೀಭ್ ಪಯ್-ನರಿ ಸಭಾಂಗಣದಲ್ಲಿ ನಡೆಯಲಿದ್ದು, ನಿಝಾರ್ ಅಹ್ಸನಿ ಕಕ್ಕಡಿಪುರಮ್ ಉಸ್ತಾದ್ ದುವಾ ನೇತೃತ್ವ ವಹಿಸಲಿದ್ದಾರೆ.
ಖುತುಬುಲ್ ಆರಿಫೀನ್ ರಾತೀಬ್ ಸಂಘದ ವತಿಯಿಂದ ನಡೆಯುವ ಈ ಬೃಹತ್ ರಾತೀಭ್ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಲು ಸಂಘಾಟಕರು ಮನವಿ ಮಾಡಿದ್ದಾರೆ.
ವರದಿ : ನೌಫಲ್ ಕಡಂಗ








