ಸೋಮವಾರಪೇಟೆ ಅ.31 : ಮೊಗೇರ ಸೇವಾ ಸಮಾಜದ ಕುಸುಬೂರು ಗ್ರಾಮ ಶಾಖೆಯ ವತಿಯಿಂದ ಬಜೆಗುಂಡಿ ಗ್ರಾಮದಲ್ಲಿ ಮೊಗೇರ ಸಮಾಜ ಬಾಂಧವರಿಗೆ ವಿವಿಧ ಕ್ರೀಡಾಕೂಟ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಶಾಖೆಯ ಅಧ್ಯಕ್ಷ ಎಚ್.ಬಿ. ರಾಮಚಂದ್ರ ವಹಿಸಿದ್ದರು. ಕ್ರೀಡಾಕೂಟವನ್ನು ಸಮಾಜದ ಜಿಲ್ಲಾಯಕ್ಷ ಪಿ.ಬಿ.ಜನಾರ್ಧನ್ ನೆರವೇರಿಸಿದರು. ರಾಜ್ಯಮಟ್ಟದಲ್ಲಿ ಹಾಕಿ ಕ್ರೀಡೆಯಲ್ಲಿ ಸಾಧನೆ ತೋರಿದ ಜೆ.ರಕ್ಷಿತಾ ಮತ್ತು ಎಂ.ರಶ್ಮಿ ಅವರುಗಳಿಗೆ ಕುಸುಬೂರು ಎಸ್ಟೇಟ್ ಮಾಲೀಕರಾದ ನಂದಿನಿ ಆನಂದ್ ಬಸಪ್ಪ ಅವರು ತಲಾ ರೂ. 5 ಸಾವಿರ ರೂ.ಪ್ರೋತ್ಸಾಹ ಧನ ವಿತರಿಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬೇಳೂರು ಗ್ರಾ.ಪಂ ಅಧ್ಯಕ್ಷೆ ಪಾರ್ವತಿ ಅವರನ್ನು ಸಮಾಜದ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮೊಗೇರ ಸಮಾಜದ ಜಿಲ್ಲಾ ಉಪಾಧ್ಯಕ್ಷ ಬಿ.ಎಂ.ದಾಮೋಧರ್, ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ಪಿ.ಕೆ.ಚಂದ್ರು, ಸಂಘದ ಜಿಲ್ಲಾ ಗೌರವಾಧ್ಯಕ್ಷ ಗೌತಮ್ ಶಿವಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಬಿ. ವಸಂತ, ಗೌರವಾಧ್ಯಕ್ಷ ನಂದ, ಗ್ರಾ.ಪಂ. ಸದಸ್ಯೆ ಸುಧಾ ಗಣೇಶ್ ಇದ್ದರು.