ಸೋಮವಾರಪೇಟೆ ಅ.31 : ತಾಲ್ಲೂಕು ರೈತ ಸಂಘದ ನೂತನ ಕಚೇರಿಯನ್ನು ರೈತ ಸಂಘದ ಜಿಲ್ಲಾಧ್ಯಕ್ಷ ಮನುಸೋಮಯ್ಯ ಉದ್ಘಾಟಿಸಿದರು.
ಸೋಮವಾರಪೇಟೆಯ ಸಿ.ಕೆ.ಸುಬ್ಬಯ್ಯ ರಸ್ತೆಯಲ್ಲಿ ತೆರೆದ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದ ಮನು ಸೋಮಯ್ಯ, ಸಂಘದ ಕಚೇರಿ ಪ್ರಾರಂಭ ಮಾಡಿ ಕುಳಿತುಕೊಂಡರೆ ಯಾವುದೇ ಪ್ರಯೋಜನವಿಲ್ಲ. ಕಂದಾಯ, ಸರ್ವೇ ಇಲಾಖೆ ಸೇರಿದಂತೆ ಹಲವು ಕಚೇರಿಗಳಲ್ಲಿ ರೈತರ ಕೆಲಸ ಕಾರ್ಯಗಳನ್ನು ಮಾಡಿಕೊಡದೆ, ಸಣ್ಣ ಮತ್ತು ಅತೀ ಸಣ್ಣ ರೈತರನ್ನು ಅಲೆಸುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳನ್ನು ಕಂಡು, ಕೆಲಸ ತಡವಾಗುತ್ತಿರುವ ಬಗ್ಗೆ ಮಾಹಿತಿ ಪಡೆದು, ಸರಿಯಾದ ದಾಖಲಾತಿ ಒದಗಿಸಿ ಕೆಲಸ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮಾಡಿಸಿಕೊಡಬೇಕಿದೆ ಎಂದರು.
ಕೆಲವು ಅಧಿಕಾರಿಗಳು ಹಣಕ್ಕಾಗಿ ಕೆಲಸ ಮಾಡದಿದ್ದಲ್ಲಿ ಅಂತಹವರ ವಿರುದ್ಧ ಜಿಲ್ಲೆಯಾದ್ಯಂತ ಹೋರಾಟ ಮಾಡುವ ಕೆಲಸವನ್ನು ರೈತ ಸಂಘದಿಂದ ಹಮ್ಮಿಕೊಳ್ಳಲಾಗುವುದು. ಅದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.
ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಂ.ದಿನೇಶ್, ಉಪಾಧ್ಯಕ್ಷ ಜಿ.ಎಂ.ಹೂವಯ್ಯ, ಪದಾಧಿಕಾರಿಗಳಾದ ಕೊಡ್ಲಿಪೇಟೆ ಪ್ರಸನ್ನ, ಮಚ್ಚಂಡ ಅಶೋಕ್, ಗರಗಂದೂರು ಲಕ್ಷ್ಮಣ, ಯಡವಾರೆ ರಾಜೇಶ್, ಬಿ.ಪಿ. ಅನಿಲ್, ಸುಭಾಶ್, ಗಣಗೂರು ಚಂದ್ರಶೇಖರ್ ಮತ್ತಿತರರು ಇದ್ದರು.









