Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ವಿರಾಜಪೇಟೆಯ ಶಿವಕೇರಿಯಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ವರಮಹಾಲಕ್ಷ್ಮಿ ಪೂಜಾ ಮಹೋತ್ಸವ*
  • *ಕಾನೂನು ಸುವ್ಯವಸ್ಥೆ ನಿರ್ವಹಣೆಯಲ್ಲಿ ಉತ್ತಮ ಕರ್ತವ್ಯ : ಆರು ಪೊಲೀಸ್ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ*
  • ಗೋಣಿಕೊಪ್ಪ ದಸರಾಕ್ಕೆ ₹1 ಕೋಟಿ ಅನುದಾನ : ದಶಮಂಟಪಗಳಿಗೆ ಹೆಚ್ಚಿನ ನೆರವಿನ ಭರವಸೆ
  • *ವಿರಾಜಪೇಟೆ ಬಿಲ್ಲವ ಸೇವಾ ಸಂಘದಿಂದ ನಾರಾಯಣ ಗುರು ಜಯಂತಿ*
  • *ಮಾನವ ವನ್ಯಜೀವಿ ಸಂಘರ್ಷ : ಸಾರ್ವಜನಿಕರ ಜತೆ ಸಮಾಲೋಚಿಸಿದ ಅರಣ್ಯ ಸಚಿವರು*
  • *ಕಸ್ತೂರಿ ರಂಗನ್ ವರದಿ : ರಾಜ್ಯ ಸರಕಾರ ರಾಜಕೀಯ ಮಾಡುವುದನ್ನು ಮೊದಲು ನಿಲ್ಲಿಸಲಿ : ಚೆಪ್ಪುಡಿರ ರಾಕೇಶ್ ದೇವಯ್ಯ ಒತ್ತಾಯ*
  • *ಮಡಿಕೇರಿಯಲ್ಲಿ ಬ್ರಹ್ಮರ್ಷಿ ಶ್ರೀ ನಾರಾಯಣ ಗುರು ಮತ್ತು ಕಾಯಕಯೋಗಿ ಶಿವಶರಣ ನುಲಿಯ ಚಂದಯ್ಯ ಜಯಂತಿ*
  • *ಶಾಸಕ ಪೊನ್ನಣ್ಣ ಅವರಿಗೆ ಮಹಿಳಾ ಕಾಂಗ್ರೆಸ್‌ನಿಂದ ಸನ್ಮಾನ*
  • *ಪೇಟೆ ಶ್ರೀ ರಾಮ ಮಂದಿರದಲ್ಲಿ ವಿಶೇಷ ಪೂಜೆ : ಮಡಿಕೇರಿ ದಸರಾ ಜನೋತ್ಸವದ ಪೂರ್ವಭಾವಿ ತಯಾರಿ ಆರಂಭ*
  • *ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ನಿರಾಕರಿಸಿರುವುದು ಸರಿಯಲ್ಲ : ಕರ್ನಲ್ ಸಿ.ಪಿ.ಮುತ್ತಣ್ಣ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಸಂವಿಧಾನ ದಿನಾಚರಣೆ : ಸಂವಿಧಾನ ಜಾಗೃತಿ ಜಾಥ ಅಭಿಯಾನಕ್ಕೆ ಚಾಲನೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಸಂವಿಧಾನ ದಿನಾಚರಣೆ : ಸಂವಿಧಾನ ಜಾಗೃತಿ ಜಾಥ ಅಭಿಯಾನಕ್ಕೆ ಚಾಲನೆ*

ಜನವರಿ 26, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಜ.26 : ಸಂವಿಧಾನ ದಿನಾಚರಣೆ ಪ್ರಯುಕ್ತ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರು  ಜಾಗೃತಿ ಅಭಿಯಾನದ ಸ್ತಬ್ಧಚಿತ್ರಕ್ಕೆ ಚಾಲನೆ ನೀಡಿದರು.
ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಚಾಲನೆ ನೀಡಿ ಮಾತನಾಡಿದ ಸಂವಿಧಾನದ ಮಹತ್ವ ತಿಳಿಯುವ ನಿಟ್ಟಿನಲ್ಲಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲೆಯ 103 ಗ್ರಾಮ ಪಂಚಾಯಿತಿಗಳಲ್ಲಿ 22 ದಿನಗಳ ಕಾಲ ಸಂವಿಧಾನ ಜಾಗೃತಿ ಜಾಥ ಅಭಿಯಾನ ನಡೆಯಲಿದ್ದು, ಶಾಲಾ-ಕಾಲೇಜುಗಳು ಸೇರಿದಂತೆ ಜಿಲ್ಲೆಯ ವಿವಿಧ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ಕೈಜೋಡಿಸುವಂತೆ ಕೋರಿದರು.
ಗ್ರಾ.ಪಂ.ವ್ಯಾಪ್ತಿಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ಸಿಗೆ ಸಹಕರಿಸುವಂತೆ ಮನವಿ ಮಾಡಿದರು.
‘ಭಾರತ ಸಂವಿಧಾನ ಪೀಠಿಕೆ, ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಿಕಲ್ಪನೆ ಸಾಮಾಜಿಕ ನ್ಯಾಯ, ಆರ್ಥಿಕ, ಮತ್ತು ರಾಜಕೀಯ ಪರಿಕಲ್ಪನೆ, ಬಸವಣ್ಣನವರ ವಚನಗಳು, ಭಾರತದ ಸಂವಿಧಾನದಲ್ಲಿ ವಚನಗಳ ಪ್ರಸ್ತುತತೆ, ಜಿಲ್ಲೆಯ ಸ್ಥಳೀಯ ಐತಿಹಾಸಿಕ ವ್ಯಕ್ತಿಗಳು, ಸಾಹಿತ್ಯ ದಿಗ್ಗಜರು ಸೇರಿದಂತೆ ಪ್ರಮುಖ ವ್ಯಕ್ತಿಗಳು ಮತ್ತು ಸ್ಥಳೀಯ ಕಲೆ ಮತ್ತು ಸಂಸ್ಕೃತಿಗಳನ್ನು ಒಳಗೊಂಡ ‘ಸ್ತಬ್ದಚಿತ್ರ’ ಮೂಲಕ ಸಂವಿಧಾನದ ಜಾಗೃತಿ ಜಾಥ ಅಭಿಯಾನ ನಡೆಯಲಿದೆ.
ಶಾಸಕರಾದ ಡಾ|| ಮಂತರ್ ಗೌಡ, ನಗರಸಭೆ ಅಧ್ಯಕ್ಷರಾದ ಎನ್.ಪಿ.ಅನಿತಾ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ವರ್ಣಿತ್ ನೇಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಶೇಖರ್, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ದಿವಾಕರ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ರೇವತಿ ರಮೇಶ್ ಇತರರು ಇದ್ದರು.
ಏಲ್ಲೆಲ್ಲಿ ಸಂವಿಧಾನ ಜಾಗೃತಿ ಅಭಿಯಾನ: ಮಡಿಕೇರಿ ತಾಲ್ಲೂಕಿನಲ್ಲಿ ಜನವರಿ, 27 ರಂದು ಪೆರಾಜೆ, ಚೆಂಬು, ಸಂಪಾಜೆ, ಮದೆ, ಮೇಕೇರಿ ಗ್ರಾಮಗಳಲ್ಲಿ ಜಾಥ ಸಂಚರಿಸಲಿದೆ.
ಜನವರಿ, 28 ರಂದು ಬೆಟ್ಟಗೇರಿ, ಚೇರಂಬಾಣೆ, ಕುಂದಚೇರಿ, ಕರಿಕೆ, ಜನವರಿ, 29 ರಂದು ಭಾಗಮಂಡಲ, ಅಯ್ಯಂಗೇರಿ, ಬಲ್ಲಮಾವಟಿ, ಎಮ್ಮೆಮಾಡು, ನಾಪೋಕ್ಲು, ಜನವರಿ, 30 ರಂದು ಕುಂಜಿಲ ಕಕ್ಕಬ್ಬೆ, ನರಿಯಂದಡ, ಕೊಣಂಜಗೇರಿಪಾರಾಣೆ, ಹೊದ್ದೂರು, ಮೂರ್ನಾಡು, ಜನವರಿ, 31 ರಂದು ಹಾಕತ್ತೂರು, ಮರಗೋಡು, ಹೊಸ್ಕೇರಿ, ಕಡಗದಾಳು, ಕೆ.ನಿಡುಗಣೆ, ಫೆಬ್ರವರಿ, 01 ರಂದು ಗಾಳಿಬೀಡು, ಮಕ್ಕಂದೂರು.
ಫೆಬ್ರವರಿ, 01 ರಂದು ಸೋಮವಾರಪೇಟೆ ಮತ್ತು ಕುಶಾಲನಗರ ತಾಲ್ಲೂಕಿನ ಕೆದಕಲ್, ಚೆಟ್ಟಳ್ಳಿ, ಫೆಬ್ರವರಿ, 02 ರಂದು ಸುಂಟಿಕೊಪ್ಪ, ಹರದೂರು, ಮಾದಪುರ, ಗರ್ವಾಲೆ, ಕಿರಗಂದೂರು ಗ್ರಾಮಗಳಲ್ಲಿ ಅಭಿಯಾನ ನಡೆಯಲಿದೆ.
ಫೆಬ್ರವರಿ, 03 ರಂದು ಐಗೂರು, ಬೇಲೂರು, ತೋಳೂರು ಶೆಟ್ಟಳ್ಳಿ, ಬೆಟ್ಟದಳ್ಳಿ, ಶಾಂತಳ್ಳಿ, ಫೆಬ್ರವರಿ, 04 ರಂದು ಸೋಮವಾರಪೇಟೆ ಪಟ್ಟಣ ಪಂಚಾಯಿತಿ, ಹಾನಗಲ್ಲು, ಚೌಡ್ಲು, ದೊಡ್ಡಮಳ್ತೆ, ಗೌಡಳ್ಳಿ ಇಲ್ಲಿ ಅಭಿಯಾನ ನಡೆಯಲಿದೆ.
ಫೆಬ್ರವರಿ, 05 ರಂದು ಬೆಸ್ಸೂರು, ಕೊಡ್ಲಿಪೇಟೆ, ಬ್ಯಾಡಗೊಟ್ಟ, ಹಂಡ್ಲಿ, ಶನಿವಾರಸಂತೆ, ಫೆಬ್ರವರಿ, 06 ರಂದು ದುಂಡಳ್ಳಿ, ನಿಡ್ತ, ಆಲೂರು ಸಿದ್ದಾಪುರ, ಗಣಗೂರು, ನೇರುಗಳಲೆ. ಫೆಬ್ರವರಿ, 07 ರಂದು ಶಿರಂಗಾಲ, ತೊರೆನೂರು, ಹೆಬ್ಬಾಲೆ, ಕೂಡಿಗೆ, ಕೂಡುಮಂಗಳೂರು ಇಲ್ಲಿ ಅಭಿಯಾನ ನಡೆಯಲಿದೆ.
ಫೆಬ್ರವರಿ, 08 ರಂದು ನಾಕೂರು ಶಿರಂಗಾಲ, 7ನೇ ಹೊಸಕೋಟೆ, ಕಂಬಿಬಾಣೆ, ಕೊಡಗರಹಳ್ಳಿ, ಗುಡ್ಡೆಹೊಸೂರು, ಫೆಬ್ರವರಿ, 09 ರಂದು ಕುಶಾಲನಗರ ಪುರಸಭೆ, ನಂಜರಾಯಪಟ್ಟಣ, ವಾಲ್ನೂರು ತ್ಯಾಗತ್ತೂರು, ನೆಲ್ಲಿಹುದಿಕೇರಿ,
ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕಿನಲ್ಲಿ ಫೆಬ್ರವರಿ,10 ರಂದು ಸಿದ್ದಾಪುರ, ಮಾಲ್ದಾರೆ, ಚೆನ್ನಯ್ಯನ ಕೋಟೆ, ಪಾಲಿಬೆಟ್ಟ, ಫೆಬ್ರವರಿ, 11 ರಂದು ಹೊಸೂರು, ಕಾರ್ಮಾಡು, ಅಮ್ಮತ್ತಿ, ಕಣ್ಣಂಗಾಲ, ಹಾಲುಗುಂದ, ಫೆಬ್ರವರಿ, 12 ರಂದು ಬಿಳುಗುಂದ, ಚೆಂಬೆಳ್ಳೂರು, ಕಾಕೋಟು ಪರಂಬು, ಕದನೂರು, ಕೆದಮುಳ್ಳೂರು, ಫೆಬ್ರವರಿ, 13 ರಂದು ವಿರಾಜಪೇಟೆ ಪುರಸಭೆ, ಬೇಟೋಳಿ, ಆರ್ಜಿ, ಬಿಟ್ಟಂಗಾಲ, ಬಿ.ಶೆಟ್ಟಿಗೇರಿ, ಫೆಬ್ರವರಿ, 14 ರಂದು ಹಾತೂರು, ಗೋಣಿಕೊಪ್ಪಲು, ಅರುವತ್ತೋಕ್ಲು, ಪೊನ್ನಂಪೇಟೆ, ಕಿರುಗೂರು, ಫೆಬ್ರವರಿ, 15 ರಂದು ಹುದಿಕೇರಿ, ಬಿರುನಾಣಿ, ಟಿ.ಶೆಟ್ಟಿಗೇರಿ, ಶ್ರೀಮಂಗಲ ಮತ್ತು ಕುಟ್ಟ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥ ನಡೆಯಲಿದೆ.
ಫೆಬ್ರವರಿ, 16 ರಂದು ಕೆ.ಬಾಡಗ, ನಾಲ್ಕೇರಿ, ಕಾನೂರು, ಬಲ್ಯಮಂಡೂರು, ನಿಟ್ಟೂರು, ಫೆಬ್ರವರಿ, 17 ರಂದು ಬಾಳಲೆ, ಪೊನ್ನಪ್ಪಸಂತೆ, ಮಾಯಮುಡಿ, ದೇವರಪುರ, ತಿತಿಮತಿ, ಈ ಪ್ರದೇಶಗಳಲ್ಲಿ ಸಂವಿಧಾನ ಜಾಗೃತಿ ಅಭಿಯಾನ ನಡೆಯಲಿದೆ.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ವಿರಾಜಪೇಟೆಯ ಶಿವಕೇರಿಯಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ವರಮಹಾಲಕ್ಷ್ಮಿ ಪೂಜಾ ಮಹೋತ್ಸವ*

ಆಗಷ್ಟ್ 28, 2026

*ಕಾನೂನು ಸುವ್ಯವಸ್ಥೆ ನಿರ್ವಹಣೆಯಲ್ಲಿ ಉತ್ತಮ ಕರ್ತವ್ಯ : ಆರು ಪೊಲೀಸ್ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ*

ಆಗಷ್ಟ್ 28, 2026

ಗೋಣಿಕೊಪ್ಪ ದಸರಾಕ್ಕೆ ₹1 ಕೋಟಿ ಅನುದಾನ : ದಶಮಂಟಪಗಳಿಗೆ ಹೆಚ್ಚಿನ ನೆರವಿನ ಭರವಸೆ

ಆಗಷ್ಟ್ 28, 2026

*ಕಾನೂನು ಸುವ್ಯವಸ್ಥೆ ನಿರ್ವಹಣೆಯಲ್ಲಿ ಉತ್ತಮ ಕರ್ತವ್ಯ : ಆರು ಪೊಲೀಸ್ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ*

ಆಗಷ್ಟ್ 28, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ ಪೊಲೀಸ್ ನ್ಯೂಸ್

ಮಡಿಕೇರಿ ಆ.28 NEWS DESK : ಕೊಡಗು ಜಿಲ್ಲೆಯಲ್ಲಿ ಉತ್ತಮ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿದ ಮೂವರು…

ಗೋಣಿಕೊಪ್ಪ ದಸರಾಕ್ಕೆ ₹1 ಕೋಟಿ ಅನುದಾನ : ದಶಮಂಟಪಗಳಿಗೆ ಹೆಚ್ಚಿನ ನೆರವಿನ ಭರವಸೆ

ಆಗಷ್ಟ್ 28, 2026

*ವಿರಾಜಪೇಟೆ ಬಿಲ್ಲವ ಸೇವಾ ಸಂಘದಿಂದ ನಾರಾಯಣ ಗುರು ಜಯಂತಿ*

ಆಗಷ್ಟ್ 28, 2026

*ಮಾನವ ವನ್ಯಜೀವಿ ಸಂಘರ್ಷ : ಸಾರ್ವಜನಿಕರ ಜತೆ ಸಮಾಲೋಚಿಸಿದ ಅರಣ್ಯ ಸಚಿವರು*

ಆಗಷ್ಟ್ 28, 2026

*ಮಡಿಕೇರಿಯಲ್ಲಿ ಬ್ರಹ್ಮರ್ಷಿ ಶ್ರೀ ನಾರಾಯಣ ಗುರು ಮತ್ತು ಕಾಯಕಯೋಗಿ ಶಿವಶರಣ ನುಲಿಯ ಚಂದಯ್ಯ ಜಯಂತಿ*

ಆಗಷ್ಟ್ 28, 2026

*ಶಾಸಕ ಪೊನ್ನಣ್ಣ ಅವರಿಗೆ ಮಹಿಳಾ ಕಾಂಗ್ರೆಸ್‌ನಿಂದ ಸನ್ಮಾನ*

ಆಗಷ್ಟ್ 28, 2026

*ಪೇಟೆ ಶ್ರೀ ರಾಮ ಮಂದಿರದಲ್ಲಿ ವಿಶೇಷ ಪೂಜೆ : ಮಡಿಕೇರಿ ದಸರಾ ಜನೋತ್ಸವದ ಪೂರ್ವಭಾವಿ ತಯಾರಿ ಆರಂಭ*

ಆಗಷ್ಟ್ 28, 2026

*ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ನಿರಾಕರಿಸಿರುವುದು ಸರಿಯಲ್ಲ : ಕರ್ನಲ್ ಸಿ.ಪಿ.ಮುತ್ತಣ್ಣ*

ಆಗಷ್ಟ್ 28, 2026

*ಆ.29ರಂದು ಕೊಡಗು ಜಿಲ್ಲಾ ಮಟ್ಟದ ಎಸ್‌ಸಿ/ಎಸ್‌ಟಿ ಕುಂದುಕೊರತೆ ಸಭೆ*

ಆಗಷ್ಟ್ 28, 2026

*ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜ್ ನಲ್ಲಿ ಸರ್ಕಾರಿ ವಲಯ, ನಾಗರಿಕ ಸೇವೆಗಳಲ್ಲಿ ವೃತ್ತಿ ಅವಕಾಶಗಳ ಕುರಿತು ಕಾರ್ಯಾಗಾರ : ಸಾಮರ್ಥ್ಯ, ಆಸಕ್ತಿ ಹಾಗೂ ಗುರಿಗಳನ್ನು ಗುರುತಿಸಿಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳಲು ಮೇಜರ್ ಪ್ರೊ. ರಾಘವ ಬಿ. ಕರೆ *

ಆಗಷ್ಟ್ 28, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.