ಮಡಿಕೇರಿ ಫೆ.19 NEWS DESK : ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಏಕಾಧಿಪತಿ ಸ್ವಾತಂತ್ರ್ಯ ಸಿಕ್ಕಿದ ನಂತರ ಆರಂಭವಾಯಿತು. ಅಂದು ಕಾಂಗ್ರೆಸ್ ಪಕ್ಷ ಬ್ರಿಟಿಷರ ತೆಕ್ಕೆಯಿಂದ ಆಡಳಿತ ವಹಿಸಿಕೊಳ್ಳುವಾಗ ಅಂದು ಪ್ರಧಾನಿ ಅಭ್ಯರ್ಥಿಯಾಗಿ ನೆಹರು ಅವರು ಆಯ್ಕೆಯಾದರು. ಸರ್ದಾರ್ ವಲಭ ಪಟೇಲ್, ಲಾಲ್ ಬಹುದೂರ್ ಶಾಸ್ತ್ರಿ ಇಂತಹ ಅಭ್ಯರ್ಥಿ ಇದ್ದರು. ಅವರು ಗಾಂಧೀಜಿಯ ಆಪ್ತರಾಗಿದ್ದ ನೆಹರು ರವರನ್ನು ಆಯ್ಕೆ ಮಾಡಿದರು. ಗಾಂಧೀಜಿಯ ಮಾತು ಕೇಳುವುದಿಲ್ಲ ಎಂಬ ಕಾರಣಕ್ಕೆ ಅವರನ್ನು ಕೈ ಬಿಡಲಾಯಿತು. ಅಂದಿನಿಂದ ಕಾಂಗ್ರೆಸ್ ಪಕ್ಷದಲ್ಲಿ ಏಕಾಧಿಪತಿ ಆಡಳಿತ ಜಾರಿಗೆ ಬಂತು. ಆದರೆ ಇಂದಿರಾ ಗಾಂಧೀಜಿಯು ಪ್ರಧಾನಿ ಆಗುವವರೆಗೂ ಕಾಂಗ್ರೆಸ್ ಪಕ್ಷದಲ್ಲಿ ಅಷ್ಟಾಗಿ ಏಕಾಧಿಪತಿ ಇರಲಿಲ್ಲ. ಯಾವಾಗ ಇಂದಿರಾ ಗಾಂಧೀಜಿಯ ಸುಪ್ರದಿಗೆ ಪಕ್ಷ ಬಂತೋ ಅಂದಿನಿಂದ ಇಂದಿನವರೆಗೆ ಕಾಂಗ್ರೆಸ್ ಪಕ್ಷ ಅವರ ಕುಟುಂಬದ ಹಿಡಿತದಲ್ಲಿ ಇದೆ. ಇಂದಿರಾಗಾಂಧಿ ನಂತರ ರಾಜೀವ್ ಗಾಂಧಿ ಅಲ್ಪ ಕಾಲ ಆಡಳಿತ ನಡೆಸಿದರು. ಅಲ್ಲಿಂದ ಕಾಂಗ್ರೆಸ್ ಪಕ್ಷವನ್ನು ಹಿಡಿತದಲ್ಲಿ ಇಟ್ಟುಕೊಂಡು ರಿಮೋಟ್ ಆಡಳಿತ ನಡೆಸಿದರು. ಸೋನಿಯಾ ಗಾಂಧಿ ಇದು ಒಂದು ರೀತಿಯ ಏಕಾಧಿಪತಿ ಆಡಳಿತವೇ.
ಇನ್ನು ಭಾರತದಲ್ಲಿ ಏಕಾಧಿಪತಿ ನಡಿಸಿದ ಆಡಳಿತಗಾರರಿಗಿಂತ ಆಡಳಿತಗಾರ್ತಿಯರೇ ಹೆಚ್ಚು. ಅವರಲ್ಲಿ ತಮಿಳುನಾಡಿನ ಜಯಲಲಿತ ದಶಕಗಳ ಕಾಲ ಪಾರುಪತ್ಯ ನಡಸಿದರು. ಹಾಗೆ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಉತ್ತರ ಪ್ರದೇಶದ ಮಾಯಾವತಿ. ಇವರುಗಳು ಆಯಾ ರಾಜ್ಯದಲ್ಲಿ ಪಾರುಪತ್ಯ ನಡೆಸಿದರು. ಆಡಳಿತಗಾರರಲ್ಲಿ ಪ್ರಮುಖವಾಗಿ ದೀರ್ಘವಾದ ಆಡಳಿತ ನಡೆಸಿದ ತಮಿಳುನಾಡಿನ ಎಂ.ಜಿ ರಾಮಚಂದ್ರ ಮತ್ತು ಡಿ.ಎಂ. ಕರುಣಾನಿಧಿ. ಇವರು ಪಕ್ಷ ಮತ್ತು ಆಡಳಿತ ಎರಡರಲ್ಲೂ ಹಿಡಿತ ಇಟ್ಟು ಕೊಂಡಿದ್ದರು. ಅಲ್ಲದೇ ಇನ್ನು ಅನೇಕ ನಾಯಕರು ದೀರ್ಘ ಕಾಲ ಹಲವು ರಾಜ್ಯಗಳಲ್ಲಿ ಆಡಳಿತ ನಡೆಸಿದ್ದಾರೆ. ಅವರು ಏಕಧಿಪತ್ಯ ನಡೆಸಲು ಸಾಧ್ಯವಾಗಲಿಲ್ಲ. ಏಕೆಂದರೆ ಅವರುಗಳ ಮೇಲೆ ಅವರ ಪಕ್ಷದ ಹಿಡಿತವಿತ್ತು. ಅವರುಗಳಲ್ಲಿ ಪ್ರಮುಖರು ಅದರಲ್ಲಿ ಸಿಕ್ಕಿಮ್ ರಾಜ್ಯದ ನಾರ್ ಬಹಾದ್ದೂರ್ ಭಂಡಾರಿ, ಪವನ್ ಕುಮಾರ್, ಗೆಗೊಂಗ್ ಅಪಾಂಗ್, ಮಿಜಾರಂನ ಲಾಲ ತಂಹಾಲ, ಕರ್ನಾಟಕದ ದೇವರಾಜ್ ಅರಸ್, ಹರಿಯಾಣದ ಭಜನ್ ಲಾಲ್ ಬನ್ಸಿ ಲಾಲ್, ರಾಜಸ್ತಾನದ ಮೋಹನ್ ಲಾಲ್ ಸುಖಡಿಯಾ, ಭೈರೋನ್ ಶೇಖವತ್, ವಸುಂದರರಾಜೇ, ಅಶೋಕ್ ಗೀಹಿಟ್ ಪುದುಚೆರಿಯ ರಂಗಸ್ವಾಮಿ, ಅಸ್ಸಾಂನ ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾನ್, ದಿಗ್ವಿಜಯ ಸಿಂಗ್ ಮಿಜೋರಂನ ಲಾಲ್ ತಂಹಾಲ, ಜೋರಂತಂಗ, ಹಿಮಾಚಲ ಪ್ರದೇಶದ ಯಶ್ವನಂತ ಸಿಂಗ್ ಪರಮಾರ್ ವಿರಭದ್ರ ಸಿಂಗ್, ತ್ರಿಪುರದ ಮಣಿಕ್ ಸರ್ಕಾರ್, ನಿರ್ಪೆನ್ ಚಕ್ರಬೋರ್ತಿ, ಪಂಜಾಬ್‍ನ ಪ್ರಕಾಶ್ ಸಿಂಗ್ ಬಾದಲ್ ಗೋವಾದ ಪ್ರತಾಪ್ ಸಿಂಗ್ ರಾನೆ, ಬಿಹಾರನಲ್ಲಿ ಶ್ರೀ ಕೃಷ್ಣ ಶಿನ್ಹ, ನಿತೀಶ್ ಕುಮಾರ್, ನಾಗಾಲ್ಯಾಂಡ್‍ನ ನೆಲಫಿವು ರಿಯೋ, S,. ಅ. ಜಮೀರ್, ಛಟ್ಟಿಸ್‍ಗಡ್ ರಮಣ್ ಸಿಂಗ್, ಮಣಿಪುರದ ಒಕಾರಾಮ್ ಇಬೋಹೀ ಸಿಂಗ್, ಅಸ್ಸಾಂನ ತರುನ್ ಗೊಗಲ್, ಪುದುಚೆರಿಯ ರಂಗಸ್ವಾಮಿ, ಮೇಘಾಲಯದ ಸಾಂಗ್ಮ ಮಹಾರಾಷ್ಟ್ರದ ವಸಂತೋರೊ ನಾಯಕ್, ಜಮ್ಮು ಮತ್ತು ಕಾಶ್ಮೀರದ ಫಾರೂಕ್ ಅಬ್ದುಲ್ಲ ಉತ್ತರ ಪ್ರದೇಶದ ಗೋವಿಂದ ಬಲ್ಲಭ ಪಂತ್, ಕೇರಳದ, ನಾಯರ್, ಪಶ್ಚಿಮಬಂಗಾಳದ ಬಿಧಾನ್ ಚಂದ್ರ ರೊಯ್, ಬುದ್ಧದೆಬ್ ಭಟ್ಟಾಚಾರ್ಯ, ಜ್ಯೋತಿ ಬಸು ದೆಹೆಲಿಯ ಲೀಲಾ ದಿಕ್ಷಿತ್, ಗುಜರಾತ್ ರಾಜ್ಯದಲ್ಲಿ ನರೇಂದ್ರ ಮೋದಿ, ಒರಿಸ್ಸಾದಲ್ಲಿ ಜಾನಕೀ ಬಳ್ಳಾಭಾ ಪಠನಾಯ್ಕ್, ಬಿಜು ಪಟ್ ನಾಯಕ ಹಾಗೂ ನವೀನ್ ಪಟ್ ನಾಯಕ್, ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ಹೀಗೆ ಅನೇಕ ನಾಯಕರು ಆಡಳಿತ ನಡೆಸಿದರು. ಈಗಿನ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಒಂದು ರೀತಿಯ ಏಕಾಧಿಪತಿ ಆಡಳಿತವೇ. ಅವರ ಅನೇಕ ನಿರ್ಧಾರಗಳು ಅದನ್ನು ಪುಷ್ಟಿಕರಿಸುತ್ತೆ. ಪ್ರಜಾಪ್ರಭುತ್ವದಲ್ಲಿ ಏಕಾಧಿಪತಿ ಆಡಳಿತ ಸಾಧಕ ಬಾಧಕಗಳನ್ನು ನಾವು ಗಮನಿಸಬೇಕಾದ ಅಂಶಗಳು ತುಂಬಾ ಇದೆ. ಇದರಿಂದ ಸಮಾಜಕ್ಕೆ ಒಳ್ಳೇದು ಆಗಿದೆ, ಕೆಟ್ಟದು ಆಗಿದೆ. ಅಭಿವೃದ್ಧಿ ದೃಷ್ಟಿಯಿಂದ ಏಕಾಧಿಪತಿ ಆಡಳಿತವು ಒಳ್ಳೇದು ಆಗಿದೆ, ಹಾಗೆ ಮಾರಕವು ಆಗಿದೆ. ಇಂದಿರಾ ಗಾಂಧಿ ತೆಗೆದುಕೊಂಡ ಅನೇಕ ನಿರ್ಧಾರಗಳು ಏಕಪಕ್ಷೀಯವೇ ಆಗಿತ್ತು. ಬಸ್‍ಗಳ, ಬ್ಯಾಂಕ್ ಗಳ ರಾಷ್ಟ್ರಿಕರಣ, ಹೀಗೆ ಹಲವು ನಿರ್ಧಾರಗಳು ಏಕಪಕ್ಷೀಯವಾದ್ದರಿಂದ ಒಳ್ಳೇದು ಆಗಿದೆ ಕೆಟ್ಟದು ಆಗಿದೆ. ಅಂದು ಭಾರತವು ಆರ್ಥಿಕವಾಗಿ ಬಹಳ ಹಿಂದುಳಿದ ದೇಶವಾಗಿತ್ತು. ಅಂದು ಅಮೇರಿಕಾ ಸಂಸ್ಥಾನ ಮತ್ತೆ ರಶ್ಯಯನ್ ಸಂಸ್ಥೆ ಒಕ್ಕೂಟಗಳು ಬಲಿಷ್ಠವಾಗಿತು. ಅಂದು ಎರಡು ದೇಶದ ನಡುವೆ ಶೀತಲ ಸಮರ ನಡೆಯುವ ಕಾಲ. ಸ್ವಲ್ಪ ಎಚ್ಚರ ತಪ್ಪಿದ್ರ್ರೂ ಮೂರನೇ ಮಹಾಯುದ್ಧ ನಡೆಯುವ ಸಾಧ್ಯತೆ ಹೆಚ್ಚಾಗಿತ್ತು. ಅಮೇರಿಕಾ ಸಂಸ್ಥೆಯು ನಮ್ಮ ನೆರೆಯ ದೇಶ ಪಾಕಿಸ್ತಾನಕ್ಕೆ ಪೂರ್ತಿ ಬೆಂಬಲ ನೀಡಿತ್ತು. ಅಂತ ಪರಿಸ್ಥಿತಿಯನ್ನು ನಿಭಾಯಿಸುವುದು ತುಂಬಾ ಕಷ್ಟವಾಗಿತ್ತು. ವಿದೇಶಾಂಗ ನೀತಿಯ ವಿಷಯ ಬಂದಾಗ ವಾಜಪೇಯಿ ಅವರ ಸಲಹೆ ಎಲ್ಲರೂ ತೆಗೆದು ಕೊಳ್ಳುತ್ತಿದ್ದರು. ಅನೇಕ ಬಾರಿ ವಿಶ್ವ ಸಂಸ್ಥೆಯಲ್ಲಿ ಭಾರತದ ಪರವಾಗಿ ವಾದ ಮಂಡಿಸಿ ವಿಶ್ವವನ್ನೇ ಬೆರಗು ಗೊಳಿಸಿದ ಕೀರ್ತಿ ಇವರದು. ಅಂದು ಆಡಳಿತ ಪಕ್ಷವೆಂದರೆ ಪಕ್ಕಾ ವಿರೋಧಿಗಳು. ಅಂದು ಚುನಾವಣೆಗಳು ಅಜಂಡ ಮೇಲೆ ನಡೆಯುತ್ತಿದ್ದ ಕಾಲ. ಈಗ ಹಣ ಅಧಿಕಾರದ ಮೇಲೆ ನಡೆಯುತ್ತದೆ. ಅಂದು ಇಂದಿರಾ ಗಾಂಧಿ ಏಕಾಧಿಪತಿ ಆಡಳಿತ ನಡೆಸಿದಾದ್ರೂ ಕಾಂಗ್ರೆಸ್ ವರ್ಕಿಂಗ್ ಕಮಿಟ್ ಇತ್ತು. ಅದರಲ್ಲಿ ಬಹಳಷ್ಟು ನಿರ್ಧಾರಗಳು ಅಲ್ಲಿಯೇ ನಿರ್ಧಾರ ಆಗುತ್ತಾ ಇತು.್ತ ಇಂದಿರಾ ಅವರ ಎರಡು ನಿರ್ಧಾರ ಅವರ ಬಾಳಿಗೆ ಮುಳುವಾಯಿತು. ಒಂದು ತುರ್ತು ಪರಿಸ್ಥಿತಿ ಮತ್ತು ಘೋಷಣೆ ಇನ್ನೊಂದು ಬ್ಲೂಸ್ಟಾರ್ ಆಪರೇಷನ್ ಒಂದು ಅಧಿಕಾರ ಕಳೆದು ಕೊಂಡರೆ ಇನ್ನೊಂದು ಪ್ರಾಣವನ್ನೆ ತೆಗೆಯಿತು. ಅವರ ನಂತರ ಏಕಾಧಿಪತಿ ಆಡಳಿತ ನಡೆಸುತ್ತಿರುವವರು ಅಂದರೆ ನರೇಂದ್ರ ಮೋದಿಜಿ. ಅವರ ಆಡಳಿತವು ಕೂಡ ಒಂದು ರೀತಿಯ ಏಕಪಕ್ಷೀಯವಾದದ್ದೇ. ನೋಟ್ ಬ್ಯಾನ್ ಇರಲಿ, ಬ್ಯಾಂಕ್‍ಗಳ ವಿಲೀನ, ಉಗ್ರವಾದದ ವಿರೋದ ಹೋರಾಟ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗಲಿ, ರಾಷ್ಟ್ರೀಯ ಮಟ್ಟದಲ್ಲಿ ಕೈಗೊಳ್ಳಬೇಕಾದ ವಿಷಯಗಳ ಬಗ್ಗೆ ಅಥವಾ ಪಕ್ಷದಲ್ಲಿನ ಅಂತರಿಕ ವಿಷಯವೇ ಆಗಲಿ, ಯಾವುದೇ ತೀರ್ಮಾನ ಏಕಪಕ್ಷೀಯವಾಗಿದೆ. ಈಗ ಒಂದು ರೀತಿಯಲ್ಲಿ ಮೋದಿಯದೇ ಹವಾ.
ಇಲ್ಲಿ ಏಕಾಧಿಪತಿ ಆಡಳಿತ ಒಂದು ರೀತಿಯಲ್ಲಿ ಒಳ್ಳೇದು. ಅದು ನಾಯಕರ ಮನೋಸ್ಥಿತಿ ಮೇಲೆ ಅವಲಂಬಿತವಾಗಿರುತ್ತದೆ. ಅನೇಕ ವಿಷಯಗಳ ನಿರ್ಣಯವನ್ನು ಏಕಪಕ್ಷೀಯವಾಗಿ ಕೈಗೊಂಡರೆ ದೇಶದ ಭದ್ರತೆ ವಿಷಯದಲ್ಲಿ ಒಳ್ಳೇದು. ಇಂದಿರಾ ಅವರ ಬ್ಯಾಂಕ್ ಬಸ್‍ಗಳ ರಾಷ್ಟ್ರೀಯಕರಣ, ಮೋದಿಜಿಯ ನೋಟ್ ಬ್ಯಾನ್ ಇಂತಹ ಆಡಳಿತ ವಿಷಯಗಳು ಸೋರಿಕೆ, ಅದು ದುರುಪಯೋಗವಾಗದಂತೆ ತಡೆಯುತ್ತದೆ. ಆಡಳಿತದಲ್ಲಿ ಅಭಿವೃದ್ಧಿಯಲ್ಲಿ ಜನಪರ ನಿರ್ಣಯಗಳಿಗೆ ಬೆಂಬಲ ಸಿಗುತ್ತದೆ. ಅಂತರಾಷ್ಟ್ರದ ವಿಷಯದಲ್ಲಿ ಯಾರು ತಲೆ ಕೆಡಿಸಿಕೊಳ್ಳುವುದಿಲ್ಲ. ಶೇಖಡ 90 ರಷ್ಟು ಜನರಿಗೆ ಅರ್ಥ ಆಗುವುದಿಲ್ಲ. ಇನ್ನು ಪಕ್ಷದ ವಿಚಾರದಲ್ಲಿ ಎಲ್ಲಿಯವರೆಗೆ ಒಬ್ಬ ನಾಯಕನಿಗೆ ಜನ ಬೆಂಬಲವಿರುತ್ತದೆಯೋ ಅಲ್ಲಿಯವರಿಗೆ ಅವರು ಆಡಳಿತ ನಡೆಸುತ್ತಾರೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಇರುವವರೆಗೂ ಪಕ್ಷ ಅವರ ಹಿಡಿತದಲ್ಲಿ ಇತ್ತು. ಇಂದು ರಾಷ್ಟ್ರೀಯ ಪಕ್ಷದಿಂದ ಪ್ರಾದೇಶಿಕ ಪಕ್ಷವಾಗಿದೆ. ಕಾಂಗ್ರೆಸ್‍ನಲ್ಲಿ ಇಂದು ಆ ಪಕ್ಷಕ್ಕೆ ಒಬ್ಬನೇ ಒಬ್ಬ ಮಾಸ್ ಲೀಡರ್ ಇಲ್ಲ. ಇನ್ನು ಭಾರತಿಯ ಜನತಾಪಕ್ಷ ಕೂಡ ಅದೇ ದಾರಿಯಲ್ಲಿ ಸಾಗುತ್ತಿದೆ. ಅಂದರೆ ಉತ್ಪ್ರೇಕ್ಷೆಯಾಗದು ವಾಜಪೇಯಿ, ಅಡ್ವಾಣಿ ಅಂತ ನಾಯಕರಿದಾಗ ಅನೇಕ ಎರಡನೇ ಹಂತದ ನಾಯಕರಿದ್ದರು. ಉದಾಹರಣೆಗೆ ಸುಷ್ಮ ಸ್ವರಾಜ್, ಪ್ರಮೋದ್ ಮಹಾಜನ್, ಉಮಾ ಭಾರತಿ, ಯಶ್ವನಂತ ಸಿನ್ಹ, ಹೀಗೆ ಹೆಸರಿಸಿದರೆ ದೊಡ್ಡ ಪಟ್ಟಿಯೇ ಸಿಗುತ್ತೆ. ಯಾವಾಗ ಮೋದಿಜಿ ಹವಾ ಆರಂಭವಾಯಿತೊ ಎರಡನೇ ಹಂತದ ನಾಯಕರ ಬೆಳವಣಿಗೆ ಕುಂಠಿತಗೊಂಡಿತು ಎನ್ನಬಹುದು. ಮೋದಿಜಿ ಪ್ರಾಯೋಗಿಕವಾಗಿ ಅನೇಕ ಯುವ ಚಿಂತಕರಿಗೇ ಲೋಕಸಭಾ ಸದ್ಯಸರಾಗಿ ಮಾಡಿದ್ದರು. ಯಾರು ಮ್ಯಾಶ್ ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳಲಿಲ್ಲ. ಅವರುಗಳು ಮೋದಿಜಿ ಹವಾದಲ್ಲಿ ಮಂಕಾದರೋ ಅಥವಾ ನಮ್ಮ ರಾಜಕೀಯ ವ್ಯವಸ್ಥೆ ಅವರನ್ನು ನಾಯಕರಾಗಲು ಬಿಡಲಿಲ್ಲವೋ ಎಂಬುದು ಯಕ್ಷ ಪ್ರಶ್ನೆ ಆಗಿ ಉಳಿಯಿತು.
ಕರ್ನಾಟಕದಲ್ಲಿ ದೇವರಾಜ್ ಅರಸ್ ಅನೇಕ ಎರಡನೇ ಹಂತದ ನಾಯಕರನ್ನು ಬೆಳೆಸಿದ್ದರು. ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಅನೇಕ ರಾಜ್ಯಗಳಲ್ಲಿ ಪ್ರಾದೇಶಿಕ ರಾಜಕೀಯ ಪಕ್ಷಗಳು ಅನೇಕ ವರ್ಷಗಳ ಕಾಲ ಏಕಾಧಿಪತಿ ಆಡಳಿತ ನಡೆಸಿದರು. ಅವರ ನಂತರ ಅವರ ಮಕ್ಕಳನ್ನೆ ನಾಯಕರನ್ನಾಗಿ ಬಿಂಬಿಸುವ ಪ್ರಯತ್ನ ಮಾಡಿ ಸೋತವರೆ ಹೆಚ್ಚು. ತಾವು ಉಳಿಯಲಿಲ್ಲ ಪಕ್ಷವನ್ನು ಉಳಿಸಲಿಲ್ಲ. ನಾಯಕತ್ವ ಚಳುವಳಿ, ಹೋರಾಟಗಳಿಂದ ರೂಪುಗೊಳ್ಳಬೇಕೇ ಹೊರತು ವಂಶ ಪರಂಪರೆಯಿಂದ ಬರಬಾರದು. ಪ್ರಜಾಪ್ರಭುತ್ವದ ಆಡಳಿತದಲ್ಲಿ ಏಕಾಧಿಪತಿ ಆಡಳಿತ ಒಂದು ಕೋನದಿಂದ ನೋಡಿದರೆ ಒಳ್ಳೇದು. ಏಕೆಂದರೆ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲು ಏಕ ನಿರ್ಣಯ ಒಳ್ಳೇದು. ಆದರೆ ಅದು ಪ್ರಜಾ ವಿರೋದಿ. ಆದರೆ ಕಷ್ಟ. ನನ್ನ ವಿಶ್ಲೇಷಣೆ ಪ್ರಕಾರ ಏಕಾಧಿಪತಿ ಆಡಳಿತ ನಡೆಸಿದರೂ ಅಥವಾ ಬಹು ನಾಯಕತ್ವ ಆಡಳಿತ ನಡೆಸಿದರೂ ಕೊನೆಗೆ ಉಳಿಯುವುದು ಶೂನ್ಯ. ಏಕೆಂದರೆ ಪ್ರಜಾಪ್ರಭುತ್ವದಡಿಯಲ್ಲಿ ಬಹುನಾಯಕತ್ವದಡಿಯಲ್ಲಿ ಕಾರ್ಯ ನಿರ್ವಹಿಸಿದ ಪಕ್ಷಗಳು ಹಾಗೆ ಏಕಾಧಿಪತಿ ಆಡಳಿತ ನಡೆಸಿದ ಪಕ್ಷಗಳು ಹೋಳಾಗಿದ್ದೆ.
ಕೊನೆ ಮಾತು:- ರಾಜರ ಆಡಳಿತವಿರಲಿ, ಪ್ರಜಾಪ್ರಭುತ್ವ ಆಡಳಿತವೇ ಇರಲಿ ಏಕಾಧಿಪತಿ ಆಡಳಿತವೇ ಇರಲಿ ಎಷ್ಟೇ ಒಳ್ಳೆಯ ಆಡಳಿತ ನೀಡಲಿ ಕೊನೆಗೆ ರಾಜಕೀಯ ಚದುರಂಗದಾಟಕ್ಕೆ ಬಲಿಯಾಗಿ ಅಧಿಕಾರ ಕಳೆದು ಕೊಳ್ಳುವುದು ಗ್ಯಾರಂಟಿ.
ವರದಿ : ಬಾಳೆಯಡ ಕಿಶನ್ ಪೂವಯ್ಯ,
ವಕೀಲರು ಮತ್ತು ನೋಟರಿ
ಫೋನ್ : 94488995554

