ನಾಪೋಕ್ಲು ಫೆ.19 NEWS DESK : ಚಾಲಕನ ನಿಯಂತ್ರಣ ತಪ್ಪಿದ ಬಸ್ಸೊಂದು ರಸ್ತೆಯ ಬದಿಗೆ ಸರಿದ ಘಟನೆ ಕೋರಂಗಳದಲ್ಲಿ ಜರುಗಿದೆ.
ಬೆಂಗಳೂರು ಕಡೆಯಿಂದ ಭಾಗಮಂಡಲಕ್ಕೆ ತೆರಡುತ್ತಿದ್ದ ಕರ್ನಾಟಕ ಸರಕಾರ ರಸ್ತೆ ಸಾರಿಗೆ ರಾಜಹಂಸ ಬಸ್ಸೊಂದು ಅಯ್ಯಂಗೇರಿ ಗ್ರಾಮದ ಕೋರಂಗಲ ಶಾಲೆಯ ಸಮೀಪ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಸರಿದಿದ್ದು, ಅಪಾಯದಂಚಿನಿಂದ ಪಾರಾಗಿದೆ.
ಬಸ್ಸಿಗೆ ಸಣ್ಣ ಪುಟ್ಟ ಹಾನಿಯಾಗಿದ್ದು,ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ.
ವರದಿ : ದುಗ್ಗಳ ಸದಾನಂದ








