ಮಡಿಕೇರಿ ಫೆ.26 NEWS DESK : ಪರಿಸರ ಪ್ರೇಮಿ, ನಿವೃತ್ತ ಅರಣ್ಯಾಧಿಕಾರಿ ಕೆ.ಎಂ.ಚಿಣ್ಣಪ್ಪ (84) ನಿಧನ ಹೊಂದಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಕೊನೆಯುಸಿರೆಳೆದರು.
ನಾಗರಹೊಳೆ ನಿವಾಸಿಯಾಗಿರುವ ಚಿಣ್ಣಪ್ಪ ಅವರು ಅರಣ್ಯ ಮತ್ತು ವನ್ಯಜೀವಿಗಳ ಬಗ್ಗೆ ಹೆಚ್ಚು ಒಲವು ಹೊಂದಿದ್ದರು. ಅರಣ್ಯದ ರಕ್ಷಣೆಯೇ ತಮ್ಮ ಉಸಿರು ಎಂಬಂತೆ ಜೀವನವನ್ನು ಸಾಗಿಸಿದರು. ಇವರು ವನ್ಯಜೀವಿ ಮತ್ತು ಕಾಡಿನ ರಕ್ಷಣೆಗಾಗಿ ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಾ ಜನರಲ್ಲಿ ಪರಿಸರ ಪ್ರೇಮ ಹುಟ್ಟಿಸಿದರು. ಮೃತರ ಅಂತ್ಯಕ್ರಿಯೆ ಮಂಗಳವಾರ (ಫೆ.27) ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಚಿಣ್ಣಪ್ಪ ಅವರ ನಿಧನಕ್ಕೆ ಪರಿಸರ ಪ್ರೇಮಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.