ನಾಪೋಕ್ಲು ಮಾ.9 NEWS DESK : ಮೂರ್ನಾಡು ಪ್ರಥಮ ದರ್ಜೆ ಕಾಲೇಜಿನಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ನಡೆಯಿತು.
ಭಾರತದ ಸಂವಿಧಾನದಲ್ಲಿ ಮತದಾನ ಪ್ರಕ್ರಿಯೆ ಎಂಬುದು ಎಷ್ಟು ಮುಖ್ಯ ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಯಿತು. ಪ್ರತಿಯೊಬ್ಬರು ಮತದಾನವನ್ನು ಕಡ್ಡಾಯವಾಗಿ ಮಾಡಬೇಕು. ಜಾತಿ, ಪಕ್ಷ, ಭೇದವನ್ನು ಮರೆತು ಉತ್ತಮ ವ್ಯಕ್ತಿಗಳನ್ನು ಬೆಂಬಲಿಸಬೇಕು ಎಂದು ತಿಳಿಸಲಾಯಿತು.
ಮತದಾನ ಜಾಗೃತಿ ಕುರಿತಾಗಿ ದ್ವಿತೀಯ ಬಿಕಾಂ ವಿದ್ಯಾರ್ಥಿಗಳಾದ ಕುಮಾರಿ ದೇಚಮ್ಮ ಹಾಗೂ ಅರ್ಜುನ್ ಮಾತನಾಡಿದರು. ಅಲ್ಲದೆ ಪ್ರಾಂಶುಪಾಲರಾದ ಡಾ. ರೇಖ ಚಿಣ್ಣಪ್ಪ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು. ಹಾಗೂ ಎಲ್ಲಾ ವಿದ್ಯಾರ್ಥಿಗಳಿಂದ ಹಾಗೂ ಉಪನ್ಯಾಸಕರಿಂದ ” I ಗಿಔಖಿಇ” ಫಲಕಕ್ಕೆ ಸಹಿ ಸಂಗ್ರಹಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿಗಳು ಹಾಜರಿದ್ದರು.
ವರದಿ : ದುಗ್ಗಳ ಸದಾನಂದ.








