ಮಡಿಕೇರಿ ಮಾ.16 NEWS DESK : ಮಡಿಕೇರಿ ನಗರಸಭೆಗೆ ನಾಮ ನಿರ್ದೇಶಿತ ಸದಸ್ಯರಾಗಿ ಕಾಂಗ್ರೆಸ್ ನ ಸದಾ ಮುದ್ದಪ್ಪ, ಬಿ.ಎನ್.ಮುದ್ದುರಾಜ್, ಮೊಹಮ್ಮದ್ ಯಾಕುಬ್, ಜಿ.ಸಿ.ಜಗದೀಶ್ ಹಾಗೂ ಜುಲೇಕಾಬಿ ಆಯ್ಕೆಯಾಗಿದ್ದಾರೆ. ಇವರುಗಳನ್ನು ನೇಮಕ ಮಾಡಿ ತಕ್ಷಣದಿಂದ ಜಾರಿಗೆ ಬರುವಂತೆ ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಟಿ.ಮಂಜುನಾಥ್ ಆದೇಶ ಹೊರಡಿಸಿದ್ದಾರೆ.
ನಾಮ ನಿರ್ದೇಶಿತ ಸದಸ್ಯರುಗಳನ್ನಾಗಿ ಆಯ್ಕೆ ಮಾಡಿದ ಕಾರಣಕ್ಕಾಗಿ ನೂತನ ಸದಸ್ಯರುಗಳು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರನ್ನು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭ ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ಬಿ.ವೈ.ರಾಜೇಶ್ ಉಪಸ್ಥಿತರಿದ್ದರು.










