ಮಡಿಕೇರಿ ಮೇ 2 NEWS DESK : ಕಾವೇರಿ ನದಿಯಲ್ಲಿ ಮುಳುಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಕುಶಾಲನಗರದಲ್ಲಿ ನಡೆದಿದೆ.
ಪಿರಿಯಾಪಟ್ಟಣ ತಾಲ್ಲೂಕು ಹಿಟ್ನೆ ಹೆಬ್ಬಾಗಿಲು ನಿವಾಸಿ ಶಿವಪ್ಪ (49) ಎಂಬುವವರೇ ಮೃತ ವ್ಯಕ್ತಿ. ಶಿವಪ್ಪ ಇಂದು ಮಧ್ಯಾಹ್ನ ಕುಶಾಲನಗರ ಕೊಪ್ಪ ಸೇತುವೆಯ ಕೆಳಭಾಗದ ನದಿಯಲ್ಲಿ ಸ್ನಾನಕ್ಕೆಂದು ಇಳಿದಾಗ ಕಾಲುಜಾರಿ ಬಿದ್ದಿದ್ದಾರೆ ಎಂದು ಹೇಳಲಾಗಿದೆ.
ಕುಶಾಲನಗರ ಪಟ್ಟಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.










