ಮಡಿಕೇರಿ ಮೇ 3 NEWS DESK : ಸೋಮವಾರಪೇಟೆ ಲಯನ್ಸ್ ಕ್ಲಬ್ ಮತ್ತು ಬೆಂಗಳೂರಿನ ಯಲಹಂಕ ಲಯನ್ಸ್ ಕ್ಲಬ್ ವತಿಯಿಂದ ಗರಗಂದೂರು ಬಿ ಗ್ರಾಮದ ಹೊಸತೋಟದಲ್ಲಿ ರುದ್ರಭೂಮಿ ಶಂಕುಸ್ಥಾಪನ ಸಮಾವೇಶ ನಡೆಯಿತು.
ಸೋಮವಾರಪೇಟೆ ಲಯನ್ಸ್ ಅಧ್ಯಕ್ಷ ಎಸ್.ಮಹೇಶ್ ಮಾತನಾಡಿ, ಬಡ ಕುಟುಂಬದ ಪ್ರದೇಶವಾದ ಈ ಭಾಗದಲ್ಲಿ ಸುಸಜ್ಜಿತವಾದ ಸಿಲಿಕಾನ್ ಚೇಂಬರ್ ಒಳಗೊಂಡ ರುದ್ರ ಭೂಮಿ ನಿರ್ಮಾಣ ಮಾಡಲು ಸೋಮವಾರಪೇಟೆ ಲಯನ್ಸ್ ಕ್ಲಬ್ ಮತ್ತು ಬೆಂಗಳೂರಿನ ಯಲಹಂಕ ಲಯನ್ಸ್ ಕ್ಲಬ್ ನಿರ್ಧರಿಸಿದ್ದು, ಅಂದಾಜು 4.30 ಲಕ್ಷ ರೂಪಾಯಿಗಳನ್ನು ವಿನಯೋಗಿಸುತ್ತಿದೆ ಎಂದರು.
ಈ ಸಂದರ್ಭ ಸೋಮವಾರಪೇಟೆ ಲಯನ್ಸ್ ಕ್ಲಬ್ ಕಾರ್ಯದರ್ಶಿ ಚಾವಡಿ ಶಿವಕುಮಾರ್ ಯಲಹಂಕ, ಲಯನ್ಸ್ ಅಧ್ಯಕ್ಷ ಜಯಪ್ರಕಾಶ್, ಕಾರ್ಯದರ್ಶಿ ಜಿತೇಂದ್ರ ಸಿಂಗ್, ಚಿಟ್ಟಿಮಾಡ ರೋಹಿತ್, ನಂಗಾರು ರಾಮಚಂದ್ರ, ಎ.ಪಿ.ಸುಬ್ಬಯ್ಯ, ಮುಖಂಡರಾದ ರಾಜು, ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸಲೀಂ ಹಾಜರಿದ್ದರು.












