ಮಡಿಕೇರಿ ಮೇ 3 NEWS DESK : ಚೆಯ್ಯಂಡಾಣೆ ಸಮೀಪದ ಚೇಲಾವರದಲ್ಲಿ ಪಿ.ಜೆ.ಪುತ್ರ, ಜಯನವರ ಮನೆಯಲ್ಲಿ ನೂತನವಾಗಿ ಸ್ಥಾಪನೆ ಗೊಂಡಿರುವ ಶ್ರೀ ಸ್ವಾಮಿ ಕೊರಗಜ್ಜನ ಸನ್ನಿಧಿಯಲ್ಲಿ ಮೇ 4 ಮತ್ತು 5 ರಂದು ದೈವ ಕೋಲಗಳು ನಡೆಯಲಿದೆ.
ಮೇ 4 ರಂದು ಬೆಳಿಗ್ಗೆ 6.30 ಗಂಟೆಗೆ ಗಣಪತಿ ಪೂಜೆ, ಅಪರಾಹ್ನ 3 ಗಂಟೆಗೆ ಭಂಡಾರ ತೆಗೆಯುವುದು, ಸಂಜೆ 4 ಗಂಟೆಗೆ ಗುಳಿಗ ದೈವದ ಕೋಲ, ರಾತ್ರಿ 8.30 ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ 9.30 ಗಂಟೆಗೆ ಪಾಷಾಣಮೂರ್ತಿ ದೈವದ ಕೋಲ, ರಾತ್ರಿ 11.30 ಗಂಟೆಗೆ ಮಯೊಂತಿ ದೈವದ ಕೋಲ ನೆರವೇರಲಿದೆ.
ಮೇ 5 ರಂದು ಬೆಳಿಗ್ಗೆ 6 ಗಂಟೆಗೆ ಪ್ರಸಾದ ವಿತರಣೆ, ಬೆಳಿಗ್ಗೆ 7 ಗಂಟೆಗೆ ಸ್ವಾಮಿ ಕೊರಗಜ್ಜ ದೈವದ ಕೋಲ, ಮಧ್ಯಾಹ್ನ 12.30 ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಎರಡು ದಿನಗಳಕಾಲ ವಿವಿಧ ಧಾರ್ಮಿಕ ಪೂಜಾ ವಿಧಿವಿಧಾನಗಳೊಂದಿಗೆ ನೇಮೋತ್ಸವ ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಶ್ರೀ ಕೊರಗಜ್ಜ ದೈವ ಸನ್ನಿಧಿಯ ಆಡಳಿತ ಮಂಡಳಿ ಕೋರಿದೆ.
ಅನ್ನದಾನ ಮಾಡಲು ಇಚ್ಚಿಸುವವರು 8762819468, 8197524497 ಸಂಪರ್ಕಿಸಬಹುದಾಗಿದೆ.













