ಮಡಿಕೇರಿ ಮೇ 7 NEWS DESK : ಪ್ರಸಕ್ತ(2024-25) ಸಾಲಿನ ಡಿಇಎಲ್‍ಇಡಿ ದಾಖಲಾತಿ ಸಂಬಂಧವಾಗಿ ಸರ್ಕಾರಿ ಕೋಟಾದ ಸೀಟುಗಳನ್ನು ತುಂಬಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಜೂನ್, 05 ಕೊನೆಯ ದಿನವಾಗಿದೆ. ಈ ಸಂಬಂಧವಾಗಿ ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾಗಿ ಆಸಕ್ತಿ ಹೊಂದಿದ ಅಭ್ಯರ್ಥಿಗಳು ಅದರಲ್ಲಿ ಸಾಮಾನ್ಯ ಅಭ್ಯರ್ಥಿಗಳು ಶೇ.50, ಪ.ಜಾತಿ ಹಾಗೂ ಪಂಗಡದ ಅಭ್ಯರ್ಥಿಗಳು ಶೇ.45 ಅಂಕ ಪಡೆದಿರಬೇಕು. ಇತರೆ ಸೂಚನೆಗಳನ್ನು ವೆಬ್‍ಸೈಟ್ www.schooleducation.kar.nic.in ನಲ್ಲಿ ಪ್ರಕಟಿಸಲಾಗಿದೆ. ವೆಬ್‍ಸೈಟ್‍ನಲ್ಲಿನ ಮಾಹಿತಿಯನ್ನು ಕಡ್ಡಾಯವಾಗಿ ಓದಿಕೊಂಡು ಅರ್ಜಿ ಕ್ರಮವಾಗಿ ಭರ್ತಿ ಮಾಡುವುದು. ಭರ್ತಿ ಮಾಡಿದ ಅರ್ಜಿಯನ್ನು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಕೂಡಿಗೆ, ಕೊಡಗು ಜಿಲ್ಲೆ ಇಲ್ಲಿಗೆ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗೆ ಡಯಟ್ ಕೂಡಿಗೆ, ಕೊಡಗು ಜಿಲ್ಲೆ ದೂರವಾಣಿ ಸಂಖ್ಯೆ 08276-242189, 8139956802, 9448813576 ನ್ನು ಸಂಪರ್ಕಿಸಬಹುದು. ಅರ್ಜಿ ಸಲ್ಲಿಸಲು ಜೂ.5 ಕೊನೆಯ ದಿನವಾಗಿದೆ. ಅರ್ಜಿ ಶುಲ್ಕವನ್ನು ಬ್ಯಾಂಕ್‍ನಲ್ಲಿ ಡಿ.ಡಿ. ಮೂಲಕ ಪಾವತಿಸಲು ಜೂ.5 ಕೊನೆಯ ದಿನವಾಗಿದೆ(ಸಾಮಾನ್ಯ/ ಇತರೆ ವರ್ಗ ರೂ.150, ಪ.ಜಾತಿ ಹಾಗೂ ಪ.ಪಂ. ರೂ.50) ಎಂದು ಕೂಡಿಗೆ ಡಯಟ್‍ನ್ ಪ್ರಾಂಶುಪಾಲರು(ಅಭಿವೃದ್ಧಿ ಹಾಗೂ ಉಪನಿರ್ದೇಶಕರು ತಿಳಿಸಿದ್ದಾರೆ.